For Quick Alerts
ALLOW NOTIFICATIONS  
For Daily Alerts

2021ರ ಜನವರಿ 1ರಿಂದ FASTag ಕಡ್ಡಾಯ; ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು

|

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ 2021ರ ಜನವರಿ 1ನೇ ತಾರೀಕಿನಿಂದ FASTag ಎಲ್ಲ ವಾಹನಗಳಿಗೆ ಕಡ್ಡಾಯ ಮಾಡಲಾಗಿದೆ. ಟೋಲ್ ಪ್ಲಾಜಾಗಳ ಮೂಲಕ ಸಾಗಿಹೋಗುವ ಎಲ್ಲ ವಾಹನಗಳಿಗೆ ಇದು ಅನ್ವಯ ಆಗಲಿದೆ. FASTag ಬಗ್ಗೆ ಹಲವರಿಗೆ ಹಲವು ಬಗೆಯ ಪ್ರಶ್ನೆಗಳಿವೆ. ಅವುಗಳಿಗೆ ಉತ್ತರ ನೀಡುವ ಪ್ರಯತ್ನವೇ ಈ ಲೇಖನ.

* FASTag ಅಂದರೇನು ಮತ್ತು ಎಲ್ಲಿಯವರೆಗೆ ಸಿಂಧುತ್ವ ಹೊಂದಿರುತ್ತದೆ?
ಇದು ಸ್ಟಿಕ್ಕರ್. ಕಾರಿನ ಒಳಭಾಗದಿಂದ ವಿಂಡ್ ಶೀಲ್ಡ್ ಗೆ ಇದನ್ನು ಅಂಟಿಸಲಾಗಿರುತ್ತದೆ. FASTagನಲ್ಲಿ ಇಂಪ್ರಿಂಟೆಡ್ ರೇಡಿಯೋ- ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (RFID) ಬಾರ್ ಕೋಡ್ ಇರುತ್ತದೆ. ಅದು ಆ ವಾಹನದ ನೋಂದಣಿ ಮಾಹಿತಿ ಎಲ್ಲವನ್ನೂ ಒಳಗೊಂಡಿರುತ್ತದೆ. ವಿತರಣೆ ಆದ ದಿನದಿಂದ ಐದು ವರ್ಷದ ತನಕ ಮಾನ್ಯತೆ ಪಡೆದುಕೊಂಡಿರುತ್ತದೆ.

* ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಟೋಲ್ ಪ್ಲಾಜಾ ಮೂಲಕ ಸಾಗಿ ಹೋಗುವಾಗ ಅಲ್ಲಿ FASTag ರೀಡರ್ ಗಳು ಇರುತ್ತವೆ. ಅವು ಸ್ಟಿಕ್ಕರ್ ಅನ್ನು ರೀಡ್ ಮಾಡುತ್ತವೆ. ಆ ನಂತರ ನಿರ್ದಿಷ್ಟ ಮೊತ್ತವನ್ನು ಕಡಿತ ಮಾಡುತ್ತವೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ಬಹಳ ಹೊತ್ತು ವಾಹನಗಳನ್ನು ನಿಲ್ಲಿಸಿಕೊಳ್ಳುವ ಅಗತ್ಯ ಇಲ್ಲ. ಮನುಷ್ಯರ ಜತೆಗಿನ ಸಂವಹನ ಅಥವಾ ಮಧ್ಯಪ್ರವೇಶದ ಅಗತ್ಯ ಇಲ್ಲದೆ, ನಿಂತು ಹಣ ನೀಡುವ ಪ್ರಮೇಯ ಇಲ್ಲದೆ ಮುಂದಕ್ಕೆ ಸಾಗಬಹುದು.

FASTag ಮೂಲಕ ಒಂದೇ ದಿನದಲ್ಲಿ 50 ಲಕ್ಷ ಟ್ರಾನ್ಸಾಕ್ಷನ್, 80 ಕೋಟಿ ರು. ಸಂಗ್ರಹFASTag ಮೂಲಕ ಒಂದೇ ದಿನದಲ್ಲಿ 50 ಲಕ್ಷ ಟ್ರಾನ್ಸಾಕ್ಷನ್, 80 ಕೋಟಿ ರು. ಸಂಗ್ರಹ

* FASTag ಖರೀದಿಗೆ ಯಾವ ದಾಖಲಾತಿಗಳು ಬೇಕು?
FASTag ಖರೀದಿಗೆ ಅರ್ಜಿದಾರರು ವಾಹನ ನೋಂದಣಿ ದಾಖಲಾತಿಗಳು ಮತ್ತು ವೈಯಕ್ತಿಕ ಗುರುತಿನ ಕೆವೈಸಿ ಪ್ರಕ್ರಿಯೆ ಕಡ್ಡಾಯ. ಅದೇ ರೀತಿ ಬ್ಯಾಂಕ್ ಗಳಲ್ಲಿ, ಅದಾಗಲೇ ಗ್ರಾಹಕರಾಗಿದ್ದಲ್ಲಿ ಆರ್.ಸಿ. ರಿಪೋರ್ಟ್ ಅಷ್ಟೇ ಸಾಕು. ಇನ್ನು ಏರ್ ಟೆಲ್ ಮತ್ತು ಪೇಟಿಎಂ ಮೂಲಕ ಅಪ್ಲೈ ಮಾಡುತ್ತಿದ್ದಲ್ಲಿ ವೈಯಕ್ತಿಕ ಗುರುತಿನ ಚೀಟಿ ಮತ್ತು ಆರ್.ಸಿ. ಇದ್ದರೆ ಸಾಕು.

