For Quick Alerts
ALLOW NOTIFICATIONS  
For Daily Alerts

ಗೃಹ ಸಾಲ, ಗೃಹ ನವೀಕರಣ ಸಾಲಕ್ಕೂ ಏನು ವ್ಯತ್ಯಾಸ?

|

ನಮ್ಮದೇ ಆದ ಸ್ವಂತ ಮನೆಯನ್ನು ಹೊಂದುವುದು ಬಹುತೇಕ ಜನರ ಬಯಕೆಯಾಗಿದೆ. ನಾವು ಬಡವರಾಗಲಿ, ಮಧ್ಯಮ ವರ್ಗಕ್ಕೆ ಸೇರಿದವರಾಗಲಿ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅದಕ್ಕಾಗಿ ನಾವು ಸಾಕಷ್ಟು ಪ್ರಯತ್ನವನ್ನು ಕೂಡಾ ಮಾಡುತ್ತೇವೆ. ಮನೆ ಎಂದರೆ ನಾವು ರಾತ್ರಿ ನೆಮ್ಮದಿಯ ನಿದ್ದೆ ಮಾಡುವ ಸ್ಥಳ ಮಾತ್ರವಲ್ಲ, ನಮ್ಮ ಮನೆ ಎಂಬುವುದೇ ಒಂದು ಭಾವನೆಯಾಗಿದೆ.

ನಾವು ಮನೆಯನ್ನು ಕಟ್ಟುವಾಗಿ ಸಾಲವನ್ನು ಪಡೆಯುವುದು ಸಹಜ. ಹಾಗೆಯೇ ನಮ್ಮ ಮನೆಯನ್ನು ನವೀಕರಣ ಮಾಡುವಾಗಲೂ ಸಾಲವನ್ನು ಪಡೆಯಬೇಕಾಗಬಹುದು. ಆದರೆ ಈ ಗೃಹ ಸಾಲ ಹಾಗೂ ಗೃಹ ನವೀಕರಣ ಸಾಲದ ನಡುವೆ ವ್ಯತ್ಯಾಸವಿದೆ ಎಂಬುವುದು ಹಲವಾರು ಮಂದಿಗೆ ತಿಳಿದಿಲ್ಲ.

ಬಾಡಿಗೆ ಮನೆಗೆ ಹೋಗುವ ಮುನ್ನ, Rent Agreement ಬಗ್ಗೆ ಅರಿವಿರಲಿಬಾಡಿಗೆ ಮನೆಗೆ ಹೋಗುವ ಮುನ್ನ, Rent Agreement ಬಗ್ಗೆ ಅರಿವಿರಲಿ

ನಾವು ಮನೆಯನ್ನು ಕಟ್ಟಿಸುವ ಪ್ರದೇಶ ಅಥವಾ ನಾವು ಕಟ್ಟಿರುವ ಮನೆಯ ಗುಣಮಟ್ಟ ಮೊದಲಾದವುಗಳು ನಾವು ಗೃಹ ಸಾಲ, ಗೃಹ ನವೀಕರಣ ಸಾಲ ಪಡೆಯುವಾಗ ಮುಖ್ಯವಾಗಿದೆ. ನಾವು ಪಡೆಯುವ ಸಾಲದ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುತ್ತದೆ. ಹಾಗಾದರೆ ಈ ಗೃಹ ಸಾಲ ಎಂದರೇನು, ಗೃಹ ನವೀಕರಣ ಸಾಲ ಎಂದರೇನು, ಇವೆರಡು ಹೇಗೆ ಭಿನ್ನ, ಪ್ರಯೋಜನಗಳೇನು ಎಂದು ತಿಳಿಯೋಣ ಮುಂದೆ ಓದಿ...

 ಗೃಹ ಸಾಲ ಎಂದರೇನು?

ಗೃಹ ಸಾಲ ಎಂದರೇನು?

ಗೃಹ ಸಾಲವೆಂದರೆ ವೈಯಕ್ತಿಕ ಸಾಲ, ಈ ಸಾಲದ ಹಣವನ್ನು ನಾವು ಮನೆ ಖರೀದಿ ಮಾಡಲು ಬಳಕೆ ಮಾಡಬಹುದು. ಈ ಸಾಲದಲ್ಲಿ ನಾವು ಒಂದು ನಿರ್ದಿಷ್ಟ ಅವಧಿಯಲ್ಲಿ ಸಾಲವನ್ನು ಮರುಪಾವತಿ ಮಾಡುವ ಒಪ್ಪಂದವನ್ನು ಮಾಡಿಕೊಂಡಿರುತ್ತೇವೆ. ಬಡ್ಡಿದರವು ಕೂಡಾ ಈ ಸಾಲಕ್ಕೆ ಇರುತ್ತದೆ. ಗೃಹ ಸಾಲ ಎಂದಿಗೂ ಸುರಕ್ಷಿತ ಸಾಲವಾಗಿದೆ. ಇದು ನಾವು ನಿರ್ಮಾಣ ಮಾಡುವ ಮನೆಯ ಬದಲಾಗಿ ನೀಡುವ ಸಾಲವಾಗಿದೆ. ಗೃಹ ಸಾಲದ ರೂಪದಲ್ಲಿ ನಾವು ಅಧಿಕ ಹಣವನ್ನು ಸಾಲ ಪಡೆಯಬಹುದು.

