For Quick Alerts
ALLOW NOTIFICATIONS  
For Daily Alerts

1 ಗಂಟೆಗೆ 4,000 ರುಪಾಯಿವರೆಗೆ ದುಡಿಯಬಹುದಾದ ಆನ್‌ಲೈನ್ ಉದ್ಯೋಗಗಳು

|

ಈಗಿನ ಕಾಲದಲ್ಲಿ ಮೊಬೈಲ್‌ನಲ್ಲೇ ಇಡೀ ಜಗತ್ತನೇ ಜಾಲಾಡಿಬಿಡಬಹುದು. ಇಂಟರ್‌ನೆಟ್‌ ಮೂಲಕವೇ ಮನೆಯಲ್ಲಿ ಕೂತು ಹಣ ಸಂಪಾದಿಸಬಹುದು. ಮಕ್ಕಳಿಗೆ ಯಾವುದೇ ಮಾಹಿತಿ ಇರಲಿ, ಯಾವುದಾದರೂ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವುದಿರಲಿ, ಏನೇ ಮಾಹಿತಿ ಬೇಕಾದ್ರೂ ಪಟ್ ಅಂತಾ ಸರ್ಚ್‌ ಮಾಡಿ ನಿಮ್ಮ ಮಾಹಿತಿಯನ್ನು ಪಡೆಯಬಹುದು.

ಹೀಗೆ ಈ ಇಂಟರ್‌ನೆಟ್ ಮೂಲಕವೇ ಅಂದ್ರೆ ಆನ್‌ಲೈನ್ ಮೂಲಕವೇ ಮನೆಯಲ್ಲಿ ಕುಳಿತು ಹಣ ಸಂಪಾದಿಸುವವರು ಇದ್ದಾರೆ. ಕಚೇರಿಗೆ ತೆರಳದೇ ಹಲವಾರು ಗಂಟೆಗಳು ದುಡಿಯದೇ ಕೆಲವೇ ಗಂಟೆಗಳ ಶ್ರಮದಿಂದ ತಿಂಗಳಿಗೆ ಸಾವಿರಾರು ರುಪಾಯಿ ಜೇಬಿಗಿಳಿಸುತ್ತಾರೆ. ಹೀಗೆ ಕಡಿಮೆ ಸಮಯದಲ್ಲಿ ಆನ್‌ಲೈನ್ ಮೂಲಕವೇ ಹಣ ಸಂಪಾದಿಸುವ ಕೆಲವು ಮಾರ್ಗಗಳು ಇಲ್ಲಿವೆ.

ವರ್ಚುವಲ್ ಅಸಿಸ್ಟೆಂಟ್
 

ವರ್ಚುವಲ್ ಅಸಿಸ್ಟೆಂಟ್

ವರ್ಚುವಲ್ ಅಸಿಸ್ಟೆಂಟ್‌ಶಿಪ್‌ನಲ್ಲಿ ಕೂಡ ಹಣ ಸಂಪಾದಿಸಬಹುದು. ಇದರಲ್ಲಿ ಮೀಟಿಂಗ್‌ಗಳ ವೇಳಾಪಟ್ಟಿ ತಯಾರಿಸುವುದು, ಗ್ರಾಹಕರು ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕದಲ್ಲಿರುವುದು, ಆದೇಶಗಳನ್ನು ಅನುಸರಿಸುವುದು, ಪವರ್‌ಪಾಯಿಂಟ್ ಪ್ರಸ್ತುತಿಗಳು (ಪವರ್‌ಪಾಯಿಂಟ್ ಪ್ರೆಸೆಂಟೇಶನ್) ಮತ್ತು ಎಕ್ಸೆಲ್ ಶೀಟ್‌ಗಳಂತಹ ವ್ಯವಹಾರ ದಾಖಲೆಗಳನ್ನು ರಚಿಸುವುದು, ಬ್ಲಾಗ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ವಹಿಸುವುದು ಇತ್ಯಾದಿಗಳನ್ನು ಒಳಗೊಂಡಿದೆ.

