For Quick Alerts
ALLOW NOTIFICATIONS  
For Daily Alerts

ವಿಶ್ವದ ಅತೀ ದುಬಾರಿ ಬಿಯರ್ 4.05 ಕೋಟಿ ರೂಪಾಯಿಗೆ ಮಾರಾಟ

|

ಮದ್ಯಪಾನ ಮಾಡುವವರು ಹಾಗೂ ಮದ್ಯಪಾನ ಮಾಡದವರಿಗೆ ವಿಶ್ವದಲ್ಲೇ ಅತೀ ದುಬಾರಿ ಮದ್ಯ ಯಾವುದು ಎಂಬ ವಿಚಾರದಲ್ಲಿ ತಪ್ಪು ತಿಳುವಳಿಕೆ ಇದೆ. ಸಾಮಾನ್ಯವಾಗಿ ವೈನ್ ಹಾಗೂ ಚಾಂಪೇನ್‌ಗಳನ್ನು ನಾವು ಅತೀ ದುಬಾರಿ ಅಲ್ಕೋಹಾಲ್‌ಗಳು ಎಂದು ತಿಳಿಯುತ್ತೇವೆ. ಆದರೆ ಇದು ತಪ್ಪು. ಕೆಲವು ಬಿಯರ್‌ಗಳು ಕೂಡಾ ಅತೀ ದುಬಾರಿಯಾಗಿದೆ.

ವೈನ್ ಹಾಗೂ ಚಾಂಪೆನ್‌ಗಳಂತೆ ಕೆಲವು ಬಿಯರ್‌ಗಳು ಕೂಡಾ ದುಬಾರಿಯಾಗಿದೆ. ಪ್ರೀಮಿಯಂ ಬಿಯರ್‌ ಅನ್ನು ಮಾರಾಟ ಮಾಡುವ ಮಾರುಕಟ್ಟೆಯು ಕೂಡಾ ಇದೆ. ಈ ಒಂದು ಬಾಟಲಿ ಬಿಯರ್‌ಗೆ 503,300 ಡಾಲರ್ ಆಗಿದೆ. ಇದು ಈವರೆಗೆ ಲಭ್ಯವಿರುವ ಬಿಯರ್‌ಗಳಲ್ಲೇ ಅತೀ ದುಬಾರಿ ಬಿಯರ್ ಆಗಿದೆ.

ಹೆಚ್ಚು ಮಾರಾಟವಾಗಲಿಲ್ಲ ಬಿಯರ್; ಅಬಕಾರಿ ಆದಾಯಕ್ಕೆ ಕತ್ತರಿಹೆಚ್ಚು ಮಾರಾಟವಾಗಲಿಲ್ಲ ಬಿಯರ್; ಅಬಕಾರಿ ಆದಾಯಕ್ಕೆ ಕತ್ತರಿ

ವಿಶ್ವದ ಅತೀ ದುಬಾರಿಯಾದ ಬಿಯರ್ "ಅಲ್‌ಸಾಪ್ ಆರ್ಟಿಕ್ ಅಳೆ" ಆಗಿದ್ದು, ಇದು ಸುಮಾರು 140 ವರ್ಷಕ್ಕೂ ಹಳೆಯ ಬಿಯರ್ ಆಗಿದೆ. ಇದು ಅಲ್‌ಸಾಪ್ ಸಂಸ್ಥೆಯ ಬಿಯರ್ ಆಗಿದೆ. ಈ ಬಿಯರ್‌ ಅತೀ ಹಳೆಯ ಬಿಯರ್ ಆಗಿದ್ದು, ಇದರ ಗುಣಮಟ್ಟ ಉತ್ತಮವಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

 ದುಬಾರಿ ಬಿಯರ್‌ ಇತಿಹಾಸ ಆರಂಭವಾಗಿದ್ದು ಯಾವಾಗ?

ದುಬಾರಿ ಬಿಯರ್‌ ಇತಿಹಾಸ ಆರಂಭವಾಗಿದ್ದು ಯಾವಾಗ?

ಆಂಟಿಕ್ಸ್ ಟ್ರೇಡ್ ಪ್ರಕಾರ 2007ರಲ್ಲಿ ಒಕ್ಲಹೋಮದ ನಗರದ ವ್ಯಕ್ತಿಯೊಬ್ಬರು ಒಂದು ಬಾಟಲಿ ಅಲ್‌ಸಾಪ್ ಆರ್ಟಿಕ್ ಅಳೆ ಬಿಯರ್‌ ಅನ್ನು ಸುಮಾರು 304 ಡಾಲರ್ ನೀಡಿ ಖರೀದಿ ಮಾಡಿದ್ದರು. ಅತೀ ದುಬಾರಿಯಾದ ಬಿಯರ್‌ಗಳ ಇತಿಹಾಸ ಇಲ್ಲಿಂದ ಆರಂಭವಾಗಿದೆ. ಇದರ ಡೆಲವರಿ ಮಾಡಿದ ಮಸ್ಸಚುಸೆಟ್ಸ್ (ಯುಎಸ್‌ನ ದೇಶ) ರಿಟೇಲರ್‌ಗಳು ಸುಮಾರು 19.95 ಡಾಲರ್ ಡೆಲವರಿ ಚಾರ್ಜ್ ಆಗಿ ಪಡೆದುಕೊಂಡಿದ್ದಾರೆ.

