For Quick Alerts
ALLOW NOTIFICATIONS  
For Daily Alerts

ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?

|

ಈ ಹಿಂದೆ ಪಿಂಚಣಿದಾರರು ತಮಗೆ ಲಭ್ಯವಾಗುವ ಪಿಂಚಣಿಯನ್ನು ವಿತರಣೆ ಮಾಡುವ ಬ್ಯಾಂಕ್‌ ಅಥವಾ ಅಂಚೆ ಕಚೇರಿಗೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ಸ್ವತಃ ತಾವೇ ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿತ್ತು. ಆದರೆ ಕಾಲ ಬದಲಾದಂತೆ ತಂತ್ರಜ್ಞಾನವು ಕೂಡಾ ಬದಲಾಗಿದೆ. ಈಗ ಎಲ್ಲವೂ ಡಿಜಿಟಲ್ ಆಗಿದೆ.

ನವೆಂಬರ್‌ ತಿಂಗಳಲ್ಲಿ ದೇಶದಲ್ಲಿ ಕೋಟ್ಯಾಂತರ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಸಲ್ಲಿಸುತ್ತಾರೆ. ಅದಕ್ಕಾಗಿ ಸರ್ಕಾರ ಬೇರೆ ಬೇರೆ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ನಡುವೆ ಬ್ಯಾಂಕ್‌ಗಳು ಕೂಡಾ ಹಿರಿಯ ನಾಗರಿಕರಿಗೆ ಸರಳ ಹಾಗೂ ಸುಲಭವಾಗುವ, ಮನೆಯಲ್ಲಿಯೇ ಕುಳಿತು ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಅವಕಾಶವನ್ನು ನೀಡಿದೆ.

ಜೀವನ ಪ್ರಮಾಣಪತ್ರದಲ್ಲಿ ಫೇಸ್ ರೆಕಾಗ್ನಿಷನ್ ಪ್ರಕ್ರಿಯೆ ಏನು?ಜೀವನ ಪ್ರಮಾಣಪತ್ರದಲ್ಲಿ ಫೇಸ್ ರೆಕಾಗ್ನಿಷನ್ ಪ್ರಕ್ರಿಯೆ ಏನು?

ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾ ಜನರು ಆನ್‌ಲೈನ್ ಮೂಲಕ ಅಂದರೆ ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವ ಅವಕಾಶವನ್ನು ನೀಡಿದೆ. ಆದರೆ ಹಲವಾರು ಮಂದಿಗೆ ತಾವು ಹೇಗೆ ಈ ವಿಡಿಯೋ ಕರೆ ಮೂಲಕ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವುದು ಎಂದು ತಿಳಿದಿಲ್ಲ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಬ್ಯಾಂಕ್ ಆಫ್ ಬರೋಡಾ: ವಿಡಿಯೋ ಕರೆ ಮೂಲಕ ಸಲ್ಲಿಕೆ

