For Quick Alerts
ALLOW NOTIFICATIONS  
For Daily Alerts

ಆ್ಯಪಲ್ ಬಳಕೆದಾರರಿಗೆ ಮುಂದಿನ ವಾರದಿಂದ 5ಜಿ ಸೇವೆ ಲಭ್ಯ

|

ಭಾರತದಲ್ಲಿ ಈಗಾಗಲೇ 5ಜಿ ಸೇವೆ ಆರಂಭವಾಗಿದೆ. ಹಲವಾರು ಟೆಲಿಕಾಂ ಸಂಸ್ಥೆಗಳು ತಮ್ಮ 5ಜಿ ಸೇವೆಗೆ ಅಪ್‌ಗ್ರೇಡ್ ಮಾಡಿಸಿಕೊಳ್ಳಲು ತಮ್ಮ ಬಳಕೆದಾರರಿಗೆ ಮೊಬೈಲ್‌ಗೆ ನೋಟಿಫಿಕೇಶ್‌ನಗಳನ್ನು ಕಳುಹಿಸಿದೆ. ಈ ನಡುವೆ ಮುಂದಿನ ವಾರದಲ್ಲಿ ಭಾರತದಲ್ಲಿ ಆ್ಯಪಲ್ ಬಳಕೆದಾರರಿಗೆ 5ಜಿ ಸೇವೆ ಲಭ್ಯವಾಗಲಿದೆ.

ಆ್ಯಪಲ್ ತನ್ನ iOS 16ಬೆಟಾ ಸಾಫ್ಟ್‌ವೇರ್‌ ಅಪ್‌ಡೇಟ್ ಅನ್ನು ಮಾಡಿದ ಬೆನ್ನಲ್ಲೇ 5ಜಿ ಸೇವೆ ಲಭ್ಯವಾಗಲಿದೆ. ಐಫೋನ್ 14, ಐಫೋನ್ 13, ಐಫೋನ್ 12, ಐಫೋನ್ SE (3rd generation) ಮೋಡಲ್‌ಗಳಲ್ಲಿ ಏರ್‌ಟೆಲ್ ಹಾಗೂ ರಿಲಯನ್ಸ್ ಜಿಯೋ ಬಳಕೆದಾರರು 5ಜಿ ಸೇವೆಯನ್ನು ಪಡೆಯಲು ಆ್ಯಪಲ್‌ನ ಬೆಟಾ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಬಳಕೆ ಮಾಡಬಹುದು.

5G ಪರಿಣಾಮ: 12 ತಿಂಗಳಲ್ಲೇ ಟೆಲಿಕಾಂ ಉದ್ಯೋಗ ಶೇ.33.7 ಏರಿಕೆ5G ಪರಿಣಾಮ: 12 ತಿಂಗಳಲ್ಲೇ ಟೆಲಿಕಾಂ ಉದ್ಯೋಗ ಶೇ.33.7 ಏರಿಕೆ

ಸೈನ್‌ ಅಪ್‌ ಪ್ರೋಸೆಸ್ ವೇಳೆ ಆ್ಯಪಲ್‌ನ ಬೆಟಾ ಸಾಫ್ಟ್‌ವೇರ್ ಪ್ರೋಗ್ರಾಂ ಅಗ್ರಿಮೆಂಟ್‌ಗೆ ಅನುಮೋದನೆ ನೀಡಿದ, ವ್ಯಾಲಿಡ್ ಆ್ಯಪಲ್ ಐಡಿ ಹೊಂದಿರುವವರಿಗೆ ಆ್ಯಪಲ್‌ನ ಬೆಟಾ ಸಾಫ್ಟ್‌ವೇರ್ ಪ್ರೋಗ್ರಾಂ ಬಳಕೆ ಮಾಡಲು ಸಾಧ್ಯವಾಗಲಿದೆ. ಇನ್ನು ಇದು ಆ್ಯಪಲ್ ಐಫೋನ್ ಬಳಕೆದಾರರಿಗೆ ನೂತನ ಫೀಚರ್‌ಗಳನ್ನು ಕೂಡಾ ಪರಿಚಯಿಸುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 ಈ ಸಾಫ್ಟ್‌ವೇರ್‌ಗೆ ಪಾವತಿ ಮಾಡಬೇಕಾಗುತ್ತದೆಯೇ?

ಈ ಸಾಫ್ಟ್‌ವೇರ್‌ಗೆ ಪಾವತಿ ಮಾಡಬೇಕಾಗುತ್ತದೆಯೇ?

