For Quick Alerts
ALLOW NOTIFICATIONS  
For Daily Alerts

ಅತ್ಯಂತ ಕಡಿಮೆ ಖರ್ಚಿನಲ್ಲಿ ಭಾರತದಿಂದ ಪ್ರವಾಸ ಮಾಡಬಹುದಾದ ದೇಶಗಳು

|

ವಿದೇಶ ಪ್ರಯಾಣ ಮಾಡಬೇಕು ಅನ್ನೋದು ಬಹುತೇಕ ಜನರ ಕನಸಾಗಿರುತ್ತೆ. ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕು, ವಿದೇಶಿ ತಾಣಗಳಿಗೆ ಹೋಗಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಇನ್ನೂ ಹಲವರು ತಮ್ಮ ತಂದೆ-ತಾಯಿಯನ್ನ, ಕುಟುಂಬದವರನ್ನ ಒಮ್ಮೆಯಾದರೂ ವಿದೇಶಕ್ಕೆ ಕರೆದುಕೊಂಡು ಸುತ್ತಾಡಿಕೊಂಡು ಬರಬೇಕು ಎಂದು ಆಸೆಯನ್ನಿಟ್ಟುಕೊಂಡಿದ್ದಾರೆ.

ಹೀಗೆ ಅನೇಕ ಬಣ್ಣ ಬಣ್ಣದ ಕನಸುಗಳಿಗೆ ರೆಕ್ಕೆ-ಪುಕ್ಕ ತುಂಬಲು ವಿಟಮಿನ್ 'M'ನ ಅವಶ್ಯಕತೆ ಹೆಚ್ಚು.. 'M' ಅಂದರೆ ಮನಿ ಎಂದು. ವಿದೇಶ ಪ್ರಯಾಣ ಅಂದರೆ ತುಂಬಾನೆ ಖರ್ಚಾಗುತ್ತೆ. ನಮ್ಮ ಬಳಿ ಅಷ್ಟೊಂದು ದುಡ್ಡು ಇಲ್ಲ ಎಂದು ಎಷ್ಟೋ ಜನರು ಅಂದುಕೊಳ್ಳುತ್ತಾರೆ. ಆದರೆ ಕಡಿಮೆ ಹಣದಲ್ಲೇ ವಿದೇಶ ಪ್ರಯಾಣವನ್ನು ಮಾಡಬಹುದು.

ಭಾರತದಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೋಗಬಹುದಾದ ದೇಶಗಳು ಯಾವುವು? ಅಲ್ಲಿ ಉಳಿದುಕೊಳ್ಳಲು ಎಷ್ಟಾಗುತ್ತೆ? ಒಂದು ದಿನ ಊಟ-ತಿಂಡಿಗೆ ಎಷ್ಟಾಗುತ್ತೆ ಎಂಬುದರ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ ಓದಿ.

1. ನೇಪಾಳ

1. ನೇಪಾಳ

ಹಿಮಾಲಯಗಳ ಮಧ್ಯೆ ಇರುವ ನೇಪಾಳ ದೇಶವು ಅತ್ಯಂತ ಸುಂದರವಾದ ಮನೋಹರವಾದ ಪ್ರಕೃತಿಯ ಮಡಿಲಿನಲ್ಲಿ ಅಲಂಕೃತವಾಗಿದೆ. ಹಿಮ ಶಿಖರಗಳು , ತೊರೆಗಳು, ಮಠಗಳು ಮತ್ತು ಮಾಯಾಜಾಲಗಳ ಸುಂದರ ದೇಶವಾಗಿದೆ. ನಗರದ ಟ್ರಾಫಿಕ್ ಜಂಜಾಟದಿಂದ ಬೇಸತ್ತು, ಕಚೇರಿ, ಕೆಲಸದಲ್ಲಿ ಮುಳುಗಿ ಬೇಸತ್ತಿದ್ದರೆ ವಿರಾಮ ತೆಗೆದುಕೊಳ್ಳ ಬಯಸುವವರಿಗೆ ನೇಪಾಳವು ಅತ್ಯಂತ ಶಾಂತ ಮತ್ತು ಪ್ರಶಾಂತವಾದ ವಾತಾವರಣವನ್ನು ನೀಡುತ್ತದೆ.

