For Quick Alerts
ALLOW NOTIFICATIONS  
For Daily Alerts

ಯುಎಸ್ ಈಕ್ವಿಟಿ ಮಾರ್ಕೆಟ್ ಗೆ ಭಾರತವನ್ನು ಹೋಲಿಸಿ ನೋಡಿದಾಗ...

By ಅನಿಲ್ ಆಚಾರ್
|

ಭಾರತ ಹಾಗೂ ಯುಎಸ್ ಈಕ್ವಿಟಿ ಮಾರ್ಕೆಟ್ ಮಧ್ಯೆ ಹೋಲಿಕೆ ಮಾಡುವಂಥ ವಾಸ್ತವವಾದ ವರದಿಯೊಂದು ಎಕನಾಮಿಕ್ ಟೈಮ್ಸ್ ನಲ್ಲಿ ಬಂದಿದೆ. ಸೆನ್ಸೆಕ್ಸ್ ಸೂಚ್ಯಂಕ ಏರಿಕೆ ದಾಖಲಿಸುತ್ತಿದ್ದರೂ ಇದು ಒಂದು ಕಂಪೆನಿಯ ಶೋ ಇದ್ದಂತಿದೆ. ಆದರೆ ಇದೇ ಮಾತು ಯುಎಸ್ ಈಕ್ವಿಟಿ ಮಾರ್ಕೆಟ್ ಗೆ ಅನ್ವಯಿಸಲ್ಲ.

 

ಭಾರತದ ಷೇರುಮಾರುಕಟ್ಟೆ ಭರ್ಜರಿ ಏರಿಕೆ: ಇಂಡಸ್ಇಂಡ್ ಬ್ಯಾಂಕ್ 4% ಗಳಿಕೆಭಾರತದ ಷೇರುಮಾರುಕಟ್ಟೆ ಭರ್ಜರಿ ಏರಿಕೆ: ಇಂಡಸ್ಇಂಡ್ ಬ್ಯಾಂಕ್ 4% ಗಳಿಕೆ

ಭಾರತದ ಷೇರು ಮಾರುಕಟ್ಟೆಯು ಒಂದೇ ಷೇರಿನ ಮೇಲೆ ಅವಲಂಬಿಸಿದಂತೆ ಇದ್ದರೆ, ಯುಎಸ್ ನ ಟಾಪ್ ಈಕ್ವಿಟಿ ಷೇರುಗಳು ಆರೋಗ್ಯಕರವಾಗಿ ಇರುವಂತೆ ಕಾಣುತ್ತವೆ. ಮಾರ್ಚ್ 23ರಿಂದ S&P BSE ಸೂಚ್ಯಂಕ ಏರಿಕೆಯಾಗಿದ್ದರಲ್ಲಿ ಭಾರತದಲ್ಲಿ ಬಂಡವಾಳ ದೃಷ್ಟಿಯಿಂದ ಅತಿ ದೊಡ್ಡ ಕಂಪೆನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ 43% ಪಾಲು ಹೊಂದಿದೆ.

ರಿಲಯನ್ಸ್ ಇಂಡಸ್ಟ್ರೀಸ್ 164% ಏರಿಕೆ

ರಿಲಯನ್ಸ್ ಇಂಡಸ್ಟ್ರೀಸ್ 164% ಏರಿಕೆ

ಈ ವರ್ಷ ಮಾರ್ಚ್ 23ನೇ ತಾರೀಕು ತಲುಪಿದ್ದ ತಳಮಟ್ಟದಿಂದ 164% ಏರಿಕೆ ಕಂಡಿದೆ ರಿಲಯನ್ಸ್ ಇಂಡಸ್ಟ್ರೀಸ್. ಯುಎಸ್ ನಲ್ಲಿ FAANG (ಫೇಸ್ ಬುಕ್, ಆಪಲ್, ಅಮೆಜಾನ್, ನೆಟ್ ಫ್ಲಿಕ್ಸ್, ಗೂಗಲ್) ಷೇರುಗಳು ಎನಿಸಿಕೊಂಡಿರುವುದು ಇದೇ ಅವಧಿಯಲ್ಲಿ S&P500ರ ಏರಿಕೆಯಲ್ಲಿ 22% ಕೊಡುಗೆ ನೀಡಿವೆ ಎಂಬುದು ಬ್ಲೂಮ್ ಬರ್ಗ್ ದತ್ತಾಂಶದಿಂದ ತಿಳಿದುಬರುತ್ತದೆ. ಈ ವರ್ಷ ಫೇಸ್ ಬುಕ್, ಗೂಗಲ್ ನಂಥ ಕಂಪೆನಿಯಿಂದ ರಿಲಯನ್ಸ್ ಡಿಜಿಟಲ್ ಹಾಗೂ ಇ ಕಾಮರ್ಸ್ ವ್ಯವಹಾರಕ್ಕೆ ಬಂದ ಹೂಡಿಕೆ ಕಾರಣಕ್ಕೆ ರಿಲಯನ್ಸ್ ಮಾರುಕಟ್ಟೆ ಮೌಲ್ಯ ಈ ವರ್ಷ ದುಪ್ಪಟ್ಟಿಗೆ ಸನಿಹ $ 200 ಬಿಲಿಯನ್ ಗೂ ಹೆಚ್ಚಾಗಿದೆ. ಸೆನ್ಸೆಕ್ಸ್ ಸೂಚ್ಯಂಕದಲ್ಲಿ ರಿಲಯನ್ಸ್ ಮೌಲ್ಯ ಸದ್ಯಕ್ಕೆ 17% ಇದೆ. ವರ್ಷದ ಹಿಂದೆ ಇದು 10% ಇತ್ತು. ಮಾರ್ಚ್ ಕನಿಷ್ಠ ಮಟ್ಟದಿಂದ 50% ಮೌಲ್ಯ ಹೆಚ್ಚಾಗಿದೆ.

