For Quick Alerts
ALLOW NOTIFICATIONS  
For Daily Alerts

2023ರಲ್ಲಿಯೂ ಉದ್ಯೋಗ ಕಡಿತ ಮುಂದುವರಿಸಲಿದೆ ಈ ಸಂಸ್ಥೆಗಳು!

|

ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡುವುದನ್ನು ಮುಂದುವರಿಸಿದೆ. ಮೆಟಾ, ಟ್ವಿಟ್ಟರ್‌ ಸಂಸ್ಥೆಯಲ್ಲಾದ ನಷ್ಟವನ್ನು ಮುಂದಿಟ್ಟುಕೊಂಡು ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಹಾಗೆಯೇ ಈ ಉದ್ಯೋಗ ಕಡಿತ ಅನಿವಾರ್ಯ ಎಂದು ಕೂಡಾ ಹೇಳಿಕೊಂಡಿದೆ. ಆದರೆ ಇನ್ನು ಕೆಲವು ಸಂಸ್ಥೆಗಳು 2023 ರಲ್ಲಿಯೂ ಉದ್ಯೋಗ ಕಡಿತ ಮಾಡುವುದನ್ನು ಮುಂದುವರಿಸುವ ಸಾಧ್ಯತೆ ಇದೆ.

 

ಹಣಕಾಸು ಬಿಕ್ಕಟ್ಟು, ನಷ್ಟ, ಷೇರು ಮಾರುಕಟ್ಟೆಯಲ್ಲಿನ ತಲ್ಲಣದ ನಡುವೆ ಪ್ರಮುಖ ಸಂಸ್ಥೆಗಳು ತಮ್ಮ ಪ್ರಮುಖ, ಹಿರಿಯ ಉದ್ಯೋಗಿಗಳನ್ನು ಕೂಡಾ ವಜಾ ಮಾಡುತ್ತಿದೆ. ಇನ್ನು ಕೆಲವು ಸಂಸ್ಥೆಯ ಹಿರಿಯ ಉದ್ಯೋಗಿಗಳು ತಾವಾಗಿಯೇ ರಾಜೀನಾಮೆಯನ್ನು ಕೂಡಾ ನೀಡಲು ಆರಂಭ ಮಾಡಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಎರಡನೇ ತ್ರೈಮಾಸಿಕದಲ್ಲಿ ಉಂಟಾದ ನಷ್ಟ.

ಟ್ವಿಟ್ಟರ್ ಅನ್ನು ತನ್ನ ಮಾಲೀಕತ್ವಕ್ಕೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಪಡೆದ ಬಳಿಕ ಸಂಸ್ಥೆಯು ಭಾರೀ ನಷ್ಟವನ್ನು ಕಂಡಿದೆ. ಇದನ್ನು ಸರಿದೂಗಿಸಲೆಂದು ಟ್ವಿಟ್ಟರ್ ಉದ್ಯೋಗ ಕಡಿತ ಮಾಡುತ್ತಿದೆ. ಇದಾದ ಬೆನ್ನಲ್ಲೇ ಹಲವಾರು ಸಂಸ್ಥೆಗಳಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತ ಮುನ್ನಲೆಗೆ ಬರುತ್ತಿದೆ. ಇನ್ನು ಈ ಟಾಪ್ 5 ಟೆಕ್ ಸಂಸ್ಥೆಗಳು 2023 ರಲ್ಲಿಯೂ ಉದ್ಯೋಗ ಕಡಿತ ಮುಂದುವರಿಸಲಿದೆ. ಯಾವೆಲ್ಲ ಸಂಸ್ಥೆಗಳೆಂದು ಈ ಕೆಳಗೆ ವಿವರಿಸಲಾಗಿದೆ. ಮುಂದೆ ಓದಿ....,

ಮೆಟಾ

ಮೆಟಾ

ಮೆಟಾ ಅತೀ ದೊಡ್ಡ ಟೆಕ್ ಸಂಸ್ಥೆಯಾಗಿದೆ. ಇದರ ನಿವ್ವಳ ಆದಾಯವು ನಿರಂತರವಾಗಿ ಕುಸಿಯುತ್ತಲೇ ಇದೆ. ಈ ಕಾರಣದಿಂದಾಗಿ ಮೆಟಾ ಸುಮಾರು 11,000 ಉದ್ಯೋಗಿಗಳನ್ನು ಅಥವಾ ಶೇಕಡ 13 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಹಾಗೆಯೇ ಸದ್ಯಕ್ಕೆ ಯಾವುದೇ ನೇಮಕಾತಿಯನ್ನು ಕೂಡಾ ನಡೆಸುವುದಿಲ್ಲ ಎಂದು ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ. ಈ ಸಂಸ್ಥೆಯಲ್ಲಿ 2023 ರಲ್ಲಿಯೂ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ.

