For Quick Alerts
ALLOW NOTIFICATIONS  
For Daily Alerts

ಈ ಬ್ಯಾಂಕ್‌ಗಳಲ್ಲಿ ಚಿನ್ನದ ಸಾಲದ ಅತೀ ಕಡಿಮೆ ಬಡ್ಡಿದರ!

|

ಭಾರತದಲ್ಲಿ ಚಿನ್ನವೆಂದರೆ ಬೇರೆಯೇ ಭಾವನೆ. ಜನರು ಯಾವುದೇ ಹಬ್ಬ ಬಂದರೂ ಚಿನ್ನವನ್ನು ಖರೀದಿ ಮಾಡುತ್ತಾರೆ. ತಮ್ಮಲ್ಲಿ ಹಣವಿದ್ದರೆ ಕೂಡಲೇ ಚಿನ್ನವನ್ನು ಖರೀದಿ ಮಾಡುತ್ತಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಯಾವುದೇ ಸಂದರ್ಭದಲ್ಲಿ ಚಿನ್ನ ಆರ್ಥಿಕವಾಗಿ ಸಹಾಯಕವಾಗುತ್ತದೆ ಎಂಬುವುದಾಗಿದೆ. ನೀವು ಚಿನ್ನದ ಸಾಲವನ್ನು ಪಡೆಯುವುದಾದರೆ ಈ ಕೆಳಗೆ ಪಟ್ಟಿ ಮಾಡಿರುವ ಬ್ಯಾಂಕ್‌ಗಳಲ್ಲಿ ಪಡೆಯಬಹುದು.

ಜನರು ಸಾಮಾನ್ಯವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಜನರು ಚಿನ್ನವನ್ನು ಆಭರಣವಾಗಿ ತೊಡುವುದು ಮಾತ್ರವಲ್ಲದೆ ಕಷ್ಟ ಕಾಲದಲ್ಲಿ ಆರ್ಥಿಕ ಅಸ್ತ್ರವಾಗಿಯೂ ಬಳಸುತ್ತಾರೆ. ಪ್ರಸ್ತುತ ಸಾಲವನ್ನು ಪಡೆಯುವುದಕ್ಕೆ ಚಿನ್ನವನ್ನು ಅಡವಿಡುವುದೇ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಈ ಸಾಲಕ್ಕೆ ಬೇಗ ಅನುಮೋದನೆ ದೊರೆಯುತ್ತದೆ.

 Gold Rate Today: ಬಂಗಾರ, ಬೆಳ್ಳಿ ದರ ಏರಿಕೆ: ಡಿ.1ರ ಬೆಲೆ ಪಟ್ಟಿ ಇಲ್ಲಿದೆ Gold Rate Today: ಬಂಗಾರ, ಬೆಳ್ಳಿ ದರ ಏರಿಕೆ: ಡಿ.1ರ ಬೆಲೆ ಪಟ್ಟಿ ಇಲ್ಲಿದೆ

ಸಾಮಾನ್ಯವಾಗಿ ಎಲ್ಲ ಸಾಲಗಳಿಗೆ ಹೋಲಿಕೆ ಮಾಡಿದಾಗ ಚಿನ್ನದ ಸಾಲವು ಅತೀ ಕಡಿಮೆ ಬಡ್ಡಿದರದಲ್ಲಿ ಲಭ್ಯವಾಗುತ್ತದೆ. ನಾವಿಲ್ಲಿ ಯಾವೆಲ್ಲ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತದೆ ಎಂದು ವಿವರಿಸಿದ್ದೇವೆ. ನಿಮಗೆ ಹಣದ ತೀರಾ ಅಗತ್ಯವಿದ್ದಾಗ ಚಿನ್ನದ ಸಾಲವೇ ಉತ್ತಮ ಆಯ್ಕೆಯಾಗಿದೆ. ಈ ಕೆಳಗಿದೆ ಮಾಹಿತಿ ಮುಂದೆ ಓದಿ....