ವರ್ಚುವಲ್ ಅಸಿಸ್ಟೆಂಟ್‌ಗಳು (ವಿಎಗಳು) ತಮ್ಮ ಗ್ರಾಹಕರ ಬೇಡಿಕೆಗಳನ್ನು ಮನೆಯಲ್ಲೇ ಕುಳಿತು ಬಗೆಹರಿಸುತ್ತಾರೆ ಮತ್ತು ಅವರು ತಮ್ಮ ಕಾರ್ಯ ನಿರ್ವಹಿಸಲು ಬ್ಯುಸಿ ಇದ್ದರೆ ಇವರೇ ಅವರ ವ್ಯವಹಾರದ ಅಂಶಗಳನ್ನು ನಿರ್ವಹಿಸುತ್ತಾರೆ .

ವಿಎ(ವರ್ಚುವಲ್ ಅಸಿಸ್ಟೆಂಟ್) ಆಗಲು ತರಬೇತಿ ಮೂಲಕ ಕೆಲವೊಂದು ಡಿಗ್ರಿ ಅಥವಾ ಅಥವಾ ಬ್ರೀಫಿಂಗ್ ಕೌಶಲ್ಯ ಪಡೆಯಬಹುದು. ನೀವು ಉತ್ತಮ ಸಂವಹನ ಕೌಶಲ್ಯ ಹೊಂದಿದ್ದರೆ ಮತ್ತು ಎಂಎಸ್ ಆಫೀಸ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸುವ ಸಾಮರ್ಥ್ಯ ಹೊಂದಿದ್ದರೆ, ನೀವು ಎಲಾನ್ಸ್‌(Elance)ನಂತಹ ಸೈಟ್‌ಗಳಲ್ಲಿ ಸೈನ್ ಅಪ್ ಮಾಡಬಹುದು. Elance. com ಮತ್ತು Zirtual.com ಗಳಲ್ಲಿ ವಿಎ ಆಗಲು ಕೆಲಸ ಹುಡುಕಬಹುದು.

ಸಂಭಾವ್ಯ ಗಳಿಕೆ: ಗಂಟೆಗೆ 500 ರುಪಾಯಿಯಿಂದ 4,000 ರುಪಾಯಿ

ಭಾಷಾಂತರ ಮಾಡುವುದು (Translator)

ಭಾಷಾಂತರ ಮಾಡುವುದು (Translator)

ನಿಮಗೆ ಒಂದಕ್ಕಿಂತ ಹೆಚ್ಚು ಭಾಷೆಗಳು ತಿಳಿದಿದ್ದರೆ ಹಣ ಸಂಪಾದಿಸಲು ಅತ್ಯಂತ ಸುವರ್ಣಾವಕಾಶಗಳಿವೆ. ಇಂಗ್ಲಿಷ್ ಜೊತೆಗೆ ಇತರೆ ಎರಡು ಮೂರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಅಥವಾ ಬರೆಯುವ ಸಾಮರ್ಥ ಹೊಂದಿದ್ದರೆ ಆ ಮೂಲಕವೂ ಹಣ ಸಂಪಾದಿಸಬಹುದು. ಭಾಷಾಂತರಕ್ಕೆ ಬಹಳ ಅವಕಾಶಗಳಿದ್ದು, ಕಾನೂನು, ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಭಾಷಾಂತರ ಮಾಡುವವರಿಗೆ ಭಾರೀ ಬೇಡಿಕೆ ಇದ್ದು, ಒಳ್ಳೆ ಹಣ ಕೂಡ ಗಳಿಸಬಹುದು.

