For Quick Alerts
ALLOW NOTIFICATIONS  
For Daily Alerts

ಗೃಹ ಸಾಲ, ವೈಯಕ್ತಿಕ ಸಾಲದ ಅರ್ಜಿಗಳು ರಿಜೆಕ್ಟ್ ಆಗುವುದನ್ನು ತಪ್ಪಿಸುವುದು ಹೇಗೆ?

ಪ್ರತಿಯೊಬ್ಬರೂ ಸುಂದರವಾದ ಸ್ವಂತದ ಮನೆ ಹೊಂದುವ ಕನಸು ಹೊಂದಿರುತ್ತಾರೆ. ಸಾಲ ಮಾಡಿ ಮನೆಗಳನ್ನು, ಅಪಾರ್ಟ್ಮೆಂಟ್, ನಿವೇಶನಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ.

|

ಪ್ರತಿಯೊಬ್ಬರೂ ಸುಂದರವಾದ ಸ್ವಂತದ ಮನೆ ಹೊಂದುವ ಕನಸು ಹೊಂದಿರುತ್ತಾರೆ. ಸಾಲ ಮಾಡಿ ಮನೆಗಳನ್ನು, ಅಪಾರ್ಟ್ಮೆಂಟ್, ನಿವೇಶನಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಗೃಹ ಸಾಲ, ವೈಯಕ್ತಿಕ ಸಾಲ ಪಡೆಯುವವರು ಹೆಚ್ಚಾಗುತ್ತಿದ್ದಂತೆ ಸಾಲ ನೀಡುವ ಬ್ಯಾಂಕುಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
ಅಲ್ಲದೇ ಗೃಹ ಸಾಲದ ಬಡ್ಡಿ ದರವು ಈಗ ಶೇ. 9ರ ಆಸುಪಾಸಿನಲ್ಲಿದ್ದು, ಗೃಹ ಸಾಲ ಪಡೆದು ಕನಸಿನ ಮನೆ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಗೃಹ ಸಾಲ ಪಡೆಯುವ ಮುನ್ನ ಇಲ್ಲೊಮ್ಮೆ ನೋಡಿ

ಗೃಹ ಸಾಲ, ವೈಯಕ್ತಿಕ ಸಾಲ ಕೊಡುವ ಬ್ಯಾಂಕುಗಳು ಅನೇಕ ಮಾನದಂಡ, ಷರತ್ತುಗಳನ್ನು ಆಧರಿಸಿ ಸಾಲ ನೀಡುತ್ತವೆ. ವೈಯಕ್ತಿಕ ಸಾಲ/ಗೃಹ ಸಾಲ ಪಡೆಯಲು ಬೇಕಾದ ಅರ್ಹತೆಗಳೇನು? ಸಾಲದ ಅರ್ಜಿಗಳು ಯಶಸ್ವಿಯಾಗಲು ಏನು ಮಾಡಬೇಕು? ಇತ್ಯಾದಿ ಮಾಹಿತಿಯನ್ನುಇಲ್ಲಿ ನೀಡಲಾಗಿದೆ.

