For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹೇಗೆ?

|

ಭಾರತದಲ್ಲಿ ಚಿನ್ನದ ಮೇಲೆ ಅತೀವವಾದ ಒಂದು ನಂಟಿದೆ. ಹೂಡಿಕೆ ಮಾಡಲು ಬಯಸುವವರು ಸಾಮಾನ್ಯವಾಗಿ ಮೊದಲು ಆಯ್ಕೆ ಮಾಡುವುದು ಚಿನ್ನದ ಮೇಲಿನ ಹೂಡಿಕೆ. ಇದು ಹೆಚ್ಚಾಗಿ ಸುರಕ್ಷಿತ ಹೂಡಿಕೆ ಕೂಡಾ ಹೌದು. ಸಾಂಪ್ರಾದಾಯಿಕವಾಗಿ ಸ್ಥಿರ ಆದಾಯವನ್ನು ಬಯಸುವ ಜನರಿಗೆ ಚಿನ್ನವು ಹೆಚ್ಚು ಇಷ್ಟಪಡುವ ಹೂಡಿಕೆ ಆಯ್ಕೆಯಾಗಿದೆ.

 

ವರ್ಷದ ಯಾವುದೇ ಸಮಯದಲ್ಲಿ, ಮಾರುಕಟ್ಟೆಯ ಬೆಲೆಗಳನ್ನು ಅವಲಂಬಿಸಿ ಹೂಡಿಕೆದಾರರು ಚಿನ್ನದ ಖರೀದಿ ಅಥವಾ ಮಾರಾಟವನ್ನು ಮಾಡಬಹುದು. ಈಗ 22 ಕ್ಯಾರೆಟ್ ಪ್ಯೂರ್ ಗೋಲ್ಡ್ ಲಭ್ಯವಾಗುವ ಕಾರಣದಿಂದಾಗಿ ನಾವು ಚಿನ್ನದ ಬೆಲೆ ಕಡಿಮೆ ಇದ್ದಾಗ ಖರೀದಿ ಮಾಡಿ ದರ ಅಧಿಕವಾದಾಗ ಮಾರಾಟ ಮಾಡಿ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಇನ್ನು ದೇಶದಲ್ಲಿ ಮತ್ತೆ ಹಬ್ಬದ ಸೀಸನ್ ಶುರುವಾಗುತ್ತಿದೆ. ಈ ಸಂದರ್ಭದಲ್ಲಿ ನೀವು ಎಲ್ಲಿ ಹೂಡಿಕೆ ಮಾಡುವುದು ಎಂಬುವುದು ಕೊಂಚ ಗೊಂದಲವಲ್ಲವೇ?

ಸೌದಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಬಂಗಾರವಾಗುತ್ತಾ ಅಗ್ಗ?ಸೌದಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಬಂಗಾರವಾಗುತ್ತಾ ಅಗ್ಗ?

ಬದಲಾಗುತ್ತಿರುವ ಕಾಲದೊಂದಿಗೆ, ಅನೇಕ ಹೂಡಿಕೆದಾರರು ಈಗ ಚಿನ್ನದ ಆಭರಣಗಳು ಮತ್ತು ನಾಣ್ಯಗಳ ಬದಲಿಗೆ ಡಿಜಿಟಲ್ ಚಿನ್ನದ ಮೇಲಿನ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಚಿನ್ನದ ವಿನಿಮಯ-ವಹಿವಾಟು ನಿಧಿಗಳು (ಗೋಲ್ಡ್ ಇಟಿಎಫ್‌ಗಳು), ಸವರಿನ್ ಗೋಲ್ಡ್ ಬಾಂಡ್‌ಗಳು (ಎಸ್‌ಜಿಬಿಗಳು), ಮತ್ತು ಚಿನ್ನದ ಮ್ಯೂಚುವಲ್ ಫಂಡ್‌ಗಳ ರೂಪದಲ್ಲಿ ಚಿನ್ನವನ್ನು ಖರೀದಿ ಮಾಡುವುದು ಈಗ ಜನಪ್ರಿಯತೆಯನ್ನು ಕಂಡಿದೆ. ಹಾಗಾದರೆ ಈ ಹಬ್ಬದ ಸೀಸನ್‌ನಲ್ಲಿ ನೀವು ಎಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

