For Quick Alerts
ALLOW NOTIFICATIONS  
For Daily Alerts

ಬ್ರಾಹ್ಮಣ ಸಮುದಾಯಕ್ಕಾಗಿಯೇ ಮೀಸಲಾದ ನಿಗಮ ಹಾಗೂ ಯೋಜನೆಗಳು

|

ಬ್ರಾಹ್ಮಣರಿಗಾಗಿಯೇ ಮೀಸಲಾದ ಯೋಜನೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಆಂಧ್ರಪ್ರದೇಶ ಸರ್ಕಾರದ ಅಧೀನಕ್ಕೆ ಒಳಪಟ್ಟ ಬ್ರಾಹ್ಮಣ ಕಲ್ಯಾಣ ನಿಗಮದಿಂದ ಉಪಯುಕ್ತವಾದ ಯೋಜನೆಗಳನ್ನು ರೂಪಿಸಲಾಗಿದೆ. ವಿದ್ಯಾಭ್ಯಾಸ, ಮದುವೆ, ಪಿಂಚಣಿ, ಉದ್ಯಮಗಳ ಆರಂಭ, ಅಂತ್ಯಕ್ರಿಯೆ ಸೇರಿದಂತೆ ನಾನಾ ಉದ್ದೇಶಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.

 

ಕೆಲವು ಯೋಜನೆಗಳಿಗೆ ಸದ್ಯಕ್ಕೆ ಅರ್ಜಿಯನ್ನು ಆಹ್ವಾನಿಸಿಲ್ಲ ಅಥವಾ ಸ್ವೀಕರಿಸುತ್ತಿಲ್ಲ. ಆದರೆ ಕೆಲವು ಯೋಜನೆಗಳಿಗೆ ಈಗಲೂ ಅರ್ಜಿ ಹಾಕಿಕೊಳ್ಳಬಹುದು ಎಂಬ ಒಕ್ಕಣೆ ವೆಬ್ ಸೈಟ್ ನಲ್ಲಿದೆ. ಬ್ರಾಹ್ಮಣರ ಕಲ್ಯಾಣಕ್ಕಾಗಿ ಏನೇನು ಯೋಜನೆಗಳಿವೆ ಎಂಬ ವಿವರಗಳು ಇಲ್ಲಿವೆ: ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

 ವೇದವ್ಯಾಸ ಯೋಜನೆ

ವೇದವ್ಯಾಸ ಯೋಜನೆ

ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಯಾರು ಪೂರ್ಣಾವಧಿ ವೇದಾಭ್ಯಾಸ (ಋಗ್ವೇದ, ಯಜುರ್ವೇದ, ಸಾಮವೇದ...) ಮಾಡುವವರಿಗೆ ಮೀಸಲಾದದ್ದು ವೇದವ್ಯಾಸ ಯೋಜನೆ.

 ಗಾಯತ್ರಿ ಯೋಜನೆ

ಗಾಯತ್ರಿ ಯೋಜನೆ

ನೋಂದಾಯಿತ ಮತ್ತು ಪ್ರತಿಷ್ಠಿತ ಶಾಲೆ, ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಉತ್ತಮ ಸಾಧನೆ ಮಾಡಿದವರಿಗೆ ಈ ಯೋಜನೆ.

 ಭಾರತಿ ಯೋಜನೆ

ಭಾರತಿ ಯೋಜನೆ

ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಲು ಬಯಸುವ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಒಂದು ಸಲದ ಹಣಕಾಸಿನ ನೆರವು ನೀಡಲಾಗುವುದು.

 ವಶಿಷ್ಟ ಯೋಜನೆ
 

ವಶಿಷ್ಟ ಯೋಜನೆ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಮಾರ್ಗದರ್ಶನ ಮತ್ತು ಅಧಿಕೃತ ಸಂಸ್ಥೆಗಳಿಂದ ತರಬೇತಿ.

