For Quick Alerts
ALLOW NOTIFICATIONS  
For Daily Alerts

ಸವರಿನ್ ಗೋಲ್ಡ್‌ ಬಾಂಡ್ ಹೂಡಿಕೆ ಸುರಕ್ಷಿತವೇ? ಇಲ್ಲಿದೆ ಮಾಹಿತಿ

|

ಕೊರೊನಾವೈರಸ್ ಸೋಂಕಿನ ಭಯದ ನಡುವೆ ಆರ್‌ಬಿಐ 2021ರ ಆರ್ಥಿಕ ವರ್ಷದ ಸವರಿನ್ ಚಿನ್ನದ ಬಾಂಡ್ ಯೋಜನೆಯ ಎರಡನೇ ಹಂತವು ಸೋಮವಾರ ಚಂದಾದಾರಿಕೆಗಾಗಿ ತೆರೆಯಿತು. ಈ ಸಂಚಿಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರತಿ ಯೂನಿಟ್‌ಗೆ, 4,590 ರುಪಾಯಿ ಬೆಲೆಯನ್ನು ನೀಡಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಅಥವಾ ಆನ್‌ಲೈನ್‌ನಲ್ಲಿ ಪಾವತಿ ಮಾಡುವವರಿಗೆ 50 ರುಪಾಯಿ ರಿಯಾಯಿತಿ ಸಿಗುತ್ತದೆ.

ಸದ್ಯ ಷೇರುಮಾರುಕಟ್ಟೆ ಸೇರಿದಂತೆ ಬಹುತೇಕ ಎಲ್ಲಾ ಹೂಡಿಕೆಗಳು ಏರಿಳಿತವಾಗುತ್ತಿವೆ. ಇಂತಹ ಕಷ್ಟದ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಅನೇಕರು ಮುಂದಾಗುತ್ತಾರೆ. ಏಕೆಂದರೆ ಚಿನ್ನದ ಮೇಲಿನ ಹೂಡಿಕೆ ಯಾವತ್ತಿದ್ರೂ ಸೇಫ್ ಅನ್ನೋದು ಎಲ್ಲರ ನಂಬಿಕೆ.

ಇಂತಹ ವೇಳೆಯಲ್ಲಿ ಜನಪ್ರಿಯವಾಗಿರುವ ಸವರಿನ್ ಚಿನ್ನದ ಬಾಂಡ್ ಯೋಜನೆ ಬಿಡುಗಡೆ ಮಾಡಿದೆ. ಇದರ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿ ಓದಿ

ಒಂದು ಗ್ರಾಮ್‌ ಚಿನ್ನದ ಬೆಲೆ 4,590 ರುಪಾಯಿ

ಒಂದು ಗ್ರಾಮ್‌ ಚಿನ್ನದ ಬೆಲೆ 4,590 ರುಪಾಯಿ

ಭಾರತ ಚಿನಿವಾರ ಪೇಟೆ ಹಾಗೂ ಶುದ್ಧ ಚಿನ್ನದ ಆಭರಣ ವರ್ತಕರು (ಜುವೆಲರ್ಸ್‌ ಅಸೋಸಿಯೇಶನ್‌ ಲಿಮಿಟೆಡ್‌) ನಿಗದಿಪಡಿಸಿದ ಬೆಲೆಯ ಪ್ರಕಾರ ಬಾಂಡ್‌ಗಳನ್ನು ವಿತರಿಸಲಾಗುವುದು. ಅಂದರೆ ಚಿನಿವಾರ ಪೇಟೆ ಕಾರ್ಯಾಚರಣೆ ಮಾಡುತ್ತಿರುವಾಗಿನ (ರಜಾದಿನಗಳನ್ನು ಬಿಟ್ಟು) ಕೊನೆಯ ಮೂರು ದಿನಗಳ ಸರಾಸರಿ ಬೆಲೆಯನ್ನು ನಿಗದಿ ಮಾಡಲಾಗುವುದು. ಸದ್ಯ 1 ಗ್ರಾಮ್‌ ಚಿನ್ನದ ಬೆಲೆ 4,590 ರುಪಾಯಿಯಷ್ಟಿದೆ.

ಗೋಲ್ಡ್‌ ಬಾಂಡ್‌ ಖರೀದಿಗೆ ಲಿಮಿಟೆಡ್ ಅವಕಾಶ

ಗೋಲ್ಡ್‌ ಬಾಂಡ್‌ ಖರೀದಿಗೆ ಲಿಮಿಟೆಡ್ ಅವಕಾಶ

ಸದ್ಯ ಬಿಡುಗಡೆ ಮಾಡಿರುವ ಬಾಂಡ್‌ಗಳನ್ನು ಮೇ11ರಿಂದ 15ರ ವರೆಗೆ ಕೊಳ್ಳಬಹುದು. ಇದು ಕಳೆದ ತಿಂಗಳು ಆರ್‌ಬಿಐ ಪ್ರಕಟಿಸಿದ, 6 ಬಾಂಡ್‌ಗಳ ಸರಣಿಯ 2ನೇ ಭಾಗ. ಮೊದಲನೇ ಭಾಗವನ್ನು ಏಪ್ರಿಲ್ 20ರಿಂದ 24ರವರೆಗೆ ಪ್ರಕಟಿಸಲಾಗಿತ್ತು.

