For Quick Alerts
ALLOW NOTIFICATIONS  
For Daily Alerts

UPI Limit : ಯುಪಿಐ ವಹಿವಾಟು ಮಿತಿ: ದಿನಕ್ಕೆ ಎಷ್ಟು ಗರಿಷ್ಠ ವಹಿವಾಟು ಮಿತಿ?

|

ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟನ್ನು ಈಗ ಸುಲಭಗೊಳಿಸಿದೆ. ನೀವು ಎಲ್ಲಿಯೇ ಕೂತು ಯುಪಿಐ ಐಡಿ ಬಳಸಿಕೊಂಡು ವಹಿವಾಟು ನಡೆಸಲು ಸಾಧ್ಯವಾಗಲಿದೆ. ಯಾರಿಗೂ ಹಣವನ್ನು ಕಳುಹಿಸಬಹುದು, ಹಣವನ್ನು ಪಡೆಯಬಹುದು. ಆದರೆ ಈಗ ವಹಿವಾಟಿಗೆ ಮಿತಿಯನ್ನು ಹೇರಲಾಗಿದೆ.

 

ನಾವು ಪ್ರತಿ ದಿನ ದಿನಸಿಯನ್ನು ಖರೀದಿ ಮಾಡುವುದರಿಂದ ಹಿಡಿದು, ಬಿಲ್‌ಗಳನ್ನು ಪಾವತಿ ಮಾಡುವವರೆಗೆ ಎಲ್ಲದಕ್ಕೂ ಯುಪಿಐ ವಹಿವಾಟನ್ನೇ ನಡೆಸುತ್ತೇವೆ. ಕೈಯಲ್ಲಿ ನಗದನ್ನು ಹಿಡಿದುಕೊಳ್ಳುವುದನ್ನೇ ಎಷ್ಟೋ ಮಂದಿ ಮರೆತಿದ್ದೇವೆ. ಆದರೆ ಯುಪಿಐ ವಹಿವಾಟಿಗೂ ಇರುವ ಮಿತಿ ಇದೆ ನೋಡಿ...

ದೇಶದಲ್ಲಿ ಅಧಿಕ ಯುಪಿಐ ವಹಿವಾಟು ನಡೆದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಟಾಪ್!ದೇಶದಲ್ಲಿ ಅಧಿಕ ಯುಪಿಐ ವಹಿವಾಟು ನಡೆದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಟಾಪ್!

ನ್ಯಾಷನಲ್ ಪೇಮೆಂಟ್ಸ್ ಕಾಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಪ್ರಕಾರ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಯುಪಿಐ ಮೂಲಕ ಒಂದು ಲಕ್ಷ ರೂಪಾಯಿ ವಹಿವಾಟು ನಡೆಸಲು ಮಾತ್ರ ಸಾಧ್ಯವಾಗಲಿದೆ. ನಾವು ಸಾಮಾನ್ಯವಾಗಿ ಗೂಗಲ್ ಪೇ, ಪೇಟಿಎಂ, ಫೋನ್‌ಪೇಯನ್ನು ಯುಪಿಐ ವಹಿವಾಟಿಗೆ ಬಳಕೆ ಮಾಡುತ್ತೇವೆ. ಹಾಗಾದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಎಷ್ಟು ಮೊತ್ತದ ವಹಿವಾಟು ನಡೆಸಲು ಸಾಧ್ಯವಾಗಲಿದೆ, ಮಿತಿ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಪೇಟಿಎಂ ವಹಿವಾಟು ಮಿತಿ

ಪೇಟಿಎಂ ವಹಿವಾಟು ಮಿತಿ

ಪೇಟಿಎಂ ಪ್ಲಾಟ್‌ಫಾರ್ಮ್ ಮೂಲಕ ದಿನದಲ್ಲಿ 1 ಲಕ್ಷ ರೂಪಾಯಿ ವಹಿವಾಟು ನಡೆಸಬಹುದು. ಹಾಗೆಯೇ ಎರಡು ಗಂಟೆಯಲ್ಲಿ ಸುಮಾರು 20 ಸಾವಿರ ರೂಪಾಯಿಗಳ ವಹಿವಾಟನ್ನು ನಡೆಸಲು ಪೇಟಿಎಂ ಅವಕಾಶ ನೀಡುತ್ತದೆ. ಪ್ರತಿ ಗಂಟೆಗೆ ಐದು ವಹಿವಾಟನ್ನು ನಡೆಸಲು ಮಾತ್ರ ಅವಕಾಶವಿದೆ. ಹಾಗೆಯೇ ಪೇಟಿಎಂ ಯುಪಿಐ ಮೂಲಕ ದಿನಕ್ಕೆ 20 ವಹಿವಾಟನ್ನು ನಡೆಸಲು ಮಾತ್ರ ಸಾಧ್ಯವಾಗಲಿದೆ. ಆದರೆ ಇದು ನಿಮ್ಮ ಬ್ಯಾಂಕ್ ಯಾವುದು ಎಂಬುವುದರ ಮೇಲೆಯೂ ನಿರ್ಧರಿತವಾಗಿರುತ್ತದೆ.

