For Quick Alerts
ALLOW NOTIFICATIONS  
For Daily Alerts

ಆನ್‌ಲೈನ್ ಮೂಲಕ ಚಿನ್ನದ ಖರೀದಿ ಹೇಗೆ?

ಭಾರತ ಜಗತ್ತಿನ ಅತಿ ದೊಡ್ಡ ಚಿನ್ನದ ಬಳಕೆದಾರ ದೇಶವಾಗಿದ್ದು, ಅತಿ ಹೆಚ್ಚು ಇಂಟರನೆಟ್ ಬಳಕೆದಾರರನ್ನು ಹೊಂದಿರುವ ಎರಡನೇ ಅತಿ ದೊಡ್ಡ ರಾಷ್ಟವಾಗಿದೆ. ಇಂಟರನೆಟ್‌ಗೂ ಚಿನ್ನಕ್ಕೂ ಎತ್ತಣಿಂದೆತ್ತ ಸಂಬಂಧ ಎನ್ನುವಿರಾ..!

|

ಭಾರತ ಜಗತ್ತಿನ ಅತಿ ದೊಡ್ಡ ಚಿನ್ನದ ಬಳಕೆದಾರ ದೇಶವಾಗಿದ್ದು, ಅತಿ ಹೆಚ್ಚು ಇಂಟರನೆಟ್ ಬಳಕೆದಾರರನ್ನು ಹೊಂದಿರುವ ಎರಡನೇ ಅತಿ ದೊಡ್ಡ ರಾಷ್ಟವಾಗಿದೆ. ಇಂಟರನೆಟ್‌ಗೂ ಚಿನ್ನಕ್ಕೂ ಎತ್ತಣಿಂದೆತ್ತ ಸಂಬಂಧ ಎನ್ನುವಿರಾ..!
ಹೌದು. ಈಗ ಇಂಟರನೆಟ್‌ಗೂ ಚಿನ್ನಕ್ಕೂ ಹತ್ತಿರದ ಸಂಬಂಧ ಇದೆ ಎಂದರೆ ನೀವು ನಂಬಲೇಬೇಕು. ಒಂದು ಕಾಲದಲ್ಲಿ ಚಿನ್ನವನ್ನು ಆಭರಣ, ಗಟ್ಟಿ, ನಾಣ್ಯ ಮುಂತಾದ ರೂಪಗಳಲ್ಲಿ ಮಾತ್ರ ಖರೀದಿಸಬಹುದಾಗಿತ್ತು. ಆದರೆ ಈಗ ಹಾಗಿಲ್ಲ. ಆನ್‌ಲೈನ್ ಮೂಲಕವೇ ಚಿನ್ನದಲ್ಲಿ ಹಣ ಹೂಡಿಕೆ ಮಾಡಬಹುದು. ಅದೂ ಸುಲಭವಾಗಿ. ಹಾಗಾದರೆ ಯಾವೆಲ್ಲ ರೀತಿಯಲ್ಲಿ ಆನ್‌ಲೈನ್ ಮೂಲಕ ಚಿನ್ನ ಖರೀದಿಸಬಹುದು ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಬಹುದು ಎಂಬ ವಿಷಯಗಳನ್ನು ಈ ಅಂಕಣದಲ್ಲಿ ತಿಳಿಯೋಣ.

ಆನ್‌ಲೈನ್ ಗೋಲ್ಡ್ ಇನ್ವೆಸ್ಟಮೆಂಟ್ ಎಂದರೇನು?

ಆನ್‌ಲೈನ್ ಗೋಲ್ಡ್ ಇನ್ವೆಸ್ಟಮೆಂಟ್ ಎಂದರೇನು?

ಆನ್‌ಲೈನ್ ಗೋಲ್ಡ್ ಇನ್ವೆಸ್ಟಮೆಂಟ್ ಮೂಲಕ ನೀವು ಬಯಸಿದಾಗ ಆನ್‌ಲೈನ್ ಮೂಲಕ ಚಿನ್ನ (೨೪ ಕ್ಯಾರೆಟ್) ಖರೀದಿಸಬಹುದು ಹಾಗೂ ಮಾರಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಗಳ ಆಧಾರದಲ್ಲಿ ಶುದ್ಧ ಚಿನ್ನವನ್ನು ಖರೀದಿಸಬಹುದು.

