For Quick Alerts
ALLOW NOTIFICATIONS  
For Daily Alerts

ಏನಿದು ಸೈಬರ್‌ ವಿಮೆ, ನಿಮಗೇನು ಪ್ರಯೋಜನ?

|

ಭಾರತದಲ್ಲಿ ಸೈಬರ್‌ ದಾಳಿಗಳು ಸಾಮಾನ್ಯವಾದ ವಿಚಾರವಾಗಿ ಬಿಟ್ಟಿದೆ. ಉನ್ನತ ಮಟ್ಟದ ಡೇಟಾಗಳ ಮೇಲೆಯೂ ಸೈಬರ್‌ ದಾಳಿ ನಡೆದಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ. ಈ ನಡುವೆ ವೈಯಕ್ತಿಕವಾಗಿ, ವ್ಯಾಪಾರದ ಉದ್ದೇಶದಿಂದ, ಉದ್ಯೋಗದ ಸ್ಥಳಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಆನ್‌ಲೈನ್‌ ಮೇಲಿನ ಅವಲಂಬನೆಯೂ ಕೂಡಾ ಅಧಿಕವಾಗುತ್ತಿದೆ.

ಅದು ಮುಖ್ಯವಾಗಿ ಈ ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್‌ಲೈನ್‌ ಮೇಲಿನ ಅವಲಂಬನೆಯು ಭಾರೀ ಅಧಿಕವಾಗಿದೆ. ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಆರಂಭದಲ್ಲೇ ದೇಶದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಹಲವಾರು ದೇಶಗಳಲ್ಲಿ ಲಾಕ್‌ಡೌನ್‌ ಮಾಡಲಾಗಿದೆ. ಈ ಸಂದರ್ಭದಲ್ಲಿ ಜನರು ಎಲ್ಲಾ ಚಟುವಟಿಕೆಗಳನ್ನು ಆನ್‌ಲೈನ್‌ ಮೂಲಕವೇ ನಡೆಸಿದ್ದಾರೆ. ಹಾಗೆಯೇ ಈಗಲೂ ಕೂಡಾ ಜನರು ಹೆಚ್ಚು ಆನ್‌ಲೈನ್‌ ವಹಿವಾಟಿಗೆ ಅವಲಂಬಿತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಆನ್‌ಲೈನ್‌ ವಂಚನೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಸೈಬರ್‌ ವಿಮಾ ಪಾಲಿಸಿಯನ್ನು ಪ್ರಮಾಣೀಕರಿಸುವ, ಪರೀಕ್ಷಿಸುವ ಗುರಿಯೊಂದಿಗೆ ಪ್ರಾಧಿಕಾರವು ಒಂದು ಕಾರ್ಯಾನಿರ್ವಹಣಾ ಗುಂಪನ್ನು ರಚನೆ ಮಾಡಿದೆ.

ಎನ್‌ಆರ್‌ಐಗಳಿಗೆ 2021ರ ಉತ್ತಮ ಹೂಡಿಕೆ ಆಯ್ಕೆಗಳು, ಇಲ್ಲಿದೆ ಮಾಹಿತಿಎನ್‌ಆರ್‌ಐಗಳಿಗೆ 2021ರ ಉತ್ತಮ ಹೂಡಿಕೆ ಆಯ್ಕೆಗಳು, ಇಲ್ಲಿದೆ ಮಾಹಿತಿ

ಸೈಬರ್‌ ವಿಮೆ ಸಾಮಾನ್ಯವಾಗಿ ಸಾಮಾಜಿಕ ಭದ್ರತೆ ಸಂಖ್ಯೆಗಳು, ಕ್ರೆಡಿಟ್ ಕಾರ್ಡ್ ಸಂಖ್ಯೆಗಳು, ಖಾತೆ ಸಂಖ್ಯೆಗಳು, ಚಾಲಕರ ಪರವಾನಗಿ ಸಂಖ್ಯೆಗಳು ಮತ್ತು ಆರೋಗ್ಯ ದಾಖಲೆಗಳಂತಹ ಸೂಕ್ಷ್ಮ ಗ್ರಾಹಕರ ಮಾಹಿತಿಯನ್ನು ಒಳಗೊಂಡ ಡೇಟಾ ಕಳ್ಳತನ, ವಂಚನೆಯಾದ ಸಂದರ್ಭದಲ್ಲಿ ಪರಿಹಾರವನ್ನು, ರಕ್ಷಣೆಯನ್ನು ಒದಗಿಸಲಿದೆ. ಹಣ ಕಳ್ಳತನ ಮತ್ತು ಗುರುತಿನ ಕಳ್ಳತನದಿಂದ ನಷ್ಟ, ಅನಧಿಕೃತ ಆನ್‌ಲೈನ್‌ ವಹಿವಾಟಿನಿಂದ ರಕ್ಷಣೆ ಸಿಗಲಿದೆ.

