For Quick Alerts
ALLOW NOTIFICATIONS  
For Daily Alerts

ಗಮನಿಸಿ: ಆಧಾರ್‌ ವೆರಿಫಿಕೇಶನ್‌ಗೆ ಯುಐಡಿಎಐ ಹೊಸ ಮಾರ್ಗಸೂಚಿ

|

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ವೆರಿಫಿಕೇಶನ್‌ಗೆ ಸಂಬಂಧಿಸಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿ ಪ್ರಕಾರ ಆಧಾರ್ ದೃಢೀಕರಣ ಮಾಡುವ ಮುನ್ನ ಆಧಾರ್‌ನಲ್ಲಿರುವ ವಿಳಾಸದ ನಿವಾಸಿಗಳಲ್ಲಿ ದೃಡೀಕರಣವನ್ನು ಪಡೆಯುವುದು ಮುಖ್ಯವಾಗಿದೆ.

 

ಆಧಾರ್ ದೃಢೀಕರಣವನ್ನು ನಡೆಸುವ ಮೊದಲು ನಿವಾಸಿಗಳ ಅನುಮೋದನೆಯನ್ನು ಕಾಗದದ ಮೇಲೆ ಅಥವಾ ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ತೆಗೆದುಕೊಳ್ಳಬೇಕಾಗುತ್ತದೆ. REs (Requesting Entities) ಗಳಿಗೆ ಯುಐಡಿಎಐ ಈ ಮಾರ್ಗಸೂಚಿಗಳಲ್ಲಿ ಮಾಹಿತಿ ನೀಡಿದೆ. ಸಂಸ್ಥೆಯು ಸಂಗ್ರಹ ಮಾಡುವ ಡೇಟಾ, ಆಧಾರ್ ದೃಢೀಕರಣದ ಹಿಂದಿನ ಕಾರಣವನ್ನು ನಿವಾಸಿಗಳಿಗೆ ಅರ್ಥ ಮಾಡಿಸಬೇಕು ಎಂದು ಕೂಡಾ ಯುಐಡಿಎಐ ಹೇಳಿದೆ.

 

ಆಧಾರ್ ನಿಯಮಾವಳಿಗಳಲ್ಲಿ ಸೂಚಿಸಲಾದ ಅವಧಿಗೆ ಮಾತ್ರ ಈ ಒಪ್ಪಿಗೆ ಸೇರಿದಂತೆ ವೆರಿಫಿಕೇಶನ್‌ ಇರುತ್ತದೆ. ಇನ್ನು ಆಧಾರ್ ಕಾಯಿದೆ ಮತ್ತು ಅದರ ನಿಯಮಾವಳಿಗಳ ಪ್ರಕಾರ, ಈ ಮಾಹಿತಿಯನ್ನು ಮುಕ್ತಾಯ ದಿನಾಂಕದ ಬಳಿಕ ಮತ್ತೆ ಅಪ್‌ಡೇಟ್ ಮಾಡಲಾಗುತ್ತದೆ.

 ಗಮನಿಸಿ: ಆಧಾರ್‌ ವೆರಿಫಿಕೇಶನ್‌ಗೆ ಯುಐಡಿಎಐ ಹೊಸ ಮಾರ್ಗಸೂಚಿ

RE ಗಳು ಸಾಮಾನ್ಯವಾಗಿ ಆಧಾರ್ ಸಂಖ್ಯೆಯ ಮೊದಲ 8 ಅಂಕೆಗಳನ್ನು ಮರೆಮಾಚದೆ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಮಾಹಿತಿಯನ್ನು ಸಂಗ್ರಹಿಸಬಾರದು ಎಂಬುವುದು ನಮಗೆ ತಿಳಿದಿರಬೇಕಾಗಿದೆ. ಆರ್‌ಇಗಳಿಗೆ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಅಧಿಕಾರಿ ನೀಡಿದ್ದರೆ ಮಾತ್ರ ಅದನ್ನು ಸಂಗ್ರಹ ಮಾಡಬಹುದು ಎಂದು ಯುಐಡಿಎಐ ತಿಳಿಸಿದೆ.

ಅಷ್ಟಕ್ಕೂ REs ಏನು, ಅವರೇನು ಮಾಡುತ್ತಾರೆ?

ರಿಕ್ವೆಸ್ಟಿಂಗ್ ಎಂಟೈಟಿಸ್ (Requesting Entities/REs) ಆಧಾರ್ ದೃಢೀಕರಣ ಸೇವೆಗಳನ್ನು ಒದಗಿಸುತ್ತವೆ. ನಿವಾಸಿಗಳ ಆಧಾರ್ ಸಂಖ್ಯೆ ಮತ್ತು ಜನಸಂಖ್ಯಾ/ಬಯೋಮೆಟ್ರಿಕ್ OTP ಮಾಹಿತಿಯನ್ನು ದೃಢೀಕರಣಕ್ಕಾಗಿ ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಗೆ ಸಲ್ಲಿಸುವ ಕಾರ್ಯವನ್ನು ಮಾಡುತ್ತಾರೆ.

ಇನ್ನು ಆರ್‌ಇಗಳು ಹೇಗಿರಬೇಕು ಎಂಬುವುದನ್ನು ಕೂಡಾ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹೇಳಿದೆ. ಆರ್‌ಇಗಳು ಜನರ ಬಳಿಕ ಅಥವಾ ಆಧಾರ್ ಹೊಂದಿರುವವರ ಬಳಿ ಸೌಜನ್ಯಯುತವಾಗಿ ವರ್ತನೆ ಮಾಡಬೇಕು. ಆಧಾರ್ ಸಂಖ್ಯೆಗಳ ಭದ್ರತೆ ಮತ್ತು ಗೌಪ್ಯತೆಯ ಬಗ್ಗೆ ಅವರಿಗೆ ಭರವಸೆ ನೀಡಬೇಕು ಎಂದು ಯುಐಡಿಎಐ ಒತ್ತಿ ಹೇಳಿದೆ.

ನಿವಾಸಿಗಳಲ್ಲಿ ಅಥವಾ ಆಧಾರ್ ಹೊಂದಿರುವವರಲ್ಲಿ ಯಾವುದೇ ಅನುಮಾಸ್ಪದ ಬೆಳವಣಿಗೆ ಕಂಡು ಬಂದರೆ ಯಾವುದೇ ರಾಜಿ ಇಲ್ಲ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವರದಿ ಮಾಡಬೇಕು ಎಂದು ಮಾಹಿತಿ ನೀಡಿದೆ.

English summary

UIDAI issue new guidelines on Aadhaar verification, Know details in Kannada

The Unique Identification Authority of India (UIDAI) has said that the residents' informed consent before conducting the Aadhaar authentication is a must.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X