For Quick Alerts
ALLOW NOTIFICATIONS  
For Daily Alerts

Year Ender 2022: 2023ರಲ್ಲಿ ಹೂಡಿಕೆ ಮಾಡಬಹುದಾದ ಬೆಸ್ಟ್‌ ಎಲ್‌ಐಸಿ ಪಾಲಿಸಿಗಳು

|

ವೈಯಕ್ತಿಕ ಹಣಕಾಸು ನಮ್ಮ ಜೀವನದಲ್ಲಿ ಅತೀ ಮುಖ್ಯವಾಗಿದೆ. ನಮ್ಮ ಖರ್ಚು ವೆಚ್ಚವನ್ನು ನಾವು ನಿರ್ವಹಣೆ ಮಾಡಬೇಕಾದರೆ ವೈಯಕ್ತಿಕ ಹಣಕಾಸು ಅತೀ ಮುಖ್ಯವಾಗಿದೆ. ಈ ವೈಯಕ್ತಿಕ ಹಣಕಾಸಿನಲ್ಲಿ ವಿಮಾ ಯೋಜನೆ ಕೂಡಾ ಒಂದಾಗಿದೆ. ಅದರಲ್ಲೂ ಮುಖ್ಯವಾಗಿ ಕೋವಿಡ್ ಬಳಿಕ ಹಲವಾರು ಮಂದಿ ವಿಮೆಗೆ ಅಧಿಕ ಮಹತ್ವ ನೀಡುತ್ತಿದ್ದಾರೆ.

 

ನಾವು ಜೀವ ವಿಮೆಯನ್ನು ಹೊಂದುವುದರಿಂದ ತುರ್ತು ಆರ್ಥಿಕ ಪರಿಸ್ಥಿತಿ ಉಂಟಾದಾಗ ಒತ್ತಡ ಕಡಿಮೆಯಾಗಲಿದೆ. ವಿಮೆ ಎಂದಿಗೂ ಕೂಡಾ ಕುಟುಂಬದ ಆರ್ಥಿಕ ಸುರಕ್ಷತೆಯಾಗಿದೆ. ವಿಮೆಯನ್ನು ಖರೀದಿ ಮಾಡು ಮೂಲಕ ನೀವು ಅಪಘಾತ, ಅನಾರೋಗ್ಯ, ಸಾವು ಮೊದಲಾದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದಿಲ್ಲ.

Year Ender 2022: ಈ ವರ್ಷದ 4 ಅತೀ ದೊಡ್ಡ ಐಪಿಒಗಳುYear Ender 2022: ಈ ವರ್ಷದ 4 ಅತೀ ದೊಡ್ಡ ಐಪಿಒಗಳು

ಭಾರತದಲ್ಲಿ ವಿಮೆ ವಿಚಾರದಲ್ಲಿ ಬಂದಾಗ ಭಾರತೀಯ ಜೀವ ವಿಮಾ ನಿಗಮ ಅತೀ ಪ್ರಖ್ಯಾತವಾದ ವಿಮಾ ಸಂಸ್ಥೆಯಾಗಿದೆ. ಹಾಗೆಯೇ ಈ ವರ್ಷವೇ ಈ ಸಂಸ್ಥೆ ಷೇರು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈಗ ನಾವು ವರ್ಷಾಂತ್ಯದಲ್ಲಿ ಇದ್ದೇವೆ, ಈ ನಡುವೆ ಹೊಸ ವರ್ಷ 2023ರಲ್ಲಿ ಯಾವ ವಿಮೆಯನ್ನು ನೀವು ಖರೀದಿ ಮಾಡುವುದು ಉತ್ತಮ ಎಂದು ಇಲ್ಲಿ ನಾವು ತಿಳಿಸಿದ್ದೇವೆ. ಮುಂದೆ ಓದಿ...

 ಎಲ್‌ಐಸಿ ಟೆಕ್ ಟರ್ಮ್ ಯೋಜನೆ

ಎಲ್‌ಐಸಿ ಟೆಕ್ ಟರ್ಮ್ ಯೋಜನೆ

ಟೆಕ್ ಟರ್ಮ್ ನಾನ್ ಲಿಂಕ್ಡ್ ಯೋಜನೆಯಾಗಿದೆ. ಇದು ಯಾವುದೇ ಲಾಭವಿಲ್ಲದ ಸಂಪೂರ್ಣವಾದ ರಕ್ಷಣಾ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿದಾರರ ಮರಣದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಹಣಕಾಸು ಸುರಕ್ಷತೆಯನ್ನು ನೀಡುತ್ತದೆ. ಈ ಯೋಜನೆಯನ್ನು ನಾವು ಆನ್‌ಲೈನ್‌ನಲ್ಲಿ ಖರೀದಿ ಮಾಡಬಹುದು. ಪಾಲಿಸಿದಾರರು ಬಯಸಿದರೆ ಮೊತ್ತವನ್ನು ಹೆಚ್ಚಳ ಮಾಡಬಹುದು. ಪ್ರೀಮಿಯಂ ಶೇಕಡ 25ರಿಂದ ಶೇಕಡ 30ರಷ್ಟು ಪಾವತಿಸುವ ಮೂಲಕ ಮೊತ್ತವನ್ನು ಹೆಚ್ಚಿಸಬಹುದು.