 ಸೈಬರ್‌ ವಿಮೆ ಎಂದರೇನು?

ಸೈಬರ್‌ ವಿಮೆ ಎಂದರೇನು?

ಸೈಬರ್‌ ವಿಮೆಯು ಸೈಬರ್‌ ದಾಳಿಯಿಂದ ಸಂಸ್ಥೆಗಳನ್ನು ರಕ್ಷಣೆ ಮಾಡಲಿದೆ. ಸೈಬರ್ ದಾಳಿ/ಉಲ್ಲಂಘನೆಯ ನಂತರ ಆಗುವ ನಷ್ಟವನ್ನು ಹೊಂದಿಸಲು ಈ ಸೈಬರ್‌ ವಿಮೆಯು ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ಇನ್ನು ಅಧಿಕವಾಗಿ ಹೇಳುವುದಾದರೆ, ಸೈಬರ್‌ ಉಲ್ಲಂಘನೆ ಉಂಟಾದ ಸಂದರ್ಭದಲ್ಲಿ ಸೈಬರ್‌ ವಿಮೆಯು ಶುಲ್ಕ, ಖರ್ಚು ಹಾಗೂ ಕಾನೂನು ಸಂಬಂಧಿತ ವ್ಯವಹಾರಗಳ ಶುಲ್ಕವನ್ನು ನೀಡಲಿದೆ. ಹಾಗೆಯೇ ಉದ್ಯೋಗಿಗಳ, ಗ್ರಾಹಕರ ಡೇಟಾ ಹಾನಿ, ಕಳ್ಳತನವಾದ ಸಂದರ್ಭದಲ್ಲಿ ಅದನ್ನು ಮರು ಪಡೆಯಲು ಸಹಾಯ ಮಾಡುತ್ತದೆ. ಸೈಬರ್‌ ವಿಮೆಯನ್ನು ಸೈಬರ್‌ ಆಪತ್ತಿನ ಸಂದರ್ಭದ ವಿಮೆ ಎಂದು ಕೂಡಾ ಹೇಳಬಹುದು. ಇದು ಸೈಬರ್‌ ದಾಳಿ, ಗೂಢಾಚಾರಿಕೆಯ ಸಂದರ್ಭದಲ್ಲಿ ರಕ್ಷಣೆಯನ್ನು ಒದಗಿಸುವ ವಿಮೆ ಆಗಿದೆ. ದಾಳಿಯ ನಂತರ ಗೌಪ್ಯತೆ ತನಿಖೆ ಅಥವಾ ದಾವೆಗಳ ವೆಚ್ಚಗಳನ್ನು ಸಹ ವಿಮೆಯಲ್ಲಿ ಪಡೆಯಬಹುದಾಗಿದೆ.

ನಿಮ್ಮ ಆಧಾರ್‌ ಮೂಲಕ ಎಷ್ಟು ಸಿಮ್‌ ಖರೀದಿ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?ನಿಮ್ಮ ಆಧಾರ್‌ ಮೂಲಕ ಎಷ್ಟು ಸಿಮ್‌ ಖರೀದಿ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?

 ಸೈಬರ್‌ ವಿಮೆ ಯಾವೆಲ್ಲಾ ರಕ್ಷಣೆಯನ್ನು ನೀಡುತ್ತದೆ?

ಸೈಬರ್‌ ವಿಮೆ ಯಾವೆಲ್ಲಾ ರಕ್ಷಣೆಯನ್ನು ನೀಡುತ್ತದೆ?

ಈ ಸೈಬರ್‌ ವಿಮೆಯನ್ನು ಮಾಡಿದವರ, ಬ್ಯಾಂಕ್‌ ಖಾತೆ, ಕ್ರೆಡಿಟ್‌ ಕಾರ್ಡ್, ಡೆಬಿಟ್‌ ಕಾರ್ಡ್, ಮೊಬೈಲ್‌ ಬ್ಯಾಂಕಿಂಗ್‌ಗಳಲ್ಲಿ ಯಾವುದೇ ಹಣದ ಕಳ್ಳತನ ಅಥವಾ ಹ್ಯಾಕ್‌ ಮಾಡಿ ಕಳ್ಳತನ ಮಾಡಲಾಗಿದ್ದರೆ, ಈ ವಿಮೆಯು ನಿಮ್ಮನ್ನು ರಕ್ಷಿಸಲಿದೆ. ನಿಮಗೆ ಮೂರನೇ ವ್ಯಕ್ತಿಯಿಂದ ಸೈಬರ್‌ ಹಾನಿ ಉಂಟಾಗಿದ್ದರೆ, ಪರಿಹಾರವನ್ನು ಕೂಡಾ ಈ ವಿಮೆಯ ಮೂಲಕ ಪಡೆಯಬಹುದು.

