For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಆವಾಸ ಯೋಜನೆ (ಪಿಎಂಎವೈ) ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕುವುದು ಹೇಗೆ?

2022 ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ ಯೋಜನೆ (ಪಿಎಂಎವೈ) ಪ್ರಾರಂಭಿಸಿದೆ.

|

2022 ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ ಯೋಜನೆ (ಪಿಎಂಎವೈ) ಪ್ರಾರಂಭಿಸಿದೆ. ದೇಶದ ಬಹುತೇಕ ಜನರು ಪಿಎಂಎವೈ ಯೋಜನೆಯಡಿ ಎಲ್ಲಾ ಅರ್ಜಿದಾರರು ತಮ್ಮದೇ ಆದ ಮನೆಯನ್ನು ಹೊಂದಲು ಎದುರು ನೋಡುತ್ತಿದ್ದಾರೆ.
ಪಿಎಂಎವೈ ಮಾದರಿಯಲ್ಲಿನ ವಿಶಿಷ್ಟ ಪ್ರಯೋಜನವೆಂದರೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಮಾಲೀಕರಿಗೆ ಮನೆ ಹೊಂದುವ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಭಿನ್ನ ಅರ್ಹತಾ ಷರತ್ತುಗಳಿದ್ದು, ಅರ್ಜಿ ಸಲ್ಲಿಸಿದ ನಂತರ ಪಿಎಂಎವೈ ಅರ್ಜಿದಾರನು ನೋಂದಣಿ ಐಡಿಯನ್ನು ಪಡೆಯುತ್ತಾರೆ. ನೋಂದಣಿ ಐಡಿ ಬಳಸಿಕೊಂಡು ಅವನು ಅಥವಾ ಅವಳು ಅರ್ಜಿಯ ಸ್ಟೇಟಸ್ ಅನ್ನು ಕಂಡುಹಿಡಿಯಬಹುದು. ನೀವು ಈಗಾಗಲೇ ಪ್ರಧಾನ ಮಂತ್ರಿ ಆವಾಸ ಯೋಜನೆ (ಪಿಎಂಎವೈ) ಗೆ ಅರ್ಜಿ ಸಲ್ಲಿಸಿದ್ದರೆ ಪಿಎಂಎವೈ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ವಿವರಗಳನ್ನು ತಿಳಿದುಕೊಳ್ಳಲು 4 ಮಾರ್ಗಗಳಿವೆ. ವಿವರಗಳನ್ನು ಕಂಡುಹಿಡಿಯಲು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ನೋಂದಣಿ ಐಡಿ ನಿಮಗೆ ಬೇಕಾಗಬಹುದು.
ಪ್ರಧಾನ ಮಂತ್ರಿ ಆವಾಸ ಯೋಜನೆ ಪಟ್ಟಿಯಡಿ ಪಿಎಂಎವೈ ನಗರ ಪಟ್ಟಿ ಅಥವಾ ಪಿಎಂಎವೈ-ಗ್ರಾಮೀಣ ಪಟ್ಟಿಯನ್ನು ಪರಿಶೀಲನೆ ಮಾಡಬಹುದು. PMAY ಪಟ್ಟಿಯನ್ನು ಪರಿಶೀಲಿಸಲು 4 ಮಾರ್ಗಗಳು ಇಲ್ಲಿವೆ.

1. ಪಿಎಂಎವೈ ನಗರ ಪಟ್ಟಿಯನ್ನು ಪರಿಶೀಲಿಸಿ (ಆಧಾರ್ ಸಂಖ್ಯೆಯೊಂದಿಗೆ)

1. ಪಿಎಂಎವೈ ನಗರ ಪಟ್ಟಿಯನ್ನು ಪರಿಶೀಲಿಸಿ (ಆಧಾರ್ ಸಂಖ್ಯೆಯೊಂದಿಗೆ)

Https://pmaymis.gov.in ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ.
ಅಥವಾ
ಲಿಂಕ್ ಮೇಲೆ ಕ್ಲಿಕ್ ಮಾಡಿ: https://pmaymis.gov.in/Open/Find_Beneficiary_Details.aspx
ಮುಂದಿನ ಪುಟಕ್ಕೆ ಹೋಗಲು ಮೇಲಿನ ಫಲಕದಲ್ಲಿರುವ Search Beneficiary ಮೇಲೆ ಕ್ಲಿಕ್ ಮಾಡಿ.
ಮುಂದಿನ ಪುಟದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಬ್ಮಿಟ್ ಮಾಡಿ.
ಅಗತ್ಯ ಮಾಹಿತಿಯನ್ನು ಸಲ್ಲಿಸಿದಾಗ, ನಿಮ್ಮ PMAY ಅರ್ಜಿಯ ವಿವರಗಳನ್ನು ಪ್ರಸ್ತುತ ಇರುವ ಸ್ಟೇಟಸ್ ನೊಂದಿಗೆ ತೋರಿಸಲಾಗುತ್ತದೆ.

