MICR Code of bank: ಎಂಐಸಿಆರ್ ಕೋಡ್ ಎಂದರೇನು, ಅದನ್ನು ಪತ್ತೆಹಚ್ಚುವುದು ಹೇಗೆ?
ನಿಮ್ಮ ಬ್ಯಾಂಕ್‌ನ ಪಾಸ್‌ಬುಕ್, ಚೆಕ್ ಹಾಗೂ ಬ್ಯಾಂಕ್ ವೆಬ್‌ಸೈಟ್‌ನಲ್ಲಿರುವ ಎಲ್ಲ ಅಂಕಿಗಳು ಅತೀ ಮುಖ್ಯವಾಗಿದೆ. ಬ್ಯಾಂಕ್‌ನಲ್ಲಿರುವ ಎಲ್ಲ ಅಂಕಿಗಳು ಅತೀ ಮುಖ್ಯವಾಗಿದೆ. ಆದರೆ ನಮಗೆ ಅದರ ಪ್ರಾಮುಖ್ಯತೆ ತಿಳಿದಿರುವುದಿಲ್ಲ. ಅಂದರಂತೆಯೇ ಹಲವಾರು ಮಂದಿಗೆ ಪ್ರಾಮುಖ್ಯತೆ ತಿಳಿದಿರದ ಅಂಕಿಅಂಶವೇ ಎಂಐಸಿಆರ್ ಕೋಡ್ ಆಗಿದೆ.
ಬ್ಯಾಂಕ್‌ನ ಪಾಸ್‌ಬುಕ್, ವೆಬ್‌ಸೈಟ್, ಚೆಕ್‌ನಲ್ಲಿರುವ ಎಲ್ಲ ಅಂಕಿ ಅಂಶಗಳು ನಾವು ದೈನಂದಿನ ವಹಿವಾಟುಗಳನ್ನು ಸರಿಯಾಗಿ ನಡೆಸಬೇಕಾದರೆ ಅತೀ ಅಗತ್ಯವಾಗಿದೆ. ನಾವು ಆನ್‌ಲೈನ್ ಮೂಲಕ ಹಣಕಾಸಿನ ವಹಿವಾಟು ನಡೆಸಲು, ಹಣ ಕಳುಹಿಸಲು, ಹಣ ಪಡೆಯಲು ಐಎಫ್‌ಎಸ್‌ಇ ಕೋಡ್ ಅನ್ನು ಬಳಕೆ ಮಾಡುತ್ತೇವೆ. ಅದರಂತೆಯೇ ಎಂಐಸಿಆರ್ ಕೋಡ್ ಕೂಡಾ ಮುಖ್ಯವಾಗಿದೆ.
ಚೆಕ್ ಅನ್ನು ಕ್ಲಿಯರ್ ಮಾಡಬೇಕಾದರೆ ಎಂಐಸಿಆರ್ ಕೋಡ್ ಅತೀ ಮುಖ್ಯವಾಗಿದೆ. ನಿಮಗೆ ಈ ಎಂಐಸಿಆರ್ ಕೋಡ್ ಎಂದರೇನು ಎಂದು ತಿಳಿದಿಲ್ಲವೇ?, ಹಾಗೆಯೇ ಅದನ್ನು ಎಲ್ಲಿ ಪತ್ತೆಹಚ್ಚುವುದು ಹೇಗೆ ಪತ್ತೆ ಹಚ್ಚುವುದು ತಿಳಿದಿಲ್ಲವೇ, ಈ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...

ಎಂಐಸಿಆರ್ ಕೋಡ್ ಎಂದರೇನು?
ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್‌ನ ಭಾಗವಾಗಿರುವ ಬ್ಯಾಂಕ್‌ನ ಬ್ರಾಂಚ್‌ಗಳಲ್ಲಿ ಈ ಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರೆಕಾಗ್ನಿಷನ್ (ಎಂಐಸಿಆರ್) ಅತೀ ಮುಖ್ಯವಾಗಿದೆ. ಇದು 9 ಡಿಜಿಟ್‌ನ ಕೋಡ್ ಆಗಿದೆ. ಖಾತೆದಾರರಿಗೆ ನೀಡುವ ಚೆಕ್ ಬುಕ್‌ನಲ್ಲಿ ಈ ಕೋಡ್ ಅನ್ನು ಪ್ರಿಂಟ್ ಮಾಡಲಾಗಿರುತ್ತದೆ. ಹಾಗೆಯೇ ಬ್ಯಾಂಕ್ ನೀಡುವ ಚೆಕ್ ರಿಸಿಪ್ಟ್‌ನಲ್ಲಿಯೂ ಈ ಎಂಐಸಿಆರ್ ಕೋಡ್ ಇರುತ್ತದೆ. ಮೆಷಿನ್‌ನಲ್ಲಿ ಡೆಪಾಸಿಟ್ ಮಾಡಲಾದ ಚೆಕ್ ಅನ್ನು ಕ್ಲಿಯರ್ ಮಾಡಲು ಈ ಎಂಐಸಿಆರ್ ಕೋಡ್ ಅತೀ ಮುಖ್ಯವಾಗಿದೆ. ಚೆಕ್ ಕ್ಲಿಯರೆನ್ಸ್‌ನಲ್ಲಿ ಯಾವುದೇ ತಪ್ಪು ಆಗವುದನ್ನು ತಡೆಯಲು ಈ ಕೋಡ್ ನೀಡಲಾಗಿದೆ.

