ಹಣವನ್ನು ಹೂಡಿಕೆ ಮಾಡುವ ಮೊದಲು ನೂರೆಂಟು ಬಾರಿ ಯೋಚಿಸಿ ನಾವು ನಿರ್ಧಾರವನ್ನು ಕೈಗೊಳ್ಳಬೇಕು. ಹಲವಾರು ಸುರಕ್ಷಿತ ಹೂಡಿಕೆಯನ್ನು ಮಾಡುವ ಬಗ್ಗೆಯೇ ಅತಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ನಾವು ಮಾಡಿದ ಈ ಹೂಡಿಕೆಯು ನಮ್ಮ ಭವಿಷ್ಯಕ್ಕೆ ಸಹಕಾರಿಯಾಗಬೇಕು ಎಂಬುವುದು ಎಲ್ಲಾ ಹೂಡಿಕೆದಾರರಲ್ಲಿ ಇರುವ ಭಾವನೆಯಾಗಿದೆ. ಇನ್ನು ಸುರಕ್ಷಿತ ಠೇವಣಿ ವಿಚಾರಕ್ಕೆ ನಾವು ಬಂದಾಗ ಹಲವಾರು ಮಂದಿ ನಿಶ್ಚಿತ ಠೇವಣಿಗಳನ್ನು, (ಫಿಕ್ಸಿಡ್ ಡೆಪಾಸಿಟ್) ಸಾಮಾನ್ಯವಾಗಿ ಆಯ್ಕೆ ಮಾಡುತ್ತಾರೆ.
ಅದರಲ್ಲೂ ಅಧಿಕ ಮಂದಿ ಹಿರಿಯ ನಾಗರಿಕರು ಈ ಫಿಕ್ಸಿಡ್ ಡೆಪಾಸಿಟ್‌ಗೆ ಆದ್ಯತೆ ನೀಡುತ್ತಾರೆ. ಬಡ್ಡಿ ದರದಲ್ಲೇ ನಿವೃತ್ತಿ ಜೀವನದ ಕೊಂಚ ಖರ್ಚನ್ನು ನಿಭಾಯಿಸಬಹುದು ಎಂಬುವುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ಈ ಠೇವಣಿದಾರರಿಗೆ ತಮಿಳುನಾಡು ಸರ್ಕಾರದ ಸಂಸ್ಥೆಗಳು ಫಿಕ್ಸಿಡ್ ಡೆಪಾಸಿಟ್‌ಗೆ ಅಧಿಕ ಬಡ್ಡಿದರ ನೀಡಲು ಮುಂದಾಗಿದೆ.
ತಮಿಳುನಾಡು ಸರ್ಕಾರದಡಿಯಲ್ಲಿ ಬರುವ ತಮಿಳುನಾಡು ಪವರ್ ಫಿನಾನ್ಸ್ ಹಾಗೂ ಇನ್ಫಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ತಮಿಳುನಾಡು ಪವರ್ ಫಿನಾನ್ಸ್) ಈಗ ಫಿಕ್ಸಿಡ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತಿದೆ. ವೈಯಕ್ತಿಕ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರ ಶೇಕಡ 8 ಹಾಗೆಯೇ ಹಿರಿಯ ನಾಗರಿಕರಿಗೆ ಶೇಕಡ 8.5 ಬಡ್ಡಿದರವನ್ನು ನೀಡುತ್ತದೆ. ಸರ್ಕಾರದ ಬ್ಯಾಂಕ್‌ಗಳನ್ನು ಹೋಲಿಕೆ ಮಾಡಿದಾಗ ಈ ಬಡ್ಡಿದರವು ಅತೀ ಉತ್ತಮವಾಗಿದೆ.