ಇನ್ನು ಆ್ಯಪಲ್‌ನ ಬೆಟಾ ಸಾಫ್ಟ್‌ವೇರ್ ಪ್ರೋಗ್ರಾಂನ ಸದಸ್ಯರಾಗಿರುವ ಆ್ಯಪಲ್‌ ಐಫೋನ್ ಬಳಕೆದಾರರು ಐಫೋನ್, ಐಪಾಡ್, ಮ್ಯಾಕ್, ಆ್ಯಪಲ್‌ ಟಿವಿ, ಹೋಮ್‌ಪ್ಯಾಡ್ ಮಿನಿ ಅಥವಾ ಆ್ಯಪಲ್‌ ವಾಚ್ ಆಕ್ಸಸ್ ಪಡೆಯಬಹುದು. ಈ ಸಾಫ್ಟ್‌ವೇರ್ ಹಾಗೂ ಪ್ರೋಗ್ರಾಂ ಎರಡೂ ಕೂಡಾ ಆ್ಯಪಲ್‌ ಬಳಕೆದಾರರಿಗೆ ಉಚಿತ ಎಂದು ಆ್ಯಪಲ್‌ ಸ್ಪಷ್ಟಣೆ ನೀಡಿದೆ. ಭಾರತದಲ್ಲಿ ಅಕ್ಟೋಬರ್ 1ರಂದು 5ಜಿ ಸೇವೆಯನ್ನು ಆರಂಭ ಮಾಡಲಾಗಿದೆ. ಈ ಹಿಂದೆ ಅಕ್ಟೋಬರ್‌ನಲ್ಲಿ ಆ್ಯಪಲ್‌ ಹೇಳಿಕೆಯೊಂದನ್ನು ನೀಡಿದೆ. "ಐಫೋನ್ ಬಳಕೆದಾರರಿಗೆ 5ಜಿ ಸೇವೆಯ ಉತ್ತಮ ಅನುಭವವನ್ನು ನೀಡುವ ನಿಟ್ಟಿನಲ್ಲಿ ನಾವು ದೇಶದ ಎಲ್ಲ ನಮ್ಮ ಪಾಲುದಾರ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲಿಯೇ ಆ್ಯಪಲ್‌ ಐಫೋನ್ ಬಳಕೆದಾರರಿಗೆ 5ಜಿ ಸೇವೆ ಪಡೆಯಲು ಸಾಧ್ಯವಾಗಲಿದೆ. ನೆಟ್‌ವರ್ಕ್ ವ್ಯಾಲಿಡೇಶನ್ ಹಾಗೂ ಕ್ವಾಲಿಟಿ ಟೆಸ್ಟಿಗ್ ನಡೆದ ಬಳಿಕ ಈ ಸೇವೆ ಜಾರಿಗೆ ಬರಲಿದೆ," ಎಂದು ತಿಳಿಸಿತ್ತು.

5G in India : 8 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ ಆರಂಭ, ಯಾವೆಲ್ಲ ನಗರ, ಇಲ್ಲಿದೆ ಪ್ರಮುಖ ಮಾಹಿತಿ5G in India : 8 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ ಆರಂಭ, ಯಾವೆಲ್ಲ ನಗರ, ಇಲ್ಲಿದೆ ಪ್ರಮುಖ ಮಾಹಿತಿ

