For Quick Alerts
ALLOW NOTIFICATIONS  
For Daily Alerts

ಕಾರ್ಡ್ ಬಳಸದೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡೋದು ಹೇಗೆ?

|

ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಯುಗದಲ್ಲಿ ಎಲ್ಲವೂ ಸಾಧ್ಯ! ಹೊಸ ತಂತ್ರಜ್ಞಾನ ಜಗತ್ತನ್ನು ವಿನೂತನ ದಿಕ್ಕಿನೆಡೆಗೆ ದೂಡುತ್ತಲೇ ಇರುತ್ತದೆ. ಎಟಿಎಂ ಕಾರ್ಡುಗಳ ಮೂಲಕ ಎಟಿಎಂ ಕೇಂದ್ರಗಳಲ್ಲಿ ಎಲ್ಲರೂ ಹಣ ವಿತ್ ಡ್ರಾ ಮಾಡಿರುತ್ತಾರೆ. ಆದರೆ ಎಟಿಎಂ ಕಾರ್ಡ್ ಇಲ್ಲದೇ ಹಣ ಹಿಂತೆಗೆದುಕೊಳ್ಳುವುದು ಸಾದ್ಯನಾ? ಹೌದು, ಇನ್ನು ಮುಂದೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸದೆ ಎಟಿಎಂಗಳಲ್ಲಿ ಹಣವಿತ್ ಡ್ರಾ ಮಾಡಬಹುದಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಅವಿಷ್ಕಾರ, ತಂತ್ರಜ್ಞಾನದ ಸೌಲಭ್ಯದಿಂದ ಇಂತಹ ಸೇವೆ ಪಡೆಯಲು ಸಹಕಾರವಾಗಿದೆ.

ಈ ಸೌಲಭ್ಯವನ್ನು ಆಕ್ಸಿಸ್ ಬ್ಯಾಂಕ್, ಎಸ್ಬಿಐ, ಐಸಿಐಸಿ ಬ್ಯಾಂಕ್ ಗಳು ಕಲ್ಪಿಸಿವೆ. ಈ ಬ್ಯಾಂಕುಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಎಷ್ಟು ಹಣ ಪಡೆಯಬಹುದು ಎಂಬುದರ ವಿವರ ಇಲ್ಲಿದೆ ನೋಡಿ..

ಎಸ್ಬಿಐ ಬ್ಯಾಂಕ್
 

ಎಸ್ಬಿಐ ಬ್ಯಾಂಕ್

ಎಸ್ಬಿಐ ಬ್ಯಾಂಕ್ ಕೂಡ ಕಾರ್ಡ್ ಬಳಸದೆ ಹಣ ಪಡೆಯುವ ಅವಕಾಶ ಕಲ್ಪಿಸಿದೆ. ಎಸ್ಬಿಐನಲ್ಲಿ ಖಾತೆ ಹೊಂದಿದವರಿಗೆ ರೂ. 20 ಸಾವಿರದವರೆಗೆ ಹಣ ಪಡೆಯುವ ಅವಕಾಶವಿದೆ. ಆದರೆ ಇತರೆ ಬ್ಯಾಂಕ್ ಗ್ರಾಹಕರು ರೂ. 500 ನಿಂದ 10 ಸಾವಿರವರೆಗೆ ಹಣ ಪಡೆಯಬಹುದಾಗಿದೆ.

ಎಸ್ಬಿಐನಲ್ಲಿ ಹಣ ವಿತ್ ಡ್ರಾ ಮಾಡೋದು ಹೇಗೆ?

- ಎಸ್ಬಿಐ ಎಟಿಎಂಗಳ ಪರದೆ ಕೆಳಗೆ ಕಾಣಿಸುವ ಐಎಂಟಿ ಲೋಗೋ ಒತ್ತಬೇಕು.

- ಗ್ರಾಹಕರು ತಮ್ಮ ಮೊಬೈಲ್ ನಂಬರ್ ನಮೂದಿಸಬೇಕು.

- ಮೊಬೈಲ್ ಗೆ ಕೋಡ್ ನಂಬರ್ ಕಳುಹಿಸಲಾಗುವುದು. ಈ ಕೋಡ್ ನಂಬರ್ನ್ನು ಎಟಿಎಂ ಸ್ಕ್ರೀನ್ ನಲ್ಲಿ ಟೈಪ್ ಮಾಡಬೇಕು.

- ವಿತ್ ಡ್ರಾ ಮಾಡಲಿರುವ ಹಣವನ್ನು ಟೈಪ್ ಮಾಡಬೇಕು.

- ಖಚಿತಪಡಿಸಲು ಸ್ಕ್ರೀನ್ ನಲ್ಲಿ ಕಾಣುವ ಯೆಸ್ ಅಥವಾ ನೋ ಬಟನ್ ಒತ್ತಬೆಕು.

