ಕೇಂದ್ರ ಬಜೆಟ್‌ಗೂ ಮುನ್ನ ವೈಯಕ್ತಿಕ ಹಣಕಾಸು ನಿರ್ವಹಣೆ ಹೀಗೆ ಮಾಡಿ..
ಹಣಕಾಸು ಸಚಿವೆ, ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2022 ಅನ್ನು ಮಂಡನೆ ಮಾಡಲಿದ್ದಾರೆ. ಆದರೆ ಸಾಮಾನ್ಯ ಜನರಿಗೆ, ವಿಶೇಷವಾಗಿ ಸಂಬಳ ಪಡೆಯುವ ಕಾರ್ಮಿಕರಿಗೆ ಏನೂ ದೊಡ್ಡ ಬದಲಾವಣೆ ಆಗುವ ಸಾಧ್ಯತೆಗಳು ಇಲ್ಲ. ಬಜೆಟ್ ಘೋಷಣೆಯು ಭಾರತೀಯ ಆರ್ಥಿಕತೆಯ ಪ್ರತಿಯೊಂದು ವಲಯದಲ್ಲಿ, ವಿಶೇಷವಾಗಿ ಕೊರೊನಾ ವೈರಸ್ ಸಾಂಕ್ರಾಮಿಕದ ನಂತರದಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಭಾರತವು 2022 ರ ವೇಳೆಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ವಿದೇಶಿ ಹೂಡಿಕೆಯನ್ನು ಮುಂದುವರಿಸುವುದಾಗಿ ರಾಷ್ಟ್ರದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯರು ಉದ್ಯೋಗಗಳನ್ನು ನಿರೀಕ್ಷಿಸಬಹುದು.
ಜ.26: ಯಥಾಸ್ಥಿತಿ ಕಾಯ್ದುಕೊಂಡ ಇಂಧನ ದರ: ಪ್ರಮುಖ ನಗರಗಳಲ್ಲಿ ಬೆಲೆಯೆಷ್ಟು?
ಆದರೆ ಈ ನಡುವೆ ನೀವು ಕೇವಲ ಬಜೆಟ್ ಘೋಷಣೆಯ ಮೇಲೆ ಕಣ್ಣಿಟ್ಟಿದ್ದರೂ ಸಹ, 2022 ರಲ್ಲಿ ನಿಮ್ಮ ಸ್ವಂತ ವೈಯಕ್ತಿಕ ಹಣಕಾಸು ಮತ್ತು ಬಜೆಟ್ ಅನ್ನು ಹೇಗೆ ನಿರ್ವಹಿಸುವುದು ಎಂಬುವುದನ್ನು ನೀವು ತಿಳಿದಿರಬೇಕು. ಪ್ರತಿ ಬಜೆಟ್ ವರ್ಷ, ವೈಯಕ್ತಿಕ ಹಣಕಾಸು ನಿಮ್ಮ ಮೊದಲ ಕಾಳಜಿಯಾಗಿರಬೇಕು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ನಿಮ್ಮ ವೈಯಕ್ತಿಕ ಹಣಕಾಸು ಭವಿಷ್ಯವನ್ನು ನಿರ್ಮಿಸಲು ಈ ವರ್ಷಕ್ಕೆ ಆದ್ಯತೆ ನೀಡಲು ಪ್ರಮುಖ ಸಲಹೆಯನ್ನು ನೀಡುತ್ತೇವೆ. ಮುಂದೆ ಓದಿ.
ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪಡೆದವರು ಯಾರು?

ತುರ್ತು ನಿಧಿಯ ಮೇಲೆ ಒಂದು ಕಣ್ಣಿರಲಿ..
