For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ ನೆಟ್ ಬ್ಯಾಂಕಿಂಗ್ ಬಳಸಿ ಪಿಪಿಎಫ್ ಖಾತೆ ಕ್ಲೋಸ್ ಮಾಡುವುದು ಹೇಗೆ?

|

ಸಾರ್ವಜನಿಕ ಭವಿಷ್ಯ ನಿಧಿಗೆ (ಪಿಪಿಎಫ್) ನೀವು ಹೂಡಿಕೆ ಮಾಡಲು ಆರಂಭ ಮಾಡಲು ಬಯಸುತ್ತಾ ಇರಬಹುದು. ಪಿಪಿಎಫ್ ನಮಗೆ ಹಲವಾರು ಅವಕಾಶಗಳನ್ನು ನೀಡುತ್ತದೆ. ಭಾರತದ ಅತ್ಯುತ್ತಮ ಸ್ಥಿರ ಆದಾಯ ಹೂಡಿಕೆಯಾಗಿದೆ. ಪ್ರಸ್ತುತ ನಾವು ಇಂಟರ್‌ನೆಟ್ ಬ್ಯಾಂಕಿಂಗ್ ಬಳಕೆ ಮಾಡಿ ಕೂಡಾ ಪಿಪಿಎಫ್ ಖಾತೆಯನ್ನು ತೆರೆಯಬಹುದು ಮತ್ತು ಕ್ಲೋಸ್ ಮಾಡಬಹುದು.

ನೀವು ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿಒಎಸ್‌ಬಿ) ಖಾತೆಯನ್ನು ಹೊಂದಿದ್ದರೆ ನೀವು ನೆಟ್ ಬ್ಯಾಂಕಿಂಗ್ ಮೂಲಕ ನೀವು ಪಬ್ಲಿಕ್ ಪ್ರಾವಿಂಡೆಟ್ ಫಂಡ್ (ಪಿಪಿಎಫ್) ಖಾತೆಯನ್ನು ತೆರೆಯಬಹುದು ಅಥವಾ ಅದನ್ನು ಕ್ಲೋಸ್ ಮಾಡಲು ಸಾಧ್ಯವಿದೆ. ಈ ಅವಕಾಶವನ್ನು ಅಂಚೆ ಕಚೇರಿ ಇಲಾಖೆ (ಡಿಒಪಿ) ಕಲ್ಪಿಸಿದೆ.

ಕೋಟ್ಯಾಧಿಪತಿ ಆಗಲು ಇದರಲ್ಲಿ ಹೂಡಿಕೆ ಮಾಡಿ!ಕೋಟ್ಯಾಧಿಪತಿ ಆಗಲು ಇದರಲ್ಲಿ ಹೂಡಿಕೆ ಮಾಡಿ!

ಅಂಚೆ ಕಚೇರಿ ಇಲಾಖೆಯ ಪ್ರಕಾರ ಡಿಒಪಿ ಇಂಟರ್‌ನೆಟ್ ಬ್ಯಾಂಕಿಂಗ್‌ನ 'General Services' ಟ್ಯಾಬ್‌ನಡಿಯಲ್ಲಿ ಈ ಆಯ್ಕೆ ಇದೆ. ಇದರಲ್ಲೇ ಪಿಪಿಎಫ್ ಖಾತೆಯನ್ನು ತೆರೆಯುವ ಮತ್ತು ಕ್ಲೋಸ್ ಮಾಡುವ ಆಯ್ಕೆ ನಮಗೆ ಲಭ್ಯವಾಗಲಿದೆ. ಅಂಚೆ ಕಚೇರಿ ನೆಟ್ ಬ್ಯಾಂಕಿಂಗ್ ಬಳಕೆ ಮಾಡಿಕೊಂಡು ನಾವು ಪಿಪಿಎಫ್ ಖಾತೆಯನ್ನು ತೆರೆಯುವುದು ಹೇಗೆ ಮತ್ತು ಅದನ್ನು ಕ್ಲೋಸ್ ಮಾಡುವುದು ಹೇಗೆ ಎಂದು ನಾವು ಇಲ್ಲಿ ಹಂತ ಹಂತವಾಗಿ ವಿವರಿಸಿದ್ದೇವೆ ಮುಂದೆ ಓದಿ...

 ಅಂಚೆ ಕಚೇರಿಯಲ್ಲಿ ಪಿಪಿಎಫ್ ತೆರೆದರೆ ಯಾರಾಗುತ್ತಾರೆ ನಾಮಿನಿ?

ಅಂಚೆ ಕಚೇರಿಯಲ್ಲಿ ಪಿಪಿಎಫ್ ತೆರೆದರೆ ಯಾರಾಗುತ್ತಾರೆ ನಾಮಿನಿ?

