For Quick Alerts
ALLOW NOTIFICATIONS  
For Daily Alerts

ATM ಕಾರ್ಡ್‌ ಇಲ್ಲದೆ ಗೂಗಲ್ ಪೇ, ಪೇಟಿಎಂನಿಂದ ಹಣ ವಿತ್‌ಡ್ರಾ ಮಾಡುವುದು ಹೇಗೆ?

|

ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿರುವ ಹಣವನ್ನು ಹಿಂಪಡೆಯಲು ಬ್ಯಾಂಕ್‌ಗೆ ತೆರಳುವುದಕ್ಕಿಂತ ಹೆಚ್ಚಾಗಿ ಗ್ರಾಹಕರು ಎಟಿಎಂನಿಂದಲೇ ಹಣ ಪಡೆಯುತ್ತಾರೆ. ಪ್ರತಿದಿನ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಎಟಿಎಂನಿಂದ ಹಣ ವಿತ್‌ಡ್ರಾ ಮಾಡುತ್ತಾರೆ. ಎಟಿಎಂನಲ್ಲೂ ಗ್ರಾಹಕರ ಸುರಕ್ಷತೆಗೆ ಅನೇಕ ಬ್ಯಾಂಕ್‌ಗಳು ದಿನಕ್ಕೆ ನಿಗದಿತ ಪ್ರಮಾಣದಲ್ಲಿ ಹಣ ವಿತ್‌ಡ್ರಾ ಮಾಡಲು ಅವಕಾಶ ನೀಡಿವೆ.

ಕೆಲವೊಮ್ಮೆ ನೀವು ಡೆಬಿಟ್‌ ಕಾರ್ಡ್ ಬಿಟ್ಟು ಬಂದಿದ್ದರೆ ಹಣ ಹಿಂಪಡೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದರೆ ಅದು ಸುಳ್ಳಾಗಬಹುದು. ಏಕೆಂದರೆ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯುಪಿಐ ಆ್ಪ್ ಮೂಲಕವೇ ಹಣ ವಿತ್‌ಡ್ರಾ ಮಾಡಬಹುದು.

1500 ಕ್ಕೂ ಹೆಚ್ಚು ಎಟಿಎಂಗಳ ನವೀಕರಣ

1500 ಕ್ಕೂ ಹೆಚ್ಚು ಎಟಿಎಂಗಳ ನವೀಕರಣ

ಹೌದು, ಎಟಿಎಂಗಳ ತಯಾರಕರಾದ ಎನ್‌ಸಿಆರ್ ಕಾರ್ಪೊರೇಷನ್ ಯುಪಿಐ ಪ್ಲಾಟ್‌ಫಾರ್ಮ್ ಆಧರಿಸಿ ಮೊದಲ ಇಂಟರ್ಪೋರೆಬಲ್ ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ (ಐಸಿಸಿಡಬ್ಲ್ಯೂ) ಹೊಸ ವಿಧಾನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಯುಪಿಐ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ಈ ವಿಶೇಷ ಸೌಲಭ್ಯದೊಂದಿಗೆ ಎಟಿಎಂಗಳನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್‌ಸಿಆರ್ ಕಾರ್ಪೊರೇಶನ್‌ನೊಂದಿಗೆ ಕೈಜೋಡಿಸಿದೆ. ಈ ಸೌಲಭ್ಯದೊಂದಿಗೆ ಬ್ಯಾಂಕ್ ಇದುವರೆಗೆ 1500 ಕ್ಕೂ ಹೆಚ್ಚು ಎಟಿಎಂಗಳನ್ನು ನವೀಕರಿಸಿದೆ.

 

ಯುಪಿಐ ಆ್ಯಪ್ ಮೂಲಕ ಹಣ ಹಿಂಪಡೆಯುವುದು ಹೇಗೆ?

ಯುಪಿಐ ಆ್ಯಪ್ ಮೂಲಕ ಹಣ ಹಿಂಪಡೆಯುವುದು ಹೇಗೆ?

ಐಸಿಸಿಡಬ್ಲ್ಯೂ ವಿಧಾನ ಆಧರಿತ ಎಟಿಎಂಗಳಿಂದ ನೀವು ಕಾರ್ಡ್‌ ಇಲ್ಲದೆ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಅದು ಹೇಗೆ ಎಂಬುದನ್ನು ಈ ಕೆಳಗೆ ತಿಳಿಯಿರಿ

* ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಯುಪಿಐ ಅಪ್ಲಿಕೇಶನ್ ತೆರೆಯಿರಿ.
* ನಂತರ ಎಟಿಎಂ ಸ್ಕ್ರೀನ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
* ಈಗ ನಿಮಗೆ ಬೇಕಿರುವ ಹಣವನ್ನು ಮೊಬೈಲ್‌ನಲ್ಲಿ ನಮೂದಿಸಿ.
* ನಂತರ ನಿಮ್ಮ 4 ಅಥವಾ 6 ಅಂಕಿಯ ಯುಪಿಐ ಪಿನ್ ಸಂಖ್ಯೆಯನ್ನು ನಮೂದಿಸಿ
* ಪ್ರೊಸೀಡ್ ಬಟನ್ ಕ್ಲಿಕ್ ಮಾಡುವ ಮೂಲಕ ಈಗ ದೃಢೀಕರಿಸಿ
* ನೀವು ಒಂದು ಸಮಯದಲ್ಲಿ ಗರಿಷ್ಠ 5 ಸಾವಿರ ರೂಪಾಯಿಗಳನ್ನು ಹಿಂಪಡೆಯಬಹುದು

 

ಯುಪಿಐ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಯುಪಿಐ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಏಕೀಕೃತ ಪಾವತಿ ಇಂಟರ್ಫೇಸ್ / ಯುಪಿಐ ನೈಜ ಸಮಯ ಪಾವತಿ ವ್ಯವಸ್ಥೆಯಾಗಿದ್ದು, ಇದು ಮೊಬೈಲ್ ಅಪ್ಲಿಕೇಶನ್ ಮೂಲಕ ಬ್ಯಾಂಕ್ ಖಾತೆಗೆ ತಕ್ಷಣ ಹಣವನ್ನು ವರ್ಗಾಯಿಸಬಹುದು. ಯುಪಿಐ ಮೂಲಕ ನೀವು ಹಲವಾರು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬಹುದು. ಅದೇ ಸಮಯದಲ್ಲಿ, ಯುಪಿಐ ಆ್ಯಪ್ ಮೂಲಕ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು. ಭೀಮ್, ಗೂಗಲ್ ಪೇ, ಅಮೆಜಾನ್ ಪೇ, ಫೋನ್‌ಪೇ, ಇತ್ಯಾದಿಗಳು ಯುಪಿಐ ಅಪ್ಲಿಕೇಶನ್‌ಗಳಾಗಿವೆ. ಇದರಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವ ಮೂಲಕ ನೀವು ಹಣವನ್ನು ವರ್ಗಾಯಿಸಬಹುದು.

ಯುಪಿಐ ಅಕೌಂಟ್ ರಚಿಸುವುದು ಹೇಗೆ?

ಯುಪಿಐ ಅಕೌಂಟ್ ರಚಿಸುವುದು ಹೇಗೆ?

ಯುಪಿಐ ಅಕೌಂಟ್ ರಚಿಸಲು ನೀವು ಮೇಲೆ ತಿಳಿಸಿದ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಇದರ ನಂತರ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದರ ಮೇಲೆ ನೋಂದಾಯಿಸಿಕೊಳ್ಳಬೇಕು.

ಇದರ ನಂತರ ನೀವು ನಿಮ್ಮ ಬ್ಯಾಂಕ್‌ ಖಾತೆಯನ್ನು ಇದಕ್ಕೆ ಸೇರಿಸಬೇಕಾಗಿದೆ. ಖಾತೆಯನ್ನು ಸೇರಿಸಿದ ನಂತರ, ಇಲ್ಲಿ ನೀವು ನಿಮ್ಮ ಬ್ಯಾಂಕ್ ಹೆಸರನ್ನು ಹುಡುಕಬೇಕಾಗಿದೆ. ಬ್ಯಾಂಕಿನ ಹೆಸರನ್ನು ಕ್ಲಿಕ್ ಮಾಡಿದ ನಂತರ, ನಿಮ್ಮ ಖಾತೆಯನ್ನು ನೀವು ಸೇರಿಸಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಖಾತೆಗೆ ಲಿಂಕ್ ಮಾಡಿದ್ದರೆ, ಅದು ಕಾಣಿಸುತ್ತದೆ. ಖಾತೆಯನ್ನು ಆಯ್ಕೆಮಾಡಿ. ಇದರ ನಂತರ, ಪಾವತಿ ಮಾಡಲು ನಿಮ್ಮ ಎಟಿಎಂ ಕಾರ್ಡ್‌ನ ವಿವರಗಳನ್ನು ನೀವು ನೀಡಬೇಕಾಗುತ್ತದೆ. ಅದನ್ನು ನೀಡುವ ಮೂಲಕ, ನಿಮ್ಮ ಯುಪಿಐ ಖಾತೆಯನ್ನು ರಚಿಸಬಹುದು.

 

English summary

Here's How to withdraw cash from ATM using Google Pay, Paytm

You will soon be able to withdraw cash from the ATM without a Debit Card by just scanning the QR Code through the UPI App. Know more
Story first published: Saturday, April 3, 2021, 9:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X