For Quick Alerts
ALLOW NOTIFICATIONS  
For Daily Alerts

ಅ.1ರಿಂದ 5ಜಿ ಮೊಬೈಲ್ ಸೇವೆ ಆರಂಭ, ಏನು? ಎತ್ತ? ಎಲ್ಲಿ?

|

ದೇಶದಲ್ಲಿ ಶೀಘ್ರದಲ್ಲೇ 5ಜಿ ಮೊಬೈಲ್ ಸೇವೆಯನ್ನು ಆರಂಭ ಮಾಡಲಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾತಂತ್ರೋತ್ಸವದ ದಿನದ ಭಾಷಣದಲ್ಲಿ ಘೋಷಿಸಿದ್ದರು. ಈಗಾಗಲೇ ದೇಶದಲ್ಲಿ 5ಜಿ ಸ್ಪೆಕ್ಟ್ರಮ್‌ನ ಹರಾಜು ಮುಗಿದು ಟೆಲಿಕಾಂ ಕಂಪನಿಗಳಿಗೆ ತರಂಗಗುಚ್ಛಗಳು ಹಂಚಿಕೆಯಾಗಿವೆ. ಪ್ರಮುಖ ಟೆಲಿಕಾಂ ಸಂಸ್ಥೆಗಳು 5ಜಿ ಜಾರಿಗೆ ತರಲು ಸಜ್ಜಾಗಿವೆ. ಈ ಬಗ್ಗೆ ವಿವರ ಇಲ್ಲಿದೆ..

ಈ ನಡುವೆ ಭಾರತದಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನವು ಸೆಮಿ ಕಂಡಕ್ಟರ್, 5ಜಿ ನೆಟ್‌ವರ್ಕ್, ಒಪ್ಟಿಕಲ್ ಫೈಬರ್ ನೆಟ್‌ವರ್ಕ್ ಎಂಬುವುದು ಪ್ರಮುಖವಾಗಿ ಮೂರು ವಿಭಾಗಗಳಾದ ಶಿಕ್ಷಣ, ಆರೋಗ್ಯ ಕ್ಷೇತ್ರ, ಸಾಮಾನ್ಯ ಜನರ ಜೀವನದಲ್ಲಿ ಬಲವನ್ನು ತುಂಬಿದೆ. ತಳಮಟ್ಟದಿಂದ ಭಾರತದ ಕಾರ್ಖಾನೆಗಳ ಬೆಳವಣಿಗೆ ಆಗಲಿದೆ ಎಂಬ ಭರವಸೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.

ಇದಾದ ಟೆಲಿಕಾಂ ಇಲಾಖೆಯು ಎಲ್ಲಾ ಪ್ರಮುಖ ಟೆಲಿಕಾಂ ಸಂಸ್ಥೆಗಳಿಗೆ 5ಜಿ ಜಾರಿಗೆ ತರುವ ಬಗ್ಗೆ ಸೂಚನೆ ನೀಡಿತ್ತು. ಅದರಂತೆ ಅಕ್ಟೋಬರ್ 1ರಂದು ಭಾರತ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ.

ಭಾರತ ಮೊಬೈಲ್ ಕಾಂಗ್ರೆಸ್ ಸಮ್ಮೇಳನ

ಭಾರತ ಮೊಬೈಲ್ ಕಾಂಗ್ರೆಸ್ ಸಮ್ಮೇಳನ

ನಾಲ್ಕು ದಿನಗಳ ಕಾಲ ನಡೆಯುವ ಭಾರತ ಮೊಬೈಲ್ ಕಾಂಗ್ರೆಸ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಪ್ರಮುಖ ಟೆಲಿಕಾಂ ಪೂರೈಕೆದಾರರು ತಮ್ಮ 5G ಯೋಜನೆಗಳನ್ನು ಪ್ರಸ್ತುತಪಡಿಸಲಿವೆ.

ದೂರಸಂಪರ್ಕ ಇಲಾಖೆ (DoT) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಜಂಟಿಯಾಗಿ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC), ಏಷ್ಯಾದ ಪ್ರಮುಖ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ಕಾರ್ಯಕ್ರಮ(COAI)ಗಳಲ್ಲಿ ಒಂದಾಗಿದೆ.