ಈ ಬ್ಯಾಂಕ್‌ಗಳಲ್ಲಿ ಚಿನ್ನದ ಸಾಲದ ಅತೀ ಕಡಿಮೆ ಬಡ್ಡಿದರ!

ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ ನೀಡುವ ಬ್ಯಾಂಕ್‌ಗಳು

1. ಇಂಡಿಯನ್ ಬ್ಯಾಂಕ್ ಅಥವಾ ಫೆಡರಲ್ ಬ್ಯಾಂಕ್ ಚಿನ್ನದ ಸಾಲವನ್ನು ಕಡಿಮೆ ಬಡ್ಡಿದರಲ್ಲಿ ನೀಡುತ್ತದೆ. ಇಂಡಿಯನ್ ಬ್ಯಾಂಕ್‌ನ ಗ್ರಾಹಕರು ಚಿನ್ನದ ಸಾಲವನ್ನು ಬೇರೆ ಬೇರೆ ಬಡ್ಡಿದರಲ್ಲಿ ಪಡೆಯಬಹುದು. ಸಾಮಾನ್ಯವಾಗಿ ಶೇಕಡ 7ರಷ್ಟು ಬಡ್ಡಿದರವಿರುತ್ತದೆ. ಈ ಬ್ಯಾಂಕ್‌ನಲ್ಲಿ ಪ್ರಕ್ರಿಯೆ ಶುಲ್ಕವು ಶೇಕಡ 0.56 ಆಗಿದೆ.
2. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇಕಡ 7.10ರಿಂದ ಶೇಕಡ 7.20ರಷ್ಟು ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತದೆ. ಈ ಬ್ಯಾಂಕ್‌ನಲ್ಲಿ ಪ್ರಕ್ರಿಯೆ ಶುಲ್ಕವು ಶೇಕಡ 0.75ರಷ್ಟಿದೆ.

ಕಡಿಮೆಯಾಯ್ತು ಭಾರತದ ಚಿನ್ನದ ಆಮದು; ಆರ್ಥಿಕತೆ ಮೇಲೆ ಏನು ಪರಿಣಾಮ? ಕಡಿಮೆಯಾಯ್ತು ಭಾರತದ ಚಿನ್ನದ ಆಮದು; ಆರ್ಥಿಕತೆ ಮೇಲೆ ಏನು ಪರಿಣಾಮ?

3. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶೇಕಡ 7.25ರಿಂದ 7.50ರಷ್ಟು ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡುತ್ತದೆ.
4. ಯುಸಿಒ ಬ್ಯಾಂಕ್ ಶೇಕಡ 7.40ರಿಂದ 7.90ರಷ್ಟು ಬಡ್ಡಿದರದಲ್ಲಿ ಗೋಲ್ಡ್ ಲೋನ್‌ ಅನ್ನು ನೀಡುತ್ತದೆ. ಈ ಬ್ಯಾಂಕ್‌ನಲ್ಲಿ ಪ್ರಕ್ರಿಯೆ ಶುಲ್ಕವು 250ರಿಂದ 5 ಸಾವಿರ ರೂಪಾಯಿ ಆಗಿರುತ್ತದೆ.
5. ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡಾ ಕಡಿಮೆ ಬಡ್ಡಿದರಲ್ಲಿ ಚಿನ್ನದ ಸಾಲವನ್ನು ನೀಡುತ್ತದೆ. ಬ್ಯಾಂಕ್‌ನಲ್ಲಿ ಶೇಕಡ 7.60ರಿಂದ ಶೇಕಡ 16.81ರಷ್ಟು ಬಡ್ಡಿದರದಲ್ಲಿ ಚಿನ್ನದ ಸಾಲವನ್ನು ನೀಡಲಾಗುತ್ತದೆ. ಪ್ರಕ್ರಿಯೆ ಶುಲ್ಕವು ಸಾಲದ ಮೊತ್ತದ ಶೇಕಡ 1ರಷ್ಟು ಆಗಿರುತ್ತದೆ.

English summary

This Banks That Offer Cheapest Interest Rates On Gold Loans, Explained Here

This Banks That Offer Cheapest Interest Rates On Gold Loans, Explained Here in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X