For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಕ್ರೆಡಿಟ್ ಕಾರ್ಡ್ ಪಿನ್ ಜನರೇಟ್ ಮಾಡುವುದು ಹೇಗೆ?

|

ಈ ಡಿಜಿಟಲ್ ಯುಗದಲ್ಲಿ ನಾವು ಕ್ರೆಡಿಟ್ ಕಾರ್ಡ್‌ನಿಂದಾಗುವ ಪ್ರಯೋಜನವನ್ನು ಅಲ್ಲಗಳೆಯುವಂತಿಲ್ಲ. ಪ್ರಸ್ತುತ ಹಲವಾರು ಮಂದಿ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡುತ್ತಿದ್ದಾರೆ. ಭಾರತದಲ್ಲಿ ಟಾಪ್ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವಾರು ವಿಧದ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ. ಆ ಕ್ರೆಡಿಟ್ ಕಾರ್ಡ್‌ಗೂ ಆಫರ್, ರಿವಾರ್ಡ್‌ಗಳನ್ನು ನೀಡಲಾಗುತ್ತದೆ.

ನಾವು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಆನ್‌ಲೈನ್‌ನಲ್ಲಿ ಯಾವುದೇ ಶಾಪಿಂಗ್ ಮಾಡಬೇಕಾದರೆ, ಬಿಲ್ ಪಾವತಿ ಮಾಡಬೇಕಾದರೆ, ಬೇರೆ ವಹಿವಾಟು ನಡೆಸುವುದಾದರೆ ಕ್ರೆಡಿಟ್ ಕಾರ್ಡ್‌ನ ಪಿನ್ ಅನ್ನು ಬಳಕೆ ಮಾಡಬೇಕಾಗುತ್ತದೆ ಎಂಬುವುದು ನಿಮಗೆ ತಿಳಿದಿರಬಹುದು.

ಐಸಿಐಸಿಐ ಬ್ಯಾಂಕ್ ಫೆಸ್ಟಿವ್ ಬೊನಾನ್ಜಾ: 25,000 ರೂ. ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ?ಐಸಿಐಸಿಐ ಬ್ಯಾಂಕ್ ಫೆಸ್ಟಿವ್ ಬೊನಾನ್ಜಾ: 25,000 ರೂ. ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ?

ಅನಧಿಕೃತ ವಹಿವಾಟನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಿನ್ ಅನ್ನು ಜನರೇಟ್ ಮಾಡಲಾಗುತ್ತದೆ. ಈ ನಾಲ್ಕು ಡಿಜಿಟ್‌ನ ಪಿನ್ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ನೀಡಲಾಗುತ್ತದೆ. ನೀವು ಐಸಿಐಸಿಐ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಬೇರೆ ಬೇರೆ ರೀತಿಯಲ್ಲಿ ಜನರೇಟ್ ಮಾಡಲು ಸಾಧ್ಯವಾಗಲಿದೆ. ಈ ಬಗ್ಗೆ ನಾವು ಇಲ್ಲಿ ವಿವರಣೆ ನೀಡಿದ್ದೇವೆ ಮುಂದೆ ಓದಿ...

ಐಸಿಐಸಿಐ ಕ್ರೆಡಿಟ್ ಕಾರ್ಡ್ ಪಿನ್ ಜನರೇಟ್ ಮಾಡುವುದು ಹೇಗೆ?

ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವಾರು ವಿಧದ ಕ್ರೆಡಿಟ್ ಕಾರ್ಡ್ ಅನ್ನು ಹೊಂದುವ ಅವಕಾಶವನ್ನು ನೀಡುತ್ತದೆ. ಹಾಗೆಯೇ ಈ ಕ್ರೆಡಿಟ್ ಕಾರ್ಡ್ ಜನರೇಟ್ ಮಾಡಲು ಹಲವಾರು ವಿಧಾನಗಳು ಇದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಜನರೇಟ್ ಮಾಡುವ ವಿಧಾನವು ಬಹಳ ಸರಳವಾಗಿದೆ. ಹಾಗೆಯೇ ಕೆಲವೇ ನಿಮಿಷಗಳಲ್ಲಿ ನಾವು ಮಾಡಬಹುದಾದ ಕಾರ್ಯವಾಗಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಗೆ ಶೇ.1 ಶುಲ್ಕ ವಿಧಿಸುತ್ತೆ ಈ ಬ್ಯಾಂಕ್!ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಗೆ ಶೇ.1 ಶುಲ್ಕ ವಿಧಿಸುತ್ತೆ ಈ ಬ್ಯಾಂಕ್!