ಭಾರತದಿಂದ ಅತ್ಯಂತ ಅಗ್ಗದ ದರಗಳಲ್ಲಿ ಭೇಟಿ ನೀಡಬಹುದಾದ ದೇಶ ಇದಾಗಿದ್ದು ಊಟ, ಹಾಗೂ ವಸತಿ ಖರ್ಚು ಎಷ್ಟಿದೆ ಎಂಬುದು ಈ ಕೆಳಗಿದೆ

ಪ್ರತಿದಿನ ಉಳಿಯುವ ವೆಚ್ಚ: ಉಳಿದುಕೊಳ್ಳಲು ಯೋಗ್ಯವಾದ ಲಾಡ್ಜ್‌ಗೆ 1000 ರುಪಾಯಿನಿಂದ 2000 ರುಪಾಯಿಗೆ ಸಿಗುತ್ತದೆ.

ದಿನಕ್ಕೆ ಆಹಾರದ ವೆಚ್ಚ: ನೀವು ಆಯ್ಕೆ ಮಾಡಿದ ಆಹಾರ ಮತ್ತು ಸ್ಥಳದ ಮೇಲೆ ಈ ಆಹಾರದ ವೆಚ್ಚವು ಅವಲಂಭಿತವಾಗಿದೆ. 500 ರುಪಾಯಿನಿಂದ ಶುರುವಾಗುತ್ತದೆ.

ಸಾರಿಗೆ ವೆಚ್ಚ: ನೇಪಾಳವು ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ನಿಮ್ಮ ಪ್ರಯಾಣಕ್ಕಾಗಿ ನೀವು ಬಸ್ಸುಗಳು ಮತ್ತು ಟ್ಯಾಕ್ಸಿಗಳನ್ನು ಪಡೆಯಬಹುದು. ಸರಾಸರಿ ಬಸ್ ವೆಚ್ಚವು 470 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನದಾಗಿದೆ.

 

2. ವಿಯೆಟ್ನಾಂ
 

2. ವಿಯೆಟ್ನಾಂ

ವಿಯೆಟ್ನಾಂ ಸಾಕಷ್ಟು ನೈಸರ್ಗಿಕ ಸೌಂದರ್ಯ, ಶ್ರೀಮಂತ ಇತಿಹಾಸ ಮತ್ತು ವಿಶಿಷ್ಟ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಪ್ರಪಂಚದಾದ್ಯಂತ ಅತ್ಯಂತ ಹೆಚ್ಚು ಜನರು ಭೇಟಿ ನೀಡುವ ದೇಶವು ಇದಾಗಿದ್ದು, ಭಾರತದಿಂದ ಪ್ರಯಾಣಿಸಲು ಅತ್ಯಂತ ಅಗ್ಗದ ದೇಶಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲಿ ಉಳಿದುಕೊಳ್ಳಲು ಎಷ್ಟಾಗಬಹುದು, ಊಟ ತಿಂಡಿ ಎಷ್ಟು ಎಂಬ ಮಾಹಿತಿ ಈ ಕೆಳಗಿದೆ.

ಪ್ರತಿ ದಿನ ಉಳಿಯುವ ವೆಚ್ಚ: ಇಲ್ಲಿ ಯೋಗ್ಯವಾದ ಲಾಡ್ಜಿಂಗ್‌ಗೆ ನೀವು ರಾತ್ರಿಗೆ 1000 ರುಪಾಯಿನಿಂದ ಆರಂಭವಾಗುತ್ತದೆ.

ದಿನಕ್ಕೆ ಆಹಾರದ ವೆಚ್ಚ: ಮಧ್ಯಮ ಶ್ರೇಣಿಯ ರೆಸ್ಟೋರೆಂಟ್‌ನಲ್ಲಿ ಮೂರು ಹೊತ್ತು ಊಟ ಮಾಡಲು ನಿಮಗೆ ಅಂದಾಜು 800 ರುಪಾಯಿ ಖರ್ಚಾಗಬಹುದು.