ಆನ್‌ಲೈನ್ ಚಿನ್ನ ಖರೀದಿಗೆ ಸಲ್ಲಿಸಬೇಕಾದ ದಾಖಲೆಗಳು

ಆನ್‌ಲೈನ್ ಚಿನ್ನ ಖರೀದಿಗೆ ಸಲ್ಲಿಸಬೇಕಾದ ದಾಖಲೆಗಳು

ಚಿನ್ನ ಖರೀದಿಸಲು ಆನ್‌ಲೈನ್ ಚಿನ್ನದ ವ್ಯವಹಾರ ನಡೆಸುವ ಕಂಪನಿಗಳ ವೆಬ್‌ಸೈಟ್‌ಗೆ ಭೇಟಿ ನೀಡಿ. ಇನ್ನು ಕೆಲ ಕಂಪನಿಗಳು ಆಪ್‌ಗಳನ್ನು ಸಹ ತಯಾರಿಸಿದ್ದು, ಇವುಗಳನ್ನು ಡೌನಲೋಡ್ ಮಾಡಿಕೊಂಡು ಸ್ಮಾರ್ಟಫೋನ್‌ನಲ್ಲಿ ಬಳಸಬಹುದು. ಈ ಕಂಪನಿಗಳ ವೆಬ್‌ಸೈಟ್‌ನಲ್ಲಿ ರಜಿಸ್ಟರ್ ಮಾಡಿಕೊಳ್ಳಲು ಮೊದಲು ಇಮೇಲ್ ಐಡಿಯನ್ನು ನೀಡಬೇಕಾಗುತ್ತದೆ. ಇಮೇಲ್ ಐಡಿಯ ದೃಢೀಕರಣದ ನಂತರ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.

ಗುರುತಿನ ಪುರಾವೆ
ವಿಳಾಸದ ದಾಖಲೆ
ನಾಮಿನಿ ವಿವರಗಳು
ಬ್ಯಾಂಕ್ ಖಾತೆ ವಿವರ
ಈ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ ನಿಮಗೆ ಯೂಸರ್ ನೇಮ್ ಹಾಗೂ ಪಾಸ್‌ವರ್ಡ ನೀಡಲಾಗುತ್ತದೆ. ಇವುಗಳನ್ನು ಬಳಸಿ ನೀವು ಸುಲಭವಾಗಿ ಆನ್‌ಲೈನ್ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

ಕನಿಷ್ಠ ಎಷ್ಟು ಮೊತ್ತ ಬೇಕಾಗುತ್ತದೆ?

ಕನಿಷ್ಠ ಎಷ್ಟು ಮೊತ್ತ ಬೇಕಾಗುತ್ತದೆ?

ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ಚಿನ್ನವನ್ನು ಖರೀದಿಸುವ ಮಾಹಿತಿ ಇರುವ ಪೇಜ್ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇದರಲ್ಲಿ ರೂಪಾಯಿ ಲೆಕ್ಕದಲ್ಲಿ ಅಥವಾ ಗ್ರಾಂ ಲೆಕ್ಕದಲ್ಲಿ ಚಿನ್ನ ಖರೀದಿಸುವ ಆಯ್ಕೆಗಳಿರುತ್ತವೆ. ಕೆಲ ಕಂಪನಿಗಳು ಒಂದು ಗ್ರಾಂ ಗಿಂತಲೂ ಕಡಿಮೆ ಚಿನ್ನ ಅಥವಾ 1 ರೂಪಾಯಿಯಷ್ಟು ಕಡಿಮೆ ಬೆಲೆಯ ಚಿನ್ನವನ್ನು ಖರೀದಿಸಲು ಸಹ ಅವಕಾಶ ನೀಡುತ್ತವೆ.

