For Quick Alerts
ALLOW NOTIFICATIONS  
For Daily Alerts

ಉಳಿತಾಯ ಖಾತೆಯ ಬಡ್ಡಿದರ ಪರಿಷ್ಕರಿಸಿದೆ ಈ ಬ್ಯಾಂಕ್: ಹೊಸ ದರ ತಿಳಿಯಿರಿ

|

ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಸಾರ್ವಜನಿಕ ವಲಯದ ಬ್ಯಾಂಕ್ ಆದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪರಿಷ್ಕರಣೆ ಮಾಡಿದೆ. ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಮಾಹಿತಿಯನ್ನು ನೀಡಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಪರಿಷ್ಕೃತ ದರಗಳು ಜೂನ್ 1, 2022 ರಂದು ಜಾರಿಗೆ ಬರುತ್ತವೆ. ಈ ಪರಿಷ್ಕರಣೆಯ ಬಳಿಕ ಬ್ಯಾಂಕಿನ ಉಳಿತಾಯ ಖಾತೆಯ ಬಡ್ಡಿದರವು ಇಳಿಕೆಯಾಗಿದೆ. ಆದರೆ ಮೊತ್ತದ ಮೇಲೆ ಆಧಾರಿತವಾಗಿದೆ.

 ಗೃಹ ಸಾಲಗಳ ಬಡ್ಡಿದರ ಏರಿಸಿದ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ: ಇಎಂಐ ಹೆಚ್ಚಳ ಗೃಹ ಸಾಲಗಳ ಬಡ್ಡಿದರ ಏರಿಸಿದ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ: ಇಎಂಐ ಹೆಚ್ಚಳ

ಬ್ಯಾಂಕ್ ರೂ.50 ಲಕ್ಷದವರೆಗಿನ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲೆ ಶೇಕಡಾ 2.75 ಬಡ್ಡಿದರವನ್ನು ನೀಡುತ್ತದೆ. ಇದು ಈ ಹಿಂದೆ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ನೀಡುತ್ತಿದ್ದ ಬಡ್ಡಿದರಕ್ಕಿಂತ ಕಡಿಮೆಯಾಗಿದೆ. ಈ ಹಿಂದೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆಗೆ ಶೇಕಡ 2.90ಕ್ಕಿಂತ ಕಡಿಮೆ ಬಡ್ಡಿದರವಾಗಿತ್ತು.

 ಉಳಿತಾಯ ಖಾತೆ ಬಡ್ಡಿದರ ಪರಿಷ್ಕರಿಸಿದೆ ಈ ಬ್ಯಾಂಕ್: ಹೊಸ ದರ ತಿಳಿಯಿರಿ

ರೂ.100 ಕೋಟಿಯಿಂದ ರೂ.500 ಕೋಟಿಗಿಂತ ಹೆಚ್ಚಿನ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ದರ ಈಗ ಶೇ.3.10 ಆಗಲಿದೆ. ಈ ಹಿಂದೆ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ದರ ಶೇ.2.90ರಷ್ಟಿತ್ತು. ಅಂದರೆ ರೂ.100 ಕೋಟಿಯಿಂದ ರೂ.500 ಕೋಟಿಗಿಂತ ಹೆಚ್ಚಿನ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ದರ ಕೊಂಚ ಹೆಚ್ಚಾಗಿದೆ. ರೂ. 1000 ಕೋಟಿಗಿಂತ ಹೆಚ್ಚಿನ ಉಳಿತಾಯ ಬ್ಯಾಂಕ್ ಠೇವಣಿಗಳು ಈಗ ಶೇಕಡ 3.55 ಆಗಿರುತ್ತದೆ. ಈ ಹಿಂದೆ ಶೇಕಡ 2.90 ಇತ್ತು. ಈ ಹಿಂದಿನ ದರಕ್ಕಿಂತ ಹೊಸ ದರ ಏರಿಕೆಯಾಗಿದೆ.

ನೂತನ ಬಡ್ಡಿದರ ಎಷ್ಟಿದೆ ತಿಳಿಯಿರಿ

ರೂ.50 ಲಕ್ಷದವರೆಗಿನ ಬಡ್ಡಿದರ: ಶೇಕಡ 2.90, ನೂತನ ಬಡ್ಡಿದರ ಶೇಕಡ 2.75
ರೂ.100 ಕೋಟಿಯಿಂದ ರೂ.500 ಕೋಟಿ: ಶೇಕಡ 2.90, ನೂತನ ಬಡ್ಡಿದರ ಶೇಕಡ 3.10
ರೂ.500 ಕೋಟಿಯಿಂದ ರೂ. 1000 ಕೋಟಿ: ಶೇಕಡ 2.90, ನೂತನ ಬಡ್ಡಿದರ ಶೇಕಡ 3.40
ರೂ. 1000 ಕೋಟಿಗಿಂತ ಅಧಿಕ ಠೇವಣಿ: ಶೇಕಡ 2.90, ನೂತನ ಬಡ್ಡಿದರ ಶೇಕಡ 3.55

ಏತನ್ಮಧ್ಯೆ, ಕೋಟಕ್ ಮಹೀಂದ್ರಾ ಬ್ಯಾಂಕ್ ಇಂದು 390 ದಿನಗಳಿಂದ 23 ತಿಂಗಳ ಅವಧಿಗೆ 2 ಕೋಟಿ ರೂ. ಒಳಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಬ್ಯಾಂಕ್ ಈಗ 5.50 ಶೇಕಡಾ ಬಡ್ಡಿದರವನ್ನು ಒದಗಿಸುತ್ತದೆ. ಮೇ 6, 2022 ರಂತೆ ಶೇಕಡಾ 5.20 ರಿಂದ 30 ಬೇಸಿಸ್ ಪಾಯಿಂಟ್ ಹೆಚ್ಚಳವಾಗಿದೆ. ಬಂಧನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಮತ್ತು ಫೆಡರಲ್ ಬ್ಯಾಂಕ್ ಸೇರಿದಂತೆ ಬ್ಯಾಂಕ್‌ಗಳು ಆರ್‌ಬಿಐ ರೆಪೊ ದರವನ್ನು ಶೇಕಡಾ 4.40 ಕ್ಕೆ ಹೆಚ್ಚಿಸಿದ ನಂತರ ಬಡ್ಡಿದರ ಹೆಚ್ಚಳವನ್ನು ಘೋಷಿಸಿವೆ.

English summary

Union Bank of India Revises Interest Rates On Savings Bank Deposits

Union Bank of India Revises Interest Rates On Savings Bank Deposits. (W.e.f. 01.06.2022).
Story first published: Friday, May 6, 2022, 16:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X