* ವಿಮಾದಾರರ ಸಾಮಾಜಿಕ ಜಾಲತಾಣವನ್ನು ಹ್ಯಾಕ್‌ ಮಾಡಿ ಬೇರೊಬ್ಬ ವ್ಯಕ್ತಿಗೆ ವಂಚನೆಯನ್ನು ಮಾಡಲಾಗಿದ್ದರೆ, ಮೂರನೇ ವ್ಯಕ್ತಿ ಅಥವಾ ಪೀಡಿತ ಪಕ್ಷ ವಿಮಾದಾರನ ವಿರುದ್ದ ಮಾಡುವ ದೂರು ನೀಡುವ ಸಂದರ್ಭದಲ್ಲಿ ರಕ್ಷಣಾ ವೆಚ್ಚವನ್ನು ಪಾಲಿಸಿ ನೀಡುತ್ತದೆ.

* ಇದು ಸೈಬರ್‌ ದಾಳಿ ನಡೆಸಿದವರ ವಿಚಾರಣೆ ನಡೆಸಲು ಉಂಟಾಗುವ ಖರ್ಚನ್ನು ಕೂಡಾ ಒಳಗೊಂಡಿದೆ. ಹಾಗೆಯೇ ಕಳ್ಳತನವಾದ ದತ್ತಾಂಶವನ್ನು ಮತ್ತೆ ಪಡೆಯಲು ತಗುಲುವ ವೆಚ್ಚವನ್ನು ಕೂಡಾ ಇದು ಒಳಗೊಂಡಿರುತ್ತದೆ.* ಫಿಶಿಂಗ್‌ ವಿರುದ್ದವೂ ವಿಮೆಯು ರಕ್ಷಣೆ ನೀಡುತ್ತದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಇ-ವ್ಯಾಲೆಟ್ ಅನ್ನು ಮೂರನೇ ವ್ಯಕ್ತಿಯು ಆನ್‌ಲೈನ್‌ ಖರೀದಿ ಮಾಡಲು ಬಳಸಿಕೊಂಡರೆ ಈ ಸಂದರ್ಭದಲ್ಲಿ ಈ ವಿಮಾ ಪಾಲಿಸಿ ರಕ್ಷಣೆಯನ್ನು ಒದಗಿಸುತ್ತದೆ.* ನಕಲಿ ಇಮೇಲ್‌ ದಾಳಿಯ ಸಂದರ್ಭದಲ್ಲಿ ಉಂಟಾಗುವ ಹಣಕಾಸಿನ ನಷ್ಟ ಹಾಗೂ ಅಪರಾಧಿಗಳ ವಿಚಾರಣೆಗೆ ತಗುಲುವ ವೆಚ್ಚವನ್ನು ಈ ಪಾಲಿಸಿಯು ಒಳಗೊಂಡಿದೆ.* ಯಾವುದೇ ಡಿಜಿಟಲ್‌ ಮಾಧ್ಯಮದಲ್ಲಿ ವಿಮಾದಾರನ ಪ್ರಕಟಣೆ/ಪ್ರಸಾರವು ಮೂರನೇ ವ್ಯಕ್ತಿಯ ಮೇಲೆ ಹಾನಿ ಉಂಟಾದ ಪರಿಣಾಮವಾಗಿ ಮೂರನೇ ವ್ಯಕ್ತಿ ಮಾನನಷ್ಟ/ಗೌಪ್ಯತೆ ದೂರು ದಾಖಲು ಮಾಡಿದರೆ, ರಕ್ಷಣಾ ವೆಚ್ಚವನ್ನು ಈ ವಿಮೆಯು ನೀಡುತ್ತದೆ.* ಸೈಬರ್ ಸುಲಿಗೆ ಅಪಾಯದ ಪರಿಣಾಮವಾಗಿ ಸುಲಿಗೆ ನಷ್ಟದಿಂದ ರಕ್ಷಿಸುತ್ತದೆ ಮತ್ತು ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸುವ ವೆಚ್ಚವನ್ನು ಮರುಪಾವತಿಸುತ್ತದೆ.* ಹೊಸ ಸೈಬರ್ ವಿಮಾ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿಂದಾಗಿ ಸೈಬರ್ ದಾಳಿಗಳು ಮತ್ತು ಹೊಸ ತೊಂದರೆಗಳು ನಿರಂತರವಾಗಿ ಬದಲಾಗುತ್ತಿರುವುದರಿಂದ ವಿಮಾದಾರರು ಪಾಲಿಸಿ ಪದಗಳು ಹಾಗೂ ಶಿಫಾರಸುಗಳ ಆಧಾರದ ಮೇಲೆ ಉತ್ಪನ್ನಗಳನ್ನು ರಚಿಸುವ ಪ್ರಯತ್ನವನ್ನು ಮಾಡಬೇಕು.