ಚಿನ್ನದ ಸಂಗ್ರಹಣೆ ಯೋಜನೆ ಎಂದರೇನು? (Gold Accumulation Plan-GAP)

ಚಿನ್ನದ ಸಂಗ್ರಹಣೆ ಯೋಜನೆ ಎಂದರೇನು? (Gold Accumulation Plan-GAP)

ಪ್ರತಿತಿಂಗಳು ನಿಯಮಿತವಾಗಿ ನಿರ್ದಿಷ್ಟ ಮೊತ್ತವನ್ನು ಪಾವತಿಸಿ ಚಿನ್ನದ ಮೇಲೆ ಹೂಡಿಕೆ ಮಾಡುವ ಆನ್‌ಲೈನ್ ವಿಧಾನವೇ ಚಿನ್ನದ ಸಂಗ್ರಹಣೆ ಯೋಜನೆಯಾಗಿದೆ. ೧ ರಿಂದ ೧೫ ವರ್ಷಗಳ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿ ನಿಜವಾದ ಚಿನ್ನವನ್ನು ಶೇಖರಿಸಬಹುದು. ಮಾಸಿಕ ಕನಿಷ್ಠ ೧೦೦೦ ರೂಪಾಯಿ ಕಂತು ಪಾವತಿಸಲು ಅವಕಾಶವಿದೆ. ನಿಯಮಿತ ಹಾಗೂ ಶಿಸ್ತುಬದ್ಧವಾಗಿ ಸಣ್ಣ ಮೊತ್ತದ ಕಂತುಗಳನ್ನು ಪಾವತಿಸಿ ಚಿನ್ನವನ್ನು ಹೊಂದುವುದು ಈ ಯೋಜನೆಯ ವೈಶಿಷ್ಟ್ಯವಾಗಿದೆ.

ನಿಮ್ಮ ಚಿನ್ನ ಎಲ್ಲಿ ಶೇಖರಿಸಲ್ಪಡುತ್ತದೆ?

ನಿಮ್ಮ ಚಿನ್ನ ಎಲ್ಲಿ ಶೇಖರಿಸಲ್ಪಡುತ್ತದೆ?

ನೀವು ಖರೀದಿಸುವ ಚಿನ್ನವನ್ನು ಸುರಕ್ಷಿತವಾಗಿ ಹೇಗೆ ಇಟ್ಟುಕೊಳ್ಳುವುದು ಎಂಬ ಚಿಂತೆ ನಿಮಗೆ ಈ ಯೋಜನೆಯಲ್ಲಿ ಇರುವುದಿಲ್ಲ. ನಿಮ್ಮ ಚಿನ್ನವನ್ನು ಸುರಕ್ಷಿತವಾಗಿಡುವ ಜವಾಬ್ದಾರಿ ಮಾರಾಟಗಾರನ ಮೇಲಿರುತ್ತದೆ. ಆತ ತನ್ನೆಲ್ಲ ವ್ಯವಹಾರಗಳಿಗೂ ವಿಮಾ ಸುರಕ್ಷೆ ಪಡೆದುಕೊಂಡಿರಬಹುದು. ಆದರೂ ಹೂಡಿಕೆ ಮಾಡುವ ಮುನ್ನ ಈ ಕುರಿತು ಕೇಳಿ ತಿಳಿದುಕೊಳ್ಳುವುದು ಒಳಿತು. ನಿಮ್ಮ ಚಿನ್ನವನ್ನು ಸಂಗ್ರಹಿಸಿಡಲು ಕೆಲ ಬಾರಿ ಹೆಚ್ಚುವರಿ ಶುಲ್ಕ ವಿಧಿಸಬಹುದು.

ಚಿನ್ನವನ್ನು ಪಡೆದುಕೊಳ್ಳುವುದು ಹೇಗೆ?

ಚಿನ್ನವನ್ನು ಪಡೆದುಕೊಳ್ಳುವುದು ಹೇಗೆ?