 ಎಲ್‌ಐಸಿ ಜೀವನ ಲಾಭ ಯೋಜನೆ

ಎಲ್‌ಐಸಿ ಜೀವನ ಲಾಭ ಯೋಜನೆ

ಎಲ್‌ಐಸಿಯಲ್ಲಿ ನಾವು ಹೂಡಿಕೆ ಮಾಡುವುದು ಅತೀ ಉತ್ತಮ ಆಯ್ಕೆಯಾಗಿದೆ. ಎಲ್‌ಐಸಿಯ ಈ ಯೋಜನೆಯಲ್ಲಿ ನೀವು ಪ್ರತಿ ದಿನ 250 ರೂಪಾಯಿಗಿಂತ ಅಧಿಕ ಮೊತ್ತ, 54 ಲಕ್ಷ ರೂಪಾಯಿಯಷ್ಟು ನಾವು ಹೂಡಿಕೆ ಮಾಡಬಹುದು. ಎಲ್‌ಐಸಿ ಜೀವನ ಲಾಭ ಯೋಜನೆಯು ನಾನ್‌ಲಿಂಕ್ಡ್‌ ಹಾಗೂ ಲಾಭವನ್ನು ನಾವು ಪಡೆಯುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪಾಲಿಸಿದಾರರು ಸಾವನ್ನಪ್ಪಿದರೆ ಪಾಲಿಸಿದಾರರ ಕುಟುಂಬಕ್ಕೆ ವಿಮಾ ಮೊತ್ತ ಲಭ್ಯವಾಗಲಿದೆ. ಪಾಲಿಸಿ ಮೆಚ್ಯೂರಿಟಿವರೆಗೂ ಪಾಲಿಸಿದಾರರು ಜೀವಂತವಾಗಿದ್ದರೆ, ಪಾಲಿಸಿದಾರರು ಪಾಲಿಸಿ ಮೊತ್ತ ಕ್ಲೈಮ್ ಮಾಡಬಹುದು. ಅವಧಿ ಹಾಗೂ ಮೊತ್ತವನ್ನು ಪಾಲಿಸಿದಾರರೇ ಆಯ್ಕೆ ಮಾಡಬಹುದು. 8ರಿಂದ 59 ವರ್ಷದವರೆಗಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆದಾರರು 10, 13, 16 ವರ್ಷದವರೆಗೆ ಹೂಡಿಕೆ ಮಾಡಬಹುದು. 16ರಿಂದ 15 ವರ್ಷದ ಮೆಚ್ಯೂರಿಟಿ ಅವಧಿ ಇದೆ. 59 ವರ್ಷದವರು 16 ವರ್ಷದ ಯೋಜನೆಯನ್ನು ಖರೀದಿ ಮಾಡಬಹುದು.

 ಎಲ್‌ಐಸಿ ಹೊಸ ಜೀವನ ಆನಂದ ಯೋಜನೆ
 

ಎಲ್‌ಐಸಿ ಹೊಸ ಜೀವನ ಆನಂದ ಯೋಜನೆ

ಎಲ್‌ಐಸಿ ಹಲವಾರು ಟರ್ಮ್, ಪಿಂಚಣಿ ಯೋಜನೆಗಳನ್ನು ಹೊಂದಿದೆ. ಹಾಗೆಯೇ ಜೀವ ವಿಮೆಯು ಕೂಡಾ ಇದೆ. ಎಲ್‌ಐಸಿಯು ನಾವು ನಂಬಬಹುದಾದ ವಿಮಾ ಸಂಸ್ಥೆಯಾಗಿದೆ. ಈ ವಿಮಾ ಉತ್ಪನ್ನಗಳ ಪೈಕಿ, ಜೀವನ ಆನಂದ್ ಯೋಜನೆ ಕೂಡಾ ಒಂದಾಗಿದೆ. ಇದು ನಾನ್‌ಲಿಂಕ್ಡ್‌ ಪಾಲಿಸಿಯಾಗಿದೆ. ಈ ಯೋಜನೆಯು ರಕ್ಷಣೆಯನ್ನು ಕೂಡಾ ನೀಡುತ್ತದೆ ಹಾಗೂ ಉಳಿತಾಯ ಯೋಜನೆ ಕೂಡಾ ಹೌದು.