ಎಫ್‌ಡಿಗಳ ಮೇಲೆ ತಮಿಳುನಾಡು ಪವರ್ ಫಿನಾನ್ಸ್ ನೀಡುವ ಬಡ್ಡಿ ದರ
12 ತಿಂಗಳು: ವೈಯಕ್ತಿಕ ಎಫ್‌ಡಿ ಬಡ್ಡಿ ದರ ಶೇಕಡ 7.00, ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿ ದರ ಶೇಕಡ 7.25
24 ತಿಂಗಳು: ವೈಯಕ್ತಿಕ ಎಫ್‌ಡಿ ಬಡ್ಡಿ ದರ ಶೇಕಡ 7.25, ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿ ದರ ಶೇಕಡ 7.50
36 ತಿಂಗಳು: ವೈಯಕ್ತಿಕ ಎಫ್‌ಡಿ ಬಡ್ಡಿ ದರ ಶೇಕಡ 7.75 ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿ ದರ ಶೇಕಡ 8.25
48 ತಿಂಗಳು: ವೈಯಕ್ತಿಕ ಎಫ್‌ಡಿ ಬಡ್ಡಿ ದರ ಶೇಕಡ 7.75 ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿ ದರ ಶೇಕಡ 8.25
60 ತಿಂಗಳು: ವೈಯಕ್ತಿಕ ಎಫ್‌ಡಿ ಬಡ್ಡಿ ದರ ಶೇಕಡ 8.00 ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿ ದರ ಶೇಕಡ 8.50
ಬ್ಯಾಂಕುಗಳಿಗೆ ಹೋಲಿಸಿದರೆ ಉತ್ತಮ ಬಡ್ಡಿದರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಉತ್ತಮ ಬಡ್ಡಿ ದರ ಶೇಕಡ 5.5 ನೀಡುವ ಸಂದರ್ಭದಲ್ಲಿ ತಮಿಳುನಾಡು ಪವರ್ ಫಿನಾನ್ಸ್ ಹಾಗೂ ಇನ್ಫಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ನೀಡುವ ಬಡ್ಡಿ ದರ ಕಡಿಮೆ ಏನಿಲ್ಲ. ಹಿರಿಯ ನಾಗರಿಕರಿಗೆ ತಮಿಳುನಾಡು ಪವರ್ ಫಿನಾನ್ಸ್ ಹಾಗೂ ಇನ್ಫಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 8.50 ಬಡ್ಡಿದರವನ್ನು ನೀಡುವುದು ಸದ್ಯಕ್ಕೆ ಸಾಟಿಯಿಲ್ಲದು. ಇನ್ನು ಈ ಸಂಸ್ಥೆಗಳ ವೆಬ್‌ಸೈಟ್ ಅತೀ ಅಧಿಕ ಸಹಕಾರಿಯಾಗಿದೆ ಎನ್ನಲಾಗಿದೆ. ಈ ವೆಬ್‌ಸೈಟ್ ಮೂಲಕ ಆನ್‌ಲೈನ್ ಡೆಪಾಸಿಟ್ ಖಾತೆಯನ್ನು ತೆರಯಬಹುದಾಗಿದೆ ಎನ್ನಲಾಗಿದೆ. ನಿಮಗೆ ಮಧ್ಯಸ್ಥರ ವಿಚಾರದಲ್ಲಿ ಯಾವುದೇ ಅನುಮಾನ ಇದ್ದರೆ, ನೀವೇ ಆನ್‌ಲೈನ್ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆನ್‌ಲೈನ್ ಮೂಲಕವೇ ನೀವು ಫಿಕ್ಸಿಡ್ ಡೆಪಾಸಿಟ್ ಖಾತೆಗಳನ್ನು ತೆರೆಯಬಹುದಾಗಿದೆ. ಯಾರು ಫಿಕ್ಸಿಡ್ ಡೆಪಾಸಿಟ್ ಮೇಲೆ ಅತೀ ಹೆಚ್ಚಿನ ಬಡ್ಡಿ ದರವನ್ನು ಬಯಸುತ್ತಾರೋ ಅವರು ತಮಿಳುನಾಡು ಪವರ್ ಫಿನಾನ್ಸ್‌ನಲ್ಲಿ ಫಿಕ್ಸಿಡ್ ಡೆಪಾಸಿಟ್ ಇಡಬಹುದಾಗಿದೆ.
