For Quick Alerts
ALLOW NOTIFICATIONS  
For Daily Alerts

Income Tax Refund Status : ಆದಾಯ ತೆರಿಗೆ ರಿಫಂಡ್ ಆಗಿಲ್ಲವೇ, ಹೀಗೆ ಚೆಕ್ ಮಾಡಿ

|

ತೆರಿಗೆದಾರರು ಹಲವಾರು ಕಾರಣದಿಂದಾಗಿ ತಾವು ಪಾವತಿ ಮಾಡಬೇಕಾದ ತೆರಿಗೆಗಿಂತ ಅಧಿಕ ತೆರಿಗೆಯನ್ನೇ ಪಾವತಿ ಮಾಡುತ್ತಾರೆ. ಈ ಸಂದರ್ಭದಲ್ಲಿ ನಮ್ಮ ಹಣವನ್ನು ನಾವು ಮರಳಿ ಪಡೆಯಲು ಇರುವ ಒಂದೇ ಒಂದು ದಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿ ರಿಫಂಡ್ ಪಡೆಯುವುದು ಆಗಿದೆ. ನೀವು ಐಟಿಆರ್ ಸಲ್ಲಿಕೆ ಮಾಡಿದ್ದರೂ ಇನ್ನೂ ಕೂಡಾ ಆದಾಯ ತೆರಿಗೆ ರಿಫಂಡ್ ಆಗದಿದ್ದರೆ ನೀವು ಅದನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.

ಇನ್ನು ಹಲವಾರು ಕಾರಣದಿಂದಾಗಿ ಹೆಚ್ಚಿನ ತೆರಿಗೆ ಕಡಿತವಾಗಿರಬಹುದು. ಆ ಸಂದರ್ಭದಲ್ಲಿ ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಮೂಲಕ ರಿಫಂಡ್ ಪಡೆಯಲು ಸಾಧ್ಯವಾಗಲಿದೆ. ಇನ್ನು ಐಟಿಆರ್ ಎನ್ನುವುದು ನೀವು ತೆರಿಗೆ ಬಾಕಿ ಇದ್ದರೆ ಅದರ ಲೆಕ್ಕಾಚಾರವನ್ನು ಕೂಡಾ ಮಾಡುವ ವಿಧಾನವಾಗಿದೆ. ನೀವು ತೆರಿಗೆ ಪಾವತಿ ಬಾಕಿ ಇದ್ದರೆ ಅದರ ಬಗ್ಗೆ ನಿಮಗೆ ನೋಟಿಫಿಕೇಶನ್ ಬರಲಿದೆ.

ಆದಾಯ ತೆರಿಗೆ ರಿಫಂಡ್ ಎಂದರೇನು, ಹೇಗೆ ಪಡೆಯುವುದು, ಅರ್ಹತೆ ಏನು? ಇಲ್ಲಿದೆ ಮಾಹಿತಿಆದಾಯ ತೆರಿಗೆ ರಿಫಂಡ್ ಎಂದರೇನು, ಹೇಗೆ ಪಡೆಯುವುದು, ಅರ್ಹತೆ ಏನು? ಇಲ್ಲಿದೆ ಮಾಹಿತಿ

ಇನ್ನು ನೀವು ಐಟಿಆರ್ ಫೈಲ್ ಮಾಡುವಾಗ ವಿನಾಯಿತಿಯನ್ನು ಕೂಡಾ ಪಡೆಯಲು ಸಾಧ್ಯವಾಗಲಿದೆ. ಸಾಮಾನ್ಯವಾಗಿ ಈಗಾಗಲೇ ಹೇಳಿರುವಂತೆ ನೀವು ಎಷ್ಟು ತೆರಿಗೆಯನ್ನು ಪಾವತಿ ಮಾಡಬೇಕೋ ಅದಕ್ಕಿಂತ ಅಧಿಕ ತೆರಿಗೆ ಪಾವತಿ ಮಾಡಿದ್ದರೆ ಮಾತ್ರ ನಿಮಗೆ ಆದಾಯ ತೆರಿಗೆ ರಿಫಂಡ್ ಆಗಲಿದೆ. ಇದಕ್ಕಾಗಿ ಫಾರ್ಮ್ 30 ಅನ್ನು ಬಳಕೆ ಮಾಡಲಾಗುತ್ತದೆ. ಈ ಬಗ್ಗೆ ನಿಮಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 ನಮ್ಮ ಆದಾಯ ತೆರಿಗೆ ರಿಫಂಡ್ ಟ್ರ್ಯಾಕ್ ಮಾಡುವುದು ಹೇಗೆ?