 ದ್ರೋಣಾಚಾರ್ಯ ಯೋಜನೆ

ದ್ರೋಣಾಚಾರ್ಯ ಯೋಜನೆ

ನಿರುದ್ಯೋಗ ಬ್ರಾಹ್ಮಣ ಯುವಕರಲ್ಲಿ ಕೌಶಲ ಹೆಚ್ಚಿಸಿಕೊಳ್ಳಲು ಮತ್ತು ಉದ್ಯೋಗ ಪಡೆಯಲು ಸಹಾಯ ಮಾಡುವಂಥ ಯೋಜನೆ ಇದು.

 ಚಾಣಕ್ಯ ಯೋಜನೆ

ಚಾಣಕ್ಯ ಯೋಜನೆ

ಆರ್ಥಿಕವಾಗಿ ದುಬಲರಾದ ಉದ್ಯಮಿಗಳಿಗೆ ಹೊಸ ಉದ್ಯಮ ಸ್ಥಾಪಿಸಲು ಮತ್ತು ಸಣ್ಣ ಉದ್ಯಮ- ವ್ಯವಹಾರ, ವ್ಯಾಪಾರಗಳನ್ನು ವಿಸ್ತರಿಸುವುದಕ್ಕೆ ಪ್ರೋತ್ಸಾಹ.

 ಕಲ್ಯಾಣಮಸ್ತು ಪದಕಂ

ಕಲ್ಯಾಣಮಸ್ತು ಪದಕಂ

ಅರ್ಚಕ, ಪೌರೋಹಿತ್ಯ ವೃತ್ತಿಯಲ್ಲಿ ಇರುವವರು ಅಥವಾ ವೇದಪಾರಾಯಣ ಮಾಡುತ್ತಿರುವ ಯುವಕನನ್ನು ಮದುವೆಯಾಗುವ ಯುವತಿಯನ್ನು ಪ್ರೋತ್ಸಾಹಿಸಲು ಇರುವ ಯೋಜನೆ ಇದು.

 ಕಾಶ್ಯಪ ಯೋಜನೆ

ಕಾಶ್ಯಪ ಯೋಜನೆ

ಬಡ ಅನಾಥ ಮಕ್ಕಳು, ವಿಶಿಷ್ಟ ಚೇತನರು, ವಿಧವೆಯರು, ಪತಿಯಿಂದ ದೂರವಾದವರು ಹಾಗೂ ಹಿರಿಯ ವಯಸ್ಸಿನ ಬ್ರಾಹ್ಮಣದ ಆಹಾರ ಮತ್ತು ಬಾಡಿಗೆ ಖರ್ಚುಗಳನ್ನು ನಿಭಾಯಿಸಲು ಇರುವ ಯೋಜನೆ.

 ಗರುಡ ಯೋಜನೆ

ಗರುಡ ಯೋಜನೆ

ಬ್ರಾಹ್ಮಣರ ಅಂತ್ಯ ಸಂಸ್ಕಾರಕ್ಕೆ ಹಣಕಾಸು ನೆರವು ಒದಗಿಸುವ ಯೋಜನೆ ಇದು. ಅಂತ್ಯಸಂಸ್ಕಾರಕ್ಕೆ ಹಣಕಾಸು ಒದಗಿಸಲು ಆಗದ ಕುಟುಂಬಗಳಿಗಾಗಿ ಈ ಯೋಜನೆ.

 ಭಾರ್ಗವ ಯೋಜನೆ

ಭಾರ್ಗವ ಯೋಜನೆ

ವ್ಯಕ್ತಿಗಳು, ಒಕ್ಕೂಟ ಅಥವಾ ಸಂಸ್ಥೆಗಳಾಗಿ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುವಂತಿದ್ದಲ್ಲಿ, ಅವುಗಳನ್ನು ಬಲಗೊಳಿಸುವ, ಚೈತನ್ಯ ತುಂಬುವ ಯೋಜನೆ ಇದು. ವೆಬ್ ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ.

English summary

Welfare Schemes For Brahmin Community By Andhra Bahmin Welfare Corporation

Here is the list of Brahmin welfare schemes by Andhra Pradesh Brahmin welfare corporation.
Story first published: Sunday, January 26, 2020, 17:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X