ನಿಶ್ಚಿತ ಠೇವಣಿಗಳ ಮಧ್ಯಾವಧಿಯನ್ನು ಆಯ್ಕೆ ಮಾಡಿ
ನೀವು ಯಾವುದೇ ಸಂದರ್ಭದಲ್ಲಿ ಫಿಕ್ಸಿಡ್ ಡೆಪಾಸಿಟ್ ಇಡಲು ಮುಂದಾದಾಗ ನೀವು ಅತೀ ದೀರ್ಘ ಕಾಲದ ಫಿಕ್ಸಿಡ್ ಡೆಪಾಸಿಟ್ ಇಡುವ ಬದಲಾಗಿ, ಸಣ್ಣ ಅಥವಾ ಮಧ್ಯಮ ಅವಧಿಯಲ್ಲಿ ಫಿಕ್ಸಿಡ್ ಡೆಪಾಸಿಟ್ ಅನ್ನು ಇಡಿ. ಸುಮಾರು ಮೂರು ವರ್ಷಗಳಿಗಿಂತ ಅಧಿಕ ಕಾಲ ಫಿಕ್ಸಿಡ್ ಡೆಪಾಸಿಟ್ ಅನ್ನು ನೀವು ಇರಿಸಬೇಡಿ. ಈ ಬಡ್ಡಿದರದಲ್ಲಿ ಯಾವುದಾದರೂ ಬದಲಾವಣೆಯಾಗುವ ಸಾಧ್ಯತೆಗಳು ಕೂಡಾ ಇರುತ್ತದೆ. ನೀವು ಸುಮಾರು ಐದು ವರ್ಷಗಳ ಕಾಲದ ಹೂಡಿಕೆಯನ್ನು ಮಾಡಿದ್ದೀರಿ ಎಂದು ಊಹಿಸಿಕೊಳ್ಳಿ, ಆ ಸಂದರ್ಭದಲ್ಲಿ ಬಡ್ಡಿ ದರವು ಹೆಚ್ಚಾದರೆ, ನೀವು ಈ ಸಂದರ್ಭದಲ್ಲಿ ಹಣವನ್ನು ಅಕಾಲಿಕವಾಗಿ ವಾಪಾಸ್ ಪಡೆಯಬೇಕಾದರೆ ನಿಮಗೆ ಅಧಿಕ ದಂಡ ಬೀಳುತ್ತದೆ. ಆದ್ದರಿಂದ ಎರಡು ಮೂರು ವರ್ಷಗಳ ಡೆಪಾಸಿಟ್ ಉತ್ತಮವಾಗಿದೆ. ಹಾಗೆಯೇ ನೀವು ಒಂದು ವರ್ಷದ ಡೆಪಾಸಿಟ್‌ಗೂ ಹೂಡಿಕೆ ಮಾಡಬಹುದು.