ನಮ್ಮ ಆದಾಯ ತೆರಿಗೆ ರಿಫಂಡ್ ಟ್ರ್ಯಾಕ್ ಮಾಡುವುದು ಹೇಗೆ?

ನಿಮ್ಮ ರಿಫಂಡ್ ಅನ್ನು ನೀವು ಟ್ರ್ಯಾಕ್ ಮಾಡಲು ಐಟಿ ಇಲಾಖೆ ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಆದಾಯ ತೆರಿಗೆ ರಿಫಂಡ್ ಪ್ರಕ್ರಿಯೆ ಆಗದಿದ್ದರೆ ಈ ಬಗ್ಗೆ ನಿಮಗೆ ಸಂದೇಶ ಬರಲಿದೆ. ಇದಕ್ಕಾಗಿ ನೀವು ಮೊದಲು ಆದಾಯ ತೆರಿಗೆ ಇಫೈಲಿಂಗ್ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. (incometaxindiaefiling.gov.in). ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್, ದಿನಾಂಕ, ಕ್ಯಾಪ್ಚಾ ಹಾಕಿ ಲಾಗಿನ್ ಆಗಬೇಕಾಗುತ್ತದೆ. ಆ ಬಳಿಕ My Account ಸೆಕ್ಷನ್‌ಗೆ ಹೋಗಿ Refund/Demand Status ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮಾಹಿತಿ ಲಭ್ಯವಾಗಲಿದೆ.

ಈ ಕಾರ್ಯ ಮಾಡದಿದ್ದರೆ 2022-23ರ ಐಟಿಆರ್ ಅಮಾನ್ಯ!ಈ ಕಾರ್ಯ ಮಾಡದಿದ್ದರೆ 2022-23ರ ಐಟಿಆರ್ ಅಮಾನ್ಯ!