ಸಾರಿಗೆ ವೆಚ್ಚ: ಟ್ಯಾಕ್ಸಿ ಶುಲ್ಕವು 1 ಕಿ.ಮೀ. 35 ರುಪಾಯಿ

 

ನಿಮ್ಮ ಪ್ರವಾಸದಲ್ಲಿ ಜಾಸ್ತಿ ಹಣ ಖರ್ಚು ಆಗಬಾರದು ಎಂದಾದರೆ ಇದನ್ಮೊಮ್ಮೆ ನೋಡಿನಿಮ್ಮ ಪ್ರವಾಸದಲ್ಲಿ ಜಾಸ್ತಿ ಹಣ ಖರ್ಚು ಆಗಬಾರದು ಎಂದಾದರೆ ಇದನ್ಮೊಮ್ಮೆ ನೋಡಿ

3. ಭೂತಾನ್

3. ಭೂತಾನ್

ಅತ್ಯಂತ ಶಾಂತಿ ಹಾಗೂ ನೆಮ್ಮದಿಯಿಂದ ಕೆಲ ದಿನ ಕಳೆಯಬೇಕು ಎಂದು ಬಯಸುವವರಿಗೆ ಇದು ಕೂಡ ಸುಂದರ ತಾಣಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಅಲ್ಲದೆ ಭಾರತದಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ತೆರಳಬಹುದಾದ ಅಗ್ಗದ ದೇಶಗಳಲ್ಲಿ ಒಂದಾಗಿದೆ. ಇಲ್ಲಿಗೆ ಭಾರತೀಯರು ಪಾಸ್‌ಪೋರ್ಟ್ ಇಲ್ಲದೆ ಕೂಡ ಭೇಟಿ ನೀಡಬಹುದು. ಆದರೆ ಸರ್ಕಾರದಿಂದ ಸಿಕ್ಕಂತಹ ನಿರ್ದಿಷ್ಟ ಐಡಿ ಕಾರ್ಡ್‌ನ ಅಗತ್ಯವಿದೆ. ಉದಾಹರಣೆಗೆ ಆದಾರ್ ಕಾರ್ಡ್ ಇತ್ಯಾದಿ.

ಪ್ರತಿ ದಿನ ಉಳಿಯುವ ವೆಚ್ಚ: ಇಲ್ಲಿ ಯೋಗ್ಯವಾದ ಲಾಡ್ಜಿಂಗ್‌ಗೆ ನೀವು ರಾತ್ರಿಗೆ 1,500 ರುಪಾಯಿಯಿಂದ 2,000 ರುಪಾಯಿ ನೀಡಬೇಕಾಗುತ್ತದೆ.

ದಿನಕ್ಕೆ ಆಹಾರದ ವೆಚ್ಚ: ಒಂದು ಸಾಮಾನ್ಯ ಊಟವು ಪ್ರತಿ ವ್ಯಕ್ತಿಗೆ 100 ರಿಂದ 400 ರುಪಾಯಿಗಳವರೆಗೆ ಇದೆ. ನೀವು ಏನಾದರೂ ಸ್ವಲ್ಪ ಸ್ಟಾರ್ ಹೋಟೆಲ್‌ಗಳಿಗೆ ಹೋದರೆ ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

ಸಾರಿಗೆ ವೆಚ್ಚ: ನೀವು ದೇಶದ ಯಾವ ಭಾಗಕ್ಕೆ ಭೇಟಿ ನೀಡುತ್ತಾರೆ ಎಂಬುದರ ಆಧಾರದ ಮೇಲೆ ವೆಚ್ಚವು ಬದಲಾಗುತ್ತದೆ. ಬಸ್ ಗಳ ವೇಳಾಪಟ್ಟಿಯ ಗೊಂದಲದ ಬದಲು ಹೆಚ್ಚಿನ ಸಮಯವನ್ನು ಕ್ಯಾಬ್ ಅಥವಾ ಟ್ಯಾಕ್ಸಿಯನ್ನು ಅನೇಕ ದಿನಗಳವರೆಗೆ ಬಾಡಿಗೆ ಪಡೆಯಲು ಸಾಧ್ಯವಿದೆ.

 

4. ಶ್ರೀಲಂಕಾ

4. ಶ್ರೀಲಂಕಾ

ನಮ್ಮ ನೆರೆಯ ರಾಷ್ಟ್ರಗಳಲ್ಲಿ ಒಂದಾದ ಶ್ರೀಲಂಕಾ ಕೂಡ ಬಜೆಟ್ ಸ್ನೇಹಿತ ವಿದೇಶಗಳಲ್ಲಿ ಒಂದಾಗಿದೆ. ಅದ್ಭುತ ಕಡಲತೀರಗಳು, ಹಾಗೂ ಸುಂದರವಾದ ತಾಣಗಳನ್ನು ನೀವು ಇಲ್ಲಿ ನೋಡಬಹುದು.

