For Quick Alerts
ALLOW NOTIFICATIONS  
For Daily Alerts

ಬ್ಯಾಂಕ್‌ ಲಾಕರ್ ನಿಯಮಗಳೇನು? ಎಷ್ಟು ಶುಲ್ಕ ವಿಧಿಸಲಾಗುತ್ತದೆ?

|

ಈಗಿನ ಕಾಲದಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಷ್ಟೇ ಸುರಕ್ಷಿತವಾಗಿ ಆಭರಣ, ಆಸ್ತಿ ಪತ್ರಗಳು, ಬೆಲೆವಾಳುವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರೂ ಒಂದಲ್ಲಾ ಒಂದು ಕಡೆ ಭಯ ಇದ್ದೇ ಇರುತ್ತದೆ. ಏಕೆಂದರೆ ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡುವ ಖದೀಮರಿದ್ದಾರೆ.

ಅನೇಕ ಕಾರಣಗಳಿಂದ ಮನೆಯಿಂದ ಬೇರೆ ಸ್ಥಳಗಳಿಗೆ ತೆರಳುವ ಅನಿವಾರ್ಯತೆ ಬರಬಹುದು. ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಟ್ಟು ಬೀಗ ಹಾಕಿಕೊಂಡು ಕೆಲವು ದಿನಗಳ ಮಟ್ಟಿಗೆ ಪ್ರವಾಸ ಅಥವಾ ಇತರೆ ಕಾರಣಗಳಿಗೆ ತೆರಳಿದಾಗ ಏನು ಬೇಕಾದರು ಆಗಬಹುದು. ಹೀಗಾಗಿ ಅನೇಕರು ಮನೆಯಲ್ಲಿ ಆಭರಣಗಳು, ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳುವ ಬದಲು ಬ್ಯಾಂಕ್ ಲಾಕರ್‌ನಲ್ಲಿಡಲು ಬಯಸುತ್ತಾರೆ.

ಲಾಕರ್‌ಗಳು ಬ್ಯಾಂಕುಗಳು ನೀಡುವ ಸೇವೆಗಳಲ್ಲಿ ಒಂದಾಗಿದೆ. ಈ ವಹಿವಾಟಿನಿಂದ ಬ್ಯಾಂಕುಗಳು ಸಾಕಷ್ಟು ಲಾಭಗಳಿಸುತ್ತವೆ. ಈ ಸೇವೆಯನ್ನ ಪಡೆಯಲು ಗ್ರಾಹಕರು ಸೇವಾಶುಲ್ಕ ಭರಿಸಬೇಕಾಗುತ್ತದೆ. ಜೊತೆಗೆ ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಹಾಗಿದ್ದರೆ ಅಮೂಲ್ಯ ದಾಖಲೆಗಳನ್ನು, ಬೆಲೆಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿಡಲು ಇರುವ ನಿಯಮಗಳೇನು? ಬ್ಯಾಂಕ್ ಲಾಕರ್ ಎಷ್ಟು ಸೇಫ್‌? ಬ್ಯಾಂಕ್ ಲಾಕರ್ ಓಪನ್ ಮಾಡಿಸುವುದು ಹೇಗೆ? ಎಷ್ಟು ಶುಲ್ಕ ವಿಧಿಸಲಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರದ ಜೊತೆಗೆ ಬ್ಯಾಂಕ್ ಲಾಕರ್ ಬಗ್ಗೆ ಮಾಹಿತಿ ಈ ಕೆಳಗಿದೆ ಓದಿ

ಬ್ಯಾಂಕ್ ಲಾಕರ್ ಎಂದರೇನು?

ಬ್ಯಾಂಕ್ ಲಾಕರ್ ಎಂದರೇನು?

