For Quick Alerts
ALLOW NOTIFICATIONS  
For Daily Alerts

ಸೌದಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಬಂಗಾರವಾಗುತ್ತಾ ಅಗ್ಗ?

|

ಸೌದಿ ಅರೇಬಿಯಾ ಸರ್ಕಾರವು ಇತ್ತೀಚೆಗೆ ಚಿನ್ನದ ಹಾಗೂ ತಾಮ್ರದ ನಿಕ್ಷೇಪವನ್ನು ಪತ್ತೆ ಹಚ್ಚಿರುವುದಾಗಿ ಘೋಷಣೆ ಮಾಡಿದೆ. ಮದೀನಾ ಸಮೀಪದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದರೆ, ಮದಿನಾದ ವಾದಿ ಅಲ್‌ ಫರಾದಲ್ಲಿ ತಾಮ್ರದ ನಿಕ್ಷೇಪ ಪತ್ತೆಯಾಗಿದೆ ಎಂದು ಟ್ವೀಟರ್ ಪೋಸ್ಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಆದರೆ ಇದು ವಿಶ್ವದಲ್ಲಿ ಚಿನ್ನದ ಬೆಲೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದು ನಿಮಗೆ ಗೊತ್ತೆ?

ಸೌದಿ ಅರೇಬಿಯಾದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ಸುದ್ದಿಯ ಬೆನ್ನಲ್ಲೇ ವಿವಿಧ ದೇಶಗಳಲ್ಲಿ ಬಂಗಾರ ಬೆಲೆ ಅಗ್ಗವಾಗುತ್ತಾ ಎಂಬ ಬಗ್ಗೆ ಸುದ್ದಿಯಾಗುತ್ತಿದೆ. ಈಗಾಗಲೇ ಸ್ಥಳೀಯವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಹೂಡಿಕೆದಾರರ ಚಿತ್ತವು ಸೌದಿ ಅರೇಬಿಯಾದ ಮೇಲೆ ಬಿದ್ದಿದೆ. ಆಡಳಿತವು ಕೂಡಾ ವಿಶ್ವದ ಹಲವು ದೇಶಗಳಿಗೆ ಹೂಡಿಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದೆ.

Gold Rate Today: ಚಿನ್ನದ ಬೆಲೆ ಏರಿಕೆ: ಸೆ.22ರ ದರ ಎಷ್ಟಿದೆ?Gold Rate Today: ಚಿನ್ನದ ಬೆಲೆ ಏರಿಕೆ: ಸೆ.22ರ ದರ ಎಷ್ಟಿದೆ?

ಹೊಸ ಚಿನ್ನದ ನಿಕ್ಷೇಪ ಪತ್ತೆಯು ಪ್ರಸ್ತುತ ಪ್ರಮುಖವಾಗಿ ಸೌದಿಯ ಆರ್ಥಿಕ ಬೆಳವಣಿಗೆಗೆ ಸಾಥ್ ನೀಡಲಿದೆ. ಇನ್ನು ಈ ನಿಕ್ಷೇಪದ ಮೇಲೆ ಸುಮಾರು 533 ಮಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಹಾಗೆಯೇ ಸರಿ ಸುಮಾರು 4000 ಉದ್ಯೋಗ ಸೃಷ್ಟಿ ಮಾಡುವ ನಿರೀಕ್ಷೆಯು ಕೂಡಾ ಇದೆ. ಆದರೆ ಒಂದು ದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದರೆ, ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಗೋಲ್ಡ್ ರೇಟ್ ಇಳಿಕೆಯಾಗುತ್ತಾ? ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ......

 ಚಿನ್ನ ಸರಬರಾಜಿನಲ್ಲಿ ಆಗುತ್ತಾ ವ್ಯತ್ಯಾಸ?

ಚಿನ್ನ ಸರಬರಾಜಿನಲ್ಲಿ ಆಗುತ್ತಾ ವ್ಯತ್ಯಾಸ?

ಭಾರತಕ್ಕೆ ಹೆಚ್ಚಾಗಿ ಸ್ವಿಜರ್‌ಲ್ಯಾಂಡ್‌ ಅಧಿಕ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಚೀನಾದ ಬಳಿಕ ವಿಶ್ವದಲ್ಲೇ ಅತೀ ಹೆಚ್ಚು ಚಿನ್ನವನ್ನು ಬಳಕೆ ಮಾಡುವ ದೇಶ ಭಾರತವಾಗಿದೆ. ಅದಕ್ಕೆ ಮುಖ್ಯ ಕಾರಣ ಭಾರತದ ಸಂಸ್ಕೃತಿ, ನಂಬಿಕೆಯಾಗಿದೆ. ದೇಶದಲ್ಲಿ ಚಿನ್ನವನ್ನು ನಮ್ಮ ಘನತೆಯ ಪ್ರತೀಕವೆಂದೇ ಪರಿಗಣನೆ ಮಾಡಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಚಿನ್ನವನ್ನು ಅಧಿಕವಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಒಂದು ದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದರೆ ವಿಶ್ವದಲ್ಲಿ ಚಿನ್ನದ ಸರಬರಾಜಿನಲ್ಲಿ ಒಂದು ಸಣ್ಣ ಬದಲಾವಣೆಯಷ್ಟೇ ಆಗಬಹುದು ಅಥವಾ ಆಗದೆಯೋ ಇರಬಹುದು. ಸಣ್ಣ ಬದಲಾವಣೆಗೂ ಕೂಡಾ ಹಲವಾರು ವರ್ಷಗಳ ಅವಧಿ ಬೇಕಾಗುತ್ತದೆ.