ಆಟೋ, ಗೃಹ, ವೈಯಕ್ತಿಕ ಸಾಲದ ಬಡ್ಡಿದರ ಹೆಚ್ಚಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್ಆಟೋ, ಗೃಹ, ವೈಯಕ್ತಿಕ ಸಾಲದ ಬಡ್ಡಿದರ ಹೆಚ್ಚಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್

ಗೃಹ ನವೀಕರಣ ಸಾಲ ಎಂದರೇನು?

ಗೃಹ ನವೀಕರಣ ಸಾಲ ಎಂದರೇನು?

ನಿಮ್ಮ ಮನೆಯಲ್ಲಿ ನೀವು ಹಲವಾರು ಬದಲಾವಣೆಗಳನ್ನು ಮಾಡಲು ಬಯಸುತ್ತೀರಾ? ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿ ಬರುವುದಿಲ್ಲ. ಯಾಕೆಂದರೆ ನೀವು ನಿಮ್ಮ ಮನೆಯ ನವೀಕರಣಕ್ಕಾಗಿಯೂ ಸಾಲವನ್ನು ಪಡೆಯಬಹುದು. ಆದರೆ ಇದು ಗೃಹ ಸಾಲದಷ್ಟು ಹೆಚ್ಚು ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ನಿಮ್ಮ ಮನೆಗೆ ಹೊಸ ರೂಪ ಕೊಡಲು ಮಾತ್ರ ಈ ಸಾಲ ಸಹಾಯ ಮಾಡುತ್ತದೆ. ನೀವು ಬೇರೆ ಬೇರೆ ವಿಷಯಕ್ಕಾಗಿ ಗೃಹ ನವೀಕರಣ ಸಾಲವನ್ನು ಪಡೆಯಬಹುದು.

 ಗೃಹ ಸಾಲ, ಗೃಹ ನವೀಕರಣ ಸಾಲ ವ್ಯತ್ಯಾಸ
 

ಗೃಹ ಸಾಲ, ಗೃಹ ನವೀಕರಣ ಸಾಲ ವ್ಯತ್ಯಾಸ

ಗೃಹ ಸಾಲ ಎಂಬುವುದು ನೀವು ಹೊಸ ಮನೆಯನ್ನು ಖರೀದಿ ಮಾಡಲು ಪಡೆಯುವ ಸಾಲವಾಗಿದೆ. ಆದರೆ ಗೃಹ ನವೀಕರಣ ಸಾಲವೆಂದರೆ ನಿಮ್ಮದೇ ಆದ ಮನೆಯಲ್ಲಿ ಕೆಲವು ಅಪ್‌ಗ್ರೇಡ್ ಮಾಡಲು ಪಡೆಯುವ ಸಾಲವಾಗಿದೆ. ಗೃಹ ಸಾಲವನ್ನು ಪಡೆಯುವುದನ್ನು ಸಾಮಾನ್ಯವಾಗಿ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆದರೆ ಗೃಹ ನವೀಕರಣ ಸಾಲವನ್ನು ಅಸುರಕ್ಷಿತ ಸಾಲ ಎಂದು ಪರಿಗಣಿಸಲಾಗುತ್ತದೆ. ಆದರೆ ಎರಡು ವಿಧದ ಸಾಲಕ್ಕೂ ತನ್ನದೇ ಆದ ಪ್ರಯೋಜನಗಳು ಇದೆ.

 ಗೃಹ ಸಾಲದ ಪ್ರಯೋಜನವೇನು?

ಗೃಹ ಸಾಲದ ಪ್ರಯೋಜನವೇನು?

ಪ್ರತಿ ತಿಂಗಳು ಬಾಡಿಗೆ ಪಾವತಿಯ ತಲೆಬಿಸಿಯಿಲ್ಲ: ನೀವು ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದರೆ ಪ್ರತಿ ತಿಂಗಳು ಬಾಡಿಗೆ ನೀಡುವುದು ನಿಮಗೆ ದುಬಾರಿಯಾಗಬಹುದು. ಪ್ರತಿ ತಿಂಗಳ ಬಜೆಟ್‌ ಅನ್ನು ಹೊಂದಿಸುವುದು ಕಷ್ಟವಾಗಬಹುದು. ಆದ್ದರಿಂದಾಗಿ ಮನೆಯನ್ನು ಖರೀದಿ ಮಾಡಿ ನೀವು ಇಎಂಐ ಅನ್ನು ಪಾವತಿ ಮಾಡಿಬಿಟ್ಟರೆ ಬಳಿಕ ಬಾಡಿಗೆ ಪಾವತಿ ಮಾಡುವ ತಲೆಬಿಸಿ ಇರಲ್ಲ.