ಬ್ಯಾಂಕ್ ಲಾಕರ್ ಎಂದರೆ ಒಂದು ಕಬ್ಬಿಣದ ಕ್ಯಾಬಿನೆಟ್‌ಗಳನ್ನು ಹಲವಾರು ಗಾತ್ರದಲ್ಲಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಇಡಲಾಗಿರುತ್ತದೆ. ಈ ಕ್ಯಾಬಿನೆಟ್‌ ಸುರಕ್ಷಿತವಾದ ಪ್ರತ್ಯೇಕ ಕೊಣೆಯಲ್ಲಿರುತ್ತದೆ. ಈ ಕೋಣೆಗೆ ಭದ್ರವಾದ ಬಾಗಿಲುಗಳನ್ನು ಅಳವಡಿಸಲಾಗಿರುತ್ತದೆ. ಈ ಕೋಣೆಗೆ ಯಾರು ಬೇಕಾದರೂ ಪ್ರವೇಶ ಮಾಡುವಂತಿಲ್ಲ ಅಧಿಕೃತ ವ್ಯಕ್ತಿ ಮಾತ್ರ ಪ್ರವೇಶಿಸಬಹುದು. ಗ್ರಾಹಕರ ಕೋರಿಕೆ ಮೇರೆಗೆ, ಲಭ್ಯವಿದ್ದರೆ ಮಾತ್ರ ಷರತ್ತಿನ ಮೇಲೆ ಗ್ರಾಹಕರಿಗೆ ಲಾಕರ್ ನೀಡಲಾಗುವುದು. ಈಗಿರುವ ಲಾಕರ್ ಸೇವೆಯು ಬಾಡಿಗೆ ಆಧಾರದ ಮೇಲಿದೆ.

ಬ್ಯಾಂಕ್ ಲಾಕರ್ ಶುಲ್ಕವೆಷ್ಟು?

ಬ್ಯಾಂಕ್ ಲಾಕರ್ ಶುಲ್ಕವೆಷ್ಟು?

ಲಾಕರ್ ಶುಲ್ಕವು ನೀವು ಎಷ್ಟು ಗಾತ್ರದ ಲಾಕರ್ ಬಳಸುತ್ತೀರಾ ಎಂಬುದರ ಮೇಲೆ ನಿಗದಿಯಾಗುತ್ತದೆ. ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಇಂಡಿಯಾ ನಗರಗಳು ಮತ್ತು ಮಹಾನಗರಗಳಲ್ಲಿ ಚಿಕ್ಕ ಗಾತ್ರದ ಲಾಕರ್‌ಗೆ(125x175x492cm) 1,500 ರುಪಾಯಿ ಜೊತೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕುಗಳಲ್ಲಿ 1,000 ರುಪಾಯಿ ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ. ಸ್ವಲ್ಪ ದೊಡ್ಡ ಗಾತ್ರದ ಲಾಕರ್ ಬೇಕೆಂದರೆ 9 ಸಾವಿರ ರುಪಾಯಿಗೂ ಹೆಚ್ಚು ಮತ್ತು GSTಯನ್ನು ಎಸ್‌ಬಿಐ ಶುಲ್ಕವಾಗಿ ಪಡೆಯುತ್ತದೆ.

ಮೊದಲ ಬಾರಿಗೆ ಲಾಕರ್ ಪಡೆಯುತ್ತಿದ್ದೀರಿ ಎಂದರೆ ಲಾಕರ್ ಗಾತ್ರದ ಆಧಾರದ ಮೇಲೆ ನೋಂದಣಿ ಶುಲ್ಕ ಪಾವತಿಸಬೇಕಾತ್ತದೆ. ಎಸ್‌ಬಿಐ ಸಣ್ಣ ಮತ್ತು ಮಧ್ಯಮ ಗಾತ್ರದ ಲಾಕರ್‌ಗಳಿಗೆ 1,000 ರುಪಾಯಿ ಮತ್ತು GST ಶುಲ್ಕ ವಿಧಿಸುತ್ತದೆ. ಒಂದು ವೇಳೆ ಬಾಡಿಗೆ ಪಾವತಿಸುವುದು ವಿಳಂಭವಾದರೆ ವಾರ್ಷಿಕ ಬಾಡಿಗೆಯ 40 ಪರ್ಸೆಂಟ್ ದಂಡವನ್ನು ಪಾವತಿಸಬೇಕಾಗುತ್ತದೆ. ಕೆಲವು ಬ್ಯಾಂಕುಗಳು ಎಫ್‌ಡಿ ತೆರೆಯಲು, ಯುಲಿಪ್‌ನಲ್ಲಿ ಹೂಡಿಕೆ ಮಾಡಲು ಕೇಳಬಹುದು. ಆದರೆ ಇದು ಆರ್‌ಬಿಐ ನಿಯಮಗಳಿಗೆ ವಿರುದ್ಧವಾಗಿದೆ.

 

ಲಾಕರ್ ಕೀ ನೀಡಲಾಗುವುದು

ಲಾಕರ್ ಕೀ ನೀಡಲಾಗುವುದು

ಬ್ಯಾಂಕ್ ಲಾಕರ್‌ಗೆ 2 ಕೀ ಇರುತ್ತದೆ. ಒಂದು ಕೀ ನಿಮ್ಮ ಬಳಿ ಇದ್ದರೆ, ಮತ್ತೊಂದು ಕೀಯನ್ನು ಬ್ಯಾಂಕ್ ತನ್ನ ಬಳಿಯಲ್ಲೇ ಇಟ್ಟುಕೊಳ್ಳುತ್ತದೆ. ಒಂದು ವೇಳೆ ನೀವು ಕೀ ಕಳೆದುಕೊಂಡರೆ ಅಥವಾ ಎಲ್ಲಾದರೂ ಮರೆತು ಇಟ್ಟು ಮರೆತುಬಿಟ್ಟರೆ, ಬ್ಯಾಂಕ್ ನಿಮಗೆ ಬದಲಿ ಕೀ ಮಾಡಿಸಿಕೊಡುತ್ತದೆ. ಆದರೆ ನೀವು ಸೇವಾ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಲಾಕರ್ ಒಡೆಯುವಲ್ಲಿ ಮತ್ತು ಲಾಕರ್ ಬದಲಿಸುವ ತಗುಲುವ ಶುಲ್ಕಗಳು ಸೇರಿದಂತೆ ಸಾಮಾನ್ಯವಾಗಿ 3 ಸಾವಿರ ರುಪಾಯಿಗಳವರೆಗೂ ಶುಲ್ಕ ವಿಧಿಸುತ್ತದೆ.

ನಿಮ್ಮದೇ ಆದ ಪಾಸ್‌ವರ್ಡ್ ನೀಡಬೇಕು

ನಿಮ್ಮದೇ ಆದ ಪಾಸ್‌ವರ್ಡ್ ನೀಡಬೇಕು

ಬಾಡಿಗೆದಾರನು ಮೊದಲ ಬಾರಿಗೆ ಲಾಕರ್ ಪಡೆಯುವಾಗ ಅವರಿಗೆ ಲಾಕರ್ ಕೀಲಿ ಕೈ ಜೊತೆಗೆ ತನ್ನನ್ನು ಗುರುತಿಸಲು ಅನುಕೂಲವಾಗುವಂತೆ ಪಾಸ್‌ವರ್ಡ್ ನೀಡಬೇಕು. ಅಂತಹ ಪಾಸ್‌ವರ್ಡ್ ಬ್ಯಾಂಕ್ ಸಂಕೇತವಾಗಿ ದಾಖಲು ಮಾಡಿಕೊಳ್ಳುತ್ತದೆ.

ಲಾಕರ್‌ನಲ್ಲಿ ಏನೆಲ್ಲಾ ಇಡಬಹುದು?

ಲಾಕರ್‌ನಲ್ಲಿ ಏನೆಲ್ಲಾ ಇಡಬಹುದು?

ನೀವು ಲಾಕರ್‌ನಲ್ಲಿ ಯಾವ ವಸ್ತುಗಳನ್ನು ಇಡಬಹುದು ಎಂಬುದರ ಬಗ್ಗೆ ಯಾವುದೇ ನಿಯಂತ್ರಣವಿಲ್ಲ. ಕಾನೂನು ಉಲ್ಲಂಘನೆಯಾಗದಂತೆ ಯಾವುದೇ ವಸ್ತುಗಳನ್ನು ಲಾಕರ್ ಗಳಲ್ಲಿ ಇಡಲು ಬಾಡಿಗೆದಾರರಿಗೆ ಸ್ವಾತಂತ್ರ್ಯವಿರುತ್ತದೆ.

ಲಾಕರ್‌ಗಳ ಬಾಹ್ಯ ಸುರಕ್ಷತೆಯ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೆ ಬ್ಯಾಂಕ್‌ ತನ್ನ ಮೇಲಿನ ಜವಾಬ್ದಾರಿ ನಿರ್ಮಹಿಸಿದಂತೆ ಪರಿಗಣಿಸಲಾಗುತ್ತದೆ. ಬ್ಯಾಂಕ್‌ ಕೈ ಮೀರಿ ಲಾಕರ್ ಹಾಳಾದರೆ ಬ್ಯಾಂಕ್‌ಗೆ ಅನ್ವಯಿಸುವುದಿಲ್ಲ. ಇನ್ನು ಲಾಕರ್ ಒಳಗೆ ಏನು ಇಡಲಾಗಿದೆ ಎಂದು ಬ್ಯಾಂಕ್ ಕೇಳುವುದಿಲ್ಲ.

ಕಳ್ಳತನ, ಪ್ರಕೃತಿ ವಿಕೋಪಗಳಿಂದ ಹಾಳಾದಲ್ಲಿ ಬ್ಯಾಂಕ್ ಜವಾಬ್ದಾರಿ ಏನು?

ಕಳ್ಳತನ, ಪ್ರಕೃತಿ ವಿಕೋಪಗಳಿಂದ ಹಾಳಾದಲ್ಲಿ ಬ್ಯಾಂಕ್ ಜವಾಬ್ದಾರಿ ಏನು?

ಅತ್ಯಂತ ಪ್ರಮುಖವಾದ ಅಂಶವೆಂದರೆ ಬೆಂಕಿ, ಪ್ರವಾಹ ಅಥವಾ ಇನ್ನಾವುದೇ ನೈಸರ್ಗಿಕ ವಿಕೋಪಗಳಿಂದ ಉಂಟಾದ ನಷ್ಟಗಳಾಗಲಿ ಅಥವಾ ಕಳ್ಳತನ, ದರೋಡೆ, ಮೋಸ ವಂಚನೆಗಳಿಂದಾಗಿ ಲಾಕರ್‌ಗಳಲ್ಲಿನ ವಸ್ತುಗಳಿಗೆ ನಷ್ಟವಾದರೆ ಬ್ಯಾಂಕುಗಳು ನಷ್ಟ ಭರಿಸುವುದಿಲ್ಲ. 2017ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ.

ಲಾಕರ್ ವೈಯಕ್ತಿಕವಾಗಿ, ಜಂಟಿಯಾಗಿ ಇಡಬಹುದು

ಲಾಕರ್ ವೈಯಕ್ತಿಕವಾಗಿ, ಜಂಟಿಯಾಗಿ ಇಡಬಹುದು

ಲಾಕರ್‌ಗಳನ್ನು ವ್ಯಕ್ತಿಗಳು ವೈಯಕ್ತಿಕವಾಗಿ, ಜಂಟಿಯಾಗಿ ಇಬ್ಬರು ಅಥವಾ ಹೆಚ್ಚು ಜನರು, ಪಾಲುದಾರಿಕೆ ಸಂಸ್ಥೆಗಳು, ಕಂಪನಿಗಳು ಹಾಗೂ ಇತರರಿಗೆ ನೀಡಲಾಗುತ್ತದೆ. ಯಾರೇ ಲಾಕರ್ ಇಡಬೇಕಾದರು ನಿಮ್ಮ ಕುಟುಂಬದ ಓರ್ವ ಹೆಸರನ್ನು ನಾಮ ನಿರ್ದೇಶನ(Nominate) ಮಾಡಬೇಕಾಗುತ್ತದೆ.

ಏಕೆಂದರೆ ಬಾಡಿಗೆದಾರನ ನಿಧನದ ಸಂದರ್ಭದಲ್ಲಿ ಲಾಕರ್‌ನ ವಿಷಯಗಳನ್ನು ತಿಳಿಸಲು ಇಬ್ಬ ವ್ಯಕ್ತಿಯನ್ನು ನಾಮ ನಿರ್ದೇಶನ ಮಾಡಬೇಕಾಗುತ್ತದೆ. ಬಾಡಿಗೆದಾರನ ಮರಣದ ಸಂದರ್ಭದಲ್ಲಿ ನಾಮಿನಿ ಅಪ್ರಾಪ್ತ ವಯಸ್ಕರಾಗಿದ್ದರೆ, ನಾಮಿನಿಯ ರಕ್ಷಕರಿಗೆ ಪ್ರವೇಶವನ್ನು ನೀಡಲಾಗುತ್ತದೆ.

 

ವರ್ಷಕ್ಕೆ ಕನಿಷ್ಠ 1 ಬಾರಿಯಾದರೂ ಲಾಕರ್ ತೆರೆದು ನೋಡಬೇಕು

ವರ್ಷಕ್ಕೆ ಕನಿಷ್ಠ 1 ಬಾರಿಯಾದರೂ ಲಾಕರ್ ತೆರೆದು ನೋಡಬೇಕು

ಲಾಕರ್ ಬಾಡಿಗೆ ತೆಗೆದುಕೊಂಡ ಬಾಡಿಗೆದಾರನು ವರ್ಷಕ್ಕೆ ಒಮ್ಮೆಯಾದರೂ ಲಾಕರ್ ತೆಗೆದು ನೋಡಬೇಕು. ಹಾಗೆ ಮಾಡದಿದ್ದಲ್ಲಿ ಬ್ಯಾಂಕ್ ಬಾಡಿಗೆದಾರರನ್ನು ಸಂಪರ್ಕಿಸಿ ಲಾಕರ್ ತೆಗೆದು ನೋಡುವಂತೆ ತಿಳಿಸುತ್ತದೆ. ಬಾಡಿಗೆದಾರನು ಹೀಗೆ ಮಾಡದಿದ್ದಲ್ಲಿ ಲಾಕರ್ ಹಿಂಪಡೆಯಬಹುದು.

ಬಾಡಿಗೆದಾರನು ಹೆಚ್ಚು ಕಾಲ ಲಾಕರ್ ತೆರೆಯದಿದ್ದರೆ ಬ್ಯಾಂಕ್ ಬಾಡಿಗೆದಾರರಿಗೆ ನೋಟಿಸ್ ನೀಡಿ ಲಾಕರ್ ತೆರೆದು ನೋಡಿಲ್ಲವೆಂದು ದಾಖಲಿಸುತ್ತದೆ. ಬಾಡಿಗೆದಾರನು ಸ್ಪಂದಿಸದಿದ್ದರೆ ಮತ್ತೊಂದು ಅವಕಾಶ ನೀಡುತ್ತದೆ. ಅದಕ್ಕೂ ಸ್ಪಂದಿಸದಿದ್ದರೆ ಲಾಕರೆ ಒಡೆದು ತೆಗೆಯಬಹುದು. ಹಾಗೂ ಲಾಕರ್‌ನಲ್ಲಿರುವ ವಸ್ತುಗಳನ್ನು ಪಟ್ಟಿ ಮಾಡಿ ಬ್ಯಾಂಕ್ ತನ್ನ ಸುಪರ್ದಿನಲ್ಲಿಡಲಾಗುವುದು.

 

ಎಚ್ಚರಿಕೆಯ ಕ್ರಮಗಳೇನು?

ಎಚ್ಚರಿಕೆಯ ಕ್ರಮಗಳೇನು?

* ಲಾಕರ್‌ನಲ್ಲಿರುವ ಪ್ರತಿ ವಸ್ತುವಿನ ಫೋಟೋವನ್ನು ಸೆರೆಹಿಡಿದು ನಿಮ್ಮ ಬಳಿ ಇಟ್ಟುಕೊಳ್ಳಿ

* ಲಾಕರ್‌ನಲ್ಲಿರುವ ವಸ್ತುಗಳನ್ನು ೨ ಪಟ್ಟಿ ತಯಾರಿಸಿ ಒಂದು ಲಾಕರ್‌ನಲ್ಲಿಡಿ ಮತ್ತೊಂದು ನಿಮ್ಮ ಬಳಿ ಇಟ್ಟುಕೊಳ್ಳಿ

* ಬ್ಯಾಂಕ್ ನಿಮ್ಮನ್ನು ಸುಲಭವಾಗಿ ಸಂಪರ್ಕಿಸುವಂತೆ ದೂರವಾಣಿ ಸಂಖ್ಯೆಗಳನ್ನು ದಾಖಲು ಮಾಡಿ

* ಲಾಕರ್‌ನಲ್ಲಿರುವ ವಸ್ತುಗಳ ಅಂದಾಜು ಮೌಲ್ಯವನ್ನು ಒಂದು ನೋಟ್‌ ಬುಕ್‌ನಲ್ಲಿ ಗುರುತು ಮಾಡಿಕೊಳ್ಳಿ

 

English summary

Bank Locker Rules And Charges In Kannada

These are details of opening bank locker and rules of you should know in kannada
Story first published: Thursday, December 12, 2019, 17:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X