ರಿಲಯನ್ಸ್ 5ಜಿ ಸೇವೆ

ರಿಲಯನ್ಸ್ 5ಜಿ ಸೇವೆ

"ಎಲ್ಲಾ ನಗರಗಳಲ್ಲಿ, ತಾಲೂಕುಗಳಲ್ಲಿ 2023ರ ಡಿಸೆಂಬರ್ ಒಳಗಾಗಿ ಜಿಯೋ 5ಜಿ ಸೇವೆಯನ್ನು ಆರಂಭ ಮಾಡಲಿದೆ. ಅದಕ್ಕೂ ಮುನ್ನ ಅಕ್ಟೋಬರ್‌ 22ರಿಂದ ಆರಂಭವಾಗುವ ದೀಪಾವಳಿಯ ಒಳಗೆ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ 5ಜಿ ಸೇವೆ ಆರಂಭವಾಗಲಿದೆ," ಎಂದು 45ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ.

ಗುರುಗ್ರಾಮ, ಬೆಂಗಳೂರು, ಚಂಡೀಗಢ, ಜಮ್‌ನಗರ, ಅಹಮದಾಬಾದ್, ಹೈದಾರಾಬಾದ್, ಲಕ್ನೋ, ಪುಣೆ, ಗಾಂಧಿನಗರದಲ್ಲಿಯೂ ಜಿಯೋ 5ಜಿ ನೆಟ್‌ವರ್ಕ್ ಅನ್ನು ಆರಂಭ ಮಾಡುವ ಸಾಧ್ಯತೆ ಇದೆ. ಇತ್ತೀಚೆಗೆ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದ್ದು ಅದರಲ್ಲಿ ಜಿಯೋ ಮೇಲುಗೈ ಸಾಧಿಸಿದೆ.

5G ಶೇ 20-30 ಪಟ್ಟು ಅಧಿಕ ವೇಗ

5G ಶೇ 20-30 ಪಟ್ಟು ಅಧಿಕ ವೇಗ

ಭಾರ್ತಿ ಏರ್‌ಟೆಲ್ ಸಿಇಒ ಗೋಪಾಲ್ ವಿಠಲ್ ಗ್ರಾಹಕರಿಗೆ ನೀಡಿದ ಸಂವಹನದಲ್ಲಿ 4G ನೆಟ್‌ವರ್ಕ್‌ಗೆ ಹೋಲಿಸಿದರೆ 5G ಶೇ 20-30 ಪಟ್ಟು ಅಧಿಕ ವೇಗವನ್ನು ನೀಡುತ್ತದೆ ಎಂದು ಹೇಳಿದರು. "ನಾವು ಒಂದು ತಿಂಗಳೊಳಗೆ ನಮ್ಮ 5G ಸೇವೆಗಳನ್ನು ಪ್ರಾರಂಭಿಸಲು ನಿರೀಕ್ಷಿಸುತ್ತೇವೆ. ಡಿಸೆಂಬರ್ ವೇಳೆಗೆ, ನಾವು ಪ್ರಮುಖ ಮೆಟ್ರೋಗಳಲ್ಲಿ ಕವರೇಜ್ ಹೊಂದಿರಬೇಕು. ಅದರ ನಂತರ ನಾವು ಇಡೀ ದೇಶವನ್ನು ಆವರಿಸುವಂತೆ ನಾವು ವೇಗವಾಗಿ ವಿಸ್ತರಿಸುತ್ತೇವೆ. 2023 ರ ಅಂತ್ಯದ ವೇಳೆಗೆ ನಾವು ಎಲ್ಲಾ ನಗರ ಭಾರತವನ್ನು ಆವರಿಸುವ ನಿರೀಕ್ಷೆಯಿದೆ, "ವಿಠಲ್ ಹೇಳಿದರು.