ತಮಿಳುನಾಡು ಪವರ್ ಫಿನಾನ್ಸ್‌ನ ಫಿಕ್ಸಿಡ್ ಡೆಪಾಸಿಟ್‌ನ ಸುರಕ್ಷತೆ
ತಮಿಳುನಾಡು ಸರ್ಕಾರವು ತಮಿಳುನಾಡು ಪವರ್ ಫಿನಾನ್ಸ್ ಅನ್ನು ನಿರ್ವಹಣೆ ಮಾಡುತ್ತಿರುವ ಕಾರಣದಿಂದಾಗಿ ಇಲ್ಲಿ ಫಿಕ್ಸಿಡ್ ಡೆಪಾಸಿಟ್ ಇಡುವುದುರಿಂದ ಯಾವುದೇ ಅಪಾಯ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಇನ್ನು ಇದಕ್ಕೂ ಹಿಂದೆ ಕೇರಳ ಸರ್ಕಾರದಡಿಯಲ್ಲಿ ಬರುವ ಕೇರಳದ ಟ್ರಾನ್ಸ್‌ಪೋರ್ಟ್ ಡೆವಲಪ್‌ಮೆಂಟ್ ಫಿನಾನ್ಸ್ ಕಾರ್ಪೋರೇಷನ್ ಹಣಕಾಸು ಸಮಸ್ಯೆ ಉಂಟಾದ ಸಮದರ್ಭದಲ್ಲಿ ಎಲ್ಲಾ ಫಿಕ್ಸಿಡ್ ಡೆಪಾಸಿಟ್‌ದಾರರಿಗೆ ಹಣವನ್ನು ವಾಪಾಸ್ ನೀಡಿತ್ತು. ಪರಿಹಾರ ಪಡೆಯುವಲ್ಲೂ ಯಾವುದೇ ತೊಂದರೆ ಉಂಟಾಗಿರಲಿಲ್ಲ. ಆದ್ದರಿಂದ ಕೇರಳ ಸರ್ಕಾರದ ಕೆಟಿಡಿಎಫ್‌ಸಿಯಲ್ಲಿ ಫಿಕ್ಸಿಡ್ ಡೆಪಾಸಿಟ್ ಇಡುವುದರಿಂದ ಯಾವುದೇ ತೊಂದರೆ ಉಂಟಾಗಲಾರದು ಎಂದು ಹೇಳಬಹುದು. ಇನ್ನು ಈ ಸಂದರ್ಭದಲ್ಲೇ ಹಲವಾರು ಓದುಗರಲ್ಲಿ ತಾವು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಹೆಚ್ಚಳವಾಗುವವರೆಗೂ ಕಾದು ಹೂಡಿಕೆ ಮಾಡಬೇಕೇ ಎಂಬ ಪ್ರಶ್ನೆಯು ಹುಟ್ಟುತ್ತದೆ. ಫಿಕ್ಸಿಡ್ ಡೆಪಾಸಿಟ್‌ನ ಬಡ್ಡಿದರವು ಅತ್ಯಂತ ಕಡಿಮೆಯಾಗಿರುತ್ತದೆ. ಆರ್ಥಿಕ ಚೇತರಿಕೆ ಕಂಡು ಕೊಂಡಾಗ ಸಾಲದ ಬೇಡಿಕೆ ಹೆಚ್ಚಾಗಬಹುದು, ಈ ಸಂದರ್ಭದಲ್ಲಿ ಬ್ಯಾಂಕುಗಳು ತಮ್ಮ ನಿಶ್ಚಿತ ಠೇವಣಿ ದರವನ್ನು ಹೆಚ್ಚಿಸಬಹುದು. ಆದ್ದರಿಂದ ದೀರ್ಘಾವಧಿಯಲ್ಲಿ ಹಣವನ್ನು ಫಿಕ್ಸಿಡ್ ಡೆಪಾಸಿಟ್ ಆಗಿ ಇಡದಂತೆ ನಾವು ಸಲಹೆಯನ್ನು ನೀಡುತ್ತೇವೆ. ಇನ್ನು ತಮಿಳುನಾಡು ಪವರ್ ಫಿನಾನ್ಸ್ ಹಾಗೂ ಇನ್ಫಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನಲ್ಲಿ ಫಿಕ್ಸಿಡ್ ಡೆಪಾಸಿಟ್ ಅನ್ನು ಇಡುವುದು ಉತ್ತಮ ಆಯ್ಕೆ ಎಂದು ಹೇಳಬಹುದು. ಈ ಎರಡು ಸಂಸ್ಥೆಗಳು ಸರ್ಕಾರದ ಅಡಿಯಲ್ಲಿ ಬರುವ ಕಾರಣದಿಂದಾಗಿ ಯಾವುದೇ ಅಪಾಯವಿರುವುದಿಲ್ಲ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications