For Quick Alerts
ALLOW NOTIFICATIONS  
For Daily Alerts

ಸಿನಿಮಾ ಇಂಡಸ್ಟ್ರಿಯಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ, ವಿತರಣೆ ಹೇಗೆ?

|

2021ರಲ್ಲಿ 90 ಬಿಲಿಯನ್ ರೂಪಾಯಿ ಸಿನಿಮಾ ಇಂಡಸ್ಟ್ರಿಯ ಆದಾಯವಾಗಿದೆ. 2018ರಲ್ಲಿ ಭಾರತೀಯ ಸಿನಿಮಾ ಇಂಡಸ್ಟ್ರಿಯ ಆದಾಯ 13,800 ಕೋಟಿ ಆಗಿದ್ದವು. ಹಾಗೆಯೇ 2020ರ ವೇಳೆಗೆ 23,800 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜು ಮಾಡಲಾಗಿತ್ತು.

 

ಟೆಲಿವಿಜನ್, ಸಿನಿಮಾ, ಸಂಗೀತ ಹಾಗೂ ಇತರೆ ಇಂಡಸ್ಟ್ರಿಯನ್ನು ಜೊತೆ ಮಾಡಿದರೆ, 2017ರಲ್ಲಿ ಸಿನಿಮಾ ಇಂಡಸ್ಟ್ರಿಯ ಆದಾಯ 22 ಬಿಲಿಯನ್ ಡಾಲರ್ ಆಗಿತ್ತು. 2020ರ ವೇಳೆಗೆ 31 ಬಿಲಿಯನ್ ಡಾಲರ್ ಆದಾಯವಾಗುವ ಅಂದಾಜು ಮಾಡಲಾಗಿತ್ತು.

2022ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಧಿಕ ಹಣ ಬಾಚಿದ ಟಾಪ್ 5 ಭಾರತೀಯ ಸಿನೆಮಾಗಳು

ಆದರೆ ಸಿನಿಮಾದ ಆದಾಯವನ್ನು ಯಾವ ರೀತಿಯಲ್ಲಿ ಲೆಕ್ಕಾಚಾರ ಹಾಕಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?, ಈ ಬಗ್ಗೆ ನಾವು ಇಲ್ಲಿ ವಿವರಣೆಯನ್ನು ನೀಡಿದ್ದೇವೆ. ಅದನ್ನು ತಿಳಿಯುವುದಕ್ಕೆ ಇಲ್ಲಿ ಸಾಮಾನ್ಯವಾಗಿ ಬಳಕೆ ಮಾಡಲಾಗುವ ಕೆಲವು ಪದಗಳ ಬಗ್ಗೆಯೂ ಇಲ್ಲಿ ವಿವರಣೆ ಇದೆ. ಮುಂದೆ ಓದಿ.....

 ನಿರ್ಮಾಪಕ ಎಂದರೆ ಯಾರು?

ನಿರ್ಮಾಪಕ ಎಂದರೆ ಯಾರು?

ಒಂದು ಸಿನಿಮಾವನ್ನು ನಿರ್ಮಾಣ ಮಾಡಲು ಹೂಡಿಕೆ ಮಾಡುವವರೇ ನಿರ್ಮಾಪಕ. ಸಿನಿಮಾಕ್ಕಾಗಿ ನಿರ್ಮಾಪಕರು ಮಾಡುವ ಹೂಡಿಕೆಯನ್ನು ಬಜೆಟ್ ಎಂದು ಕರೆಯಲಾಗುತ್ತದೆ. ನಟರ ಸಂಭಾವನೆ, ತಂಡದ ಇತರೆ ವ್ಯಕ್ತಿಗಳ ಸಂಭಾವಣೆ, ತಾಂತ್ರಿಕ ವೆಚ್ಚ, ಇತರೆ ಎಲ್ಲಾ ವೆಚ್ಚಗಳು ಇದರಲ್ಲಿ ಸೇರುತ್ತದೆ. ಈ ವೆಚ್ಚ ಮಾತ್ರವಲ್ಲದೆ ಈ ಸಿನಿಮಾ ಸಂಪೂರ್ಣವಾದ ಬಳಿಕ ಪ್ರಚಾರ ಕಾರ್ಯಕ್ಕಾಗಿಯೂ ಖರ್ಚುಗಳು ಆಗಲಿದೆ. ಇದನ್ನು ಕೂಡಾ ನಿರ್ಮಾಪಕರೇ ಹೂಡಿಕೆ ಮಾಡುತ್ತಾರೆ.

ಮನರಂಜನೆಗೂ ತೆರಿಗೆ: ಯಾವ ರಾಜ್ಯದಲ್ಲಿ ಎಷ್ಟಿದೆ, ಹೇಗೆ ಅನ್ವಯ?

 ಸಿನಿಮಾ ವಿತರಕರು ಯಾರು?

ಸಿನಿಮಾ ವಿತರಕರು ಯಾರು?

ಥಿಯೇಟರ್ ಹಾಗೂ ನಿರ್ಮಾಪಕರ ನಡುವೆ ಕೊಂಡಿಯಾಗಿರುವ ಪ್ರಮುಖ ವ್ಯಕ್ತಿಯೇ ಸಿನಿಮಾ ವಿತರಕರು ಆಗಿದ್ದಾರೆ. ನಿರ್ಮಾಪಕರು ತಾವು ನಿರ್ಮಾಣ ಮಾಡಿದ ಸಿನಿಮಾದ ಥಿಯೇಟರ್ ಪ್ರದರ್ಶನದ ಹಕ್ಕನ್ನು ಭಾರತದ ಸಿನಿಮಾ ವಿತರಕರಿಗೆ ಮಾರಾಟ ಮಾಡುತ್ತಾರೆ. ಕೆಲವೊಮ್ಮೆ ಒಂದು ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ನಿರ್ಮಾಪಕರು ಸಿನಿಮಾದ ಹಕ್ಕನ್ನು ಸಿನಿಮಾ ವಿತರಕರಿಗೆ ಮಾರಾಟ ಮಾಡುತ್ತಾರೆ. ಈ ಸಂದರ್ಭದಲ್ಲಿ ಲಾಭವಾಗಲಿ, ನಷ್ಟವಾಗಲಿ ಇದು ಸಿನಿಮಾ ಖರೀದಿ ಮಾಡಿದವರಿಗೆ ಅಥವಾ ಸಿನಿಮಾದ ಥಿಯೇಟರ್ ಪ್ರದರ್ಶನದ ಹಕ್ಕನ್ನು ಹೊಂದಿರುವವರಿಗೆ ಸೇರಲಿದೆ.

 ಥಿಯೇಟರ್ ಮಾಲೀಕರ ಪಾತ್ರ ಏನಿದೆ?
 

ಥಿಯೇಟರ್ ಮಾಲೀಕರ ಪಾತ್ರ ಏನಿದೆ?

ಭಾರತದ ಸಿನಿಮಾ ಇಂಡಸ್ಟ್ರಿ ಮುಖ್ಯವಾಗಿ 14 ವಿಭಾಗಗಳನ್ನು ಹೊಂದಿದೆ. ಈ ಪ್ರತಿ ವಿಭಾಗಗಳಿಗೂ ಬೇರೆಯೇ ಸಿನಿಮಾ ವಿತರಕರು ಇರುತ್ತಾರೆ. ಮುಂಬೈ, ದೆಹಲಿ/ಯುಪಿ, ಪೂರ್ವ ಪಂಜಾಬ್, ಸೆಂಟ್ರಲ್ ಇಂಡಿಯಾ, ಸಿಪಿ ಬೆರಾರ್, ಬಿಹಾರ, ರಾಜಸ್ಥಾನ, ನಿಜಾಮ್, ಪಶ್ಚಿಮ ಬಂಗಾಳ, ತಮಿಳು ನಾಡು, ಮೈಸೂರು, ಕೇರಳ, ಒಡಿಸ್ಸಾ, ಅಸ್ಸಾಂನಲ್ಲಿ ವಿಭಾಗಗಳಿದೆ. ಸಿಂಗಲ್ ಸ್ಕ್ರೀನ್, ಮಲ್ಟಿಫ್ಲೆಕ್ಸ್ ಚೈನ್ ಎರಡು ವಿಧಗಳ ಥಿಯೇಟರ್ ಭಾರತದಲ್ಲಿದೆ. ಈ ಎರಡರಲ್ಲೂ ವಿತರಕರ ಜೊತೆ ಮಾಡಿದ ಒಪ್ಪಂದದ ಆದಾರದಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಥಿಯೇಟರ್ ಮಾಲೀಕರುಗಳೇ ಒಟ್ಟು ಸಿನಿಮಾದ ಟಿಕೆಟ್ ಹಣ ಸಂಗ್ರಹ ಮಾಡುತ್ತಾರೆ. ಈ ಒಟ್ಟು ಸಂಗ್ರಹದಿಂದ ಆಯಾ ರಾಜ್ಯದಲ್ಲಿರುವ ಮನರಂಜನಾ ತೆರಿಗೆ ಕಡಿತ ಮಾಡಲಾಗುತ್ತದೆ. ತೆರಿಗೆ ಪಾವತಿ ಬಳಿಕ ಉಳಿದ ಹಣವನ್ನು ಮಾಲೀಕರು ವಿತರಕರಿಗೆ ನೀಡಬೇಕಾಗುತ್ತದೆ. ಇದು ಥಿಯೇಟರ್ ಹಾಗೂ ವಿತರಕರ ನಡುವಿನ ಒಪ್ಪಂದದ ಮೇಲೆ ಅವಲಂಬಿತವಾಗಲಿದೆ.

ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸುವುದು ಯಾವಾಗ, ಇತಿಹಾಸವೇನು?

 ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ಮಾಡುವುದು ಹೇಗೆ?

ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ಮಾಡುವುದು ಹೇಗೆ?

ವಾರಕ್ಕೊಮ್ಮೆ ಥಿಯೇಟರ್ ಮಾಲೀಕರಿಂದ ಸಿನಿಮಾ ವಿತರಕರನ್ನು ರಿಟರ್ನ್ ಅನ್ನು ಸಂಗ್ರಹ ಮಾಡುತ್ತಾರೆ. ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾದರೆ ವಾರದ ಒಟ್ಟು ಕಲೆಕ್ಷನ್‌ನ ಶೇಕಡ 50, ಎರಡನೇ ವಾರದ ಶೇಕಡ 42 ಹಾಗೂ ಮೂರನೇ ವಾರದ ಶೇಕಡ 37, ಆ ಬಳಿಕದ ಎಲ್ಲಾ ವಾರಗಳಲ್ಲಿ ಶೇಕಡ 30ರಷ್ಟು ಹಣವನ್ನು ವಿತರಕರಿಗೆ ನೀಡಬೇಕಾಗುತ್ತದೆ. ಒಂದು ವೇಳೆ ಸಿನಿಮಾ ಸಿಂಗಲ್ ಸ್ಕೀನ್‌ನಲ್ಲಿ ಬಿಡುಗಡೆಯಾದರೆ ಮೊದಲ ವಾರದ ಪ್ರದರ್ಶನದಿಂದ ಹಿಡಿದು ಕೊನೆಯ ವಾರದ ಪ್ರದರ್ಶನದವರೆಗೂ ಪ್ರತಿ ವಾರದ ಕಲೆಕ್ಷನ್‌ನ ಶೇಕಡ 70-90 ಕಲೆಕ್ಷನ್ ಅನ್ನು ಸಿನಿಮಾ ವಿತರಕರಿಗೆ ನೀಡಬೇಕಾಗುತ್ತದೆ.

 ಸಿನಿಮಾದ ಲಾಭ, ನಷ್ಟವನ್ನು ಹೇಗೆ ಲೆಕ್ಕಾಚಾರ ಮಾಡುವುದು?

ಸಿನಿಮಾದ ಲಾಭ, ನಷ್ಟವನ್ನು ಹೇಗೆ ಲೆಕ್ಕಾಚಾರ ಮಾಡುವುದು?

