For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಬೆಲೆಯತ್ತ ಏಕಿದೆ ಭಾರತೀಯ ಚಿನ್ನದ ಹೂಡಿಕೆದಾರರ ಚಿತ್ತ?

|

ಚಿನ್ನದ ಬೆಲೆಯಲ್ಲಿ ಆಗುತ್ತಿರುವ ಏರಿಳಿತವನ್ನು ನೋಡಿದಾಗ, ಮುಂದಿನ ತ್ರೈಮಾಸಿಕದಲ್ಲಿ ಚಿನ್ನದ ಬೆಲೆಯು ಅಧಿಕ ಲಾಭವನ್ನು ಉಂಟು ಮಾಡಲಾರದು ಎಂದು ತಜ್ಞರು ಹೇಳುತ್ತಾರೆ. ಇನ್ನು ಪ್ರಮುಖವಾಗಿ ಚಿನ್ನದ ಮಾರುಕಟ್ಟೆಯು ಮುಂದಿನ ವಾರದಲ್ಲಿ ಅಂತಾರಾಷ್ಟ್ರೀಯವಾಗಿ ಪ್ರಮುಖ ಪರೀಕ್ಷೆಯನ್ನು ಎದುರಿಸಲಿದೆ ಎಂದು ಕೂಡಾ ಹೇಳಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಲೇ ಇದೆ. ಈ ನಡುವೆ ಚಿನ್ನದ ಮೇಲೆ ಹೂಡಿಕೆ ಮಾಡುವವರು ತಾವು ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ ಬೇಡವೇ ಎಂದು ಯೋಚಿಸುತ್ತಿದ್ದಾರೆ. ಈಗ ಈ ನಿಟ್ಟಿನಲ್ಲಿ ಚಿನ್ನದ ಹೂಡಿಕೆದಾರರು ಅಂತಾರಾಷ್ಟ್ರೀಯ ಚಿನ್ನದ ಬೆಲೆಯತ್ತ ಗಮನ ಹರಿಸಿದ್ದಾರೆ.

 

ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಯು ಹೇಗೆ ಇರಲಿದೆ ಎಂಬುವುದರ ಮೇಲೆ ಭಾರತೀಯ ಚಿನ್ನದ ಹೂಡಿಕೆದಾರರು ಚಿತ್ತ ನೆಟ್ಟಿದ್ದಾರೆ. ಪಿಸಿಇ ಬೆಲೆ ಸೂಚ್ಯಂಕವನ್ನು ಯುಎಸ್ ಫೆಡ್ ಹಣದುಬ್ಬರವನ್ನು ಅಳೆಯಲು ಆದ್ಯತೆ ನೀಡುತ್ತದೆ. ಇದು ಯುಎಸ್ ಫೆಡರಲ್ ರಿಸರ್ವ್ ಚೇರ್ ಜೆರೋಮ್ ಪೊವೆಲ್‌ ಮುಂದಿನ ನವೆಂಬರ್ ಸಭೆಗೆ ಮುಂಚಿತವಾಗಿ, ಟೈಪರಿಂಗ್ ಟೈಮ್‌ಲೈನ್ ನಿರ್ಧರಿಸಲು ಮತ್ತೊಮ್ಮೆ ಪ್ರಭಾವ ಬೀರುತ್ತದೆ.

 

ಚಿನ್ನದ ಬೆಲೆ ಮತ್ತೆ ಇಳಿಕೆ: 22 & 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ?ಚಿನ್ನದ ಬೆಲೆ ಮತ್ತೆ ಇಳಿಕೆ: 22 & 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಎಎನ್‌ಡಿಎ ಯ ಚಿನ್ನದ ಮಾರುಕಟ್ಟೆಯ ಹಿರಿಯ ವಿಶ್ಲೇಷಕ ಎಡ್ವರ್ಡ್ ಮೋಯಾ, "ಅಂತಾರಾಷ್ಟ್ರೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಏರಿಳಿತ ಕಂಡರೂ ಬಳಿಕ ಶೀಘ್ರವಾಗಿ ಚೇತರಿಕೆ ಕಂಡಿದೆ, " ಎಂದು ಹೇಳಿದ್ದಾರೆ. "ಅಮೂಲ್ಯವಾದ ಲೋಹವಾದ ಚಿನ್ನಕ್ಕೆ ಬೆಲೆಯು ಎಷ್ಟು ಇರುತ್ತದೆ, ಹೇಗೆ ಬದಲಾಗುತ್ತದೆ ಎಂಬುವುದು ಬಹು ಮುಖ್ಯ. ಹಣದುಬ್ಬರವು ಚಿನ್ನದ ಮೇಲೆ ಪ್ರಭಾವ ಬೀರುತ್ತದೆ," ಎಂದಿದ್ದಾರೆ.

