For Quick Alerts
ALLOW NOTIFICATIONS  
For Daily Alerts

ಕಳೆದುಹೋದ ಎಸ್‌ಬಿಐ ಕ್ರೆಡಿಟ್, ಡೆಬಿಟ್ ಕಾರ್ಡ್ ಆಫ್‌ಲೈನ್ ಮೂಲಕ ಬ್ಲಾಕ್ ಮಾಡಿ

|

ಪ್ರಸ್ತುತ ದೇಶದಲ್ಲಿ ಬಹುತೇಕ ಮಂದಿ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಹಾಗೆಯೇ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಕೂಡಾ ಹೊಂದಿದ್ದಾರೆ. ನಮ್ಮ ಬ್ಯಾಂಕ್‌ ಚೆಕ್ ಮೊದಲಾದವುಗಳು ಹೇಗೆ ಅತೀ ಮುಖ್ಯವೋ ಹಾಗೆಯೇ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳು ಕೂಡಾ ಮುಖ್ಯವಾಗುತ್ತದೆ. ಒಂದು ವೇಳೆ ನಿಮ್ಮ ಎಟಿಎಂ ಕಾರ್ಡ್ ಕಳೆದುಹೋದರೆ ಏನು ಮಾಡುವುದು?.

ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಅದರ ದೂರು ಸಲ್ಲಿಕೆ ಮಾಡುವುದು ಅತೀ ಮುಖ್ಯ. ಹಾಗೆಯೇ ಬ್ಲಾಕ್ ಮಾಡುವುದು ಕೂಡಾ ಅತೀ ಮುಖ್ಯ. ಇಲ್ಲವಾದರೆ ನಿಮ್ಮ ಕಾರ್ಡ್ ದುರ್ಬಳಕೆಯಾಗುವ ಸಾಧ್ಯತೆ ಇದೆ. ನಿಮ್ಮ ಕಾರ್ಡ್ ಅನ್ನು ನಿಮ್ಮ ಕಾರ್ಡ್ ಪಿನ್ ತಿಳಿದಿರುವವರೇ ಕಳವು ಮಾಡಿದ್ದರೆ, ನಿಮಗೆ ಭಾರೀ ನಷ್ಟ ಉಂಟಾಗಬಹುದು. ಆದ್ದರಿಂದ ಈ ಬಗ್ಗೆ ದೂರು ನೀಡುವುದು ಅತೀ ಮುಖ್ಯ.

ಎಸ್‌ಬಿಐ ಕ್ರೆಡಿಟ್ ಕಾರ್ಡ್: ಶುಲ್ಕ, ವಿತ್‌ಡ್ರಾ ಮಿತಿ ಇತರೆ ಮಾಹಿತಿಎಸ್‌ಬಿಐ ಕ್ರೆಡಿಟ್ ಕಾರ್ಡ್: ಶುಲ್ಕ, ವಿತ್‌ಡ್ರಾ ಮಿತಿ ಇತರೆ ಮಾಹಿತಿ

ನಿಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಆನ್‌ಲೈನ್ ಮೂಲಕ ಬ್ಲಾಕ್ ಮಾಡಬಹುದು. ಆದರೆ ಆಫ್‌ಲೈನ್‌ನಲ್ಲಿ ನೀವು ಎಸ್‌ಎಂಎಸ್ ಹಾಗೂ ಕರೆ ಮೂಲಕ ಬ್ಲಾಕ್ ಮಾಡಬಹುದು. ಈ ಬಗ್ಗೆ ಇಲ್ಲಿದೆ ವಿವರ. ಅದಕ್ಕೂ ಮುನ್ನ ನಾವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಎಂದರೇನು ಎಂದು ತಿಳಿಯೋಣ ಮುಂದೆ ಓದಿ....

 ಡೆಬಿಟ್ ಕಾರ್ಡ್ ಎಂದರೇನು?

ಡೆಬಿಟ್ ಕಾರ್ಡ್ ಎಂದರೇನು?