ಎಂಐಸಿಆರ್ ಕೋಡ್‌ನ ಫಾರ್ಮೆಟ್ ಯಾವುದು?
ಎಂಐಸಿಆರ್ ಕೋಡ್ 9 ಅಂಕಿ ಸಂಖ್ಯೆಗಳನ್ನು ಹೊಂದಿದೆ. ಇದರಲ್ಲಿ ಮೊದಲ ಮೂರು ಅಂಕಿಅಂಶ ನಗರವನ್ನು ಪ್ರತಿನಿಧಿಸುತ್ತದೆ. ಮುಂದಿನ ಮೂರು ಅಂಕಿ ಸಂಖ್ಯೆ ಬ್ಯಾಂಕ್ ಯಾವುದು ಎಂಬುವುದನ್ನು ಪ್ರತಿನಿಧಿಸುತ್ತದೆ. ಕೊನೆಯ ಮೂರು ಅಂಕಿ ಸಂಖ್ಯೆ ಯಾವ ಬ್ರಾಂಚ್ ಎಂಬುವುದನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ 700002021 ಎಂಬ ಎಂಐಸಿಆರ್ ಕೋಡ್ ಕೋಲ್ಕತ್ತಾದ ಎಸ್‌ಬಿಐ ಬ್ರಾಂಚ್‌ನ ಕೋಡ್ ಆಗಿದೆ. ಇಲ್ಲಿ ಮೊದಲ ಮೂರು ಡಿಜಿಟ್ 700 ಯಾವ ನಗರ ಎಂಬುವುದನ್ನು ತಿಳಿಸುತ್ತದೆ. ಮುಂದಿನ ಮೂರು ಡಿಜಿಟ್ 002 ಯಾವ ಬ್ಯಾಂಕ್ ಎಂಬುವುದನ್ನು ಉಲ್ಲೇಖಿಸಿದೆ. ಮುಂದಿನ ಮೂರು ಡಿಜಿಟ್ 021 ಯಾವ ಬ್ರಾಂಚ್ ಎಂಬುವುದನ್ನು ಪ್ರತಿನಿಧಿಸುತ್ತದೆ. ಮೆಷಿನ್‌ಗಳು ಎಂಐಸಿಆರ್ ಕೋಡ್ ಮೂಲಕ ಚೆಕ್ ಕ್ಲಿಯರೆನ್ಸ್ ನಡೆಸುತ್ತದೆ. ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಈ ಕೋಡ್ ತಡೆಯುತ್ತದೆ. ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಎಂಐಸಿಆರ್ ಕೋಡ್‌ನ ಪ್ರಾಮುಖ್ಯತೆ ಏನು?
* ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆಯು ಶೀಘ್ರವಾಗಿ ನಡೆಯಬೇಕಾದರೆ ಈ ಎಂಐಸಿಆರ್ ಕೋಡ್ ಅತೀ ಮುಖ್ಯವಾಗಿದೆ.
* ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾಗದ ದಾಖಲೆ ಮೂಲಕ ನಡೆಸಲಾಗುವ ವಹಿವಾಟಿನ ಮುಖ್ಯವಾಗಿ ಚೆಕ್‌ನ ವ್ಯಾಲಿಡಿಟಿ ತಿಳಿಯಲು ಎಂಐಸಿಆರ್ ಕೋಡ್ ಮುಖ್ಯವಾಗಿದೆ, ಹಾಗೆಯೇ ಇದು ಚೆಕ್ ನಕಲಿಯೇ ಅಸಲಿಯೇ ಎಂದು ತಿಳಿಯಲು ಕೂಡಾ ಮುಖ್ಯವಾಗಿದೆ.
* ನೆಫ್ಟ್, ಐಎಂಪಿಎಸ್ ಮೂಲಕ ವಹಿವಾಟು ನಡೆಸಲು ಎಂಐಸಿಆರ್ ಕೋಡ್ ಮುಖ್ಯವಾಗಿದೆ. ಈ ವಹಿವಾಟಿನಲ್ಲಿ ಎಂಐಸಿಆರ್ ಕೋಡ್ ಐಎಫ್‌ಎಸ್‌ಇ ಕೋಡ್‌ಗೆ ಸಮವಾಗಿದೆ.
* ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಣೆ ಮಾಡುವವರು ಈ ಎಂಐಸಿಆರ್ ಕೋಡ್ ಸ್ಕ್ಯಾನ್ ಮಾಡಿ ಚೆಕ್‌ನ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ಪಡೆಯಲು ಇದು ಸಹಾಯಕವಾಗಿದೆ.
* ಎಲ್ಲ ಬ್ಯಾಂಕ್‌ಗಳಿಗೆ ಎಂಐಸಿಆರ್ ಕೋಡ್ ಇರುತ್ತದೆ. ಇದನ್ನು ಆರ್‌ಬಿಐ ನೀಡಿರುತ್ತದೆ.

ಎಂಐಸಿಆರ್ ಕೋಡ್ ಅನ್ನು ಎಲ್ಲಿ ಪತ್ತೆಹಚ್ಚುವುದು?
ಎಂಐಸಿಆರ್ ಕೋಡ್ ಚೆಕ್ ಸಂಖ್ಯೆಯ ನಂತರದಲ್ಲಿ ಪ್ರಿಂಟ್ ಮಾಡಲಾಗಿರುತ್ತದೆ. ಇದನ್ನು ಪ್ರಿಂಟ್ ಮಾಡಲು ಬಳಕೆ ಮಾಡಲಾಗಿರುವ ಶಾಹಿ ಹಾಗೂ ಟೈಪ್‌ಫೇಸ್ ಮ್ಯಾಗ್ನೆಟಿಕ್ ಕ್ಯಾರೆಕ್ಟರ್ ಇಂಕ್ ರೀಡರ್‌ನಿಂದ ಮಾತ್ರ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಎಂಐಸಿಆರ್ ಸಂಖ್ಯೆಯು ಲಭ್ಯವಿದೆ.