 ಫೋನ್‌ಪೇ ವಹಿವಾಟು ಮಿತಿ

ಫೋನ್‌ಪೇ ವಹಿವಾಟು ಮಿತಿ

ಫೋನ್‌ಪೇ ಪ್ರತಿ ದಿನಕ್ಕೆ ಸುಮಾರು 1 ಲಕ್ಷ ರೂಪಾಯಿ ಯುಪಿಐ ವಹಿವಾಟು ನಡೆಸಲು ಅವಕಾಶ ನೀಡುತ್ತದೆ. ಇದು ಕೂಡಾ ನೀವು ಯಾವ ಬ್ಯಾಂಕ್‌ನ ಖಾತೆಯನ್ನು ಹೊಂದಿದ್ದೀರಿ ಎಂಬುವುದರ ಮೇಲೆ ಅವಲಂಭಿತವಾಗಿರುತ್ತದೆ. ಪ್ರಸ್ತುತ ಫೋನ್‌ಪೇ ಆಪ್‌ನಲ್ಲಿ ದಿನದ ಗರಿಷ್ಠ ವಹಿವಾಟು ಮಿತಿ 10 ಅಥವಾ 20 ಆಗಿದೆ. ಆದರೆ ಫೋನ್‌ಪೇನಲ್ಲಿ ಗಂಟೆಗೆ ಇಷ್ಟೇ ವಹಿವಾಟು ನಡೆಸಲು ಸಾಧ್ಯ ಎಂಬ ಮಿತಿಯಿಲ್ಲ.

 ಗೂಗಲ್‌ಪೇ ವಹಿವಾಟು ಮಿತಿ
 

ಗೂಗಲ್‌ಪೇ ವಹಿವಾಟು ಮಿತಿ

ಗೂಗಲ್‌ಪೇನಲ್ಲಿ 1 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವನ್ನು ಒಂದು ದಿನದಲ್ಲಿ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಯುಪಿಐ ಆಪ್‌ನಲ್ಲಿ ದೈನಂದಿನ ವಹಿವಾಟು ಮಿತಿ 1 ಲಕ್ಷ ರೂಪಾಯಿ ಆಗಿದೆ. ಪ್ರತಿ ದಿನಕ್ಕೆ ಎಷ್ಟು ವಹಿವಾಟು ಮಾಡಲು ಸಾಧ್ಯ ಎಂಬುವುದಕ್ಕೂ ಮಾನದಂಡಗಳು ಇದೆ. ಗೂಗಲ್ ಪೇ ಮೂಲಕ ದಿನಕ್ಕೆ 10 ವಹಿವಾಟುಗಳನ್ನು ಮಾತ್ರ ನಡೆಸಲು ಸಾಧ್ಯವಾಗುತ್ತದೆ. ಆದರೆ ಗಂಟೆಯ ವಹಿವಾಟು ಮಿತಿ ಗೂಗಲ್‌ಪೇನಲ್ಲಿ ಇಲ್ಲ.

 ಅಮೆಜಾನ್ ಪೇ ವಹಿವಾಟು ಮಿತಿ

ಅಮೆಜಾನ್ ಪೇ ವಹಿವಾಟು ಮಿತಿ

ಗೂಗಲ್‌ಪೇನಂತೆಯೇ ಅಮೆಜಾನ್ ಪೇನಲ್ಲಿಯೂ 1 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವನ್ನು ಒಂದು ದಿನದಲ್ಲಿ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಅಮೆಜಾನ್ ಪೇ ದೈನಂದಿನ ವಹಿವಾಟು ಮಿತಿ 1 ಲಕ್ಷ ರೂಪಾಯಿ ಆಗಿದೆ. ನೀವು ಅಮೆಜಾನ್ ಪೇ ಗೆ ಹೊಸದಾಗಿ ಸೇರ್ಪಡೆಯಾದ 24 ಗಂಟೆಯಲ್ಲಿ 5 ಸಾವಿರ ರೂಪಾಯಿಯ ವಹಿವಾಟು ನಡೆಸಲು ಮಾತ್ರ ಅವಕಾಶ ನೀಡಲಾಗುತ್ತದೆ.

English summary

UPI Transfer Limit: Know The Maximum Amount You Can Transfer Using UPI In A Day

UPI Transactions Limit: According to the National Payments Corporation of India (NPCI), a person can transfer up to ₹ 1 lakh through UPI in a single day.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X