For Quick Alerts
ALLOW NOTIFICATIONS  
For Daily Alerts

ಆಗಸ್ಟ್‌ನಲ್ಲಿ 6.57 ಬಿಲಿಯನ್ ರೂಪಾಯಿ ದಾಖಲೆಯ ಯುಪಿಐ ವಹಿವಾಟು

|

ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ ಅಥವಾ ಯುಪಿಐನಲ್ಲಿ ಆಗಸ್ಟ್‌ನಲ್ಲಿ ಮತ್ತೆ ದಾಖಲೆ ಪ್ರಮಾಣದಲ್ಲಿ ವಹಿವಾಟು ನಡೆದಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಆಗಸ್ಟ್ ತಿಂಗಳಿನಲ್ಲಿ 6.57 ಬಿಲಿಯನ್ ಅಥವಾ 657 ಕೋಟಿ ರೂಪಾಯಿ ವಹಿವಾಟು ನಡೆದಿದೆ.

ಒಟ್ಟಾಗಿ ಈವರೆಗೆ 10.73 ಟ್ರಿಲಿಯನ್ ರೂಪಾಯಿ ಯುಪಿಐ ವಹಿವಾಟು ನಡೆದಿದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಹೇಳಿದೆ. ಒಟ್ಟಾಗಿ ಯುಪಿಐ ವಹಿವಾಟು ಶೇಕಡ 85ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಶೇಕಡ 68ರಷ್ಟು ಹೆಚ್ಚಳವಾಗಿತ್ತು.

ಯುಪಿಐನಲ್ಲಿ ಎಷ್ಟು ಗರಿಷ್ಠ ಪಾವತಿ ಮಿತಿಯಿದೆ?ಯುಪಿಐನಲ್ಲಿ ಎಷ್ಟು ಗರಿಷ್ಠ ಪಾವತಿ ಮಿತಿಯಿದೆ?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮೊದಲ ಮಹಿಳೆಯರಿಗಾಗಿ ಸ್ಥಾಪನೆ ಮಾಡಲಾಗಿರುವ ಡಿಜಿಟಲ್ ಬ್ಯಾಂಕ್ ಎಲ್‌ಎಕ್ಸ್‌ಎಂಇಯ ಸಿಇಒ ಜಾಸ್ಮಿನ್ ಬಿ ಗುಪ್ತಾ, "ಓವರ್‌ಸೀಸ್ ಮಾರುಕಟ್ಟೆಯಲ್ಲಿಯೂ ಯುಪಿಐ ವಹಿವಾಟು ಅಧಿಕ ಮಾಡುವ ಯೋಜನೆಯನ್ನು ಎನ್‌ಪಿಸಿಐ ಹೊಂದಲಾಗಿರುವಾಗ ಈ ಯುಪಿಐ ವಹಿವಾಟಿನ ಪ್ರಮಾಣವು ಇನ್ನಷ್ಟು ಹೆಚ್ಚಾಗುತ್ತಲೇ ಹೋಗಲಿದೆ. ಯುಪಿಐ ಇನ್ನು ಮುಂದೆ ಎಲ್ಲ ಮನೆಯಲ್ಲೂ ಚಿರಪರಿಚಿತವಾಗಲಿದೆ," ಎಂದು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ 6.57 ಬಿಲಿಯನ್ ರೂಪಾಯಿ ದಾಖಲೆಯ ಯುಪಿಐ ವಹಿವಾಟು

ಆರ್ಥಿಕ ಬೆಳವಣಿಗೆಗೆ ಡಿಜಿಟಲ್ ಪಾವತಿ ಸಹಕಾರಿ

"ಮುಂದಿನ ಕೆಲವು ತಿಂಗಳುಗಳಲ್ಲಿ ಯುಪಿಐ ಮೇಲಿನ ಕ್ರೆಡಿಟ್ ಕಾರ್ಡ್ ಕೂಡಾ ಅಧಿಕವಾಗಲಿದೆ. ಇವೆಲ್ಲದರಿಂದಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗಲಿದೆ. ಇದು ಆರ್ಥಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಲಿದೆ," ಎಂದು ಹೇಳಿದ್ದಾರೆ.

IMPS vs UPI : ಐಎಂಪಿಎಸ್‌ಗಿಂತ ಯುಪಿಐ ವ್ಯವಹಾರ ವಿಭಿನ್ನ ಹೇಗೆ?IMPS vs UPI : ಐಎಂಪಿಎಸ್‌ಗಿಂತ ಯುಪಿಐ ವ್ಯವಹಾರ ವಿಭಿನ್ನ ಹೇಗೆ?

ಜುಲೈ 2022ರಲ್ಲಿ ಯುಪಿಐ ಆಧಾರಿತ ಡಿಜಿಟಲ್ ವಹಿವಾಟು ಮೌಲ್ಯ ಸುಮಾರು 10.63 ಲಕ್ಷ ಕೋಟಿ ರೂಪಾಯಿ ಆಗಿದೆ. ಯುಪಿಐ ಭಾರತದಲ್ಲಿ ಹೆಚ್ಚು ಪರಿಚಿತವಾದ 2016ರ ಬಳಿಕ ಮೊದಲ ಬಾರಿಗೆ 6 ಬಿಲಿಯನ್‌ಗಿಂತ ಅಧಿಕ ವಹಿವಾಟು ಜುಲೈನಲ್ಲಿ ನಡೆದಿದೆ.

2022ರ ಹಣಕಾಸು ವರ್ಷದಲ್ಲಿ ಯುಪಿಐ ಮೂಲಕ ಸುಮಾರು 77.94 ಟ್ರಿಲಿಯನ್ ಮೌಲ್ಯದ 45 ಬಿಲಿಯನ್ ವಹಿವಾಟು ನಡೆದಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 51.74 ಟ್ರಿಲಿಯನ್ ಮೌಲ್ಯದ 30 ಬಿಲಿಯನ್ ವಹಿವಾಟು ನಡೆದಿದೆ. ಮುಂದಿನ 4-5 ವರ್ಷದಲ್ಲಿ ಪ್ರತಿ ದಿನಕ್ಕೆ ಬಿಲಿಯನ್ ವಹಿವಾಟು ನಡೆಸುವುದು ಗುರಿಯಾಗಿದೆ.

English summary

UPI Transactions in August 2022: UPI registers Rs 657 Crore transactions

UPI Transactions in August 2022: Mass retail payments platform UPI registers Rs 657 Crore transactions in August. Read on.
Story first published: Friday, September 2, 2022, 14:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X