ಎಸ್ ಬಿಐ ಲೈಫ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ 2017ರ ಸೆಪ್ಟೆಂಬರ್ ನಲ್ಲಿ ಪ್ರತಿ ಷೇರಿಗೆ ರು.700ರಂತೆ ಐಪಿಒ ಮೂಲಕ ಷೇರು ಪೇಟೆ ಪ್ರವೇಶಿಸಿತು. ಈ ವರ್ಷ ಈ ಕಂಪೆನಿ ಷೇರು ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿದೆ. ಆ ಮೂಲಕ ವಿವಿಧ ವಿತ್ತೀಯ ಸಂಸ್ಥೆಗಳ ಸಂಪನ್ಮೂಲ ಅಗತ್ಯವನ್ನು ಪೂರೈಸಿದೆ.
ಈ ಪ್ರಮಾಣದ ಪ್ರೀಮಿಯಂನಲ್ಲಿ ಷೇರು ವಿತರಣೆಯಾದರೂ ಈ ಕಂಪೆನಿ ವಿತರಿಸಿದ ಡಿವಿಡೆಂಡ್ ಮಾತ್ರ ಪ್ರತಿ ಷೇರಿಗೆ ಕೇವಲ ರು.2 ಮಾತ್ರ. ಇದು ಇತರೆ ವಿಮಾ ಕಂಪೆನಿಗಳ ರೀತಿ ಭಾರೀ ಕುಸಿತಕ್ಕೊಳಗಾಗಿತ್ತು. ಕಳೆದ ಅಕ್ಟೊಬರ್ ತಿಂಗಳಲ್ಲಿ ಈ ಷೇರು ರು.487 ರವರೆಗೂ ಕುಸಿದು ನಂತರ ಪುಟಿದೆದ್ದಿದೆ.
ಈ ಷೇರಿನ ಸೋಜಿಗದ ಚಲನೆಯೆಂದರೆ, ಫೆಬ್ರವರಿ ಅಂತ್ಯದಲ್ಲಿ ಷೇರಿನ ಬೆಲೆ ರು.580ರ ಸಮೀಪವಿದ್ದು, ಮಾರ್ಚ್ 1ರಂದು ದಿನದ ಆರಂಭದಲ್ಲೇ ಷೇರಿನ ಬೆಲೆ ರು.510ರ ವರೆಗೂ ಕುಸಿಯಿತು. ಈ ಕುಸಿತದ ಮಧ್ಯೆ ಬಿಎನ್ ಪಿ ಪಾರಿಬಾಸ್ ಕಾರ್ಡಿಫ್ ವಿಮಾ ಕಂಪೆನಿ ತನ್ನಲ್ಲಿರುವ 9.22 ಕೋಟಿ ಷೇರುಗಳನ್ನು ಭಾರೀ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಿದೆ.