ಪ್ರತಿ ದಿನ ಉಳಿಯುವ ವೆಚ್ಚ: ಇಲ್ಲಿ ರಾತ್ರಿ ಉಳಿದುಕೊಳ್ಳಲು 1,000 ರುಪಾಯಿಯಿಂದ 1,500 ರುಪಾಯಿ ವೆಚ್ಚ ತಗುಲುತ್ತದೆ.

ದಿನಕ್ಕೆ ಆಹಾರದ ವೆಚ್ಚ: ಯಾವ ರೀತಿಯ ಊಟ ಖರೀದಿಸುತ್ತೀರಿ ಎಂಬುದರ ಮೇಲೆ ಹಣ ಪಾವತಿಸಬೇಕಾಗುತ್ತದೆ. 300 ರುಪಾಯಿಯಿಂದ 1000 ರುಪಾಯಿವರೆಗೂ ವೆಚ್ಚ ತಗುಲುತ್ತದೆ.

ಸಾರಿಗೆ ವೆಚ್ಚ: ನೀವು ದೇಶದ ಯಾವ ಭಾಗಕ್ಕೆ ಭೇಟಿ ನೀಡುತ್ತಾರೆ ಎಂಬುದರ ಆಧಾರದ ಮೇಲೆ ವೆಚ್ಚವು ಬದಲಾಗುತ್ತದೆ. ಬಸ್ ಗಳ ವೇಳಾಪಟ್ಟಿಯ ಗೊಂದಲದ ಬದಲು ಹೆಚ್ಚಿನ ಸಮಯವನ್ನು ಕ್ಯಾಬ್ ಅಥವಾ ಟ್ಯಾಕ್ಸಿಯನ್ನು ಅನೇಕ ದಿನಗಳವರೆಗೆ ಬಾಡಿಗೆ ಪಡೆಯಲು ಸಾಧ್ಯವಿದೆ.

 

5. ಲಾವೋಸ್

5. ಲಾವೋಸ್

ಆಗ್ನೇಯ ಏಷ್ಯಾದ ದೇಶವಾದ ಲಾವೋಸ್ ಪರ್ವತ ಪ್ರದೇಶಗಳು, ಬೌದ್ಧ ಮಠಗಳು ಮತ್ತು ಸುಂದರವಾದ ಫ್ರೆಂಚ್ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ನೀವು ಭಾರತದಿಂದ ಅಗ್ಗದ ದೇಶಕ್ಕೆ ಪ್ರಯಾಣಿಸಲು ಬಯಸಿದರೆ ಇದು ಕೂಡ ನಿಮ್ಮ ಮುಂದಿನ ತಾಣವಾಗಬಹುದು.

ಪ್ರತಿ ದಿನ ಉಳಿಯುವ ವೆಚ್ಚ: ಇಲ್ಲಿ ರಾತ್ರಿ ಉಳಿದುಕೊಳ್ಳಲು 1,000 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನದಾಗಿದೆ.

ದಿನಕ್ಕೆ ಆಹಾರದ ವೆಚ್ಚ: ಇಲ್ಲಿ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ 200 ರುಪಾಯಿ ತಗುಲುತ್ತದೆ. ವೆಸ್ಟ್ರನ್ ಫುಡ್ (ಪಾಶ್ಚಾತ್ಯ ಆಹಾರಕ್ಕಾಗಿ) 300ಕ್ಕೂ ಹೆಚ್ಚು ರುಪಾಯಿ ಪಾವತಿಸಬೇಕಾಗುತ್ತದೆ. ಇನ್ನು ರಸ್ತೆ ಬದಿಯ ಆಹಾರವೂ 120 ರಿಂದ 200 ರುಪಾಯಿಗೆ ಸಿಗುತ್ತದೆ.

ಸಾರಿಗೆ ವೆಚ್ಚ: ಲಾವೋಸ್‌ನಲ್ಲಿ ರಾತ್ರಿಯ ಬಸ್‌ಗಳ ಪ್ರಯಾಣ ಬೆಲೆ 1200 ರಿಂದ 1500 ರುಪಾಯಿವರೆಗೂ ತಗುಲುತ್ತದೆ. ನೀವು ಬೈಕ್‌ಗಳನ್ನು 150 ರಿಂದ 300 ರುಪಾಯಿಗೆ ಬಾಡಿಗೆಗೆ ಪಡೆಯಬಹುದು.

 

English summary

Cheapest Countries To Visit From India In 2020

These are top cheapest countries to visit from india in 2020
Story first published: Wednesday, February 5, 2020, 18:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X