For Quick Alerts
ALLOW NOTIFICATIONS  
For Daily Alerts

ಐದು ವರ್ಷದಲ್ಲಿ ಏನೆಲ್ಲ ಆಯಿತು: ಬಜೆಟ್ ಗೂ ಮುಂಚೆ ಹಿಂದೆ ತಿರುಗಿ ನೋಡಿ

|

ಹತ್ತು ವರ್ಷದ ಆರ್ಥಿಕತೆಯ ಏರಿಳಿತದ ಹಾದಿಯನ್ನು ಕಂಡಿದ್ದೇವೆ. ಈ ದಶಕದ ಮೊದಲ ಬಜೆಟ್ ನ ಎದುರು ನೋಡುತ್ತಿದ್ದೇವೆ. ಸದ್ಯದ ಆರ್ಥಿಕ ಬೆಳವಣಿಗೆಯು ಕಳೆದ ಹನ್ನೆರಡು ವರ್ಷಗಳಲ್ಲೇ ತೀರಾ ದುರ್ಬಲವಾಗಿದೆ. ಆಹಾರ ಬೆಲೆಗಳ ಏರಿಕೆಯು ಹಣದುಬ್ಬರ ದರವನ್ನು ಆರು ವರ್ಷದಲ್ಲೇ ಗರಿಷ್ಠ ಮಟ್ಟವನ್ನು ತಲುಪುವಂತೆ ಮಾಡಿದೆ.

Economic Survey Highlights: ಸ್ಟಾರ್ಟ್ ಅಪ್ ಸಂಸ್ಥೆಗಳಲ್ಲಿ ಏರಿಕೆ, ಉದ್ಯೋಗ ಬಿಕ್ಕಟ್ಟು ಪರಿಹರಿಸುವ ಮಾರ್ಗEconomic Survey Highlights: ಸ್ಟಾರ್ಟ್ ಅಪ್ ಸಂಸ್ಥೆಗಳಲ್ಲಿ ಏರಿಕೆ, ಉದ್ಯೋಗ ಬಿಕ್ಕಟ್ಟು ಪರಿಹರಿಸುವ ಮಾರ್ಗ

ಈ ಮಧ್ಯೆ ಕೇಂದ್ರದ ಆದಾಯ ಸಂಗ್ರಹದ ಗುರಿಯು ದಶಕದಲ್ಲೇ ಕನಿಷ್ಠ್ ಮಟ್ಟ ತಲುಪಿದೆ. ಈ ಆರ್ಥಿಕ ವರ್ಷದಲ್ಲಿ ನಿವ್ವಳ ತೆರಿಗೆ ಸಂಗ್ರಹವು ಇಪ್ಪತ್ತೈದು ಪರ್ಸೆಂಟ್ ಏರಿಕೆಯ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ನವೆಂಬರ್ ತನಕ ಎರಡೂವರೆ ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚಾಗಿದೆ. ಒಂದು ವೇಳೆ ಆರ್ಥಿಕ ವರ್ಷದ ಕೊನೆಯ ನಾಲ್ಕು ತಿಂಗಳು ತೆರಿಗೆ ಸಂಗ್ರಹ ಹೆಚ್ಚಾದರೂ ಕೊರತೆಯನ್ನು ತುಂಬಲು ಸಾಧ್ಯವಿಲ್ಲ.v