2. ಪಿಎಂಎವೈ ನಗರ ಪಟ್ಟಿ ಪರಿಶೀಲಿಸಿ (ಆಧಾರ್ ಸಂಖ್ಯೆ ಇಲ್ಲದೆ)

2. ಪಿಎಂಎವೈ ನಗರ ಪಟ್ಟಿ ಪರಿಶೀಲಿಸಿ (ಆಧಾರ್ ಸಂಖ್ಯೆ ಇಲ್ಲದೆ)

ನಿಮ್ಮ ಬಳಿ ಆಧಾರ್ ಸಂಖ್ಯೆ ಇಲ್ಲದಿದ್ದರೆ, ನಿಮ್ಮ ವೈಯಕ್ತಿಕ ವಿವರಗಳು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಅಥವಾ ನಿಮ್ಮ ಮೌಲ್ಯಮಾಪನ ID ಯೊಂದಿಗೆ ನೀವು ಪ್ರಧಾನ ಮಂತ್ರಿ ಆವಾಸ ಯೋಜನೆ ಪಟ್ಟಿಯನ್ನು ಪರಿಶಿಲಿಸಬಹುದು.
Https://pmaymis.gov.in/Track_Application_Status.aspx ಅನ್ನು ಪ್ರವೇಶಿಸಿ
PMAY ಅಪ್ಲಿಕೇಶನ್ ಸ್ಥಿತಿಯನ್ನು ತಿಳಿಯಲು ವೈಯಕ್ತಿಕ ವಿವರಗಳು ಅಥವಾ ಮೌಲ್ಯಮಾಪನ ID ಅನ್ನು ನಮೂದಿಸಿ.

3. PMAY-G ಪಟ್ಟಿಯನ್ನು ಪರಿಶೀಲಿಸಿ (ನೋಂದಣಿ ಸಂಖ್ಯೆಯೊಂದಿಗೆ)

3. PMAY-G ಪಟ್ಟಿಯನ್ನು ಪರಿಶೀಲಿಸಿ (ನೋಂದಣಿ ಸಂಖ್ಯೆಯೊಂದಿಗೆ)

ನೀವು ನೋಂದಣಿ ಸಂಖ್ಯೆಯನ್ನು ಹೊಂದಿದ್ದರೆ PMAY ಗ್ರಾಮೀಣ ಪಟ್ಟಿಯಲ್ಲಿರುವ ನಿಮ್ಮ ಹೆಸರು ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು. PMAY-Gramin ಅಧಿಕೃತ ವೆಬ್ಸೈಟ್‌ https://rhreporting.nic.in/netiay/Benificiary.aspx ಗೆ ಭೇಟಿ ನೀಡಿ.

4. PMAY-G ಪಟ್ಟಿಯನ್ನು ಪರಿಶೀಲಿಸಿ (ನೋಂದಣಿ ಸಂಖ್ಯೆ ಇಲ್ಲದೆ)

4. PMAY-G ಪಟ್ಟಿಯನ್ನು ಪರಿಶೀಲಿಸಿ (ನೋಂದಣಿ ಸಂಖ್ಯೆ ಇಲ್ಲದೆ)

ಒಂದು ವೇಳೆ ನಿಮ್ಮಲ್ಲಿ ನೋಂದಣಿ ಸಂಖ್ಯೆ ಇಲ್ಲದಿದ್ದರೆ, ಪಿಎಂಎವೈ-ಗ್ರಾಮೀಣ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆಯಬಹುದು.
https://rhreporting.nic.in/netiay/Benificiary.aspx ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಪ್ರವೇಶಿಸಿ.
ಮುಂದಿನ ಪುಟದಲ್ಲಿ, ನೀವು ರಾಜ್ಯ, ಜಿಲ್ಲೆ, ಬ್ಲಾಕ್, ಪಂಚಾಯತ್, ಯೋಜನೆಯ ಹೆಸರು ಮತ್ತು ಇತರ ವಿವರಗಳನ್ನು ಆಯ್ಕೆ ಮಾಡಿ.
ಸಬ್ಮಿಟ್ ಮಾಡುವಾಗ ನಿಮ್ಮ ವೈಯಕ್ತಿಕ ವಿವರಗಳು, ಬ್ಯಾಂಕ್ ವಿವರಗಳು, ಮನೆಯ ಸೈಟ್ ವಿವರಗಳು, ಅನುಮೋದನೆ ಮತ್ತು ಪೂರ್ಣಗೊಳಿಸುವಿಕೆಯ ವಿವರಗಳನ್ನು ನಿಮಗೆ ತೋರಿಸಲಾಗುತ್ತದೆ.

ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಅವಾಸ ಯೋಜನೆಯ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಪ್ರಧಾನ ಮಂತ್ರಿ ಅವಾಸ ಯೋಜನೆಯ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ?

Read more about: pmay housing finance news home loan
English summary

Pradhan Mantri Awas Yojana: 4 ways to find name on PMAY list

Pradhan Mantri Awas Yojana List: Applicants to the PMAY are looking forward to owning a house of their own under the government’s flagship programme of ‘Housing for All’ by 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X