ಟ್ವಿಟ್ಟರ್

ಟ್ವಿಟ್ಟರ್

ಟ್ವಿಟ್ಟರ್‌ ಅನ್ನು ಎಲಾನ್ ಮಸ್ಕ್ ಖರೀದಿ ಮಾಡಿದ ಬಳಿಕ ಸಂಸ್ಥೆಯಲ್ಲಿ ಉಂಟಾದ ನಷ್ಟದ ಕಾರಣವನ್ನು ನೀಡಿ ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇದು ಅನಿವಾರ್ಯವಾಗಿದೆ ಎಂದು ಮಸ್ಕ್ ಸಮರ್ಥನೆ ಕೂಡಾ ಮಾಡಿದ್ದಾರೆ. 2023ರಲ್ಲಿಯೂ ಈ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ.

ನೆಟ್‌ಫ್ಲಿಕ್ಸ್
 

ನೆಟ್‌ಫ್ಲಿಕ್ಸ್

ಜೂನ್‌ನಲ್ಲಿ ನೆಟ್‌ಫ್ಲಿಕ್ಸ್ ಉದ್ಯೋಗಿಗಳನ್ನು ವಜಾ ಮಾಡಿದೆ. ಸುಮಾರು 150 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದು ನೆಟ್‌ಫ್ಲಿಕ್ಸ್ ಪ್ರಸ್ತುತ 300 ಉದ್ಯೋಗಿಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಫೆಬ್ರವರಿ 2022ರಲ್ಲಿ ನೆಟ್‌ಫ್ಲಿಕ್ಸ್ ಸುಮಾರು 20 ಸಾವಿರ ಗ್ರಾಹಕರನ್ನು ಕಳೆದುಕೊಂಡಿದೆ. ಇದರಿಂದಾಗಿ ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ. ಈ ಟೆಕ್ ಸಂಸ್ಥೆಯು ಕೂಡಾ ಮುಂದಿನ ವರ್ಷವೂ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಇದೆ.

ಬೆಟರ್

ಬೆಟರ್

ಟೆಕ್ ಸಂಸ್ಥೆಯಾದ ಬೆಟರ್ 2021ರಲ್ಲಿ ಸುಮಾರು 900 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಈ ವರ್ಷದ ಏಪ್ರಿಲ್‌ನಲ್ಲಿ 1,200ರಿಂದ 1,500ರವರೆಗೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತ ಹಾಗೂ ಯುಎಸ್‌ನಲ್ಲಿ 3,100ಕ್ಕೂ ಅಧಿಕ ಮಂದಿಯನ್ನು ವಜಾ ಮಾಡುವ ಸಾಧ್ಯತೆ ಇದೆ.

 

ಮೈಕ್ರೋಸಾಫ್ಟ್

ಮೈಕ್ರೋಸಾಫ್ಟ್

ಜುಲೈ ತಿಂಗಳಿನಲ್ಲಿ ಮೈಕ್ರೋಸಾಫ್ಟ್ ಸುಮಾರು 1800 ಮಂದಿಯನ್ನು ಕೆಲಸದಿಂದ ವಜಾ ಮಾಡಿದೆ. ಇನ್ನು ಆಗಸ್ಟ್‌ನಲ್ಲಿ 200 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಇನ್ನು ಇತ್ತೀಚೆಗೆ 1,000ಕ್ಕೂ ಅಧಿಕ ಮಂದಿಯನ್ನು ವಜಾಗೊಳಿಸಿದೆ. ಇನ್ನು ಈ ಸಂಸ್ಥೆಯಲ್ಲಿ 2023ರಲ್ಲಿಯೂ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ.

English summary

Top 5 Companies May Continue Layoffs in Tech Sector in 2023

Top 5 Companies May Continue Layoffs in Tech Sector in 2023. These are a few businesses where layoffs may still occur in 2023. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X