 ಎಲ್‌ಐಸಿ ಜೀವನ ಉಮಾಂಗ್ ಪಾಲಿಸಿ

ಎಲ್‌ಐಸಿ ಜೀವನ ಉಮಾಂಗ್ ಪಾಲಿಸಿ

ಎಲ್‌ಐಸಿ ಜೀವನ ಉಮಾಂಗ್ ಪಾಲಿಸಿಯು ಅತೀ ಪ್ರಖ್ಯಾತ ಯೋಜನೆಯಾಗಿದೆ. ಹಾಗೆಯೇ ಕಡಿಮೆ ಅಪಾಯವುಳ್ಳ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಉತ್ತಮ ರಿಟರ್ನ್ ಲಭ್ಯವಾಗಲಿದೆ. 90 ದಿನದಿಂದ 55 ವರ್ಷದವರೆಗಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಮೆಚ್ಯೂರಿಟಿ ಬಳಿಕ ಅಧಿಕ ಮೊತ್ತ ನಿಮಗೆ ಲಭ್ಯವಾಗಲಿದೆ. ಲೆಕ್ಕಾಚಾರದ ಪ್ರಕಾರ ನಿವು ಮಾಸಿಕವಾಗಿ 1302 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ. ಹಾಗೆಯೇ ವಾರ್ಷಿಕವಾಗಿ 15,298 ರೂಪಾಯಿ ಪಾವತಿಸಿದಂತಾಗುತ್ತದೆ. ಅಂದರೆ ನೀವು 30 ವರ್ಷದವರೆಗೆ ಈ ಸ್ಕೀಮ್ ಅನ್ನು ಹೊಂದಿದ್ದರೆ, ನಿಮಗೆ ಮೆಚ್ಯೂರಿಟಿ ವೇಳೆ 4.58 ಲಕ್ಷ ರೂಪಾಯಿ ಲಭ್ಯವಾಗಲಿದೆ.

 ಎಲ್‌ಐಸಿ ಜೀವನ ಶಾಂತಿ ಯೋಜನೆ

ಎಲ್‌ಐಸಿ ಜೀವನ ಶಾಂತಿ ಯೋಜನೆ

ಈ ಯೋಜನೆಯಲ್ಲಿ ನೀವು ಒಂದೇ ಬಾರಿಗೆ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ. ಪಾಲಿಸಿದಾರರು ಸಿಂಗಲ್ ಲೈಫ್, ಜಾಯಿಂಟ್ ಲೈಫ್ ಎಂಬ ಆಯ್ಕೆಯನ್ನು ಮಾಡಬಹುದು. ಎಲ್‌ಐಸಿಯ ಹೊಸ ಜೀವನ ಶಾಂತಿ ಒಂದೇ ಪ್ರೀಮಿಯಂ ಪ್ಲಾನ್ ಆಗಿದ್ದು, ಇದರಲ್ಲಿ ಪಾಲಿಸಿದಾರರು ಸಿಂಗಲ್ ಲೈಫ್ ಮತ್ತು ಜಂಟಿ ಲೈಫ್ ಡಿಫೆರ್ಡ್ ಆನ್ಯೂಟಿ ನಡುವೆ ಆಯ್ಕೆ ಮಾಡಿಕೊಳ್ಳಬಹುದು. ಈ ಪಿಂಚಣಿ ಯೋಜನೆಗೆ ಕನಿಷ್ಠ ಖರೀದಿ ಬೆಲೆ ರೂ. 1,50,000 ಆಗಿದೆ. ಆದರೆ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಅಂದರೆ, ಕನಿಷ್ಠ 1.50 ಲಕ್ಷ ರೂ.ಗಳ ಹೂಡಿಕೆಯ ಅಗತ್ಯವಿದೆ. ಆದರೆ ಗರಿಷ್ಠಕ್ಕೆ ಯಾವುದೇ ಮಿತಿಯನ್ನು ಇರಿಸಲಾಗಿಲ್ಲ. ಪಾಲಿಸಿಯಲ್ಲಿ ಪ್ರವೇಶದ ಕನಿಷ್ಠ ವಯಸ್ಸು 30 ವರ್ಷಗಳು ಮತ್ತು ಗರಿಷ್ಠ ವಯಸ್ಸು 79 ವರ್ಷಗಳು. ಪಾಲಿಸಿಯು 1 ವರ್ಷದಿಂದ 12 ವರ್ಷಗಳವರೆಗೆ ನಿಷೇಧದ ಅವಧಿಗೆ ಲಭ್ಯವಿದೆ.

English summary

Year Ender 2022: Top 5 LIC policies to invest in 2023, Details in Kannada

Year Ender 2022: from Jeevan Anand to Tech-Term, Here's Top 5 LIC policies to invest in 2023, details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X