For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಮೇಲೆ ಶೇಕಡ 7.9ರವರೆಗೆ ಬಡ್ಡಿ ನೀಡುತ್ತೆ ಈ ಬ್ಯಾಂಕ್

|

ಹೂಡಿಕೆದಾರರು ನಿಶ್ಚಿತ ಠೇವಣಿ ಅಥವಾ ಎಫ್‌ಡಿ ಹೂಡಿಕೆಯನ್ನು ಸುರಕ್ಷಿತ ಹೂಡಿಕೆ ಸಾಧನ ಎಂದು ನಂಬಿದ್ದಾರೆ. ಪ್ರಸ್ತುತ ಜಾಗತಿಕ ಷೇರು ಮಾರುಕಟ್ಟೆಗೆ ಅನುಗುಣವಾಗಿ ಭಾರತೀಯ ಷೇರು ಮಾರುಕಟ್ಟೆಯು ಕುಸಿಯುತ್ತಿದೆ. ರೆಪೋ ದರ ಏರಿಕೆ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ತಮ್ಮ ಬಡ್ಡಿದರವನ್ನು ಮತ್ತು ಪ್ರಮುಖ ಸಾಲದ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿವೆ. ಈ ನಡುವೆ ಅಧಿಕ ಬಡ್ಡಿದರವನ್ನು ನೀಡುವ ಸಣ್ಣ ಹಣಕಾಸು ಬ್ಯಾಂಕ್ ಬಗ್ಗೆ ನಾವು ನಿಮಗೆ ಇಲ್ಲಿ ವಿವರಣೆ ನೀಡಿದ್ದೇವೆ.

ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದ ನಂತರ ಕೆಲವು ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಎಫ್‌ಡಿ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಹಾಗಾಗಿ, ಹೂಡಿಕೆದಾರರಿಗೆ ಉತ್ತಮ ಆದಾಯಕ್ಕಾಗಿ ಬ್ಯಾಂಕ್‌ಗಳ ಎಫ್‌ಡಿ ದರಗಳನ್ನು ಪರಿಶೀಲಿಸಲು ಇದೀಗ ಉತ್ತಮ ಅವಕಾಶವಾಗಿದೆ. ಹೆಚ್ಚು ಬಡ್ಡಿದರವನ್ನು ನೀಡುವ ಬ್ಯಾಂಕ್‌ಗಳ ಪೈಕಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಕೂಡಾ ಸೇರಿದೆ. ಈ ಸಣ್ಣ ಹಣಕಾಸು ಬ್ಯಾಂಕ್‌ ಎಫ್‌ಡಿ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತದೆ.

ಶೇ.7.45 ಬಡ್ಡಿದರ ನೀಡುತ್ತೆ ಈ ಎಎಎ ರೇಟೆಡ್ ಎಫ್‌ಡಿ!ಶೇ.7.45 ಬಡ್ಡಿದರ ನೀಡುತ್ತೆ ಈ ಎಎಎ ರೇಟೆಡ್ ಎಫ್‌ಡಿ!

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಒಂದು ಹೆಸರಾಂತ ಸಣ್ಣ ಹಣಕಾಸು ಬ್ಯಾಂಕ್ ಆಗಿದ್ದು ಅದು ವರ್ಷಗಳಿಂದ ಅಭಿವೃದ್ಧಿ ಹೊಂದುತ್ತಿದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆದಾರರಿಗೆ, ಸಾರ್ವಜನಿಕರಿಗೆ 19 ತಿಂಗಳಿಂದ 24 ತಿಂಗಳ ಎಫ್‌ಡಿ ದರವು ಶೇಕಡ 7.00 ಮತ್ತು ಹಿರಿಯ ನಾಗರಿಕರಿಗೆ ಶೇಕಡ 7.75 ಆಗಿದೆ.

 ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ ಪ್ರಯೋಜನವೇನು?

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ ಪ್ರಯೋಜನವೇನು?

ಹೆಚ್ಚಿನ ಸಂದರ್ಭಗಳಲ್ಲಿ, ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇಕಡ 0.50 ಹೆಚ್ಚುವರಿ ಬಡ್ಡಿ ದರವನ್ನು ನೀಡುತ್ತವೆ. ಆದರೆ ಈ ಸಣ್ಣ ಹಣಕಾಸು ಬ್ಯಾಂಕ್‌ನ ಕೊಡುಗೆಯು ಬಡ್ಡಿದರವು ಅಧಿಕ ಲಾಭದಾಯಕವಾಗಿದೆ. ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇಕಡ 0.75 ಹೆಚ್ಚುವರಿ ಬಡ್ಡಿದರವನ್ನು ನೀಡುತ್ತಿದ್ದಾರೆ. ಅಧಿಕ ಬಡ್ಡಿದರ ಬಯಸುವವರು ಉಜ್ಜೀವನ್ ಸ್ಮಾಲ್ ಫೈನಾನಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಬಹುದು.

ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ: ನೂತನ ದರ ಪರಿಶೀಲಿಸಿ

 ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ ಪ್ರಯೋಜನವೇನು?

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ ಪ್ರಯೋಜನವೇನು?

ಹೆಚ್ಚಿನ ಸಂದರ್ಭಗಳಲ್ಲಿ, ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇಕಡ 0.50 ಹೆಚ್ಚುವರಿ ಬಡ್ಡಿ ದರವನ್ನು ನೀಡುತ್ತವೆ. ಆದರೆ ಈ ಸಣ್ಣ ಹಣಕಾಸು ಬ್ಯಾಂಕ್‌ನ ಕೊಡುಗೆಯು ಬಡ್ಡಿದರವು ಅಧಿಕ ಲಾಭದಾಯಕವಾಗಿದೆ. ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇಕಡ 0.75 ಹೆಚ್ಚುವರಿ ಬಡ್ಡಿದರವನ್ನು ನೀಡುತ್ತಿದ್ದಾರೆ. ಅಧಿಕ ಬಡ್ಡಿದರ ಬಯಸುವವರು ಉಜ್ಜೀವನ್ ಸ್ಮಾಲ್ ಫೈನಾನಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಬಹುದು.

 ಬದಲಾವಣೆಯಾಗುವ ಬಡ್ಡಿದರ

ಬದಲಾವಣೆಯಾಗುವ ಬಡ್ಡಿದರ

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಬಡ್ಡಿದರಗಳು ಬದಲಾವಣೆ ಹೊಂದುತ್ತದೆ. ಬಡ್ಡಿದರದಲ್ಲಿ ಆರ್‌ಬಿಐನ ರೆಪೋ ದರದ ಮೇಲೆ ಆಧಾರಿತವಾಗಿರುತ್ತದೆ. ಆದ್ದರಿಂದ, ದೀರ್ಘಾವಧಿಯ ಎಫ್‌ಡಿಗಳಿಗಿಂತ ಹೂಡಿಕೆದಾರರು ಉತ್ತಮ ಆದಾಯಕ್ಕಾಗಿ ಅಲ್ಪಾವಧಿಯ ಎಫ್‌ಡಿಗಳನ್ನು ಆಯ್ಕೆ ಮಾಡಬಹುದು. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ 990 ದಿನಗಳ ಎಫ್‌ಡಿಗಳಿಗೆ ಅಧಿಕ ಬಡ್ಡಿದರವನ್ನು ಒದಗಿಸುತ್ತದೆ. ಕಡಿಮೆ ಅಥವಾ ಹೆಚ್ಚಿನ ಅವಧಿಯಲ್ಲಿ ಇತರ ಎಫ್‌ಡಿಗಳಿಗೆ ಬಡ್ಡಿದರ ಕೊಂಚ ಕಡಿಮೆಯಾಗಿದೆ.

 ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಬಗ್ಗೆ ಮಾಹಿತಿ

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಬಗ್ಗೆ ಮಾಹಿತಿ

ಸೆಪ್ಟೆಂಬರ್ 30, 2021ರವರೆಗಿನ ಮಾಹಿತಿ ಪ್ರಕಾರ 248 ಜಿಲ್ಲೆಗಳು, 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 59.7 ಲಕ್ಷಕ್ಕೂ ಹೆಚ್ಚು ಗ್ರಾಹಕರು ಮತ್ತು 575 ಕ್ಕೂ ಹೆಚ್ಚು ಬ್ಯಾಂಕಿಂಗ್ ಕೇಂದ್ರಗಳನ್ನು ಈ ಸಣ್ಣ ಹಣಕಾಸು ಬ್ಯಾಂಕ್ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೊಂದಿದೆ. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್, ಫೋನ್ ಬ್ಯಾಂಕಿಂಗ್‌ನಾದ್ಯಂತ ಡಿಜಿಟಲ್ ಹೆಜ್ಜೆಗುರುತು ಕೂಡಾ ಈ ಬ್ಯಾಂಕ್ ಇರಿಸಿದೆ.

English summary

Ujjivan Small Finance Bank Is Offering FD Interest Rate Up to 7.9%

This Small Finance Bank Is Offering FD Interest Rate Up to 7.9% In Short Term Investment: Check Rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X