For Quick Alerts
ALLOW NOTIFICATIONS  
For Daily Alerts

ಭಾರತದ ಐಟಿ ಕ್ಷೇತ್ರದಲ್ಲೇ ವಿಪ್ರೊ ಸಿಇಒಗೆ ಅಧಿಕ ಸಂಬಳ: ಎಷ್ಟು ಗೊತ್ತಾ!

|

ಭಾರತದಲ್ಲಿ ಐಟಿ ಕ್ಷೇತ್ರದಲ್ಲಿಯೇ ಅತೀ ಹೆಚ್ಚು ಸಂಬಳವನ್ನು ಪಡೆದ ಸಿಇಒ ಎಂಬ ಹೆಗ್ಗಳಿಕೆಯನ್ನು ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಪಡೆದಿದ್ದಾರೆ. ಹಣಕಾಸು ವರ್ಷ 2022ರಲ್ಲಿ ಒಟ್ಟು 10.5 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ 79.66 ಕೋಟಿ ಆಗಿದೆ.

ಜೂನ್ 9ರಂದು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಫೈಲಿಂಗ್‌ನಲ್ಲಿ ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆಗೆ 1.7 ಮಿಲಿಯನ್ ಡಾಲರ್ ಸಂಬಳ ಮತ್ತು ಭತ್ಯೆ ಲಭ್ಯವಾಗುತ್ತದೆ ಎಂದು ತಿಳಿಸಿದೆ. ಇನ್ನು ಕಮಿಷನ್ ರೂಪದಲ್ಲಿಯೇ ಬರೋಬರಿ 2.5 ಮಿಲಿಯನ್ ಡಾಲರ್ ಪಡೆಯುತ್ತಾರೆ. ಇನ್ನು ಬೆನಿಫಿಟ್ ರೂಪದಲ್ಲಿ 2 ಮಿಲಿಯನ್ ಡಾಲರ್ ಹಾಗೂ ಇತರೆ ಎಂದು ಉಲ್ಲೇಖ ಮಾಡಿ 4 ಮಿಲಿಯನ್ ಡಾಲರ್ ಮೊತ್ತವನ್ನು ಸಂಬಳದೊಂದಿಗೆ ನೀಡಲಾಗಿದೆ.

ಇನ್ಫೋಸಿಸ್ ಸಿಇಒ ವೇತನ ಶೇ.88 ಹೆಚ್ಚಳ, ವಾರ್ಷಿಕ ಗಳಿಕೆಯೆಷ್ಟು?ಇನ್ಫೋಸಿಸ್ ಸಿಇಒ ವೇತನ ಶೇ.88 ಹೆಚ್ಚಳ, ವಾರ್ಷಿಕ ಗಳಿಕೆಯೆಷ್ಟು?

ಥಿಯೆರಿ ಡೆಲಾಪೋರ್ಟೆ ವಿಪ್ರೋ ಸಿಇಒ ಆಗಿ ಜುಲೈ 2020 ರಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಬಳಿಕ ಹಣಕಾಸು ವರ್ಷ 2021ರಲ್ಲಿಯೇ ಈ ವೇತನದ ರೇಸ್‌ನಲ್ಲಿ ಮುಂದೆ ಸಾಗಿದ್ದಾರೆ. ತನ್ನ ಅಧಿಕಾರಾವಧಿಯ ಮೊದಲ ಒಂಬತ್ತು ತಿಂಗಳುಗಳಲ್ಲಿ ಸುಮಾರು ರೂ 64 ಕೋಟಿ (8.8 ಮಿಲಿಯನ್ ಡಾಲರ್) ಸಂಬಳವನ್ನು ಪಡೆದಿದ್ದಾರೆ. ಈ ಸಂಬಳದಲ್ಲಿ ರೂ.9.6 ಕೋಟಿಯ ವೇತನ, ರೂ.11.2 ಕೋಟಿ ಕಮಿಷನ್, ರೂ.5.5 ಕೋಟಿ ಬೆನಿಫಿಟ್ ರೂಪದಲ್ಲಿ ಹಾಗೂ ರೂ.37.81 ಕೋಟಿ ಇತರೆ ರೂಪದಲ್ಲಿ ಲಭ್ಯವಾಗಿದೆ.