ನೀವು ವಿವಿಧ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಸಾಬೀತುಪಡಿಸಿದರೆ ಸಾಕಷ್ಟು ಅಂತರಾಷ್ಟ್ರೀಯ ವ್ಯವಹಾರಗಳು, ವಿದ್ಯಾಂಸರು ಮತ್ತು ಲೇಖಕರು ನಿಮ್ಮ ಸೇವೆಗಳನ್ನು ಪಡೆದು ಅವರ ವಿಷಯವನ್ನು ಅನುವಾದ ಮಾಡಿಸಲು ಬಯಸುತ್ತಾರೆ. ಈ ಮೂಲಕ ನೀವು ಹಣ ಮಾಡಬಹುದು. ಗಳಿಕೆಯನ್ನು ಪ್ರಾರಂಭಿಸಲು, Fiverr.com ಅಥವಾ Upwork.com ನಂತಹ ಜನಪ್ರಿಯ ಫ್ರೀಲ್ಯಾನ್ಸಿಂಗ್ ಸೈಟ್‌ನಲ್ಲಿ ನೋಂದಾಯಿಸಿ, ನೀವು ಹಿಡಿತ ಸಾಧಿಸಿರುವ ಭಾಷೆಗಳನ್ನು ಪಟ್ಟಿ ಮಾಡಿ.

ಸಂಭಾವ್ಯ ಗಳಿಕೆ: ಪ್ರತಿ ಪದಕ್ಕೆ 1 ರುಪಾಯಿ. ಇದು ಕೆಲವು ಭಾಷೆಗಳಿಗೆ 10 ರುಪಾಯಿವರೆಗೂ ಇದೆ.

ಜೀವನದಲ್ಲಿ ಸಕ್ಸಸ್ ಕಾಣಲು ಮೊದಲು ಈ 6 ವಿಚಾರಗಳನ್ನು ನಿಮ್ಮ ತಲೆಯಿಂದ ತೆಗೆದು ಹಾಕಿ

ಯೂಟ್ಯೂಬ್ ವಿಡಿಯೋ
 

ಯೂಟ್ಯೂಬ್ ವಿಡಿಯೋ

ಯೂಟ್ಯೂಬ್ ಜನಪ್ರಿಯವಾದ ವಿಡಿಯೋ ತಾಣವಾಗಿದ್ದು, ವಿಡಿಯೋ ಮಾಡುವುದರ ಜೊತೆಗೆ ಹಣಗಳಿಕೆಗೂ ಅವಕಾಶ ಒದಗಿಸುತ್ತದೆ. ನೀವು ಕ್ಯಾಮೆರಾ ಫೇಸ್ ಮಾಡಿ ಉತ್ತಮ ಅಭ್ಯಾಸವಿದ್ದರೆ, ಯಾವುದೇ ಅಂಜಿಕೆಯಿಲ್ಲದೆ ಕ್ಯಾಮೆರಾ ಎದುರು ಮಾತನಾಡುತ್ತೀರಿ ಎಂದಾದರೆ ಉತ್ತಮ ವಿಚಾರಗಳನ್ನು ಇಟ್ಟುಕೊಂಡು, ಜನರಿಗೆ ಆಕರ್ಷಣೆಯಾಗುವಂತಹ, ಆಸಕ್ತಿ ಮೂಡಿಸುವಂತಹ ವಿಡಿಯೋಗಳನ್ನು ರಚಿಸಬಹುದು.

ಆದರೆ ಪ್ರಮುಖವಾಗಿ ನೀವು ವೀಡಿಯೊಗಳನ್ನು ಮಾಡಲು ಮತ್ತು ಪ್ರಾರಂಭಿಸಲು ಬಯಸುವ ವರ್ಗ ಅಥವಾ ವಿಷಯವನ್ನು ಗುರುತಿಸಿ. ಅದರಲ್ಲೂ ನೀವು ಮಾಡುವ ವಿಡಿಯೋ ವಿಷಯವು ಬಹಳಷ್ಟು ಜನರಿಗೆ ಆಸಕ್ತಿಯುಂಟು ಮಾಡುವ ವಿಷಯವೇ ಎಂದು ಖಚಿತಪಡಿಸಿಕೊಳ್ಳಿ.