ಅಧಿಕ ಮರುಪಾವತಿ ಅವಧಿ: ನೀವು ಗೃಹ ಸಾಲವನ್ನು ಪಡೆದು ಅಧಿಕ ಮರುಪಾವತಿ ಅವಧಿಯನ್ನು ಅಧಿಕ ಹೊಂದಿದ್ದರೆ ನಿಮಗೆ ಪ್ರತಿ ತಿಂಗಳ ಇಎಂಐ ಹೊರೆ ಆಗಲಾರದು. ನಿಮ್ಮ ಮಾಸಿಕ ಇಎಂಐ ಅನ್ನು ಲೆಕ್ಕ ಹಾಕಿಕೊಳ್ಳಲು ನೀವು ಇಎಂಐ ಕಾಲ್ಕುಲೇಟರ್ ಅನ್ನು ಬಳಕೆ ಮಾಡಿ ಬಳಿಕ ಯಾವ ಅವಧಿ ಆಯ್ಕೆ ಮಾಡುವುದು ಎಂದು ನಿರ್ಧಾರ ಮಾಡಿಕೊಳ್ಳಬಹುದು.

ನಿಮ್ಮ ಕನಸಿನ ಮನೆ ಖರೀದಿ ಮಾಡಲು ಸಾಲ ಸಹಾಯಕ: ನಿಮ್ಮ ಮಾಸಿಕ ವೇತನವನ್ನು ಒಟ್ಟುಗೂಡಿಸಿಕೊಂಡು ಮನೆಯನ್ನು ಖರೀದಿ ಮಾಡುವುದು ಸಾಧ್ಯವಾಗದ ಕಾರ್ಯ. ಆದರೆ ಗೃಹ ಸಾಲವು ನೀವು ನಿಮ್ಮ ಕನಸಿನ ಮನೆಯನ್ನು ಖರೀದಿ ಮಾಡಲು ಸಹಕಾರಿಯಾಗಲಿದೆ.

 

 ಗೃಹ ನವೀಕರಣ ಸಾಲ ಪ್ರಯೋಜನವೇನು?

ಗೃಹ ನವೀಕರಣ ಸಾಲ ಪ್ರಯೋಜನವೇನು?

ಮೇಲಾಧಾರ ಬೇಕಾಗಿಲ್ಲ: ಗೃಹ ನವೀಕರಣ ಸಾಲವು ಅಸುರಕ್ಷಿತ ವೈಯಕ್ತಿಕ ಸಾಲವಾಗಿದೆ. ಇಲ್ಲಿ ನಾವು ಯಾವುದೇ ಮೇಲಾಧಾರವನ್ನು ನೀಡಬೇಕಾಗಿಲ್ಲ.
ಕಡಿಮೆ ಬಡ್ಡಿದರ: ನೀವು ಮನೆಯನ್ನು ನವೀಕರಣ ಮಾಡಲು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗಲಿದೆ. ಆದ್ದರಿಂದಾಗಿ ನೀವು ಈ ಸಾಲವನ್ನು ಪಡೆದರೆ ನಿಮಗೆ ಹೊರೆಯಾಗಲಾರದು.
ಅಡೆತಡೆ ಇಲ್ಲದ ಪ್ರಕ್ರಿಯೆ: ನೀವು ಗೃಹ ನವೀಕರಣಕ್ಕೆ ಸಾಲವನ್ನು ಪಡೆಯಬೇಕಾದರೆ ಅದಕ್ಕಾಗಿ ಹಲವಾರು ದಾಖಲೆಗಳನ್ನು ಭರ್ತಿ ಮಾಡಬೇಕಾಗಿಲ್ಲ. ನೀವು ಆನ್‌ಲೈನ್ ಮೂಲಕವೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಭಾರತದಲ್ಲಿ ಸಾಲ ಒದಗಿಸುವ ಹಲವಾರು ಆಪ್‌ಗಳು ಇದೆ. ಆದರೆ ನಾವು ಅದು ಸುರಕ್ಷಿತ ಆಪ್ ಹೌದೇ ಎಂದು ನೋಡಿಕೊಳ್ಳಬೇಕಾಗುತ್ತದೆ.

English summary

Difference Between a Home Loan and a Home Renovation Loan, Explained in Kannada

Having a house of your own is a dream of many. There is a Difference Between a Home Loan and a Home Renovation Loan, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X