ಡೆಬಿಟ್ ಕಾರ್ಡ್ ಅನ್ನು ಪ್ಲಾಸ್ಟಿಕ್ ಕಾರ್ಡ್, ಚೆಕ್ ಕಾರ್ಡ್, ಬ್ಯಾಂಕ್ ಕಾರ್ಡ್ ಎಂದು ಕೂಡಾ ಕರೆಯುತ್ತಾರೆ. ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ನೀಡುತ್ತದೆ. ಬ್ಯಾಂಕಿಂಗ್ ಸಂಬಂಧಿತ ಎಲ್ಲ ಚೆಕ್, ಪಾಸ್‌ಬುಕ್, ಬೇರೆ ಅಗತ್ಯ ಪಿನ್‌ ಕಿಟ್ ಜೊತೆಗೆ ಇದು ಲಭ್ಯವಾಗುತ್ತದೆ. ಡೆಬಿಟ್ ಕಾರ್ಡ್ ಅನ್ನು ನಾವು ಆನ್‌ಲೈನ್ ಮೂಲಕ ಹಾಗೂ ಆಫ್‌ಲೈನ್ ಮೂಲಕ ಶಾಪಿಂಗ್ ಮಾಡಲು ನಾವು ಡೆಬಿಟ್ ಕಾರ್ಡ್ ಅನ್ನು ಬಳಕೆ ಮಾಡಬಹುದು.

 ಕ್ರೆಡಿಟ್ ಕಾರ್ಡ್ ಎಂದರೇನು?

ಕ್ರೆಡಿಟ್ ಕಾರ್ಡ್ ಎಂದರೇನು?

ಕ್ರೆಡಿಟ್ ಕಾರ್ಡ್ ಎಂಬುವುದು ಕೂಡಾ ಬ್ಯಾಂಕ್ ನೀಡುವ ಕಾರ್ಡ್ ಆಗಿದೆ. ಆದರೆ ಇದು ಡೆಬಿಟ್ ಕಾರ್ಡ್‌ಗಿಂತ ಭಿನ್ನ. ಯಾವುದೇ ಹಣ ಇಲ್ಲದ ಸಂದರ್ಭದಲ್ಲಿ ನಾವು ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿ ಆ ಬಳಿಕ ಇಎಂಐ ಮೂಲಕ ಪಾವತಿ ಮಾಡಬಹುದು. ನಿಮ್ಮ ಬ್ಯಾಂಕಿಂಗ್ ವಹಿವಾಟನ್ನು ನೋಡಿಕೊಂಡು ಬ್ಯಾಂಕ್‌ಗಳು ನಿಮಗೆ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ.

 ಎಸ್‌ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?

ಎಸ್‌ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?

ಎಸ್‌ಎಂಎಸ್ ಮೂಲಕ ಬ್ಲಾಕ್: ಎಸ್ಎಂಎಸ್ ಮೂಲಕವೂ ನೀವು ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು. BLOCK XXXX ಎಂದು ಟೈಪ್ ಮಾಡಿ 567676 ಸಂಖ್ಯೆಗೆ ಕಳುಹಿಸಿ. ಇಲ್ಲಿ XXXX ಎಂದರೆ ಡೆಬಿಟ್ ಕಾರ್ಡ್‌ನ ಕೊನೆಯ ನಾಲ್ಕು ಸಂಖ್ಯೆಗಳು ಆಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಯಿಂದಲೇ ಈ ಎಸ್‌ಎಂಎಸ್ ಮಾಡಬೇಕು. ನಿಮ್ಮ ಖಾತೆ ಬ್ಲಾಕ್ ಆದ ಬಳಿಕ ನಿಮಗೆ ಎಸ್‌ಎಂಎಸ್ ಬರಲಿದೆ. ಎಸ್‌ಎಂಎಸ್‌ ಅಲರ್ಟ್ ಕೂಡಾ ಬರಲಿದೆ.

 ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?

ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?

ಕರೆ ಮೂಲಕ ಬ್ಲಾಕ್ ಮಾಡಿ: 1800 180 1290 | 1860 500 1290, (STD Code) 39 02 02 02 ಗೆ ಕರೆ ಮಾಡುವ ಮೂಲಕ ಬ್ಲಾಕ್ ಮಾಡಬಹುದು.
ಎಸ್‌ಎಂಎಸ್ ಮೂಲಕ ಬ್ಲಾಕ್: ಎಸ್‌ಎಂಎಸ್ ಮೂಲಕ ಬ್ಲಾಕ್ ಮಾಡಲು BLOCK XXXX ಎಂದು 5676791ಗೆ ಎಸ್‌ಎಂಎಸ್ ಮಾಡಿ. ಇಲ್ಲಿ XXXX ಎಂದರೆ ಡೆಬಿಟ್ ಕಾರ್ಡ್‌ನ ಕೊನೆಯ ನಾಲ್ಕು ಸಂಖ್ಯೆಗಳು ಆಗಿದೆ.

English summary

How to Block SBI Debit or Credit Card Offline by Phone Call, SMS, Explained in Kannada

If an account holder's SBI debit or credit card is lost or stolen, the card must be reported immediately and blocked. How to Block SBI Debit or Credit Card Offline by Phone Call, SMS, Explained in Kannada.
Story first published: Saturday, November 12, 2022, 18:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X