ವಿತರಕರ ಲಾಭ/ನಷ್ಟ=ಸಿನಿಮಾವನ್ನು ಖರೀದಿ ಮಾಡಿದ ವೆಚ್ಚ - ಸಿನಿಮಾ ವಿತರಕರ ಶುಲ್ಕ

ಲೆಕ್ಕಾಚಾರದ ಉದಾಹರಣೆ: ಮಲ್ಟಿಫ್ಲೆಕ್ಸ್‌ನಲ್ಲಿ ಟಿಕೆಟ್ ದರ 200 ರೂಪಾಯಿ ಆಗಿದ್ದಾಗ ಒಂದು ಬಾರಿ ನೂರು ಜನರು ಸಿನಿಮಾವನ್ನು ನೋಡಿದ್ದು, ಒಂದು ವಾರದಲ್ಲಿ ನೂರು ಬಾರಿ ಸಿನಿಮಾ ಪ್ರದರ್ಶನಾಗಿದೆ ಎಂದು ಇಟ್ಟುಕೊಳ್ಳೋಣ. ಹಾಗಿರುವಾಗ ಈ ವಾರದ ಒಟ್ಟು ಕಲೆಕ್ಷನ್ 200 x 100 x100 = ರೂಪಾಯಿ 20,00,000 ಆಗಲಿದೆ. ಮನರಂಜನಾ ತೆರಿಗೆ ಶೇಕಡ 30 ಕಡಿತ ಮಾಡಿದರೆ ಉಳಿದ ಮೊತ್ತ 14 ಲಕ್ಷ ರೂಪಾಯಿ ಆಗಲಿದೆ. ಸಿನಿಮಾ ವಿತರಕರು ಹಾಗೂ ಥಿಯೇಟರ್ ಮಾಲೀಕರ ನಡುವಿನ ಒಪ್ಪಂದದ ಪ್ರಕಾರ ಶೇಕಡ 50ರಷ್ಟು ಹಣವನ್ನು ವಿತರಕರಿಗೆ ನೀಡಲಾಗುತ್ತದೆ. ಅಂದರೆ 7 ಲಕ್ಷ ರೂಪಾಯಿ ನೀಡಲಾಗುತ್ತದೆ.

ಎರಡನೇ ವಾರದಲ್ಲಿ ಒಟ್ಟು ಕಲೆಕ್ಷನ್ 200 x 80x 100 = 16 ಲಕ್ಷ ರೂಪಾಯಿ ಎಂದುಕೊಳ್ಳೋಣ. ಮನರಂಜನಾ ತೆರಿಗೆಯನ್ನು ಕಡಿತ ಮಾಡಿದ ಬಳಿಕ ಒಟ್ಟು ಥಿಯೇಟರ್ ಮಾಲೀಕರ ಕೈಯಲ್ಲಿ ಇರುವ ಮೊತ್ತ 16,00,000-4,80,000= ರೂಪಾಯಿ 11,20,000 ಆಗಲಿದೆ. ಎರಡನೇ ವಾರದಲ್ಲಿ ವಿತರಕರ ಷೇರು ಶೇಕಡ 42 ಆಗಲಿದೆ. ಅದು ರೂಪಾಯಿ 4,70,400 ಆಗಲಿದೆ.

ಮೂರನೇ ವಾರದಲ್ಲಿ ಒಟ್ಟು ಕಲೆಕ್ಷನ್‌ನ ಶೇಕಡ 37ರಷ್ಟು ಹಣವನ್ನು ಸಿನಿಮಾ ವಿತರಕರು ಪಡೆಯುತ್ತಾರೆ. ಆ ಬಳಿಕದ ವಾರದಲ್ಲಿ ಶೇಕಡ 30ರಷ್ಟು ಪಾಲನ್ನು ವಿತರಕರು ಪಡೆಯುತ್ತಾರೆ. ಸಿಂಗಲ್ ಸ್ಕ್ರೀನ್‌ನಲ್ಲೂ ಇದೆ ರೀತಿಯ ನಿಯಮ ಅನ್ವಯವಾಗಲಿದೆ. ಆದರೆ ಸಿನಿಮಾ ವಿತರಕರು ಪ್ರತಿ ವಾರ ಶೇಕಡ 70-90ರಷ್ಟು ಪಾಲನ್ನು ಪಡೆಯುತ್ತಾರೆ. ಸಿನಿಮಾ ವಿತರಕರು ಒಟ್ಟು ಬಾಕ್ಸಾಫೀಸ್ ಸಂಗ್ರಹದಿಂದ ತಮ್ಮ ಪಾಲನ್ನು ಪಡೆಯುವುದು ಮಾತ್ರವಲ್ಲದೇ ಸಂಗೀತ ಹಕ್ಕು, ಸ್ಯಾಟೆಲೈಟ್ ಹಕ್ಕು, ಸಬ್ಸಿಡಿ ಮೂಲಕವೂ ಹಣವನ್ನು ಗಳಿಸುತ್ತಾರೆ.

English summary

How is Box Office collection calculated? Explained in kannada

Do you know that how Box office collection is calculated? If not, then read this article to understood that how the total collection of a film is calculated. explained in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X