ಜಿಡಿಪಿ ದರವು 9ರಿಂದ 10 ಪರ್ಸೆಂಟ್ ನಲ್ಲಿ ಪ್ರಗತಿ ಸಾಧಿಸಬೇಕು

ಜಿಡಿಪಿ ದರವು 9ರಿಂದ 10 ಪರ್ಸೆಂಟ್ ನಲ್ಲಿ ಪ್ರಗತಿ ಸಾಧಿಸಬೇಕು

ಈಗಲೂ ಸರ್ಕಾರದ ಕಡೆಯಿಂದ ಕೇಳಿಬರುತ್ತಿರುವುದು ಮುಂದಿನ ನಾಲ್ಕು ವರ್ಷದಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವ ಗುರಿ. ಆದರೆ ಸದ್ಯಕ್ಕೆ ಭಾರತದ ಆರ್ಥಿಕತೆಯ ಗಾತ್ರ 2.7 ಟ್ರಿಲಿಯನ್ ಡಾಲರ್ ಇದೆ. ಒಂದು ವೇಳೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಬೇಕೆಂದರೆ, ಜಿಡಿಪಿ ದರವು 9ರಿಂದ 10 ಪರ್ಸೆಂಟ್ ನಲ್ಲಿ ಪ್ರಗತಿ ಸಾಧಿಸಬೇಕು. ಈ ಆರ್ಥಿಕ ಸವಾಲನ್ನು ಹಣದ ಕೊರತೆಯಿರುವ ಸರ್ಕಾರವು ಹೇಗೆ ಗ್ರಾಹಕರ ವಿಶ್ವಾಸವನ್ನು ಮತ್ತೆ ಗಳಿಸುತ್ತದೆ, ನಲವತ್ತೈದು ವರ್ಷದಲ್ಲೇ ಗರಿಷ್ಠ ಮಟ್ಟದಲ್ಲಿ ಇರುವ ನಿರುದ್ಯೋಗ ಪ್ರಮಾಣವನ್ನು ಹೇಗೆ ಸರಿ ಮಾಡುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಹಾಗೇ ಉಳಿದಿವೆ.

ಜಿಡಿಪಿಗೆ ಹೊಂದಿಕೊಂಡಂತೆ ವಿತ್ತೀಯ ಕೊರತೆ

ಜಿಡಿಪಿಗೆ ಹೊಂದಿಕೊಂಡಂತೆ ವಿತ್ತೀಯ ಕೊರತೆ

ಇದೆಲ್ಲ ಇರಲಿ ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತದ ಪಾಲಿಗೆ 2014 ರಿಂದ 2019ರ ಯಾವ ಅಂಶಗಳು, ಯಾವ ಅಂಕಿಯನ್ನು ತೋರಿಸುತ್ತಿವೆ ಎಂಬುದರ ವಿವರ ಇಲ್ಲಿದೆ.

ವಿತ್ತೀಯ ಕೊರತೆ

ಆರ್ಥಿಕ ವರ್ಷ 2014: 4.5%

ಆರ್ಥಿಕ ವರ್ಷ 2015: 4.1%

ಆರ್ಥಿಕ ವರ್ಷ 2016: 3.9%

ಆರ್ಥಿಕ ವರ್ಷ 2017: 3.5%

ಆರ್ಥಿಕ ವರ್ಷ 2018: 3.2%

ಆರ್ಥಿಕ ವರ್ಷ 2019: 3.3% (ಅಂದಾಜು)

 

ವಾರ್ಷಿಕ ಸರಾಸರಿ ಗ್ರಾಹಕ ದರ ಸೂಚ್ಯಂಕ 2014 ರಿಂದ 2019

ವಾರ್ಷಿಕ ಸರಾಸರಿ ಗ್ರಾಹಕ ದರ ಸೂಚ್ಯಂಕ 2014 ರಿಂದ 2019

2019: 7.49%

2018: 4.85%

2017: 4.2%

2016: 4.97%

2015: 5.88%

2014: 6.37%

ವಾರ್ಷಿಕ ಜಿಡಿಪಿ ಪ್ರಗತಿ

ವಾರ್ಷಿಕ ಜಿಡಿಪಿ ಪ್ರಗತಿ

2020 ಮುಂಚಿತವಾಗಿ ಅಂದಾಜು: 5%

2019: 5%

2018: 6.8%

2017: 7.1%

2016: 8.2%

2015: 8.0%

2014: 7.41%

 

English summary

5 Year Trending Of Economic Indicators Of Country

Union Budget 2020: Here is the 5 year trending of various economic indicators.
Story first published: Friday, January 31, 2020, 16:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X