ಬ್ಯಾಂಕ್ ಆಫ್ ಬರೋಡಾ: ವಿಡಿಯೋ ಕರೆ ಮೂಲಕ ಸಲ್ಲಿಕೆ

ಹಂತ 1: https://tabit.bankofbaroda.com/lfcrt/#/request ಗೆ ಭೇಟಿ ನೀಡಿ
ಹಂತ 2: ಪಿಪಿಒ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 3: ಆಧಾರ್‌ಗೆ ಲಿಂಕ್ ಆದ ಮೊಬೈಲ್‌ಗೆ ಒಟಿಪಿ ಬರಲಿದೆ, ಅದನ್ನು ನಮೂದಿಸಿ Submit ಕ್ಲಿಕ್ ಮಾಡಿ
ಹಂತ 4: ಬಳಿಕ ಪಿಂಚಣಿದಾರರು ನಾಲ್ಕು ಆಯ್ಕೆಗಳನ್ನು ಮಾಡಬೇಕಾಗುತ್ತದೆ.
ಎ. ಮರುಉದ್ಯೋಗ ಮಾಡುತ್ತಿದ್ದೀರಾ-ಹೌದು/ಇಲ್ಲ
ಬಿ. ಮರುವಿವಾಹವಾಗಿದ್ದೀರಾ-ಹೌದು/ಇಲ್ಲ
ಸಿ. 9000+ತುಟ್ಟಿಭತ್ಯೆಗಿಂತ ಕಡಿಮೆ ಆದಾಯವಿದೆಯೇ-ಹೌದು/ಇಲ್ಲ
ಡಿ. ವಿಶೇಷಚೇತನರೇ-ಹೌದು/ಇಲ್ಲ
ಹಂತ 5: ಈಗಲೇ ಕರೆ ಮಾಡುವುದೇ ಅಥವಾ ನಂತರ ಕರೆ ಮಾಡುವುದೇ ಎಂದು ಆಯ್ಕೆ ಮಾಡಿಕೊಳ್ಳಿ.
ಹಂತ 6: ಕರೆಗೂ ಮುನ್ನ ನಿಮ್ಮ ಐಡಿ ಕಾರ್ಡ್, ಅಗತ್ಯ ದಾಖಲೆಯನ್ನು ಇಟ್ಟುಕೊಳ್ಳಿ. ಪಿಂಚಣಿದಾರರು ಕರೆಗೆ ಒಪ್ಪಿಗೆ ಸೂಚಿಸಿದ ಬಳಿಕವೇ ಕರೆ ಆರಂಭವಾಗಲಿದೆ. ಬಿಒಬಿ ಸಿಬ್ಬಂದಿ ಕರೆಯನ್ನು ನಡೆಸಲಿದ್ದಾರೆ.
ಹಂತ 7: ಫೋಟೋ ಐಡಿಯನ್ನು ತೋರಿಸಿ, ಅದನ್ನು ಸಿಬ್ಬಂದಿಗಳು ಸ್ಕ್ಯಾನ್ ಮಾಡಿಕೊಳ್ಳುತ್ತಾರೆ.
ಹಂತ 8: ಛಾಯಾಚಿತ್ರವನ್ನ ತೆಗೆದ ಬಳಿಕ ಆಧಾರ್‌ ಲಿಂಕ್ ಆದ ಮೊಬೈಲ್‌ ಸಂಖ್ಯೆಗೆ ಮತ್ತೆ ಒಟಿಪಿ ಬರಲಿದೆ.
ಹಂತ 9: ಈ ಪ್ರಕ್ರಿಯೆ ಬಳಿಕ ಜೀವನ ಪ್ರಮಾಣಪತ್ರ ಪಿಂಚಣಿ ಸಾಫ್ಟ್‌ವೇರ್‌ನಲ್ಲಿ ಅಪ್‌ಡೇಟ್ ಆಗಲಿದೆ. ಜೀವನ ಪ್ರಮಾಣಪತ್ರ ತಿರಸ್ಕೃತವಾದರೆ ಇಮೇಲ್ ಹಾಗೂ ಎಸ್‌ಎಂಎಸ್ ಮೂಲಕ ಕಾರಣ ಲಭ್ಯವಾಗಲಿದೆ.