 ಜಿಯೋ, ಏರ್‌ಟೆಲ್ 5ಜಿ ಸೇವೆ

ಜಿಯೋ, ಏರ್‌ಟೆಲ್ 5ಜಿ ಸೇವೆ

ಹಾಗೆಯೇ ಡಿಸೆಂಬರ್ ವೇಳೆಗೆ ಸೇವೆ ಲಭ್ಯವಾಗಲಿದೆ ಎಂದು ಹೇಳಿತ್ತು. ಆದರೆ ಈಗ ಮುಂದಿನ ವಾರದಲ್ಲಿಯೇ ಸೇವೆ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಏರ್‌ಟೆಲ್ ಪ್ರಸ್ತುತ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದಾರಾಬಾದ್, ಸಿಲಿಗುರಿ, ನಾಗ್ಪುರ, ವಾರಾಣಾಸಿಯಲ್ಲಿ 5ಜಿ ಸೇವೆಯನ್ನು ಆರಂಭ ಮಾಡಿದೆ. 2023ರ ವೇಳೆಗೆ ದೇಶದ ಎಲ್ಲ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದೆ. ಇನ್ನು ರಿಲಯನ್ಸ್ ಜಿಯೋ ತನ್ನ 5ಜಿ ಸೇವೆಯನ್ನು ಪ್ರಸ್ತುತ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈನಲ್ಲಿ ಹೊಂದಿದೆ. ದೀಪಾವಳಿ ಬೆನ್ನಲ್ಲೇ, ಈ ವರ್ಷಕ್ಕೂ ಮುನ್ನ ದೇಶದಾದ್ಯಂತ 5ಜಿ ಸೇವೆಯನ್ನು ಆರಂಭ ಮಾಡಲಾಗುತ್ತದೆ ಎಂದು ಹೇಳಿದೆ. ಅದಾದ ಬಳಿಕ ಡಿಸೆಂಬರ್ 2023ರ ಒಳಗೆ ದೇಶದಾದ್ಯಂತ 5ಜಿ ಸೇವೆಯನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದೆ.

 5ಜಿ ಎಂದರೇನು?

5ಜಿ ಎಂದರೇನು?

ದೇಶದಲ್ಲಿ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದ್ದು, ಜಿಯೋ ಅತಿ ಹೆಚ್ಚು ಬಿಡ್‌ ಮಾಡಿದೆ. ಏರ್‌ಟೆಲ್ ಮತ್ತು ವೊಡಾಫೋನ್ ನಂತರದ ಸ್ಥಾನದಲ್ಲಿವೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ 5ಜಿ ಸ್ಪೆಕ್ಟ್ರಮ್‌ನ ಹರಾಜಿನಲ್ಲಿ ಭಾಗಿಯಾಗಿದೆ. ಅದಾದ ಬಳಿಕ 5ಜಿ ಸೇವೆಯನ್ನು ಭಾರತದಲ್ಲಿ ಅಕ್ಟೋಬರ್ 1ರಂದು ಜಾರಿಯೂ ಮಾಡಲಾಗಿದೆ. 5ಜಿಯಲ್ಲಿ 100MHz ಅತೀ ಕಡಿಮೆ ಬ್ಯಾಂಡ್ ಆಗಿದ್ದು, 2.3GHz ಮಧ್ಯಮ ಬ್ಯಾಂಡ್ ಆಗಿದೆ. ಅದಕ್ಕಿಂತ ಅಧಿಕ ಬ್ಯಾಂಡ್‌ಗಳು ಕೂಡಾ ಇದೆ. ಮಧ್ಯಮ ಬ್ಯಾಂಡ್‌ನಲ್ಲಿಯೇ ಉತ್ತಮ ನೆಟ್‌ವರ್ಕ್ ಲಭ್ಯವಾಗಲಿದೆ.

5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್‌ಗಿಂತಲೂ ಸ್ಪೀಡ್ ಆಗಿರುತ್ತದೆ. ನೀವು ಯಾವುದೇ ಸಿನಿಮಾ, ವಿಡಿಯೋ, ಆಪ್ ಡೌನ್‌ಲೋಡ್ ಅನ್ನು ಶೀಘ್ರವಾಗಿ ಮಾಡಲು ಸಾಧ್ಯವಾಗಲಿದೆ. ಇದು ಪ್ರತಿ ಸೆಕೆಂಡಿಗೆ 10 ಜಿಬಿ (gigabyte) ವೇಗದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಭಾರತದಲ್ಲಿ ಪ್ರಸ್ತುತವಿರುವ 4ಜಿ ಡೌನ್‌ಲೋಡ್‌ ಸ್ಪೀಡ್‌ಗಿಂತ ನೂರು ಪಟ್ಟು ಅಧಿಕ ವೇಗವನ್ನು 5ಜಿ ನೆಟ್‌ವರ್ಕ್ ಹೊಂದಿರಲಿದೆ. ಪ್ರಸ್ತುತ 4ಜಿಯಲ್ಲಿ 21 Mbps (megabits per second) ವೇಗವಿದೆ ಎಂದು ಭಾರತದ ಟೆಲಿಕಾಂ ರೆಗ್ಯೂಲೇಟರ್ ಅಥಾರಿಟಿ ಹೇಳಿದೆ.

English summary

5G in India: Apple Users in India to Get 5G from Next Week

5G in India: Apple will roll out the much-awaited software upgrades for 5G network in India for its users from next week.
Story first published: Thursday, November 3, 2022, 16:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X