 ಕೈಬರವಣಿಗೆಯ ಪತ್ರ

ಕೈಬರವಣಿಗೆಯ ಪತ್ರ

ಈ ಬಾಟಲಿನಲ್ಲಿ ಅತೀ ಹಳೆಯ ಕೈಬರವಣಿಗೆಯ ಪತ್ರವೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಪತ್ರದ ಮೇಲೆ ಬೂಸ್ಟನ್‌ನ ವಕೀಲರಾದ ಪ್ರೆಸಿ ಜಿ ಬೋಲ್ಸ್ಟರ್ ಸಹಿ ಮಾಡಿದ್ದಾರೆ ಎಂದು ಕೂಡಾ ವರದಿ ಉಲ್ಲೇಖಿಸಿದೆ. ಇದು 1919ರ ಬಾಟಲಿ ಎಂದು ಕೂಡಾ ಹೇಳಲಾಗಿದೆ. ಈ ಬಿಯರ್ ಅನ್ನು 1852ರಲ್ಲಿ ಉತ್ಪಾದನೆ ಮಾಡಲಾಗಿದೆ ಎಂದು ಪತ್ರದಲ್ಲಿ ಬರೆಯಲಿದೆ. ಈ ಪತ್ರವನ್ನು ಹಾಳಾಗದಂತೆ ಲ್ಯಾಮಿನೇಟ್ ಮಾಡಲಾಗಿದೆ.

 ಈ ಬಿಯರ್ ಹೇಗೆ ಲಭಿಸಿದ್ದು ತಿಳಿದಿದೆಯಾ?

ಈ ಬಿಯರ್ ಹೇಗೆ ಲಭಿಸಿದ್ದು ತಿಳಿದಿದೆಯಾ?

ಬ್ರಿಟಿಷ್ ನೌಕಾದಳದ ಅಧಿಕಾರಿಯಾಗಿದ್ದ ಸರ್ ಜಾನ್ ಪ್ರಾಂಕ್ಲಿನ್ ಹಾಗೂ ಅವರ ತಂಡವು 1852ರಲ್ಲಿ ಸಮುದ್ರಯಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಬಿಯರ್ ಬಾಟಲಿಯನ್ನು ಕೊಂಡೊಯ್ದಿದ್ದರು ಎಂದು ನಂಬಲಾಗಿದೆ. ಆರ್ಕ್ಟಿಕ್ ಸಾಗರದಲ್ಲಿ ಎರಡು ನೌಕೆಗಳು ಡಿಕ್ಕಿಯಾಗಿದ್ದು, ತಾಂತ್ರಿಕ ಸಮಸ್ಯೆಯಾಗಿ ಅಲ್ಲಿಯೇ ಬಾಕಿಯಾಗಿತ್ತು. ಎಚ್‌ಎಂಎಸ್ ಇರೇಬಸ್ ಹಾಗೂ ಎಚ್‌ಎಂಎಸ್ ಟೆರರ್ ಎಂಬ ನೌಕೆಯು ಅಲ್ಲಿಯೇ ಉಳಿದಿತ್ತು. ಈ ನೌಕೆಯನ್ನು ಹಾಗೂ ನೌಕೆಯಲ್ಲಿದ್ದ ಸಿಬ್ಬಂದಿಗಳನ್ನು ರಕ್ಷಣೆ ಮಾಡಲು ಹೋದ ತಂಡಕ್ಕೆ ಈ ಬಿಯರ್ ಬಾಟಲಿ ಲಭ್ಯವಾಗಿತ್ತು. ಆದರೆ ಎರಡು ನೌಕೆಯಲ್ಲಿದ್ದವರ ಬಗ್ಗೆ ಯಾವುದೇ ಮಾಹಿತಿ ಆ ಬಳಿಕ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.

ಮದ್ಯದ ಷೇರು ಮೇಲೆ ಎಲ್ಲರ ಚಿತ್ತ: ಕಾರಣವೇನು?ಮದ್ಯದ ಷೇರು ಮೇಲೆ ಎಲ್ಲರ ಚಿತ್ತ: ಕಾರಣವೇನು?

English summary

World's Most Expensive Beer Being Sold at Rs.4.05 Crore, Know Details in Kannada

The world's most expensive beer is a bottle of "Allsopp's Arctic Ale" by The Allsopp that is more than 140 years old, Being Sold at Rs.4.05 Crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X