ಕ್ರೆಡಿಟ್‌ ಸ್ಕೋರ್

ಕ್ರೆಡಿಟ್‌ ಸ್ಕೋರ್

ನಿಮ್ಮ ಹಣಕಾಸು ವಿವರಗಳಿಗೆ ಸಂಬಂಧಿಸಿದ ಆರ್ಥಿಕ ವರದಿಯನ್ನು ಸಾಮಾನ್ಯವಾಗಿ ಕ್ರೆಡಿಟ್‌ ಸ್ಕೋರ್ ಎನ್ನುತ್ತಾರೆ.
ಸಾಲ ರಿಜೆಕ್ಟ್ ಆಗಲು ಮುಖ್ಯವಾದ ಕಾರಣ ಕ್ರೆಡಿಟ್ ಸ್ಕೋರ್. ಇದು ಪೇಮೆಂಟ್, ಡಿಫಾಲ್ಟ್‌ ಮತ್ತು ಸಾಲ ತೀರಿಸುವಲ್ಲಿನ, ಕಾರ್ಯಕ್ಷಮತೆ ಮತ್ತು ವೈಫಲ್ಯಗಳನ್ನು ಬಿಂಬಿಸುತ್ತವೆ. ಬ್ಯಾಂಕುಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ನಿಮ್ಮ ಕ್ರೆಡಿಟ್‌ ಸ್ಕೋರ್ ನ್ನು ಆಧರಿಸಿ ಸಾಲ ನೀಡುತ್ತವೆ. 750ಕ್ಕೂ ಅಧಿಕ ಅಂಕಗಳನ್ನು ಉತ್ತಮ, 600ಕ್ಕೂ ಕಡಿಮೆ ಅಂಕಗಳನ್ನು ಕಳಪೆ ಕ್ರೆಡಿಟ್ ಸ್ಕೋರ್ ಎನ್ನಲಾಗುತ್ತದೆ. ಗ್ರಾಹಕರು ಮೊದಲು ಪಡೆದಿದ್ದ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದರೆ ಕ್ರೆಡಿಟ್‌ ಸ್ಕೋರ್ ಉತ್ತಮವಾಗಿರುತ್ತವೆ. ಇದು ಗೃಹ ಸಾಲ, ವೈಯಕ್ತಿಕ ಸಾಲ ಪಡೆಯಲು ಅರ್ಹತೆ ತೋರಿಸುತ್ತದೆ. ವೈಯಕ್ತಿಕ ಸಾಲ (personal loan) ಜನಪ್ರಿಯತೆಗೆ ಕಾರಣಗಳೇನು ಗೊತ್ತಾ?

ವಯಸ್ಸು ಪ್ರಾಮುಖ್ಯತೆ

ವಯಸ್ಸು ಪ್ರಾಮುಖ್ಯತೆ

ಸಾಲ ಪಡೆಯಲು ಬಯಸುವವರ ವಯಸ್ಸು ಮುಖ್ಯವಾಗಿದ್ದು, ಸಾಲ ತೀರಿಸುವ ಸಾಮರ್ಥ್ಯ‌ ಮತ್ತು ಅವಧಿಯನ್ನು ಬ್ಯಾಂಕುಗಳು ಲೆಕ್ಕ ಹಾಕುತ್ತವೆ. ನಿವೃತ್ತಿಯ ಹಂತದಲ್ಲಿದ್ದರೆ ಬ್ಯಾಂಕುಗಲು ಸಾಲವನ್ನು ಮಂಜೂರು ಮಾಡುವುದಿಲ್ಲ. 20 - 35ನೇ ವಯಸ್ಸಿನ ವ್ಯಕ್ತಿಗಳು ಸ್ಥಿರ ಮಾಸಿಕ ಆದಾಯ ಹೊಂದಿದ್ದರೆ ಬ್ಯಾಂಕುಗಳು ಸಾಲ ನೀಡಲು ಮುಂದಾಗುತ್ತವೆ.

ಸಾಮರ್ಥ್ಯ‌ಕ್ಕೆ ತಕ್ಕಂತೆ ಸಾಲ

ಸಾಮರ್ಥ್ಯ‌ಕ್ಕೆ ತಕ್ಕಂತೆ ಸಾಲ

ವ್ಯಕ್ಯಿಗಳ ಸಾಲ ತೀರಿಸುವ ಸಾಮರ್ಥ್ಯ‌ಕ್ಕನುಗುಣವಾಗಿ ಸಾಲವನ್ನು ಬಯಸಿದಾಗ ಬ್ಯಾಂಕ್‌ಗಳು ಅರ್ಜಿ ತಿರಸ್ಕರಿಸುವ ಸಾಧ್ಯತೆ ಕಡಿಮೆಯಾಗಿರುತ್ತದೆ. ರೂ. 15 ಲಕ್ಷ ಬ್ಯಾಂಕ್‌ ಸಾಲ ಪಡೆಯುವಿರಿ ಅನ್ನುವುದಾದರೆ, ಮಾಸಿಕ ಇಂಎಐ ರೂ. 14 ಸಾವಿರ ಬರಬಹುದು. ನಿಮ್ಮ ಮಾಸಿಕ ಆದಾಯ ರೂ. 40 ಸಾವಿರಇದ್ದರೆ, ನಿಮ್ಮ ಇಎಂಐ ರೂ 9-10 ಸಾವಿರ ದಾಟುವಂತಿರಬಾರದು. ಹೀಗಾಗಿ ಉಳಿದ ಹಣದಲ್ಲಿ ಕುಟುಂಬ/ಇತರೆ ನಿರ್ವಹಣೆ ಸಾಧ್ಯವಾಗಲಿದೆ.