 ಡಿಜಿಟಲ್ ಚಿನ್ನ ಹೂಡಿಕೆ

ಡಿಜಿಟಲ್ ಚಿನ್ನ ಹೂಡಿಕೆ

ಪ್ರಸ್ತುತ, ಮೂರು ಕಂಪನಿಗಳು ಡಿಜಿಟಲ್ ಚಿನ್ನದ ಯೋಜನೆಗಳನ್ನು ಹೊಂದಿದೆ. ಆಗ್ಮಾಂಟ್ ಗೋಲ್ಡ್, ಎಂಎಂಟಿಸಿ-ಪಿಎಎಂಪಿ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಈ ಮೂರು ಕಂಪನಿಗಳು ಆಗಿದೆ. ಹೂಡಿಕೆದಾರರು 1 ರೂಪಾಯಿಯಷ್ಟು ಕಡಿಮೆ ಹೂಡಿಕೆಯನ್ನು ಮಾಡುವ ಆಯ್ಕೆ ಕೂಡಾ ಇದರಲ್ಲಿ ಇದೆ. ಪೆಟಿಎಂ, ಫೋನ್‌ಪೇ, ಗೂಗಲ್ ಪೇ, ಗ್ರೋವ್, ಜಾರ್, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಅಮೆಜಾನ್ ಪೇ, ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್ ಮತ್ತು ಫಿನ್‌ಪ್ಲೇಯಲ್ಲಿ ನೀವು ಡಿಜಿಟಲ್ ಗೋಲ್ಡ್ ಇನ್ವೆಸ್ಟ್‌ಮೆಂಟ್ ಮಾಡಲು ಸಾಧ್ಯವಿದೆ.

Gold Rate Today: ಚಿನ್ನದ ಬೆಲೆ ಏರಿಕೆ: ಸೆ.22ರ ದರ ಎಷ್ಟಿದೆ?Gold Rate Today: ಚಿನ್ನದ ಬೆಲೆ ಏರಿಕೆ: ಸೆ.22ರ ದರ ಎಷ್ಟಿದೆ?

 ಡಿಜಿಟಲ್ ಚಿನ್ನದ ಪ್ರಯೋಜನವೇನು?
 

ಡಿಜಿಟಲ್ ಚಿನ್ನದ ಪ್ರಯೋಜನವೇನು?

ಡಿಜಿಟಲ್ ಚಿನ್ನದ ಮೊದಲ ಪ್ರಯೋಜನವೆಂದರೆ ಸಂಗ್ರಹಣೆ ಮಾಡುವುದು ಸಮಸ್ಯೆಯಾಗದೆ ಇರುವುದು. ಸಾಮಾನ್ಯವಾಗಿ ಚಿನ್ನವನ್ನು ಖರೀದಿ ಮಾಡಿದರೆ ಅದನ್ನು ಸುರಕ್ಷಿತವಾಗಿರಿಸುವುದು ನಮ್ಮದೇ ಜವಾಬ್ದಾರಿಯಾಗುತ್ತದೆ. ಆದರೆ ಡಿಜಿಟಲ್ ಗೋಲ್ಡ್ ಅನ್ನು ಖರೀದಿ ಮಾಡಿದರೆ ನಾವು ಅದನ್ನು ಸುರಕ್ಷಿತವಾಗಿರಿಸುವ ತಲೆಬಿಸಿ ಮಾಡಬೇಕಾಗಿಲ್ಲ. ಹಾಗೆಯೇ ಚಿನ್ನದ ಶುದ್ಧತೆಯ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಪಾವತಿಸುವ ಮೂಲಕ ಮತ್ತು ಮಾರಾಟಗಾರರೊಂದಿಗೆ ಖಾತೆಯನ್ನು ರಚಿಸುವ ಮೂಲಕ ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸಬಹುದು. ಇನ್ನು ಡಿಜಿಟಲ್ ಚಿನ್ನ ಖರೀರಿದಿಗೆ ನಾವು ಅಧಿಕ ಮೊತ್ತವನ್ನು ಹೊಂದಿರಬೇಕಾಗಿಲ್ಲ. ನಾವು ಕಡಿಮೆ ಮೊತ್ತದೊಂದಿಗೆ ಚಿನ್ನವನ್ನು ಖರೀದಿ ಮಾಡಬಹುದು. ಉಡುಗೊರೆ ನೀಡಲು ಅಥವಾ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸಿದವರು ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇನ್ನು ಡಿಜಿಟಲ್ ಚಿನ್ನಕ್ಕೆ ಶೇಕಡ 3+ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆಯೇ ಹೊರತು ಬೇರೆ ಯಾವುದೇ ವೆಚ್ಚ ಇಲ್ಲ.

 ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ

ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ

ಚಿನ್ನದ ವಿನಿಮಯ-ವಹಿವಾಟು ನಿಧಿಗಳು ದೇಶದಲ್ಲಿ ಅಥವಾ ಸ್ಥಳೀಯವಾಗಿ ಆ ದಿನದ ಗೋಲ್ಡ್ ರೇಟ್ ಎಷ್ಟು ಇದೆಯೋ ಅದನ್ನು ಅವಲಂಭಿಸಿರುತ್ತದೆ. ಇಲ್ಲಿ ಹೂಡಿಕೆಯು ಡಿಮೆಟಿರಿಯಲೈಸ್ಡ್ (ಡಿಮ್ಯಾಟ್) ವಿಧಾನದಲ್ಲಿದೆ. ನಾವು ಇದನ್ನು ಷೇರುಗಳಂತೆಯೇ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿಯೂ ಖರೀದಿ ಮಾಡಲು ಸಾಧ್ಯವಿದೆ. ಅಲ್ಲಿಯೇ ಮಾರಾಟ ಕೂಡಾ ಮಾಡಬಹುದು. ನಾವು ಚಿನ್ನವನ್ನು ಖರೀದಿ ಮಾಡಲು ಇದು ಒಂದು ಉತ್ತಮ ಮಾರ್ಗವೆಂದೇ ಪರಿಗಣಿಸಬಹುದು. ಸ್ಟಾಕ್ ಹೂಡಿಕೆಯ ಪ್ರಯೋಜನವನ್ನು ಕೂಡಾ ಪಡೆಯಬಹುದು. ಒಂದು ಗ್ರಾಂ ಚಿನ್ನವು ಗೋಲ್ಡ್ ಇಟಿಎಫ್‌ನ ಒಂದು ಘಟಕವಾಗಿರುತ್ತದೆ. ಈ ಇಟಿಎಫ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಪಟ್ಟಿಮಾಡಲಾಗಿದೆ. ಸ್ಟಾಕ್‌ಗಳಂತೆಯೇ ಬೆಲೆಗಳನ್ನು ಟ್ರ್ಯಾಕ್ ಮಾಡಬಹುದು. ಮಾರುಕಟ್ಟೆಯ ವಹಿವಾಟಿನ ಸಂದರ್ಭದಲ್ಲಿ ನಾವು ಖರೀದಿ ಮಾಡಬಹುದು ಮತ್ತು ಮಾರಾಟ ಮಾಡಬಹುದು.