ನಂತರದ ಅರ್ಧ - ಮುಕ್ಕಾಲು ಗಂಟೆಯಲ್ಲೇ ಷೇರಿನ ಬೆಲೆ ರು.620 ತಲುಪಿ, ದಿನವಿಡೀ ಅದೇ ಹಂತದಲ್ಲಿದ್ದು, ರು.612ರಲ್ಲಿ ಕೊನೆಗೊಂಡಿತು. ಈ ಮಾರಾಟದ ಕಾರಣ ದಿಢೀರ್ ಕುಸಿತ ಕಂಡ ಷೇರು ಹೆಚ್ಚಿನ ಮೌಲ್ಯಾಧಾರಿತ ಖರೀದಿಗೆ ದಾರಿ ಮಾಡಿಕೊಟ್ಟು, ಷೇರಿನ ಬೆಲೆ ಪುಟಿದೇಳುವಂತೆ ಮಾಡಿದೆ.
ಸ್ಟಾಪ್ ಲಾಸ್ ಆರ್ಡರ್ ಗಳೆಲ್ಲಾ ಕ್ಲಿಕ್ ಆಗಿ, ಹೆಚ್ಚಿನವರಿಗೆ ಟಾಪ್ ಲಾಸ್ ಮಾಡಿಕೊಟ್ಟಿದೆ. ದಿನದ ಆರಂಭಿಕ ಕ್ಷಣಗಳಲ್ಲಿ ಉತ್ತಮ ಬ್ರಾಂಡೆಡ್ ಕಂಪೆನಿಗಳ ಷೇರಿನ ಬೆಲೆ ಭಾರಿ ಕುಸಿತಕ್ಕೊಳಗಾದಲ್ಲಿ ಅದು ವ್ಯಾಲ್ಯೂ ಪಿಕ್ ಗೆ ಅವಕಾಶವೆಂಬಂತಾಗಿದೆ. ಗಜಗಾತ್ರದ ಮಾರಾಟಗಳು ಭಾರಿ ಚೌಕಾಶಿಗೆ ಅವಕಾಶ ಮಾಡಿಕೊಟ್ಟು ಭರ್ಜರಿ ಕುಸಿತಕ್ಕೆ ಕಾರಣವಾಗುತ್ತದೆ.
ಈ ಬೆಳವಣಿಗೆಯನ್ನು ಮಾರ್ಚ್ ನಲ್ಲಿ ಪ್ರದರ್ಶಿತವಾದರೆ, ಜೂನ್ ತಿಂಗಳಲ್ಲಿ ಮತ್ತೊಂದು ರೀತಿ ಅಂದರೆ, ಬಿಎನ್ ಪಿ ಪಾರಿಬಾಸ್ ಕಾರ್ಡಿಫ್ ವಿಮಾ ಕಂಪೆನಿ ತನ್ನಲ್ಲಿರುವ ಎರಡೂವರೆ ಕೋಟಿ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಜೂನ್ 26ರಂದು ಮಾರಾಟ ಮಾಡುವ ಯೋಜನೆ ಪ್ರಕಟಿಸಿದ ಕಾರಣ 25ರಂದು ಷೇರಿನ ಬೆಲೆ ರು.670ರವರೆಗೂ ಕುಸಿದು, ರು.674ರಲ್ಲಿ ಕೊನೆಗೊಂಡಿತು.
ಆಫರ್ ಫಾರ್ ಸೇಲ್ ದಿನವಾದ ಜೂನ್ 26ರಂದು ದಿನದ ಆರಂಭದಲ್ಲೇ ಷೇರಿನ ಬೆಲೆ ಪುಟಿದೆದ್ದು, ರು.714ರವರೆಗೂ ಏರಿಕೆ ಕಂಡು, ರು.710ರ ಸಮೀಪದಲ್ಲೇ ದಿನದ ಹೆಚ್ಚಿನ ಸಮಯ ವಹಿವಾಟಾಗುತ್ತಿತ್ತು. ಅಂತಿಮವಾಗಿ ಪ್ರತಿ ಷೇರಿಗೆ ರು.685.28 indicative price ಆಗಿದೆ.
ಯಾವುದೇ ಪ್ರಮುಖ ಷೇರಿನ ಬೆಲೆ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಉಂಟಾದಾಗ ಅದರ ಹಿಂದಿನ ಕಾರಣಗಳನ್ನು ಅರಿತು, ಚಟುವಟಿಕೆ ನಡೆಸಿದಲ್ಲಿ ಅದು ಲಾಭದಾಯಕವಾಗುವ ಸಾಧ್ಯತೆ ಇರುತ್ತದೆ. ಯಾವುದೇ ಫಂಡ್ ಹೌಸ್ ಗಳಾಗಲಿ, ವಿತ್ತೀಯ ಸಂಸ್ಥೆಗಳಾಗಲಿ ಅವು ನಡೆಸುವುದು ವ್ಯಾವಹಾರಿಕ ಚಟುವಟಿಕೆಯಾದ್ದರಿಂದ ತಮ್ಮ ಹಿತ ಕಾಪಾಡಿಕೊಳ್ಳುವ ವಾತಾವರಣವನ್ನು ನಿರ್ಮಿಸಿಕೊಂಡು ವಹಿವಾಟು ನಡೆಸುವುದರಿಂದ ಹೂಡಿಕೆದಾರರ ನಿರ್ಧಾರವು ಸಹ ಅವರಿಗೆ ಹಿತವಾಗಿರುವಂತೆ ನಡೆಸುವುದು ಉತ್ತಮ.
ಮ್ಯುಚುಯಲ್ ಫಂಡ್ ಸರಿ ಇದೆ ಎಂದು ಕಣ್ಮುಚ್ಚಿ ಭಾವಿಸಬಾರದು. ಮಾರ್ಚ್ 1ರಂದು ಘಟಿಸಿದ ಈ ಬೆಳವಣಿಗೆಯು ಒಂದು ಪ್ರಮುಖ ಅಂಶವನ್ನು ಬೆಳಕಿಗೆ ತಂದಿದೆ. ಅದೆಂದರೆ, ಎಸ್ ಬಿಐ ಲೈಫ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡಿದ ಯೋಜನೆಗಳಿಗೆ ಎನ್ ಎವಿ ಅಂದಿನ ದಿನದ ಅಂತ್ಯದ ದರದ ಆಧಾರದ ಮೇಲೆ ನಿರ್ಧರಿಸುತ್ತಾರೆ.
ಆದರೆ, ಆ ಷೇರು ಮಾರಾಟ ಮಾಡಿದಾಗ ಎನ್ ಎವಿ ಪ್ರಕಾರ ಹಣ ಬರುವುದಿಲ್ಲ. ಇದು ಮ್ಯುಚುಯಲ್ ಫಂಡ್ ನ ಯೋಜನೆಗೆ ಆಗುವ ಅಸಹಜ ಹಾನಿಯಲ್ಲವೇ?
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಷೇರು ಮಾರುಕಟ್ಟೆ ಹೂಡಿಕೆದಾರರೇ, ಈ ವಾರ ಎಚ್ಚರ ತಪ್ಪಿದರೆ ನಷ್ಟ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಕೊನೆಯ ದಿನದ ಅನಿರೀಕ್ಷಿತ ತಿರುವು!

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?



Click it and Unblock the Notifications