ಭಾರತದ ಐಟಿ ಕ್ಷೇತ್ರದಲ್ಲೇ ವಿಪ್ರೊ ಸಿಇಒಗೆ ಅಧಿಕ ಸಂಬಳ, ಎಷ್ಟು?

ಈ ಹಿಂದೆ ಯಾರು ಪಡೆದಿದ್ದಾರೆ ಅಧಿಕ ವೇತನ?

2021-22 ರ ಅವಧಿಯಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ 9.36 ಮಿಲಿಯನ್ ಡಾಲರ್ ವೇತನವನ್ನು ಪಡೆದಿದ್ದಾರೆ. ಅಂದರೆ ಆ ಸಂದರ್ಭದಲ್ಲಿ ಸುಮಾರು ರೂ 71.02 ಕೋಟಿ ರೂಪಾಯಿ ಆಗಿದೆ. ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಹಣಕಾಸು ವರ್ಷ 2022ರಲ್ಲಿ 34 ಕೋಟಿ ರೂಪಾಯಿ ಅಂದರೆ 4.48 ಮಿಲಿಯನ್ ಡಾಲರ್ ವೇತನ ಪಡೆದಿದ್ದಾರೆ. ಇನ್ನು ಹಣಕಾಸು ವರ್ಷ 2021ರಲ್ಲಿ ಎಚ್‌ಸಿಎಲ್ ಸಿಇಒ ಸಿ ವಿಜಯಕುಮಾರ್ 4.15 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಟೆಕ್ ಮಹೀಂದ್ರಾದ ಸಿಪಿ ಮಹೀಂದ್ರಾ 2.83 ಮಿಲಿಯನ್ ಡಾಲರ್ ಸಂಭಾವನೆಯನ್ನು ಪಡೆದಿದ್ದಾರೆ.

ಜಾಗತಿಕವಾಗಿ ಅತೀ ಹೆಚ್ಚು ವೇತನ ಪಡೆಯುವ ಐಟಿ ಉದ್ಯಮಿ ಯಾರು?

ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಿ ಕ್ಷೇತ್ರದ ಸಂಸ್ಥೆಯಾದ ಆಕ್ಸೆಂಚರ್ ಪಿಎಲ್‌ಸಿ ಸಿಇಒ ಜೂಲಿ ಸ್ವೀಟ್ ಹಣಕಾಸು ವರ್ಷ 2022ರಲ್ಲಿ ಒಟ್ಟು 23 ಮಿಲಿಯನ್ ಡಾಲರ್ ವೇತನವನ್ನು ಪಡೆದಿದ್ದಾರೆ. ಕಾಗ್ನಿಜೆಂಟ್‌ನ ಸಿಇಒ ಬ್ರಿಯಾನ್ ಹಂಫ್ರೀಸ್ 19.6 ಮಿಲಿಯನ್ ಗಳಿಸಿದ್ದಾರೆ. ಇನ್ನು ಐಬಿಎಂ ಸಿಇಒ ಮತ್ತು ಅಧ್ಯಕ್ಷ ಅರವಿಂದ್ ಕೃಷ್ಣ 17.56 ಮಿಲಿಯನ್ ಡಾಲರ್ ಸಂಬಳ ಪಡೆದು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿ ಇದ್ದಾರೆ.

English summary

Wipro CEO Thierry Delaporte Becomes Highest Paid Indian IT CEO in FY22

Wipro CEO Thierry Delaporte’s draws Rs 79.66 crore for FY22, making him India’s highest paid IT industry chief in FY 22. Know more.
Story first published: Friday, June 10, 2022, 19:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X