ಹಣಕಾಸಿನ ತೊಂದರೆಯ ಸಮಯದಲ್ಲಿ ಸಂದರ್ಭವನ್ನು ನಿಭಾಯಿಸಲು ನಿಮಗೆ ಸಹಾಯವಾಗುವುದು ತುರ್ತು ನಿಧಿಯಾಗಿದೆ. ನಿಮ್ಮ ವೈಯಕ್ತಿಕ ಹಣಕಾಸು ನಿರ್ವಹಣೆಗೆ ತುರ್ತು ನಿಧಿಯು ಅತ್ಯಗತ್ಯವಾಗಿರುತ್ತದೆ. ಉದ್ಯೋಗ ನಷ್ಟ, ಗಂಭೀರ ಅನಾರೋಗ್ಯ ಅಥವಾ ಇತರ ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಅನಿರೀಕ್ಷಿತ ವೆಚ್ಚಗಳನ್ನು ಸರಿದೂಗಿಸಲು ನೀವು ತುರ್ತು ನಿಧಿ ಹೊಂದಿರುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ತುರ್ತು ನಿಧಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ನಿಮ್ಮ ಜೀವನ ವೆಚ್ಚಗಳು ಮತ್ತು ಹೂಡಿಕೆಗಳನ್ನು ಬದಿಗಿಟ್ಟು ತುರ್ತು ಪರಿಸ್ಥಿತಿಗಳಿಗಾಗಿ ಹಣವನ್ನು ಹೊಂದಿಸುವುದು ಮೊದಲ ಹಂತವಾಗಿದೆ. ತುರ್ತು ನಿಧಿಗಳ ವಿಷಯಕ್ಕೆ ಬಂದಾಗ, ನೀವು ಯಾವಾಗಲೂ ಕೈಯಲ್ಲಿ ಸ್ವಲ್ಪ ಹಣವನ್ನು ಹೊಂದಿರುವುದು ಅತ್ಯಗತ್ಯ.

ಬಜೆಟ್ ನಿರ್ವಹಣೆ ಮಾಡಿ..
ನಿಮ್ಮ ವೈಯಕ್ತಿಕ ಹಣಕಾಸಿನ ಉದ್ದೇಶಗಳನ್ನು ಸಾಧಿಸುವುದಕ್ಕಿಂತ ಅಥವಾ ನಿಮ್ಮ ತುರ್ತು ಅವಶ್ಯಕತೆಗಳಿಗಾಗಿ ತಯಾರಿ ಮಾಡುವುದಕ್ಕಿಂತ ಹೆಚ್ಚಾಗಿ, ನೀವು ಸಾಧ್ಯವಾದಷ್ಟು ಬೇಗ ಬಜೆಟ್ ನಿರ್ವಹಣೆ ಮಾಡುವುದು ಮುಖ್ಯವಾಗಿದೆ. ನಿಮ್ಮ ವೈಯಕ್ತಿಕ ಹಣಕಾಸುಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ನೀವು ಯಾವುದಕ್ಕೆ ಖರ್ಚು ಮಾಡುತ್ತಿದ್ದೀರಿ ಎಂಬುವವುದನ್ನು ಸರಿಯಾಗಿ ತಿಳಿಯಲು ನೀವು ಬಜೆಟ್ ನಿರ್ವಹಣೆ ಮಾಡುವುದು ಮುಖ್ಯವಾಗಿದೆ.

ವೆಚ್ಚವನ್ನು ಟ್ಯ್ರಾಕ್ ಮಾಡುವುದು
ನಿಮ್ಮ ಖರ್ಚುಗಳನ್ನು ಟ್ರ್ಯಾಕ್ ಮಾಡುವುದರಿಂದ ನಿಮ್ಮ ಖರ್ಚನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಖರ್ಚುಗಳನ್ನು ಟ್ರ್ಯಾಕ್ ಮಾಡುವುದು ಎಂದರೆ ನೀವು ಎಷ್ಟು ಹಣವನ್ನು, ಯಾವ ವಿಚಾರಕ್ಕಾಗಿ ಖರ್ಚು ಮಾಡಿದ್ದೀರಿ ಎಂಬ ಪಟ್ಟಿಯನ್ನು ಹೊಂದಿರುವುದು. ಇದು ನಿಮ್ಮ ಗುರಿ ಸಾಧನೆಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ನೀವು ದುಂದು ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳನ್ನು ಟ್ರ್ಯಾಕ್ ಮಾಡುವ ಮೂಲಕ ನಿಮ್ಮ ಬಜೆಟ್ ಅನ್ನು ಹೆಚ್ಚಿಸಲು ಸುಧಾರಣೆಗಳನ್ನು ಮಾಡಬಹುದು. "ಖರ್ಚು ಮಾಡಿದ ನಂತರ ಉಳಿದದ್ದನ್ನು ಉಳಿಸಬೇಡಿ; ಉಳಿಸಿದ ನಂತರ ಉಳಿದದ್ದನ್ನು ಖರ್ಚು ಮಾಡಿ," ಎಂಬ ವಾರೆನ್ ಬಫೆಟ್‌ರ ಮಾತನ್ನು ನೀವು ಇಲ್ಲಿ ನೆನಪಿಸಿಕೊಳ್ಳಬಹುದು.