ಉದ್ಯೋಗ, ಆದಾಯ, ಸ್ಥಿರತೆ

ಉದ್ಯೋಗ, ಆದಾಯ, ಸ್ಥಿರತೆ

ಸಾಲ ಕೇಳುವವರು ಪ್ರಸ್ತುತ ಉತ್ತಮ ಆದಾಯ ಪಡೆಯುತ್ತಿದ್ದರು, ಆತನ ಉದ್ಯೋಗ ಸ್ಥಿರತೆ ಹೆಗೆ ಎಂಬುದನ್ನು ಬ್ಯಾಂಕ್‌ಗಳು ಯೋಚಿಸುತ್ತವೆ. ಸರಕಾರಿ ನೌಕರರಾದರೆ ಸಾಲ ನೀಡುವಾಗ ಬ್ಯಾಂಕುಗಳು ಹೆಚ್ಚು ಚೌಕಾಸಿ ಮಾಡುವುದಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಂಪನಿಗಳನ್ನು ಬದಲಿಸುವ ವ್ಯಕ್ತಿಗಳಿಗಿಂತ ಕನಿಷ್ಠ 4-5 ವರ್ಷ ಒಂದೇ ಕಡೆ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ವಿಶ್ವಾಸ ಇಡುತ್ತವೆ. ಹಿಂದಿನ ಮೂರು ವರ್ಷಗಳ ಐಟಿಆರ್, ಬ್ಯಾಂಕ್‌ ಸ್ಟೇಟ್‌ಮೆಂಟ್‌, ಸ್ಯಾಲರಿ ಸ್ಲಿಪ್ ಮತ್ತಿತರ ಅಂಶಗಳನ್ನು ಪರಾಮರ್ಶಿಸುತ್ತವೆ.

ಸಾಲ ಮರುಪಾವತಿ ಸಾಮರ್ಥ್ಯ

ಸಾಲ ಮರುಪಾವತಿ ಸಾಮರ್ಥ್ಯ

ಸಾಲವನ್ನು ನೀಡುವ ಮೊದಲು ನಿಮ್ಮ ಮರುಪಾವತಿ ಸಾಮರ್ಥ್ಯಗಳನ್ನು ಬ್ಯಾಂಕುಗಳು ಖಚಿತಪಡಿಸುತ್ತವೆ. ಇಎಂಐಗಳನ್ನು ಪಾವತಿಸಿದ ನಂತರ ನಿಮ್ಮ ಕೈಯಲ್ಲಿ ಉಳಿಯುವ ಆದಾಯವನ್ನು ಇದು ಅವಲಂಬಿಸಿರುತ್ತದೆ. ಆದ್ದರಿಂದ, ಸಾಲದ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಮರುಪಾವತಿ ಸಾಮರ್ಥ್ಯಗಳನ್ನು ಅಂದಾಜು ಮಾಡಿ.

ವೈಯಕ್ತಿಕ ವಿವರ

ವೈಯಕ್ತಿಕ ವಿವರ

ಸಾಲ ಪಡೆಯಲು ಬಯಸುವ ವ್ಯಕ್ತಿಗಳ ವಿವರ ಕೂಡ ಮುಖ್ಯವಾಗಿರುತ್ತದೆ. ಶಾಸ್ವತ ವಿಳಾಸ, ಪ್ರಸ್ತುತ ವಾಸವಾಗಿರುವ ವಿಳಾಸ, ರೆಂಟ್ ಅಗ್ರಿಮೆಂಟ್, ಐಟಿಆರ್, ಬ್ಯಾಂಕ್‌ ಸ್ಟೇಟ್‌ಮೆಂಟ್‌, ಸ್ಯಾಲರಿ ಸ್ಲಿಪ್, ಕ್ರೆಡಿಟ್ ಸ್ಕೋರ್ ವೈಯಕ್ತಿಕ ವಿವರ ಪರಿಶೀಲಿಸುವಾಗ ಯಾವುದೇ ತಪ್ಪು ಮಾಹಿತಿ/ದಾಖಲಾತಿ ಇದ್ದರೆ ಸಾಲ ಪಡೆಯುವುದು ಕಷ್ಟವಾಗುತ್ತದೆ.