"ನಿಮ್ಮ ಫೋನ್‌ನಲ್ಲಿ 5G ಅನ್ನು ಸಕ್ರಿಯಗೊಳಿಸಲು, ಸೆಟ್ಟಿಂಗ್‌ಗಳ ಟ್ಯಾಬ್‌ಗೆ ಹೋಗಿ ಮತ್ತು ಸಂಪರ್ಕಗಳು ಅಥವಾ ಮೊಬೈಲ್ ನೆಟ್‌ವರ್ಕ್‌ಗೆ ಹೋಗಿ. 4G ಅಥವಾ LTE ಜೊತೆಗೆ 5G ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ನಿಮಗೆ ತೋರಿಸಲಾಗುತ್ತದೆ. ಆ ಮೋಡ್ ಅನ್ನು ಆಯ್ಕೆ ಮಾಡಿ ಮತ್ತು ನೀವು ಸಿದ್ಧರಾಗಿರುವಿರಿ" ಎಂದು ವಿಠಲ್ ತಿಳಿಸಿದರು

5ಜಿ ನೆಟ್‌ವರ್ಕ್

5ಜಿ ನೆಟ್‌ವರ್ಕ್

ದೇಶದಲ್ಲಿ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದ್ದು, ಜಿಯೋ ಅತಿ ಹೆಚ್ಚು ಬಿಡ್‌ ಮಾಡಿದೆ. ಏರ್‌ಟೆಲ್ ಮತ್ತು ವೊಡಾಫೋನ್ ನಂತರದ ಸ್ಥಾನದಲ್ಲಿವೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ 5ಜಿ ಸ್ಪೆಕ್ಟ್ರಮ್‌ನ ಹರಾಜಿನಲ್ಲಿ ಭಾಗಿಯಾಗಿದೆ. 100MHz ಅತೀ ಕಡಿಮೆ ಬ್ಯಾಂಡ್ ಆಗಿದ್ದು, 2.3GHz ಮಧ್ಯಮ ಬ್ಯಾಂಡ್ ಆಗಿದೆ. ಅದಕ್ಕಿಂತ ಅಧಿಕ ಬ್ಯಾಂಡ್‌ಗಳು ಕೂಡಾ ಇದೆ. ಮಧ್ಯಮ ಬ್ಯಾಂಡ್‌ನಲ್ಲಿಯೇ ಉತ್ತಮ ನೆಟ್‌ವರ್ಕ್ ಲಭ್ಯವಾಗಲಿದೆ. 

5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್‌ಗಿಂತಲೂ ಸ್ಪೀಡ್ ಆಗಿರುತ್ತದೆ. ನೀವು ಯಾವುದೇ ಸಿನಿಮಾ, ವಿಡಿಯೋ, ಆಪ್ ಡೌನ್‌ಲೋಡ್ ಅನ್ನು ಶೀಘ್ರವಾಗಿ ಮಾಡಲು ಸಾಧ್ಯವಾಗಲಿದೆ. ಇದು ಪ್ರತಿ ಸೆಕೆಂಡಿಗೆ 10 ಜಿಬಿ (gigabyte) ವೇಗದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಭಾರತದಲ್ಲಿ ಪ್ರಸ್ತುತವಿರುವ 4ಜಿ ಡೌನ್‌ಲೋಡ್‌ ಸ್ಪೀಡ್‌ಗಿಂತ ನೂರು ಪಟ್ಟು ಅಧಿಕ ವೇಗವನ್ನು 5ಜಿ ನೆಟ್‌ವರ್ಕ್ ಹೊಂದಿರಲಿದೆ. ಪ್ರಸ್ತುತ 4ಜಿಯಲ್ಲಿ 21 Mbps (megabits per second) ವೇಗವಿದೆ ಎಂದು ಭಾರತದ ಟೆಲಿಕಾಂ ರೆಗ್ಯೂಲೇಟರ್ ಅಥಾರಿಟಿ ಹೇಳಿದೆ.

 

English summary

All you need to know about 5G internet services to be launched in India on October 1

The Prime Minister Narendra Modi will open a four-day conference where top telecom providers will outline their 5G plans for the nation.All you need to know about 5G internet services to be launched in India on October 1
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X