For Quick Alerts
ALLOW NOTIFICATIONS  
For Daily Alerts

ಷೇರು ಪೇಟೆಯೆಂಬ ವಿಸ್ಮಯ; ಕುಸಿದು ಕೂತಿದ್ದು ಪುಟಿದು ನಿಂತ ನಿದರ್ಶನ

By ಕೆ. ಜಿ. ಕೃಪಾಲ್
|

ಷೇರುಪೇಟೆಯ ಸಂವೇದಿ ಸೂಚ್ಯಂಕವು ಈ ವಾರ, ಹಿಂದಿನ ವಾರದ 37,118.22 ಪಾಯಿಂಟುಗಳಿಂದ 37,581.91ರ ವರೆಗೂ ಏರಿಕೆ ಕಂಡಿದೆ. ವಾರಾಂತ್ಯದಂದು ವಿದೇಶಿ ವಿತ್ತೀಯ ಸಂಸ್ಥೆಗಳು ಬದಲಾವಣೆಗಾಗಿ ರು. 203 ಕೋಟಿಯಷ್ಟು ಖರೀದಿ ಮಾಡಿವೆ. ಇದು ಕೇವಲ ಒಂದು ದಿನದ ಚಟುವಟಿಕೆಯೋ ಅಥವಾ ಮುಂದಿನ ದಿನಗಳಲ್ಲಿ ಅವು ತರಬಹುದಾದ ಹಣದ ಒಳಹರಿವಿನ ಮುನ್ಸೂಚನೆಯೋ ಕಾದು ನೋಡಬೇಕಾಗಿದೆ.

ಆದರೂ ಗುರುವಾರ ಮತ್ತು ಶುಕ್ರವಾರ ವಿವಿಧ ಸೂಚ್ಯಂಕಗಳು ಕಂಡ ಏರಿಕೆ ಕಾರಣ ಬುಧವಾರದಂದು ಇದ್ದ ಪೇಟೆಯ ಬಂಡವಾಳ ಮೌಲ್ಯವು ರು. 138.82 ಲಕ್ಷ ಕೋಟಿಯಿಂದ ರು. 141.68 ಕೋಟಿಗೆ ಏರಿಕೆ ಕಂಡಿದ್ದು ಗಮನಾರ್ಹ ಅಂಶವಾಗಿದೆ.

ಜೂನ್ ತಿಂಗಳ ತ್ರೈಮಾಸಿಕ ಸಾಧನೆ ತೃಪ್ತಿಕರವಾಗಿರದ ಕಾರಣ ಮತ್ತು ಅದರಿಂದ ನಿರಂತರವಾಗಿ ವಿತರಿಸುತ್ತಿದ್ದ ತ್ರೈಮಾಸಿಕ ಲಾಭಾಂಶವನ್ನು ರು. 10ರಿಂದ ರು. 8ಕ್ಕೆ ಇಳಿಸಿದ್ದರ ಜೊತೆಗೆ ಇತರೆ ವೈವಿಧ್ಯಮಯ ಕಾರಣಗಳಿಂದ ಗುರುವಾರ ರು.425ರ ಸಮೀಪಕ್ಕೆ ಕುಸಿದಿದ್ದ ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪೆನಿಯ ಷೇರು ಶುಕ್ರವಾರದಂದು ರು. 520ರ ವರೆಗೂ ಏರಿಕೆ ಕಂಡು, ರು. 505ರ ಸಮೀಪ ಕೊನೆಗೊಂಡಿದೆ.

ಷೇರು ಪೇಟೆಯೆಂಬ ವಿಸ್ಮಯ; ಕುಸಿದು ಕೂತಿದ್ದು ಪುಟಿದು ನಿಂತ ನಿದರ್ಶನ

 

ಪ್ರತಿ ಷೇರಿಗೆ ರು. 8ರಂತೆ ಲಾಭಾಂಶ ವಿತರಿಸಲಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆ ಗುರುವಾರದಂದು ರು. 330ರ ಸಮೀಪದಲ್ಲಿದ್ದು, ಶುಕ್ರವಾರದಂದು ರು. 350ರ ಗಡಿ ದಾಟಿ, ರು.346ರ ಸಮೀಪ ವಾರಾಂತ್ಯ ಕಂಡಿತು.