ಸರಣಿಯ ಮೊದಲ ಭಾಗದ ಬಾಂಡ್‌ಗಳು 2016ರ ನಂತರ ದಾಖಲೆ ಮಾರಾಟ ಕಂಡಿವೆ. 822 ಕೋಟಿ ರುಪಾಯಿ ಮೌಲ್ಯದ 17.73 ಲಕ್ಷ ಬಾಂಡ್‌ಗಳು ಮಾರಾಟಗೊಂಡಿವೆ.

ಎಲ್ಲೆಲ್ಲಿ ಈ ಗೋಲ್ಡ್ ಬಾಂಡ್ ಖರೀದಿಸಬಹುದು?

ಎಲ್ಲೆಲ್ಲಿ ಈ ಗೋಲ್ಡ್ ಬಾಂಡ್ ಖರೀದಿಸಬಹುದು?

ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್‌ಇ, ಎನ್‌ಎಸ್‌ಇ ಮತ್ತು ನ್ಯಾಷನಲ್‌ ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೋರೇಷನ್‌ನಲ್ಲಿ ಎಸ್‌ಜಿಬಿಗಳನ್ನು ಕೊಳ್ಳಬಹುದು. ವ್ಯಕ್ತಿಗತವಾಗಿ, ಟ್ರಸ್ಟ್‌ಗಳು, ಸಾಮಾಜಿಕ ಸಂಘಟನೆಗಳು, ಅವಿಭಕ್ತ ಹಿಂದು ಕುಟುಂಬಗಳು, ವಿಶ್ವವಿದ್ಯಾಲಯಗಳಿಗೆ ಸವರಿನ್ ಗೋಲ್ಡ್ ಬಾಂಡ್ ಕೊಳ್ಳುವ ಅವಕಾಶವಿದೆ.

ಸವರಿನ್ ಗೋಲ್ಡ್ ಬಾಂಡ್ ಖರೀದಿಗೆ ಏನೆಲ್ಲಾ ನಿಯಮಗಳಿವೆ?

ಸವರಿನ್ ಗೋಲ್ಡ್ ಬಾಂಡ್ ಖರೀದಿಗೆ ಏನೆಲ್ಲಾ ನಿಯಮಗಳಿವೆ?

ಸವರಿನ್ ಗೋಲ್ಡ್ ಬಾಂಡ್ ಖರೀದಿಗೂ ಮುನ್ನ ಅದರ ನಿಯಮಗಳೇನು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಅದೇನಂದರೆ ನೀವು ಕನಿಷ್ಠ 1 ಬಾಂಡ್‌ ಆದರೂ ಕೊಳ್ಳಬೇಕು. ಇದು 8 ವರ್ಷದ ನಂತರ ನಿಮ್ಮ ಕೈಗೆ ಸಿಗುತ್ತದೆ. ಬಯಸಿದರೆ ಈ ಯೋಜನೆಯನ್ನು 5 ವರ್ಷಕ್ಕೆ ಮುಕ್ತಾಯಗೊಳಿಸಬಹುದು.

ಇನ್ನು ಗರಿಷ್ಠ ಅಂದರೆ 4 ಕೆಜಿ ಮೌಲ್ಯದ ಎಸ್‌ಜಿಬಿಯನ್ನು ವ್ಯಕ್ತಿಗತವಾಗಿ ಅಥವಾ ಹಿಂದು ಅವಿಭಕ್ತ ಕುಟುಂಬಗಳು ಖರೀದಿಸಬಹುದು. ಇನ್ನು ಟ್ರಸ್ಟ್‌ ಗಳು, ಇದಕ್ಕೆ ಸರಿಸಮಾನವಾದ ಸಂಸ್ಥೆಗಳು ಒಂದು ವಿತ್ತೀಯ ವರ್ಷದಲ್ಲಿ ಗರಿಷ್ಠ 20 ಕೆಜಿ ಮೌಲ್ಯದ ಎಸ್‌ಜಿಬಿ ಖರೀದಿಸಬಹುದು. ಅರ್ಜಿಯನ್ನು ಅಂತರ್ಜಾಲದ ಮೂಲಕ ಸಲ್ಲಿಸಿ, ಹಾಗೆಯೇ ಹಣ ಪಾವತಿಸುವವರಿಗೆ 50 ರುಪಾಯಿ ರಿಯಾಯಿತಿ ಇದೆ.

 

English summary

Sovereign Gold Bonds Scheme Details Here

RBI Popular Sovereign gold bond schems details given here
Story first published: Tuesday, May 12, 2020, 18:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X