 

 ಯಾವೆಲ್ಲಾ ಸಂದರ್ಭದಲ್ಲಿ ಸೈಬರ್‌ ವಿಮೆ ರಕ್ಷಣೆಯನ್ನು ನೀಡುವುದಿಲ್ಲ?

ಯಾವೆಲ್ಲಾ ಸಂದರ್ಭದಲ್ಲಿ ಸೈಬರ್‌ ವಿಮೆ ರಕ್ಷಣೆಯನ್ನು ನೀಡುವುದಿಲ್ಲ?

ಸೈಬರ್‌ ವಂಚನೆಯು 24 ಗಂಟೆಗಳ ಒಳಗೆ ಕಾರ್ಡ್ ಅನ್ನು ನಿರ್ಬಂಧಿಸದಿದ್ದರೆ ಕ್ಲೈಮ್‌ ಅನ್ನು ತಿರಸ್ಕಾರ ಮಾಡಲಾಗುತ್ತದೆ. ಇದಲ್ಲದೇ ನೀವು ಬ್ಯಾಂಕಿನಿಂದ ಎಸ್‌ಎಮ್‌ಎಸ್‌ ಹಾಗೂ ಒಟಿಪಿಗೆ ನೋಂದಾಯಿತ ಮೊಬೈಲ್‌ ಸಂಖ್ಯೆ ಅಥವಾ ಇಮೇಲ್‌ ಐಡಿ ನೀಡದಿದ್ದರೆ ನಿಮ್ಮ ಸೈಬರ್‌ ವಿಮಾ ಕ್ಲೈಮ್‌ ತಿರಸ್ಕಾರ ಮಾಡಲಾಗುತ್ತದೆ. ಯಾಂತ್ರಿಕ ವೈಫಲ್ಯ, ವಿದ್ಯುತ್‌ ಅಡಚಣೆ, ಮಾಧ್ಯಮ ವೈಫಲ್ಯ ಅಥವಾ ಸ್ಥಗಿತ ಉಂಟಾದ ಸಂದರ್ಭದಲ್ಲಿ ಆಗುವ ನಷ್ಟಕ್ಕೆ ವಿಮೆಯು ಪರಿಹಾರವನ್ನು ನೀಡುವುದಿಲ್ಲ.

ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ?ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ?

 ನೀವು ಸೈಬರ್‌ ವಿಮೆಯನ್ನು ಖರೀದಿ ಮಾಡಬೇಕೆ?

ನೀವು ಸೈಬರ್‌ ವಿಮೆಯನ್ನು ಖರೀದಿ ಮಾಡಬೇಕೆ?

ಪ್ರಸ್ತುತ ವ್ಯಾಪಾರಿಗಳು ಹೆಚ್ಚಾಗಿ ಸೈಬರ್‌ ದಾಳಿಗೆ ಒಳಗಾಗುತ್ತಿದ್ದಾರೆ. ಸೈಬರ್‌ ದಾಳಿ ಹಾಗೂ ವಂಚನೆಯು ಈಗ ಸಾಮಾನ್ಯವಾಗುತ್ತಿದೆ. ಹ್ಯಾಕರ್‌ಗಳು ಹೆಚ್ಚಾಗಿ ವ್ಯಾಪಾರಿಗಳ ಡೇಟಾವನ್ನು ಹ್ಯಾಕ್‌ ಮಾಡುತ್ತಿದ್ದಾರೆ. ವಂಚನೆ ಹಾಗೂ ಹ್ಯಾಕಿಂಗ್‌ ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗು‌ತಲೇ ಇದೆ. ಇದರಿಂದಾಗಿ ಅದೇಷ್ಟೋ ಉನ್ನತ ವ್ಯಾಪಾರಿಗಳು ತಮ್ಮ ವೈಯಕ್ತಿಕ ವೈಯಕ್ತಿಕ ದಾಖಲೆ ಹಾಗೂ ತಮ್ಮ ಸಂಸ್ಥೆಯ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಹೆಣಗಾಡುತ್ತಿದ್ದಾರೆ. ಇದರಿಂದಾಗಿ ನೀವು ಈ ವಿಮೆಯನ್ನು ಮಾಡಿಕೊಳ್ಳುವುದು ಉತ್ತಮ.

English summary

What Is Cyber Insurance In India, Should you buy?, Details about Insurance in Kannada

What Is Cyber Insurance In India, Should you buy?, Details about Insurance in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X