ನೀವು ಬಯಸಿದರೆ ನಿಮ್ಮ ಹೂಡಿಕೆಯ ಮೊತ್ತದಷ್ಟು ನಿಜವಾದ ಚಿನ್ನವನ್ನು ಪಡೆದುಕೊಳ್ಳಬಹುದು. ಎಷ್ಟು ಮೊತ್ತ ಹಾಗೂ ಪ್ರಮಾಣ ಸೂಚಿಸಿ ಚಿನ್ನ ಹಿಂಪಡೆಯಬಹುದು. ವಿವಿಧ ರೀತಿಯ ಚಿನ್ನದ ನಾಣ್ಯಗಳನ್ನು ತಯಾರಿಸಲು ನಿಗದಿಪಡಿಸಲಾದ ನಿರ್ದಿಷ್ಟ ಮೇಕಿಂಗ್ ಚಾರ್ಜ್ ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ನಿಮ್ಮ ಮೊತ್ತಕ್ಕೆ ಸಮನಾದ ಚಿನ್ನವನ್ನು ಮನೆ ಬಾಗಿಲ ಬಳಿಗೆ ಬಂದು ತಲುಪಿಸಲಾಗುತ್ತದೆ. ಚಿನ್ನದ ಗಟ್ಟಿ, ನಾಣ್ಯ ಮುಂತಾದ ರೂಪದಲ್ಲಿ ಚಿನ್ನವನ್ನು ನೀವು ಪಡೆಯುವಿರಿ.

ಆನ್‌ಲೈನ್ ಚಿನ್ನದ ಮಾರಾಟ ಹೇಗೆ?

ಆನ್‌ಲೈನ್ ಚಿನ್ನದ ಮಾರಾಟ ಹೇಗೆ?

ನಿಮ್ಮ ಖಾತೆಯಲ್ಲಿ ಜಮೆಯಾಗಿರುವ ಚಿನ್ನವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಬಹುದು. ನೀವು ಬಯಸಿದ ಮೊತ್ತದಷ್ಟು ಚಿನ್ನವನ್ನು ಮಾರಬಹುದು. ಆದರೆ ನಿಮ್ಮ ಅಕೌಂಟಿನಲ್ಲಿ ಇರುವುದಕ್ಕಿಂತ ಹೆಚ್ಚಿನ ಚಿನ್ನದ ವಹಿವಾಟು ಸಾಧ್ಯವಿಲ್ಲ. ಮಾರಾಟ ಪ್ರಕ್ರಿಯೆ ಪೂರ್ಣಗೊಂಡ ನಂತರ ಹಣ ನೇರವಾಗಿ ಬ್ಯಾಂಕ್ ಅಕೌಂಟಿಗೆ ಜಮೆಯಾಗುತ್ತದೆ.

ಚಿನ್ನದ ಆನ್‌ಲೈನ್ ಖರೀದಿ, ಮಾರಾಟ ಪ್ರಕ್ರಿಯೆ ಹೇಗೆ?

ಚಿನ್ನದ ಆನ್‌ಲೈನ್ ಖರೀದಿ, ಮಾರಾಟ ಪ್ರಕ್ರಿಯೆ ಹೇಗೆ?