2021 ಜನವರಿ 1ರಿಂದ FASTag ಕಡ್ಡಾಯ; ನಿಮಗೆ ಗೊತ್ತಿರಬೇಕಾದ ಸಂಗತಿಗಳು

* ಇದರ ಅನುಕೂಲಗಳೇನು?
ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳುವಂತೆ, ಪ್ರಯಾಣಿಕರಿಗೆ FASTag ಬಹಳ ಉಪಯುಕ್ತ. ಏಕೆಂದರೆ, ಇದು ಇದ್ದಲ್ಲಿ ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸುವ, ನಗದು ಪಾವತಿಸುವ ಅಗತ್ಯ ಇಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿತಾಯ ಆಗುತ್ತದೆ.

* FASTag ಪಡೆಯುವುದು ಎಲ್ಲಿ?
ಬ್ಯಾಂಕ್ ಗಳು ಮತ್ತು ಇ- ಕಾಮರ್ಸ್ ಗಳೂ ಸೇರಿದಂತೆ ಹಲವು ಸಂಸ್ಥೆಗಳ ಜತೆ ಸರ್ಕಾರವು ಸಹಭಾಗಿತ್ವ ವಹಿಸಿ, FASTag ಅನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಿದೆ. ಸದ್ಯಕ್ಕೆ ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೊಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಇಂಥ ಬ್ಯಾಂಕ್ ಗಳಿಂದ FASTag ವಿತರಿಸಲಾಗುತ್ತಿದೆ.

ಈಚೆಗೆ ಐಸಿಐಸಿಐ ಬ್ಯಾಂಕ್ ಮತ್ತು ಗೂಗಲ್ ಸಹಭಾಗಿತ್ವ ಘೋಷಣೆ ಮಾಡಿದ್ದು, ಅರ್ಜಿದಾರರಿಗೆ FASTagಗೆ ಪಾವತಿಸಲು ಅನುವು ಮಾಡಿಕೊಟ್ಟಿದ್ದು, ಗೂಗಲ್ ಪೇ ಮೂಲಕ ಹಣ ಪಾವತಿಸಬಹುದು. ಅಮೆಜಾನ್, ಪೇಟಿಎಂ ಹಾಗೂ ಏರ್ ಟೆಲ್ ಪೇಮೆಂಟ್ ಆಪ್ ಮೂಲಕವೂ ನೀಡಬಹುದು.

ಇನ್ನು ಭಾರತದಾದ್ಯಂತ ಇರುವ ಟೋಲ್ ಪ್ಲಾಜಾಗಳ ಪೈಕಿ ಕೆಲವೆಡೆಗಳಲ್ಲಿ ಇವುಗಳನ್ನು ಖರೀದಿ ಮಾಡಬಹುದು.

* FASTagನಲ್ಲಿ ಬ್ಯಾಲೆನ್ಸ್ ಪರೀಕ್ಷಿಸುವುದು ಮತ್ತು ರೀಚಾರ್ಜ್ ಹೇಗೆ?
ವಿತರಕ ಬ್ಯಾಂಕ್ ನಿಂದ ಅರ್ಜಿದಾರರಿಗೆ FASTag ವ್ಯಾಲೆಟ್ ಸೃಷ್ಟಿಯಾಗುತ್ತದೆ. ಆ ವ್ಯಾಲೆಟ್ ಗೆ ಹಣವನ್ನು ಸೇರ್ಪಡೆ ಮಾಡಿಕೊಳ್ಳಬಹುದು.

ಉದಾಹರಣೆಗೆ, ಒಬ್ಬ ವ್ಯಕ್ತಿ ಬ್ಯಾಂಕ್ ನಿಂದ FASTag ಖರೀದಿ ಮಾಡಿದಲ್ಲಿ ನಿಮ್ಮ ಖಾತೆಯಿಂದ ನೇರವಾಗಿ ಹಣವನ್ನು ಕಡಿತ ಮಾಡಲಾಗುತ್ತದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಇರಬೇಕು.

ಮೊಬೈಲ್ ಪೇಮೆಂಟ್ಸ್ ಬ್ಯಾಂಕ್ ಇದ್ದಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಮತ್ತು ಇತರ ಪಾವತಿ ವಿಧಾನದಲ್ಲಿ ಸೇವೆಯನ್ನು ಪಡೆಯಬಹುದು. ಏರ್ ಟೆಲ್ ಮೂಲಕ ಖರೀದಿ ಮಾಡಿದರೂ ಇದೇ ರೀತಿ ಇರುತ್ತದೆ. ಏರ್ ಟೆಲ್ ಪೇಮೆಂಟ್ ಮೂಲಕ ಕೂಡ FASTag ರೀಚಾರ್ಜ್ ಮಾಡಬಹುದು.

* FASTagನಿಂದ ಯಾರಿಗೆಲ್ಲ ವಿನಾಯಿತಿ ಇದೆ?
ಈ ಹಿಂದೆ ಯಾರಿಗೆಲ್ಲ ವಿನಾಯಿತಿ ಇತ್ತೋ ಅವರಿಗೆಲ್ಲ FASTagನಿಂದ ವಿನಾಯಿತಿ ಇದೆ. ನ್ಯಾಯಾಧೀಶರು, ರಾಜಕಾರಣಿಗಳು ಮತ್ತು ತುರ್ತು ಸೇವೆ ಕಾರ್ಮಿಕರು ಇತರರಿಗೆ FASTagನಿಂದ ವಿನಾಯಿತಿ ಇದೆ.

English summary

FASTag Mandatory From January 1st; all you need to know in Kannada

FAStag will become from January 1, 2021. Here is the must know facts about FASTag.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X