ನಗದು ವಿತ್ ಡ್ರಾ ಮಿತಿ ಮತ್ತು ವ್ಯವಹಾರ ಶುಲ್ಕ

ನಗದು ವಿತ್ ಡ್ರಾ ಮಿತಿ ಮತ್ತು ವ್ಯವಹಾರ ಶುಲ್ಕ

ನೀವು ಎಸ್ಬಿಐ ಎಟಿಎಂನಿಂದ ಒಂದು ಬಾರಿ ಕನಿಷ್ಟ ರೂ. 500 ಮತ್ತು ಗರಿಷ್ಠ ರೂ. 10,000 ಹಾಗು ದಿನಕ್ಕೆ 20,000 ವರೆಗೆ ವಿತ್ ಡ್ರಾ ಮಾಡಬಹುದು. ಬ್ಯಾಂಕಿನ ವೆಬ್ಸೈಟ್ ಎಸ್ಬಿಐ ಯೋನೊ ಕಾರ್ಡ್ ಲೆಸ್ ವಿತ್ ಡ್ರಾ ಸೇವೆಗೆ ಸಂಬಂಧಿಸಿದಂತೆ ಯಾವುದೇ ವಹಿವಾಟು ಶುಲ್ಕವನ್ನು ಉಲ್ಲೇಖಿಸಿಲ್ಲ.

ಆದರೆ, ನೀವು ಫಲಾನುಭವಿಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದರೆ, ಕಾರ್ಡ್ ಇಲ್ಲದೆ ಹಣವಿತ್ ಡ್ರಾ ಮಾಡಲು ಬಯಸಿದ್ದರೆ ಪ್ರತಿ ವ್ಯವಹಾರಕ್ಕೆ 25 ರೂ ಶುಲ್ಕ ವಿಧಿಸಲಾಗುತ್ತದೆ.

ಕೇವಲ 16,500 ಎಸ್ಬಿಐ ಎಟಿಎಂಗಳು ಕಾರ್ಡ್ ರಹಿತ ಹಣ ಹಿಂತೆಗೆದುಕೊಳ್ಳುವ ಸೇವೆಯನ್ನು ನೀಡುತ್ತಿವೆ.

ಐಸಿಐಸಿ ಬ್ಯಾಂಕ್
 

ಐಸಿಐಸಿ ಬ್ಯಾಂಕ್

ಐಸಿಐಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಮಾತ್ರ ಹಣ ಪಡೆಯಬೇಕೆಂಬ ನಿಯಮವೆನಿಲ್ಲ. ದೇಶಾದ್ಯಂತ ಐಸಿಐಸಿ ಬ್ಯಾಂಕ್ ನಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸದೆ ರೂ. 10 ಸಾವಿರದವರೆಗೆ ಯಾವುದೇ ಬ್ಯಾಂಕ್ ಗ್ರಾಹಕರು ಹಣ ಪಡೆಯಬಹುದು. ಆದರೆ ಐಎಂಟಿ ಸೇವೆಯ ಸಹಾಯದಿಂದ ಮಾತ್ರ ಈ ಸವಲತ್ತು ಪಡೆಯಬಹುದಾಗಿದೆ. ಬ್ಯಾಂಕಿನ ವಿವರಗಳನ್ನ ನೀಡಿ ಎಸ್ಎಂಎಸ್ ಮೂಲಕ ಬರುವ ಕೋಡ್ ವಿವರದಿಂದಾಗಿ ಹಣ ಪಡೆಯಬಹುದಾಗಿದೆ.

ಐಸಿಐಸಿಐ ಬ್ಯಾಂಕ್ ಗೆ ಮೊದಲು ಲಾಗಿನ್ ಆಗಬೇಕು. ಈ ಲಾಗಿನ್ ಇಂಟರ್ ನೆಟ್ ಬ್ಯಾಂಕಿಂಗ್ ಬಳಕೆದಾರರ ಐಡಿ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಬೇಕು. ಆಗ ಕಾರ್ಡ್ ಇಲ್ಲದೆ ಹಣ ತೆಗೆಯಲು ಸಾಧ್ಯವಾಗಲಿದೆ.

ಕಾರ್ಡ್ ಲೆಸ್ ನಗದು ಹಿಂತೆಗೆದುಕೊಳ್ಳುವ ವಹಿವಾಟಿಗಾಗಿ ನೀವು ಐಸಿಐಸಿಐ ಬ್ಯಾಂಕ್ ಗೆ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್ವರ್ಡ್ ನೊಂದಿಗೆ ಲಾಗಿನ್ ಆಗಬೇಕು. ICICI ಬ್ಯಾಂಕ್ ವೆಬ್ಸೈಟ್ - icicibank.com ನಿಂದ ನೀವು ಎಟಿಎಂನಲ್ಲಿ ಸೌಲಭ್ಯ ಲಭ್ಯತೆ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಆಕ್ಸಿಸ್ ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಎಟಿಎಂಗಳಿಂದ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕಿಲ್ಲ

English summary

No card needed! These bank ATMs provide cardless cash withdrawals

With technology banks are trying to improve customer services with new modes of the cash transactions, which are convenient and secure.
Story first published: Wednesday, April 17, 2019, 12:37 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more