 ಸವರನ್ ಗೋಲ್ಡ್ ಬಾಂಡ್ ಹೂಡಿಕೆ

ಸವರನ್ ಗೋಲ್ಡ್ ಬಾಂಡ್ ಹೂಡಿಕೆ

ಸವರನ್ ಗೋಲ್ಡ್ ಬಾಂಡ್‌ಗಳು ಅಥವಾ ಎಸ್‌ಜಿಬಿಗಳನ್ನು ಭೌತಿಕ ಚಿನ್ನಕ್ಕೆ ಪರ್ಯಾಯವಾಗಿ ಭಾರತೀಯ ಸರ್ಕಾರದ ಪರವಾಗಿ ಆರ್‌ಬಿಐ ನೀಡುತ್ತದೆ. ಈ ಬಾಂಡ್‌ಗಳು ಗ್ರಾಂ ಚಿನ್ನದ ಲೆಕ್ಕಾಚಾರದಲ್ಲಿ ನೀಡಲಾಗುತ್ತದೆ. ಇದು ಸರ್ಕಾರಿ ಭದ್ರತೆಯನ್ನು ಹೊಂದಿರುವ ಬಾಂಡ್ ಆಗಿದೆ. ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ನೀಡಲಾಗುತ್ತದೆ. ಈ ಯೋಜನೆಯನ್ನು ಮೊದಲು 2015 ರಲ್ಲಿ ಭಾರತ ಸರ್ಕಾರವು ಪರಿಚಯಿಸಿತು. ಯೋಜನೆಗೆ ಲಾಕ್-ಇನ್ ಅವಧಿಯು 8 ವರ್ಷಗಳು ಆಗಿದೆ. ವಹಿವಾಟು ಸಂಪೂರ್ಣವಾಗಿ ದಾಖಲೆಯನ್ನು ಆಧರಿಸಿರುತ್ತದೆ. ಹಾಗೆಯೇ ಖರೀದಿ ಮತ್ತು ಮಾರಾಟದ ಸಮಯದಲ್ಲಿ ಚಿನ್ನದ ಬೆಲೆ ಎಷ್ಟಿರುತ್ತದೆಯೋ ಅಷ್ಟೇ ಬಾಂಡ್ ಬೆಲೆಯಾಗಿರುತ್ತದೆ. ಇದನ್ನು ಕಾಗದದ ರೂಪದಲ್ಲಿ ಅಥವಾ ಒಬ್ಬರ ಡಿಮ್ಯಾಟ್ ಖಾತೆಯಲ್ಲಿ ಇರಿಸಬಹುದು. ಡಿಜಿಟಲ್ ಆಸ್ತಿಯನ್ನು ಬಹಳ ಸುಲಭವಾಗಿ ವರ್ಗಾವಣೆ ಮಾಡಬಹುದು. ಹಾಗೆಯೇ ಅಧಿಕ ಬಡ್ಡಿದರವನ್ನು ಗಳಿಸುತ್ತಾರೆ. ಆದರೆ ನಾವು ಭೌತಿಕವಾಗಿ ಚಿನ್ನವನ್ನು ಖರೀದಿ ಮಾಡಿದರೆ ನಮಗೆ ಯಾವುದೇ ಬಡ್ಡಿದರ ಲಭ್ಯವಾಗದು.

 ಚಿನ್ನದ ಎಂಎಫ್‌ ಮೇಲೆ ಹೂಡಿಕೆ

ಚಿನ್ನದ ಎಂಎಫ್‌ ಮೇಲೆ ಹೂಡಿಕೆ

ಗೋಲ್ಡ್ ಮ್ಯೂಚುಯಲ್ ಫಂಡ್‌ಗಳು ಮ್ಯೂಚುಯಲ್ ಫಂಡ್‌ಗಳಾಗಿದ್ದು, ಅಲ್ಲಿ ಆಧಾರವಾಗಿರುವ ಆಸ್ತಿ ಚಿನ್ನವಾಗಿರುತ್ತದೆ. ಹೂಡಿಕೆದಾರರು ಅವುಗಳನ್ನು ವ್ಯಾಪಾರ ಮಾಡಲು ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು. ಇಲ್ಲಿ ಫಂಡ್ ಯೂನಿಟ್‌ಗಳ ಬೆಲೆಯನ್ನು ವ್ಯಾಪಾರ ಸಮಯದ ಕೊನೆಯಲ್ಲಿ ನಿರ್ಧಾರ ಮಾಡಲಾಗುತ್ತದೆ. ನಿವ್ವಳ ಆಸ್ತಿ ಮೌಲ್ಯವನ್ನು ಅವಲಂಬಿಸಿರುತ್ತದೆ.

English summary

How to Invest in Digital Gold in Festival Season, Here's Details in Kannada

Traditionally, gold is the most popular investment option for those looking for stable higher returns. Here's explained How to Invest in Digital Gold in Festival Season, read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X