 ಅಂತಾರಾಷ್ಟ್ರೀಯ ಬೆಲೆಯತ್ತ ಭಾರತೀಯ ಚಿನ್ನದ ಹೂಡಿಕೆದಾರರ ಚಿತ್ತ

"ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಯು ಈಗ ಸರಿಸುಮಾರು ಡಾಲರ್‌ 1750 ರಷ್ಟಿವೆ ಮತ್ತು ಡಾಲರ್‌ 1800 ಮಟ್ಟದಿಂದ ಕೆಳಕ್ಕೆ ಇಳಿದಿದೆ. ವಿದೇಶಿ ಮಾರುಕಟ್ಟೆಗಳಿಂದ ದೇಶವು ಚಿನ್ನವನ್ನು ರಫ್ತು ಮಾಡುವುದರಿಂದ ಭಾರತದ ಚಿನ್ನದ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಭಾರತೀಯ ಚಿನ್ನದ ಹೂಡಿಕೆದಾರರು ಮುಂದಿನ ವಾರದ ಅಂತಾರಾಷ್ಟ್ರೀಯ ಚಿನ್ನದ ಬೆಲೆಗಳನ್ನು ಎದುರು ನೋಡುತ್ತಿದ್ದಾರೆ.

ಸೆಪ್ಟೆಂಬರ್‌ 25 ರಂದು ಶನಿವಾರದಂದು ಇಳಿಕೆಗೊಂಡಿದೆ. ಈ ಮೂಲಕ ಆಭರಣ ಪ್ರಿಯರಿಗೆ ಸಂತಸದ ಸುದ್ದಿ ದೊರೆತಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,200 ರೂಪಾಯಿಗೆ ಕುಸಿದಿದ್ದು, ಶುದ್ಧ ಚಿನ್ನ 10 ಗ್ರಾಂ 47,130 ರೂಪಾಯಿಗೆ ಇಳಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಕುಸಿದು 59,900 ರೂಪಾಯಿ ದಾಖಲಾಗಿದೆ.

ಸತತ 2ನೇ ದಿನ ಚಿನ್ನದ ಬೆಲೆ ಇಳಿಕೆ: ಸೆ. 24ರಂದು 10ಗ್ರಾಂ ಬೆಲೆ ಎಷ್ಟಿದೆ?ಸತತ 2ನೇ ದಿನ ಚಿನ್ನದ ಬೆಲೆ ಇಳಿಕೆ: ಸೆ. 24ರಂದು 10ಗ್ರಾಂ ಬೆಲೆ ಎಷ್ಟಿದೆ?

ಈ ನಡುವೆ ಕಾಮೆಕ್ಸ್ ಚಿನ್ನದ ಭವಿಷ್ಯವು ಶೇಕಡ 0.11 ರಷ್ಟು ಅಂದರೆ ಡಾಲರ್‌ 1751 ರಲ್ಲಿ ಏರಿಕೆಯಾಗಿದೆ. ಆದರೆ ಸ್ಪಾಟ್ ಚಿನ್ನದ ಮಾರುಕಟ್ಟೆಯು ಶೇಕಡ 0.42 ರಷ್ಟು ಅಂದರೆ ಔನ್ಸ್‌ಗೆ ಡಾಲರ್‌ 1751 ರಷ್ಟು ಏರಿದೆ. ಇದು ಶುಕ್ರವಾರದ ಬೆಲೆಯಾಗಿದೆ. ಇನ್ನೊಂದೆಡೆ ಶನಿವಾರದಂದು ಯುಎಸ್‌ನ ಡಾಲರ್‌ ಇಂಡೆಕ್ಸ್‌ನಲ್ಲಿ ಸ್ಪಾಟ್‌ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಭಾರತದಲ್ಲಿ ಮುಂಬೈ ಎಂಸಿಎಕ್ಸ್ ಗೋಲ್ಡ್‌ ಶೇಕಡ 0.13 ರಷ್ಟು ಇಳಿಕೆಯಾಗಿ ಹತ್ತು ಗ್ರಾಮ್‌ಗೆ 45995 ರೂಪಾಯಿ ಆಗಿದೆ.

ಈ ನಡುವೆ ಭಾರತೀಯ ಚಿನ್ನದ ಹೂಡಿಕೆದಾರರು ಅಂತಾರಾಷ್ಟ್ರೀಯ ಬೆಲೆಯತ್ತ ಗಮನ ಹರಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಯುಎಸ್ ಫೆಡ್‌ನಿಂದ ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ದರಗಳು ಸಾಕಷ್ಟು ಕಡಿಮೆಯಾಗಿವೆ. ಈ ನಡುವೆ ಚಿನ್ನದ ಹೂಡಿಕೆದಾರರು ಸರ್ಕಾರಿ ಬಾಂಡ್‌ಗಳ ಮೇಲೆ ಹೆಚ್ಚು ಆಕರ್ಷಿತರಾಗು‌ತ್ತಿದ್ದಾರೆ ಎನ್ನಲಾಗಿದೆ. ಆದ್ದರಿಂದ, ಇದು ಮತ್ತೆ ಜಾಗತಿಕ ಮಟ್ಟದಲ್ಲಿ ಚಿನ್ನದ ದರಗಳನ್ನು ಕಡಿಮೆ ಮಾಡುತ್ತದೆ. ಭಾರತದಲ್ಲಿ, ಇದೇ ರೀತಿಯ ಚಿನ್ನದ ಬೆಲೆಯಲ್ಲಿ ಬದಲಾವಣೆ ಆಗು‌ತ್ತಿದೆ.

English summary

Why Indian Gold Investors Looking Forward To International Prices Next Week, Explained in Kannada

Why Indian Gold Investors Looking Forward To International Prices Next Week, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X