For Quick Alerts
ALLOW NOTIFICATIONS  
For Daily Alerts

Tata Group IPO 2023ರಲ್ಲಿ ಟಾಟಾ ಗ್ರೂಪ್ ಐಪಿಒ ಸಾಧ್ಯತೆ, ಇಲ್ಲಿದೆ ವಿವರ

|

ಪ್ರಸ್ತುತ ಸುಮಾರು 29 ಅಂಗ ಸಂಸ್ಥೆಗಳನ್ನು ಹೊಂದಿರುವ, ಡಿಸೆಂಬರ್ 31, 2021ರವರೆಗಿನ ಲೆಕ್ಕಾಚಾರದಲ್ಲಿ ಸುಮಾರು 23.4 ಟ್ರಿಲಿಯನ್ ರೂಪಾಯಿ ಅಥವಾ 314 ಬಿಲಿಯನ್ ಡಾಲರ್‌ನಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಟಾಟಾ ಗ್ರೂಪ್ ಸಾರ್ವಜನಿಕ ಚಂದಾದಾರಿಕೆಗೆ (ಐಪಿಒ) ತೆರೆದುಕೊಳ್ಳುವ ಯೋಜನೆಯನ್ನು ರೂಪಿಸಿದೆ. ಮುಂದಿನ ವರ್ಷ ಅಂದರೆ 2023ರಲ್ಲೇ ವಿಭಿನ್ನವಾದ ಐಪಿಒವನ್ನು ಟಾಟಾ ಗ್ರೂಪ್ ಆರಂಭಿಸುವ ಚಿಂತನೆಯನ್ನು ನಡೆಸಿದೆ.

 

ಸುಮಾರು 2025ರಷ್ಟರಲ್ಲಿ ಭಾರತದ ಎಲೆಕ್ಟ್ರಾನಿಕ್ ಮಾರುಕಟ್ಟೆ 300 ಬಿಲಿಯನ್ ಯುಎಸ್‌ಡಿಯಷ್ಟು ಮೌಲ್ಯವನ್ನು ಹೊಂದುವ ನಿರೀಕ್ಷೆಯಿದೆ. ಟಾಟಾ ಗ್ರೂಪ್ ಟಾಟಾ ಇಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ (TEPL) ಎಂಬ ಅಂಗಸಂಸ್ಥೆಯನ್ನು ಸ್ಥಾಪಿಸಿ ಈ ಬೆಳವಣಿಗೆಯ ಲಾಭವನ್ನು ಪಡೆಯುವ ಉದ್ಧೇಶವನ್ನು ಹೊಂದಿದೆ.

 

ಏರ್‌ಇಂಡಿಯಾಕ್ಕಾಗಿ 15,000 ಕೋಟಿ ಸಾಲಕ್ಕೆ ಮುಂದಾದ ಟಾಟಾ!ಏರ್‌ಇಂಡಿಯಾಕ್ಕಾಗಿ 15,000 ಕೋಟಿ ಸಾಲಕ್ಕೆ ಮುಂದಾದ ಟಾಟಾ!

ಟಾಟಾ ಇಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ (TEPL) ಎಂಬ ಅಂಗಸಂಸ್ಥೆಯು 2020ರಲ್ಲಿ ತಮಿಳುನಾಡಿನ ಕೃಷ್ಣಗಿರಿ ಪ್ರದೇಶದಲ್ಲಿ ಆರಂಭ ಮಾಡಲಾಗಿದೆ. ಇನ್ನು 2030ರಲ್ಲಿ ಸುಮಾರು 1 ಟ್ರಿಲಿಯನ್ ಡಾಲರ್‌ನಷ್ಟು ಮಾರಾಟವನ್ನು ಹೊಂದಿರುವ ಸಂಸ್ಥೆಯನ್ನಾಗಿ ಬೆಳೆಸುವ ಉದ್ಧೇಶವನ್ನು ನಾವು ಹೊಂದಿದ್ದೇವೆ ಎಂದು ಈಗಾಗಲೇ ಟಾಟಾ ಸನ್ಸ್‌ನ ಚೇರ್‌ಮನ್ ನಟರಾಜನ್ ಚಂದ್ರಶೇಖರನ್ ತಿಳಿಸಿದ್ದಾರೆ.

 2023ರಲ್ಲಿ ಟಾಟಾ ಗ್ರೂಪ್ ಐಪಿಒ ಸಾಧ್ಯತೆ, ಇಲ್ಲಿದೆ ವಿವರ

ಸರ್ಕಾರದೊಂದಿಗಿನ ಒಪ್ಪಂದ

ಟಾಟಾ ಎಲೆಕ್ಟ್ರಾನಿಕ್ಸ್ 2021ರ ಫೆಬ್ರವರಿಯಲ್ಲಿ ತಮಿಳುನಾಡು ಸರ್ಕಾರದೊಂದಿಗೆ MoU (Memorandum of understanding) ಒಪ್ಪಂದವನ್ನು ಮಾಡಿಕೊಂಡಿದೆ. ಮೊಬೈಲ್ ಕಂಪೋನೆಂಟ್‌ ಅನ್ನು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಸ್ಥಾವರವನ್ನು ಆರಂಭಿಸುವುದಕ್ಕೆ ಸಂಬಂಧಿಸಿದ ಒಪ್ಪಂದ ಇದಾಗಿದೆ. ಈ ಕೃಷ್ಣಗಿರಿ ಫಾಕ್ಟರಿಗೆ ಸುಮಾರು 4,684 ಕೋಟಿ ಹೂಡಿಕೆ ಅಗತ್ಯವಾಗಿದೆ.

ಟಾಟಾ ಇಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಸಜ್ಜಾಗಲು ಸುಮಾರು 5ರಿಂದ 7ವರ್ಷಗಳವರೆಗೆ ಸಮಯ ತೆಗೆದುಕೊಳ್ಳಬಹುದು ಎಂದು ವರದಿಯು ಉಲ್ಲೇಖ ಮಾಡಿದೆ. ಆದರೆ ಮುಂದಿನ ವರ್ಷದಿಂದಲೇ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.

English summary

Tata Group IPO: Tata Group Getting Ready for an IPO in 2023, Here's Details in Kannada

Tata Group, which currently has 29 publicly listed companies with a market capitalization of USD 314 billion (Rs 23.4 trillion) as of December 31, 2021, may be planning a different IPO.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X