ನಾವು ಅಂಚೆ ಕಚೇರಿ ಇಲಾಖೆ (ಡಿಒಪಿ) ಇಂಟರ್‌ನೆಟ್ ಬ್ಯಾಂಕಿಂಗ್ ಬಳಕೆದಾರರ ಹೆಸರದಲ್ಲೇ ಹೊಸ ಪಿಪಿಎಫ್ ಖಾತೆಯು ತೆರೆಯುತ್ತದೆ. ಇನ್ನು ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿಒಎಸ್‌ಬಿ) ಖಾತೆಯಲ್ಲಿ ಹೊಂದಿರುವ ನಾಮಿನಿಯೇ ಪಬ್ಲಿಕ್ ಪ್ರಾವಿಂಡೆಟ್ ಫಂಡ್ ಅಲ್ಲಿ ಇರುತ್ತಾರೆ. ಇನ್ನು ಮೆಚ್ಯೂರ್ ಆದ ಪಿಪಿಎಫ್ ಖಾತೆಯನ್ನು ಮಾತ್ರ ಆನ್‌ಲೈನ್‌ನಲ್ಲಿ ಕ್ಲೋಸ್ ಮಾಡಲು ಸಾಧ್ಯವಾಗಲಿದೆ.

 ಆನ್‌ಲೈನ್‌ನಲ್ಲಿ ಪಿಪಿಎಫ್ ಖಾತೆ ತೆರೆಯುವುದು ಹೇಗೆ?

ಆನ್‌ಲೈನ್‌ನಲ್ಲಿ ಪಿಪಿಎಫ್ ಖಾತೆ ತೆರೆಯುವುದು ಹೇಗೆ?

ಹಂತ 1: ಡಿಒಪಿ ಇಂಟರ್‌ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ
ಹಂತ 2: 'General Services' ಮೇಲೆ ಕ್ಲಿಕ್ ಮಾಡಿ, 'Service Requests' ಆಯ್ಕೆ ಮಾಡಿ
ಹಂತ 3: 'New Requests' ಮೇಲೆ ಕ್ಲಿಕ್ ಮಾಡಿ, ಪಿಪಿಎಫ್ ಖಾತೆಗೆ ಹೋಗಿ
ಹಂತ 4: 'Open a PPF Account' ಮೇಲೆ ಕ್ಲಿಕ್ ಮಾಡಿ
ಹಂತ 5: ನೀವು ಪ್ರತಿ ತಿಂಗಳು ಜಮೆ ಮಾಡಲು ಬಯಸುವ ಮೊತ್ತ ಜಮೆ ಮಾಡಿ (ಕನಿಷ್ಠ ಮೊತ್ತ ರೂ. 500)
ಹಂತ 6: ನೀವು ಮೊತ್ತವನ್ನು ಡೆಬಿಟ್ ಮಾಡಲು ಬಯಸುವ ಲಿಂಕ್ ಮಾಡಲಾದ ಪಿಒಎಸ್‌ಬಿ ಖಾತೆಯನ್ನು ಆಯ್ಕೆಮಾಡಿ
ಹಂತ 7: ನಿಯಮಗಳು ಮತ್ತು ಷರತ್ತನ್ನು ಓದಲು Click Here ಮೇಲೆ ಕ್ಲಿಕ್ ಮಾಡಿ accept ಮಾಡಿ
ಹಂತ 8: ಆನ್‌ಲೈನ್‌ನಲ್ಲಿ ಸಲ್ಲಿಸಿ, ನಂತರ ವಹಿವಾಟಿನ ಪಾಸ್‌ವರ್ಡ್ ನಮೂದಿಸಿ
ಹಂತ 9: Submit ಮಾಡಿ ರಸೀದಿಯನ್ನುನೋಡಿ ಅಥವಾ ಡೌನ್‌ಲೋಡ್ ಮಾಡಿ

 ಆನ್‌ಲೈನ್‌ನಲ್ಲಿ ಪಿಪಿಎಫ್ ಖಾತೆ ಕ್ಲೋಸ್ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಪಿಪಿಎಫ್ ಖಾತೆ ಕ್ಲೋಸ್ ಮಾಡುವುದು ಹೇಗೆ?

ಹಂತ 1: DOP ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ
ಹಂತ 2: 'General Services' ಸೆಕ್ಷನ್‌ ಕ್ಲಿಕ್ ಮಾಡಿ
ಹಂತ 3: 'Service Requests' ಅಡಿಯಲ್ಲಿ 'New Requests' ಮೇಲೆ ಕ್ಲಿಕ್ ಮಾಡಿ
ಹಂತ 4: 'Closure of PPF Accounts' ಮೇಲೆ ಕ್ಲಿಕ್ ಮಾಡಿ
ಹಂತ 5: ಯಾವ ಪಿಪಿಎಫ್ ಖಾತೆ ಕ್ಲೋಸ್ ಮಾಡಬೇಕು ಎಂದು ಆಯ್ಕೆ ಮಾಡಿಕೊಳ್ಳಿ
ಹಂತ 6: ನಿಮ್ಮ PO ಉಳಿತಾಯ ಖಾತೆಯನ್ನು ಕ್ರೆಡಿಟ್ ಖಾತೆಯಾಗಿ ಆಯ್ಕೆಮಾಡಿ
ಹಂತ 7: Submit Online ಕ್ಲಿಕ್ ಮಾಡಿ
ಹಂತ 8: ವಹಿವಾಟಿನ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ
ಹಂತ 9: ರಸೀದಿಯನ್ನು ಪರಿಶೀಲಿಸಿ ಅಥವಾ ಡೌನ್‌ಲೋಡ್ ಮಾಡಬಹುದು

English summary

How To Open And Close Public Provident Fund Account Using Post Office Net Banking

If you have Post Office Savings Bank (POSB) account, then you can now open and close a Public Provident Fund (PPF) account through internet banking.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X