ಅಡುಗೆ ಮಾಡುವುದರಿಂದ ಹಿಡಿದು ರಾಜಕೀಯ ಚರ್ಚೆಗಳವರೆಗೆ ಎಲ್ಲವೂ ಇದೀಗ ಯೂಟ್ಯೂಬ್ ಮೂಲಕವೇ ಜನರನ್ನು ಆಕರ್ಷಿಸುತ್ತದೆ. ನೀವು ಯೂಟ್ಯೂಬ್ ಚಾನೆಲ್ ಆರಂಭಿಸಿ ಉತ್ತಮ ಪ್ರಾಡಕ್ಟ್‌ಗಳನ್ನು ರಚಿಸಿ ಜನರನ್ನು ಆಕರ್ಷಿಸಿದರೆ ಚಂದಾದಾರರ(ಸಬ್‌ಸ್ಕ್ರೈಬರ್ಸ್) ಸಂಖ್ಯೆ ಹೆಚ್ಚಾಗುತ್ತದೆ. ಹೀಗೆ ಮಾಡಿದಲ್ಲಿ ನಿಮ್ಮ ಗಳಿಕೆಯ ಸಾಮರ್ಥ್ಯವೂ ಹೆಚ್ಚಾಗುತ್ತದೆ.

ಸಂಭಾವ್ಯ ಗಳಿಕೆ: ಕೇವಲ ವೀಕ್ಷಣೆಯಿಂದ ಹಣ ಮಾಡಲು ಸಾಧ್ಯವಿಲ್ಲ. ನಿಮ್ಮ ವಿಡಿಯೋ ವೀಕ್ಷಣೆಯ ಜೊತೆಗೆ ಜಾಹೀರಾತುಗಳನ್ನು ಕ್ಲಿಕ್ ಮಾಡಿದಲ್ಲಿ 1,000 ವೀಕ್ಷಣೆಗೆ ಸರಾಸರಿ 1 ಡಾಲರ್ ಸಂಪಾದಿಸಬಹುದು. ಈ ವೀಕ್ಷಣೆಯನ್ನು ಹೆಚ್ಚಿಸದಿದ್ದಲ್ಲಿ 1 ಮಿಲಿಯನ್ ವೀಕ್ಷಣೆಗೆ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಹಣಗಳಿಸಬಹುದು.

ಯೂಟ್ಯೂಬ್ ಮೂಲಕವೇ 185 ಕೋಟಿ ಆದಾಯಗಳಿಸುತ್ತಾನೆ ಈ 8 ವರ್ಷದ ಬಾಲಕ

ವೆಬ್ ಡೆವಲಪರ್

ವೆಬ್ ಡೆವಲಪರ್

ಕೋಡಿಂಗ್ ಮತ್ತು ವೆಬ್ ವಿನ್ಯಾಸದ ಬಗ್ಗೆ ನಿಮಗೆ ಸ್ವಲ್ಪ ತಿಳುವಳಿಕೆ ಇದೆಯೇ? ಹಾಗಿದ್ರೆ ನೀವು ವೆಬ್ ಡೆವಲಪರ್ ಆಗಿ ಮನೆಯಿಂದ ಸುಲಭವಾಗಿ ಕೆಲಸ ಮಾಡಬಹುದು. ನೀವು ಈ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಅನನುಭವಿಗಳಾಗಿದ್ದರೂ ಸಹ, ಯಾವುದೇ ಕೆಲಸ ಸಿಗದಿದ್ದರೆ ಆನ್‌ಲೈನ್‌‌ನಲ್ಲೇ ನೀವು ಹಣ ಮಾಡಬಹುದು. ಇದಕ್ಕಾಗಿ ಸಹಾಯ ಮಾಡುವ ಡಜನ್‌ಗಟ್ಟಲೆ ಸುಲಭ ಆನ್‌ಲೈನ್ ಟ್ಯುಟೋರಿಯಲ್ ಗಳನ್ನು ನೀವು ಕಾಣಬಹುದು. ವೆಬ್ ಅಭಿವೃದ್ಧಿಯನ್ನು ಸಾಮಾನ್ಯವಾಗಿ ಕಂಪನಿಗಳು ಹೊರಗುತ್ತಿಗೆ ನೀಡುತ್ತವೆ. ಹೀಗಾಗಿ ಸುಲಭವಾಗಿ ಕೆಲಸ ಗಳಿಸಬಹುದು.