ಪುಟಿದೆದ್ದಿತು ಮಾರುತಿ ಸುಜುಕಿ

ಆಟೋ ವಲಯದ ಅಗ್ರಮಾನ್ಯ ಕಂಪನಿ ಮಾರುತಿ ಸುಜುಕಿ ಈ ಒಂದೇ ವಾರದಲ್ಲಿ ರು. 5,460ರ ಸಮೀಪದಿಂದ ಪುಟಿದೆದ್ದು ಶುಕ್ರವಾರದಂದು ರು. 6,152 ರ ವರೆಗೂ ಚೇತರಿಕೆ ಕಂಡಿದೆ. ವಿಸ್ಮಯಕಾರಿ ಎಂದರೆ ಶುಕ್ರವಾರದಂದು ರು. 250ರಷ್ಟು ಏರಿಕೆಯನ್ನು ದಿನದ ಮಧ್ಯಂತರದಲ್ಲಿ ಕಂಡಿದೆ. ಈ ತಿಂಗಳ 14ರಿಂದ ಕಂಪನಿಯ ಷೇರು ರು. 80ರ ಲಾಭಾಂಶದ ನಂತರದ ವಹಿವಾಟು ಆರಂಭವಾಗುವುದು ಸಹ ಈ ರಭಸದ ಚೇತರಿಕೆಗೆ ಪೂರಕ ಅಂಶವಾಗಿದೆ.

ಇದೇ ವಲಯದ ಮತ್ತೊಂದು ಅಗ್ರಮಾನ್ಯ ಕಂಪನಿ ಮತ್ತು ಸೆನ್ಸೆಕ್ಸ್ ನ ಅಂಗವಾಗಿರುವ ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿಯ ಷೇರು ಕಳೆದ ಒಂದು ತಿಂಗಳಿನಿಂದಲೂ ಸತತವಾದ ಇಳಿಕೆಗೊಳಪಟ್ಟಿದ್ದು, ಇದೇ ಬುಧವಾರದಂದು ರು. 515ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿತ್ತು. ಶುಕ್ರವಾರದಂದು ರು. 548ರ ವರೆಗೂ ಏರಿಕೆ ಕಂಡಿದೆ.

ಮತ್ತೂ ವಿಸ್ಮಯಕಾರಿ ಅಂಶವೆಂದರೆ ಗುರುವಾರದಂದು ಇಂಡ್ಯೂರನ್ಸ್ ಟೆಕ್ನಾಲಜಿಸ್ ಲಿಮಿಟೆಡ್ ಕಂಪನಿಯು ಟೈರ್ ಗಳ ತಯಾರಿಕಾ ವಲಯಕ್ಕೆ ಪ್ರವೇಶಿಸಬೇಕೆಂಬ ಬಯಕೆ ಹೊಂದಿತ್ತು. ಈ ಕಾರಣದಿಂದ ಷೇರಿನ ಬೆಲೆಯು ಗುರುವಾರದಂದು ರು.743ರ ಸಮೀಪಕ್ಕೆ ಕುಸಿದು ವಾರ್ಷಿಕ ಕನಿಷ್ಠಕ್ಕೆ ತಲುಪಿತ್ತು.

ಟೈರ್ ಉತ್ಪಾದನೆ ಯೋಜನೆ ಕೈ ಬಿಟ್ಟ ಕಂಪನಿ

ಒಂದು ತಿಂಗಳಲ್ಲಿ ಷೇರಿನ ಬೆಲೆಯು ರು. 1,022ರಿಂದ ಸತತವಾದ ಇಳಿಕೆಗೊಳಪಟ್ಟಿತ್ತು. ಆದರೆ ಟೈರ್ ವಲಯಕ್ಕೆ ಪ್ರವೇಶಿಸುವುದು ಸೂಕ್ತವಲ್ಲವೆಂಬ ಅಭಿಪ್ರಾಯ ಹಿತೈಷಿಗಳು, ಬಹುಜನರು ವ್ಯಕ್ತಪಡಿಸಿದ ಕಾರಣ ಆ ಯೋಜನೆಯನ್ನು ಕಂಪನಿ ಕೈಬಿಟ್ಟಿತು. ಆ ಕಾರಣಕ್ಕೆ ಶುಕ್ರವಾರದಂದು ಷೇರಿನ ಬೆಲೆಯು ಹಿಂದಿನ ದಿನದ ರು.743ರಿಂದ ರು.869ರ ವರೆಗೂ ಏರಿಕೆ ಕಂಡು, ರು. 848ರಲ್ಲಿ ವಾರಾಂತ್ಯ ಕಂಡಿತು.