50-30-20 ಅಥವಾ 70-20-10 ಏನಿದು?
ಬಜೆಟ್‌ಗೆ ಬಂದಾಗ, ನಿಮ್ಮ ವೈಯಕ್ತಿಕ ಹಣಕಾಸು ಸುಧಾರಿಸಲು ನೀವು ಪ್ರಯೋಗವನ್ನು ಮಾಡಬಹುದು ಅಥವಾ ಈಗಿನಿಂದಲೇ ನೀವು ಕಾರ್ಯ ರೂಪಕ್ಕೆ ತರಬಹುದಾದ ನಿಯಮಗಳು ಇದೆ. ಅದುವೇ 50.30.20. ಈ ನಿಯಮವು ಜನರ ನಡುವೆ ಸಾಮಾನ್ಯವಾಗಿ ರೂಢಿಯಲ್ಲಿರುವ ನಿಯಮವಾಗಿದೆ. ನೀವು ಪಾರವನ್ನು ಹೊಂದಿರಲಿ ಅಥವಾ ಸಂಬಳ ಪಡೆಯುತ್ತಿರಲಿ ಈ ನಿಯಮ ಎಲ್ಲರಿಗೂ ಸರಿಹೊಂದುವುದು ಆಗಿದೆ. ಈ ನಿಯಮದ ಪ್ರಕಾರ ನೀವು ನಿಮ್ಮ ಆದಾಯದ 50 ಪ್ರತಿಶತವನ್ನು ಆಹಾರ, ಬಟ್ಟೆ ಮತ್ತು ವಸತಿ ಅಥವಾ ವಿದ್ಯುತ್ ವೆಚ್ಚಗಳಂತಹ ಅಗತ್ಯಗಳಿಗಾಗಿ ಖರ್ಚು ಮಾಡಬೇಕು. 30 ಪ್ರತಿಶತವನ್ನು ನಿಮ್ಮ ಉತ್ತಮ ಜೀವನಶೈಲಿಗಾಗಿ ಅಂದರೆ ರಜಾದಿನಗಳು, ವೈಯಕ್ತಿಕ ವಿಷಯಗಳು ಅಥವಾ ಇನ್ನೇನಾದರೂ ವಿಚಾರಕ್ಕೆ ಖರ್ಚು ಮಾಡಬೇಕು. ಉಳಿದ 20 ಪ್ರತಿಶತವು ಉಳಿತಾಯಕ್ಕಾಗಿ ಮೀಸಲಿಡಬೇಕು. ಅನುಸರಿಸಬೇಕಾದ ಇನ್ನೊಂದು ನಿಯಮವೆಂದರೆ 70-20-10 ನಿಯಮ. ಈ ನಿಯಮದ ಪ್ರಕಾರ ನಿಮ್ಮ ಆದಾಯದ ಶೇಕಡ 70 ಅನ್ನು ಜೀವನ ವೆಚ್ಚಕ್ಕಾಗಿ ಖರ್ಚು ಮಾಡಬೇಕು. ಶೇಡಕ 20 ಅನ್ನು ಉಳಿತಾಯ ಮಾಡಬೇಕು. ಶೇಕಡ 10 ಅನ್ನು ಹೂಡಿಕೆಗಾಗಿ ಬಳಸಬೇಕು.