ರಿಫಂಡ್ ಸ್ಟೇಟಸ್ ಬಗ್ಗೆ ಮಾಹಿತಿ
 

ರಿಫಂಡ್ ಸ್ಟೇಟಸ್ ಬಗ್ಗೆ ಮಾಹಿತಿ

ನಿಮ್ಮ ರಿಫಂಡ್ ಸ್ಟೇಟಸ್ ‘processed,' ಎಂದು ಇದ್ದರೆ ರಿಟರ್ನ್ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಅರ್ಥ. ‘Submitted and pending for e-verification/verification' ಎಂದು ಇದ್ದರೆ ನೀವು ಐಟಿಆರ್ ಫೈಲ್ ಮಾಡಿದ್ದೀರಿ ಆದರೆ ಈವರೆಗೂ ಇ ವೆರಿಫಿಕೇಶನ್ ಆಗಿಲ್ಲ ಎಂದು ಅರ್ಥ ಅಥವಾ ಐಟಿ ಇಲಾಖೆಗೆ ಇನ್ನು ಕೂಡಾ ಈ ಐಟಿಆರ್ ಲಭ್ಯವಾಗಿಲ್ಲ ಎಂದು ಅರ್ಥ. ‘Successfully e-verified/verified' ಎಂದು ಇದ್ದರೆ ನೀವು ಐಟಿಆರ್ ಅನ್ನು ಸಲ್ಲಿಕೆ ಮಾಡಿದ್ದು ರಿಟರ್ನ್ ಅನ್ನು ವೆರಿಫಿಕೇಶನ್ ಮಾಡಲಾಗಿದೆ. ಆದರೆ ರಿಟರ್ನ್ ಅನ್ನು ಇನ್ನು ಕೂಡಾ ಐಟಿ ಅಧಿಕಾರಿಗಳು ಪ್ರೋಸೆಸಿಂಗ್ ಮಾಡಿಲ್ಲ ಎಂದಾಗಿದೆ. ‘Defective' ಅಥವಾ ‘Expired' ಎಂದು ಕೂಡಾ ಕಾಣಿಸಬಹುದು. Defective ಎಂದು ಇದ್ದರೆ ನಿಮ್ಮ ಐಟಿಆರ್ ಫೈಲಿಂಗ್‌ನಲ್ಲಿ ತಪ್ಪು ಇರುವುದು ಐಟಿಆರ್ ಇಲಾಖೆಯ ಗಮನಕ್ಕೆ ಬಂದಿದೆ ಎಂದು ಅರ್ಥವಾಗಿದೆ. Expired ಎಂದು ಇದ್ದರೆ 90 ದಿನಗಳ ಕಾಲಾವಧಿಯ ಒಳಗೆ ಈ ರಿಫಂಡ್ ಕ್ಲೈಮ್ ಮಾಡಲಾಗಿದೆ ಎಂದಾಗಿದೆ.

 ಆದಾಯ ತೆರಿಗೆ ರಿಫಂಡ್ ಪಾವತಿ ಹೇಗೆ?

ಆದಾಯ ತೆರಿಗೆ ರಿಫಂಡ್ ಪಾವತಿ ಹೇಗೆ?

ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿ: ತೆರಿಗೆದಾರರ ಬ್ಯಾಂಕ್ ಖಾತೆಗೆ ಮರುಪಾವತಿಸಬೇಕಾದ ಮೊತ್ತದ ನೇರ ವರ್ಗಾವಣೆ ಮಾಡುವುದು ಸಾಮಾನ್ಯ ವಿಧಾನವಾಗಿದೆ. ಈ ವಹಿವಾಟನ್ನು NECS/RTGS ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ. ಇದಕ್ಕಾಗಿ ನಾವು ಆದಾಯ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ರಿಟರ್ನ್ ಫಾರ್ಮ್‌ಗಳಲ್ಲಿ ಸರಿಯಾಗಿ ಬ್ಯಾಂಕ್ ಖಾತೆ ವಿವರ ಉಲ್ಲೇಖ ಮಾಡಿದ್ದೇವೆಯೇ ಎಂದು ನೋಡಿಕೊಳ್ಳಬೇಕು.

ಚೆಕ್ ಮೂಲಕ ಆದಾಯ ತೆರಿಗೆ ಮರುಪಾವತಿ: ಆದಾಯ ತೆರಿಗೆ ಮರುಪಾವತಿಗಳನ್ನು ಮಾಡಲು ಈ ವಿಧಾನವು ಪರ್ಯಾಯ ಆಯ್ಕೆಯಾಗಿದೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಸಮಯದಲ್ಲಿ ತೆರಿಗೆದಾರರು ಒದಗಿಸಿದ ಬ್ಯಾಂಕ್ ವಿವರಗಳು ಅಸ್ಪಷ್ಟ, ಅಪೂರ್ಣ ಅಥವಾ ತಪ್ಪು ಎಂದು ಅನಿಸಿದರೆ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆದಾರರು ಒದಗಿಸಿದ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಚೆಕ್ ಅನ್ನು ನೀಡುತ್ತಾರೆ.

English summary

Have Not Received Income Tax Refund Yet, Follow This Steps To Track ITR Refund Status

If you have not Received Income Tax Refund Yet, Follow This Steps To Track ITR Refund Status. Here's Full details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X