ಪೇಟೆಯಲ್ಲಿ ವಾಲ್ಯೂ ಪಿಕ್ ಚಟುವಟಿಕೆಗೆ ಒಳಗಾದ ಕಂಪನಿಗಳೆಂದರೆ ಕ್ವೆಸ್ ಕಾರ್ಪ್, ಬಾಲಕೃಷ್ಣ ಇಂಡಸ್ಟ್ರೀಸ್, ಸಿಯಾಟ್, ಟೈಟಾನ್, ಬಜಾಜ್ ಫೈನಾನ್ಸ್ ಪ್ರಮುಖವಾದವು. ಮೆಟಲ್ ವಲಯದ ಟಾಟಾ ಸ್ಟೀಲ್, ಜಿಂದಾಲ್ ಸ್ಟೀಲ್ ಅಂಡ್ ಪವರ್, ಹಿಂಡಾಲ್ಕೋ, ಜೆಎಸ್ ಡಬ್ಲ್ಯೂ ಸ್ಟೀಲ್ ಮುಂತಾದವು ಮಾರಾಟದ ಒತ್ತಡದಲ್ಲಿದ್ದವು.

ರೇಟಿಂಗ್ ಕಂಪನಿಗಳು ಒತ್ತಡದಲ್ಲಿ

 

ರೇಟಿಂಗ್ ಕಂಪನಿಗಳು ಎದುರಿಸುತ್ತಿರುವ ತನಿಖೆಯ ಕಾರಣ ಹೆಚ್ಚಿನ ಮಾರಾಟಕ್ಕೊಳಗಾಗಿವೆ. ಕ್ರಿಸಿಲ್ ಷೇರಿನ ಬೆಲೆ ವಾರ್ಷಿಕ ಕನಿಷ್ಠಕ್ಕೆ ಕುಸಿದರೆ, ಕೇರ್ ರೇಟಿಂಗ್ಸ್ ಷೇರು ಸೋಮವಾರದಂದು ರು.453ರ ವಾರ್ಷಿಕ ಕನಿಷ್ಠಕ್ಕೆ ಕುಸಿದು, ನಂತರದ ದಿನಗಳಲ್ಲಿ ಪುಟಿದೆದ್ದು, ರು. 539ರ ಸಮೀಪ ವಾರಾಂತ್ಯ ಕಂಡಿದೆ. ಇಕ್ರಾ ಷೇರಿನ ಬೆಲೆ ಗುರುವಾರದಂದು ರು. 2,623ರ ವಾರ್ಷಿಕ ಕನಿಷ್ಠಕ್ಕೆ ಕುಸಿದು, ನಂತರದ ದಿನ ರು. 2,839 ತಲುಪಿದೆ.

ಆರ್ ಬಿ ಐ 35 ಪಾಯಿಂಟುಗಳಷ್ಟು ಬಡ್ಡಿದರ ಕಡಿಮೆ ಮಾಡಿದರೂ ವಿವಿಧ ಬ್ಯಾಂಕ್ ಗಳು 10 ರಿಂದ 25 ಪಾಯಿಂಟುಗಳವರೆಗೂ ಮಾತ್ರ ಬಡ್ಡಿದರ ಕಡಿತವನ್ನು ಗ್ರಾಹಕರಿಗೆ ತಲುಪಿಸುತ್ತಿವೆ. ಇದು ಗ್ರಾಹಕರಲ್ಲಿ ವೆಚ್ಚಬಾಕತನವನ್ನು ಉತ್ತೇಜಿಸುವಲ್ಲಿ ಎಷ್ಟರ ಮಟ್ಟಿಗೆ ಪ್ರಯೋಜನವಾದೀತು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬಹುದು.

English summary

Indian Stock Market Movement Wonders; Shares Which Move Upward

Indian stock market attracting by share price movement. Here is the best examples by Oneindia columnist K.G. Krupal.
Story first published: Monday, August 12, 2019, 17:18 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more