ಫಂಡ್ ಗಳಿಗೆ ಸಮಸ್ಯೆ ಏನು?

ಫಂಡ್ ಗಳಿಗೆ ಸಮಸ್ಯೆ ಏನು?

ಈಗ ರಿಲಯನ್ಸ್ ಷೇರಿನ ತೂಕ ಸೆನ್ಸೆಕ್ಸ್ ನಲ್ಲಿ ಹೆಚ್ಚಾಗಿರುವುದೇ ಸಮಸ್ಯೆಗೆ ಕಾರಣವಾಗಿದೆ. ನಿಯಂತ್ರಕ ಸಂಸ್ಥೆಗಳು ಒಂದು ಕಂಪೆನಿ ಷೇರನ್ನು ಇಷ್ಟು ಮಾತ್ರ ಹೊಂದಿರಬೇಕು ಎಂದು ಫಂಡ್ ಗಳಿಗೆ ಮಿತಿ ವಿಧಿಸಿರುತ್ತದೆ. ಅದಕ್ಕೆ ಈಗ ಸಮಸ್ಯೆಯಾಗಿದೆ. ಆದ್ದರಿಂದ ಏರುತ್ತಿರುವ ಷೇರುಗಳಾದ ರಿಲಯನ್ಸ್ ನಂಥದ್ದನ್ನು ಖರೀದಿ ಮಾಡುವುದು ಕಷ್ಟವಾಗಿದೆ. ಆ ಕಾರಣಕ್ಕೆ ಮಾರ್ಕೆಟ್ ಅಪಾಯದಲ್ಲಿದೆ ಎನ್ನುತ್ತದೆ ಕೊಟಕ್ ಅಸೆಟ್ ಮ್ಯಾನೇಜ್ ಮೆಂಟ್ ಕೋ. ಭಾರತದ ಜತೆಗೆ ಹೋಲಿಸಿದಲ್ಲಿ ಅಮೆರಿಕದ ಈಕ್ವಿಟಿಗಳ ಸ್ಥಿತಿ ಇಷ್ಟು ಭಾರವಾಗಿಲ್ಲ.

ಯುರೋಪಿಯನ್ ಮಾರ್ಕೆಟ್ ಗೆ ಹೋಲಿಸಿದಲ್ಲಿ...
 

ಯುರೋಪಿಯನ್ ಮಾರ್ಕೆಟ್ ಗೆ ಹೋಲಿಸಿದಲ್ಲಿ...

ಅಮೆರಿಕದ ಅತಿ ದೊಡ್ಡ ಷೇರು ಆಪಲ್ ಕಂಪೆನಿ S&P500 ಕೊಡುಗೆ 11% ಇದೆ. ಇದು ಮಾರ್ಚ್ ನಿಂದ ಈಚೆಗಿನ ಲೆಕ್ಕಾಚಾರ. ಆಪಲ್ ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಯುಎಸ್ ಡಿ ದಾಟಿದೆ. ಅದರ ಬೆನ್ನಿಗೆ ಮೈಕ್ರೋಸಾಫ್ಟ್, ಅಮೆಜಾನ್.ಕಾಮ್, ಫೇಸ್ ಬುಕ್ ಇದೆ. ಕೊಡುಗೆ ನೀಡಿದ ಟಾಪ್ 20ರ ಪಟ್ಟಿಯಲ್ಲಿ ನೆಟ್ ಫ್ಲಿಕ್ಸ್ ಇಲ್ಲ. ಬೆಂಚ್ ಮಾರ್ಕ್ ಗೆ 0.7% ಕೊಡುಗೆ ಕೊಟ್ಟಿದೆ. ಯುರೋಪಿಯನ್ ಬೆಂಚ್ ಮಾರ್ಕ್ ಗೆ ಹೋಲಿಸಿದಲ್ಲಿ ವಿತರಣೆ ಸಮವಾಗಿಲ್ಲ.

English summary

US Equity Market Compared With Indian Stock Market, How Different?

Here is the comparison between US equity market with Indian stock market. Clearly show dependency of benchmark on Reliance Industries.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X