ಸಂಭಾವ್ಯ ಗಳಿಕೆ: ಒಂದೇ ಯೋಜನೆಯು ನಿಮಗೆ 20,000 ರಿಂದ 1 ಲಕ್ಷ ರುಪಾಯಿವರೆಗೂ ಸಂಪಾದಿಸುವ ಅವಕಾಶ ಒದಗಿಸುತ್ತದೆ.

ನೀವು ಅತೀ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಬೆಸ್ಟ ಬಿಸಿನೆಸ್ ಐಡಿಯಾ

ಆನ್‌ಲೈನ್ ಟ್ಯುಟೋರಿಯಲ್

ಆನ್‌ಲೈನ್ ಟ್ಯುಟೋರಿಯಲ್

ನೀವು ಈಗಾಗಲೇ ಬೋಧನಾ ಅನುಭವವಿದ್ದರೆ ಅಥವಾ ಯಾವುದಾದರೂ ನಿರ್ದಿಷ್ಟ ವಿಷಯದಲ್ಲಿ ಚೆನ್ನಾಗಿ ಪರಿಣಿತಿ ಹೊಂದಿದ್ದರೆ ಆನ್‌ಲೈನ್‌ನಲ್ಲೇ ಬೋದಿಸುವ ಮೂಲಕ ಹಣ ಗಳಿಸಬಹುದು. ಉದಾಹರಣೆಗೆ ನೀವು ಇಂಗ್ಲೀಷ್ ಭಾಷೆಯಲ್ಲಿ ಪರಿಣಿತಿ ಹೊಂದಿದ್ದರೆ ಆನ್‌ಲೈನ್‌ನಲ್ಲೇ ಇಂಗ್ಲೀಷ್ ಕಲಿಸುವುದು. ಗಣಿತದಲ್ಲಿ ಹೆಚ್ಚು ಹಿಡಿತವಿದ್ದರೆ ಮಕ್ಕಳಿಗೆ ಆನ್‌ಲೈನ್ ಮೂಲಕವೇ ಗಣಿತವನ್ನು ಹೇಳಿಕೊಡಬಹುದು.

ಆನ್‌ಲೈನ್ ಬೋಧಕರಾಗಿ ಕೆಲಸ ಮಾಡಲು MyPrivateTutor.com, BharatTutor.com, tutorindia.net ನಂತಹ ವೆಬ್‌ಸೈಟ್‌ಗಳಲ್ಲಿ ಸೈನ್ ಅಪ್ ಮಾಡಿ, ನೀವು ಕಲಿಸಲು ಬಯಸುವ ವಿಷಯಗಳು ಅಥವಾ ತರಗತಿಗಳು, ನಿಮಗೆ ಎಷ್ಟು ಅನುಭವವಿದೆ, ನಿಮ್ಮ ಅರ್ಹತೆಗಳು ಯಾವುವು ಎಂಬುದನ್ನು ಪಟ್ಟಿ ಮಾಡುವ ಪ್ರೊಫೈಲ್ ಅನ್ನು ರಚಿಸಿ.

ಸಂಭಾವ್ಯ ಗಳಿಕೆ: ಆರಂಭದಲ್ಲಿ ಗಂಟೆಗೆ ಸುಮಾರು300- 500 ರುಪಾಯಿವರೆಗೂ ಪಡೆಯಬಹುದು. ನಿಮ್ಮ ಅನುಭವ ಹೆಚ್ಚಿದಂತೆ , ವಿಷಯ ಪ್ರಬಲವಾಗಿದ್ದರೆ ಪ್ರತಿ ಗಂಟೆಗೆ 30ರಿಂದ 60 ಡಾಲರ್ ತನಕ ಸಂಪಾದಿಸಬಹುದು.

English summary

5 Online Jobs That Offer Up To Rs 4000 Per Hour

The world of internet brings plenty of opportunities that let you work from home without compromising your earning potential. Here are a few options you can consider.
Story first published: Tuesday, February 11, 2020, 15:33 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more