Gold Rate Today: ಚಿನ್ನದ ಬೆಲೆ ಇಳಿಕೆ: ಸೆಪ್ಟೆಂಬರ್ 19ರ ದರ ಇಲ್ಲಿದೆGold Rate Today: ಚಿನ್ನದ ಬೆಲೆ ಇಳಿಕೆ: ಸೆಪ್ಟೆಂಬರ್ 19ರ ದರ ಇಲ್ಲಿದೆ

 ಚಿನ್ನದ ಬೆಲೆ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಇಳಿಕೆಯಾಗುತ್ತಾ?

ಸಾಮಾನ್ಯವಾಗಿ ಚಿನ್ನದ ಬೆಲೆಯ ಮೇಲೆ ಡಾಲರ್ ಮೌಲ್ಯ ಪರಿಣಾಮ ಉಂಟು ಮಾಡುತ್ತದೆ. ಡಾಲರ್ ಮೌಲ್ಯ ಅಧಿಕವಾಗುತ್ತಿದ್ದಂತೆ ಚಿನ್ನದ ಬೆಲೆಯು ಇಳಿಕೆಯಾಗುತ್ತದೆ. ಹಣದುಬ್ಬರವು ಕೂಡಾ ಬೆಲೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇನ್ನು ಡಾಲರ್ ಮೌಲ್ಯ ಏರಿಕೆಯಾದಂತೆ ಚಿನ್ನದ ಬೆಲೆ ಕುಸಿದರೂ ರೂಪಾಯಿ ಮೌಲ್ಯವೂ ಇಳಿಯುತ್ತದೆ. ಇದು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಆದರೆ ಪ್ರಸ್ತುತ ಸೌದಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ಬೆನ್ನಲ್ಲೇ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಾ ಎಂಬುವುದು ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಸರ್ಕಾರ ಸಂಬಂಧಿತ ಕಾರ್ಯಕ್ಕೆ ಅಧಿಕ ಸಮಯ ಬೇಕಾಗುತ್ತದೆ. ಯಾವುದೇ ಬದಲಾವಣೆಗೂ ಸುಮಾರು 20 ವರ್ಷಗಳ ಕಾಲ ಬೇಕಾಗುತ್ತದೆ. ಆದರೂ ಸಣ್ಣ ಬದಲಾವಣೆಯಷ್ಟೇ ಆಗಬಹುದು.

 ಇಂದಿನ ಚಿನ್ನದ ಬೆಲೆ ಎಷ್ಟಿದೆ?

ಇಂದಿನ ಚಿನ್ನದ ಬೆಲೆ ಎಷ್ಟಿದೆ?

ಹಲವಾರು ದಿನಗಳಿಂದ ಗೋಲ್ಡ್ ರೇಟ್ ಏರಿಳಿತವಾಗುತ್ತಿದೆ. ಸಿಲ್ವರ್ ರೇಟ್ ಕೂಡಾ ನಿರಂತರವಾಗಿ ಏರಿಳಿತವಾಗುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ದರವು 4 ಬಾರಿ ಏರಿಕೆಯಾಗಿದ್ದರೆ, 5 ಬಾರಿ ಇಳಿಕೆಯಾಗಿದೆ. 1 ಬಾರಿ ಸ್ಥಿರತೆ ಕಾಯ್ದುಕೊಂಡಿದೆ. ಸೆಪ್ಟೆಂಬರ್ 23ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,500 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 530 ರೂಪಾಯಿ ಹಿಗ್ಗಿದ್ದು ಪ್ರಸ್ತುತ 50,730 ರೂಪಾಯಿ ಆಗಿದೆ. ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 49475.00 ರೂಪಾಯಿ ಆಗಿದೆ. ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.46ರಷ್ಟು ಇಳಿಕೆಯಾಗಿದ್ದು 1,648.47 ಯುಎಸ್ ಡಾಲರ್‌ನಷ್ಟಿದೆ.

English summary

Saudi Arabia Announces Discovery of Huge Gold Deposits, Does Gold Price Decreases?

Saudi Arabia Announces Discovery Of Huge Gold And Copper Deposits In Medina, Does Gold Price Decreases?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X