ಐಸಿಐಸಿಐ ಕ್ರೆಡಿಟ್ ಕಾರ್ಡ್ ಪಿನ್ ಜನರೇಟ್ ಮಾಡಲು ಈ ಹಂತ ಪಾಲಿಸಿ

ನೀವು ನೆಟ್ ಬ್ಯಾಂಕಿಂಗ್ ಅನ್ನು ಬಳಕೆ ಮಾಡುವ ಮೂಲಕ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಜನರೇಟ್ ಮಾಡಬಹುದು. ನೀವು ಹೊಸ ಪಿನ್ ಅನ್ನು ಕ್ರಿಯೇಟ್ ಮಾಡಬೇಕಾದರೆ ನೀವು ಮೊದಲು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ನೆಟ್‌ ಬ್ಯಾಂಕಿಂಗ್‌ಗೆ ಲಿಂಕ್ ಮಾಡಬೇಕಾಗುತ್ತದೆ. ನೀವು ಈ ಕೆಳಗಿನ ಹಂತವನ್ನು ಪಾಲಿಸಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಜನರೇಟ್ ಮಾಡಲು ಸಾಧ್ಯವಾಗಲಿದೆ.

ಹಂತ 1: ಐಸಿಐಸಿಐ ಬ್ಯಾಂಕ್ ಅಧಿಕೃತ ವೆಬ್‌ಸೈಟ್ www.icicibank.com ಗೆ ಭೇಟಿ ನೀಡಿ
ಹಂತ 2: ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ಇಂಟರ್‌ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ
ಹಂತ 3: Accounts ಮೇಲೆ ಕ್ಲಿಕ್ ಮಾಡಿ My Credit Cards ಅನ್ನು ಆಯ್ಕೆ ಮಾಡಿ
ಹಂತ 4: Generate Credit Card PIN Online ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ, Continue ಮೇಲೆ ಕ್ಲಿಕ್ ಮಾಡಿ
ಹಂತ 6: 4 ಡಿಜಿಟ್‌ನ ಪಿನ್ ಅನ್ನು ನಮೂದಿಸಿ, ದೃಡೀಕರಿಸಲು ಆ ಪಿನ್ ಅನ್ನು ಮತ್ತೆ ನಮೂದಿಸಿ
ಹಂತ 7: Submit ಮೇಲೆ ಕ್ಲಿಕ್ ಮಾಡಿದರೆ ಎಲ್ಲ ಪ್ರಕ್ರಿಯೆ ಪೂರ್ಣವಾಗಲಿದೆ.

ಇನ್ನು ಐಸಿಐಸಿಐ ಬ್ಯಾಂಕ್ ಪ್ರಸ್ತುತ ಫೆಸ್ಟಿವ್ ಬೊನಾನ್ಜಾವನ್ನು ಆರಂಭ ಮಾಡಿದೆ. ಇದರಲ್ಲಿ 25 ಸಾವಿರ ರೂಪಾಯಿವರೆಗೆ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಇದೆ. ಸಾಲದ ಮೇಲೆಯೂ ಆಫರ್ ಅನ್ನು ನೀಡಲಾಗಿದೆ.

English summary

How To Generate ICICI Bank Credit Card PIN Online, Steps Explained in Kannada

in this modern world we cant denay the use and advantage of credit card. if you have a icici bank credit card, here's a explained how to generate icici bank credit card pin online.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X