ಬಿಲ್ಡರ್‌ಗಳ ಬ್ರಾಂಡ್

ಬಿಲ್ಡರ್‌ಗಳ ಬ್ರಾಂಡ್

ಅಪಾರ್ಟ್‌ಮೆಂಟ್‌ ಖರೀದಿಸುವಾಗ ಬಿಲ್ಡರ್‌ಗಳ ಬ್ರಾಂಡ್ ಅನ್ನು ಬ್ಯಾಂಕುಗಳು ಗಮನಿಸುತ್ತವೆ. ಜನಪ್ರಿಯ ಬಿಲ್ಡರ್‌ಗಳಾದರೆ ವಿಶ್ವಾಸ ಹೆಚ್ಚು. ವಿಶ್ವಸನೀಯ ಬಿಲ್ಡರ್‌ಗಳು ಕಾನೂನು ಬದ್ಧ ದಾಖಲೆಗಳನ್ನು ಹೊಂದಿಸಿ ಕೊಡುತ್ತಾರಲ್ಲದೆ, ಕಟ್ಟಡಗಳಿಗೆ ಮರು ಮಾರಾಟದ ಮೌಲ್ಯವೂ ಇರುತ್ತದೆ.

ದಾಖಲೆಗಳು ಇರಬೇಕು

ದಾಖಲೆಗಳು ಇರಬೇಕು

ಕೈವೈಸಿ ಮಾಹಿತಿ, ಆದಾಯ ಸಂಬಂಧಿತ ಬ್ಯಾಂಕ್‌ ಸ್ಟೇಟ್‌ಮೆಂಟ್‌, ಐಟಿಆರ್‌, ನೀವು ಖರೀದಿಸಲು ಇಚ್ಛಿಸಿರುವ ಮನೆ/ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು ನಿಮ್ಮ ಬಳಿ ಇರಬೇಕು. ಈ ಮೇಲಿನ ದಾಖಲಾತಿಗಳು ಸರಿಯಿಲ್ಲದ್ದ ಕಾರಣ ಸಾಲದ ಅರ್ಜಿಯನ್ನು ತಿರಸ್ಕರಿಸಿದರೆ, ಬೇರೆ ಬ್ಯಾಂಕುಗಳಿಗೆ ಹೋದರೆ ಪ್ರಯೋಜನವಿಲ್ಲ.

ಬಿಲ್ ಅಥವಾ ಸಾಲ ಪಾವತಿಸುವಾಗ ವಿಳಂಬವೇ?

ಬಿಲ್ ಅಥವಾ ಸಾಲ ಪಾವತಿಸುವಾಗ ವಿಳಂಬವೇ?

ನಿಮ್ಮ ವಿದ್ಯುತ್‌ ಬಿಲ್‌, ಫೋನ್‌ ಬಿಲ್‌, ಎಲ್‌ಐಸಿ ಪ್ರೀಮಿಯಂ ಪಾವತಿಸಲು ವಿಳಂಬ ಮಾಡಿ, ದಂಡ ಪಾವತಿಸುವಿರಾದರೆ ಗೃಹ ಸಾಲ ನೀಡುವ ಬ್ಯಾಂಕುಗಳಿಗೆ ಇವೆಲ್ಲವು ದೊಡ್ಡದಾಗಿಯೇ ಕಾಣುತ್ತದೆ.
ಕ್ರೆಡಿಟ್‌ ಕಾರ್ಡ್‌ ಪೇಮೆಂಟ್, ಸಣ್ಣ ಪುಟ್ಟ ಬ್ಯಾಂಕ್‌ ಸಾಲ ಸರಿಯಾದ ಸಮಸಯಕ್ಕೆ ಪಾವತಿಸದಿದ್ದರೆ ಇದೆಲ್ಲವೂ ಕ್ರೆಡಿಟ್‌ ಸ್ಕೋರ್‌ನಲ್ಲಿ ಬಿಂಬಿತವಾಗುತ್ತದೆ. ಹೀಗಾಗಿ ಸಾಲ ಪಡೆಯಲು ಬಯಸುವವರು ಈ ಎಲ್ಲಾ ಅಂಶಗಳನ್ನು ಗಮನಿಸಬೇಕಾಗುತ್ತದೆ. (Read More: Home Loan)

English summary

Tips to Avoid Rejection of Your Home Loan, Personal Loan Application

Home Loan is the only option left to you to make your dream come true of owning a home.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X