ಖರೀದಿ ಪ್ರಕ್ರಿಯೆ : ಒಂದು ಬಾರಿ ನೀವು ಖರೀದಿಸಲು ಬಯಸುವ ಚಿನ್ನದ ಪ್ರಮಾಣವನ್ನು ಆಯ್ಕೆ ಮಾಡಿಕೊಂಡ ನಂತರ ಸುರಕ್ಷಿತ ಆನ್‌ಲೈನ್ ಪೇಮೆಂಟ್ ಗೇಟವೇ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮಗೆ ಅನುಕೂಲವಾದ ರೀತಿಯಲ್ಲಿ ಹಣ ಪಾವತಿ ಮಾಡಬಹುದು.
ಮಾರಾಟ ಪ್ರಕ್ರಿಯೆ : ಆನ್‌ಲೈನ್ ಮೂಲಕ ಮಾರಲು ಬಯಸುವ ಚಿನ್ನದ ಗ್ರಾಂ ಅಥವಾ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಿ. ಮಾರಾಟದ ನಂತರ ಹಣ ಸ್ವೀಕರಿಸಲು ನಿಮ್ಮ ಬ್ಯಾಂಕ್ ವಿವರಗಳನ್ನು ನೀಡಿ. ನೀವು ಖರೀದಿಸಿದ ಚಿನ್ನದ ಬೆಲೆ ಹಾಗೂ ಮಾರಾಟದ ಬೆಲೆಗಳಲ್ಲಿ ಸಾಮಾನ್ಯವಾಗಿ ವ್ಯತ್ಯಾಸ ಕಂಡುಬರುತ್ತದೆ. ವಿವಿಧ ಹಂತಗಳಲ್ಲಿ ವಿಧಿಸಲಾಗುವ ತೆರಿಗೆಗಳ ಕಾರಣದಿಂದ ಬೆಲೆಗಳಲ್ಲಿ ವ್ಯತ್ಯಾಸ ಕಾಣಿಸುತ್ತದೆ.
ಗೋಲ್ಡ್ ಇನ್ವಾಯ್ಸ್ : ಚಿನ್ನ ಖರೀದಿಸಲು ಆರ್ಡರ್ ಮಾಡಿದ ಕೂಡಲೇ ನಿಮ್ಮ ಇಮೇಲ್ ಐಡಿ ಇರುವ ಇನ್ವಾಯ್ಸ್ ಅನ್ನು ನಿಮಗೆ ಕಳುಹಿಸಲಾಗುತ್ತದೆ.

ಆನ್‌ಲೈನ್ ಚಿನ್ನದ ಖರೀದಿ ಎಷ್ಟು ಸುರಕ್ಷಿತ?

ಆನ್‌ಲೈನ್ ಚಿನ್ನದ ಖರೀದಿ ಎಷ್ಟು ಸುರಕ್ಷಿತ?

ಆನ್‌ಲೈನ್ ಮೂಲಕ ಚಿನ್ನ ಮಾರಾಟಗಾರರು ತಮ್ಮ ಚಿನ್ನವನ್ನು ಸುಭದ್ರ ಲಾಕರ್‌ಗಳಲ್ಲಿ ಇಟ್ಟಿರುತ್ತಾರೆ. ಜೊತೆಗೆ ಇದಕ್ಕೆ ವಿಮೆಯನ್ನೂ ಮಾಡಿಸಿರುತ್ತಾರೆ. ಹೀಗಾಗಿ ನಿಮ್ಮ ಚಿನ್ನ ಕಳೆದು ಹೋಗುವ ಅಪಾಯವೇ ಇರುವುದಿಲ್ಲ.

ಕೊನೆ ಮಾತು

ಕೊನೆ ಮಾತು

ಇಂದಿನ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಯಾರು ಬೇಕಾದರೂ ಚಿನ್ನದ ವ್ಯವಹಾರದಲ್ಲಿ ತೊಡಗಬಹುದಾಗಿದೆ. ಆನ್‌ಲೈನ್ ಮೂಲಕ ಚಿನ್ನದ ಖರೀದಿ, ಮಾರಾಟ ಈಗ ಸರಳ ಹಾಗೂ ಸುಲಭವಾಗಿವೆ. ಜೊತೆಗೆ ಸುರಕ್ಷತೆಯೂ ಇದೆ. ಅದರ ಬಗ್ಗೆ ಆಳವಾಗಿ ತಿಳಿದುಕೊಂಡರೆ ತಂತ್ರಜ್ಞಾನದ ಸಹಾಯದಿಂದ ಚಿನ್ನದಲ್ಲಿ ಹೂಡಿಕೆ ಮಾಡಬಹುದು.

Read more about: online gold money investments
English summary

How to buying gold online

While India is the world's largest consumer of gold, it has the 2nd largest number of internet users .
Story first published: Saturday, October 6, 2018, 10:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X