 ಎಸ್‌ಬಿಐ ವಿಡಿಯೋ ಕರೆ ಜೀವನ ಪ್ರಮಾಣ ಪತ್ರ ಸಲ್ಲಿಕೆ

ಎಸ್‌ಬಿಐ ವಿಡಿಯೋ ಕರೆ ಜೀವನ ಪ್ರಮಾಣ ಪತ್ರ ಸಲ್ಲಿಕೆ

ಹಂತ 1: ಎಸ್‌ಬಿಐ ಅಧಿಕೃತ ಪಿಂಚಣಿಸೇವಾ ವೆಬ್‌ಸೈಟ್‌ ಅಥವಾ ಮೊಬೈಲ್ ಆಪ್‌ಗೆ ಭೇಟಿ ನೀಡಿ
ಹಂತ 2: VideoLC ಮೇಲೆ ಕ್ಲಿಕ್ ಮಾಡಿ. 'Video Life Certificate' ಆಯ್ಕೆ ಮಾಡಿ.
ಹಂತ 3: ಪಿಂಚಣಿ ಡೆಪಾಸಿಟ್ ಆಗುವ ಖಾತೆ ಸಂಖ್ಯೆ ನಮೂದಿಸಿ. ಕ್ಯಾಪ್ಚಾ ಉಲ್ಲೇಖಿಸಿ, ಬ್ಯಾಂಕ್‌ಗೆ ನಿಮ್ಮ ಆಧಾರ್ ಮಾಹಿತಿ ಬಳಕೆಗೆ ಅವಕಾಶ ನೀಡಲು ಬಾಕ್ಸ್ ಮೇಲೆ ಕ್ಲಿಕ್ ಮಾಡಿ
ಹಂತ 4: 'Validate Account' ಮೇಲೆ ಕ್ಲಿಕ್ ಮಾಡಿ, ಒಟಿಪಿಯನ್ನು ಉಲ್ಲೇಖಿಸಿ
ಹಂತ 5: ಅಗತ್ಯ ದಾಖಲೆಗಳನ್ನು ಹಾಕಿ, Proceed ಮೇಲೆ ಕ್ಲಿಕ್ ಮಾಡಿ
ಹಂತ 6: ಮುಂದಿನ ಪುಟದಲ್ಲಿ ವಿಡಿಯೋ ಕರೆ ಸಮಯ ಗೊತ್ತುಪಡಿಸಿ. ಈ ಬಗ್ಗೆ ಇಮೇಲೆ ಹಾಗೂ ಎಸ್‌ಎಂಎಸ್ ಬರಲಿದೆ.
ಹಂತ 7: ನಿಗದಿತ ಸಮಯಕ್ಕೆ ವಿಡಿಯೋ ಕರೆಗೆ ಜಾಯಿನ್ ಆಗಿ.
ಹಂತ 8: ವೆರಿಫಿಕೇಶನ್ ಕೋಡ್ ಅನ್ನು ವಿಡಿಯೋ ಕರೆಯಲ್ಲಿ ನೀವು ತಿಳಿಸಬೇಕಾಗುತ್ತದೆ, ಪ್ಯಾನ್ ಕಾರ್ಡ್ ಅನ್ನು ಕೂಡಾ ತೋರಿಸಬೇಕಾಗುತ್ತದೆ.
ಹಂತ 9: ನಿಮ್ಮ ಫೋಟೋವನ್ನು ಕ್ಯಾಪ್ಚಾರ್ ಮಾಡಲು ಸಾಧ್ಯವಾಗುವಂತೆ ಕ್ಯಾಮೆರಾವನ್ನು ಇಟ್ಟುಕೊಳ್ಳಿ.
ಹಂತ 10: ನಿಮ್ಮ ಮಾಹಿತಿಯನ್ನು ದಾಖಲು ಮಾಡಲಾಗಿದೆಯೇ ಎಂಬ ಬಗ್ಗೆ ನಿಮಗೆ ಸಂದೇಶ ಬರಲಿದೆ. ಸ್ಟೇಟಸ್‌ ಕೂಡಾ ಎಸ್‌ಎಂಎಸ್ ಮೂಲಕ ಲಭ್ಯವಾಗಲಿದೆ. ಇಲ್ಲಿಗೆ ಪ್ರಕ್ರಿಯೆ ಅಂತ್ಯವಾಗಲಿದೆ.

 

 

 ಏನಿದು ಡಿಜಿಟಲ್ ಜೀವನ ಪ್ರಮಾಣಪತ್ರ?

ಏನಿದು ಡಿಜಿಟಲ್ ಜೀವನ ಪ್ರಮಾಣಪತ್ರ?

ಕೇಂದ್ರ ಸರ್ಕಾರದಿಂದ ಮಾಸಿಕವಾಗಿ ಪಿಂಚಣಿಯನ್ನು ಪಡೆಯುವವರು ಜೀವನ ಪ್ರಮಾಣ ಪತ್ರ ಅಥವಾ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವುದು ಮುಖ್ಯವಾಗಿದೆ. ಇದಕ್ಕೆ ಜೀವನ ಪ್ರಮಾಣ ಎಂದು ಕೂಡಾ ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾವು ಜೀವನ ಪ್ರಮಾಣ ಪತ್ರವನ್ನು ಪಿಂಚಣಿ ವಿತರಣಾ ಸಂಸ್ಥೆಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಇದು ನಾವು ಬದುಕುಳಿದಿದ್ದೇವೆ ಎಂಬುವುದಕ್ಕೆ ಸಾಕ್ಷಿಯಾಗಿದ್ದು, ಇದನ್ನು ಸಲ್ಲಿಕೆ ಮಾಡದಿದ್ದರೆ ನಮ್ಮ ಪಿಂಚಣಿ ಸ್ಥಗಿತವಾಗಬಹುದು. ಹಾಗೆಯೇ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಕೂಡಾ ಸಲ್ಲಿಕೆ ಮಾಡಬಹುದು. ಹಿರಿಯ ನಾಗರಿಕರು ಪ್ರಯಾಣ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾಗ ಆನ್‌ಲೈನ್ ಮೂಲಕ ಸಲ್ಲಿಕೆ ಮಾಡುವ ಜೀವನಪ್ರಮಾಣಪತ್ರಕ್ಕೆ ಡಿಜಿಟಲ್ ಜೀವನ ಪ್ರಮಾಣಪತ್ರ ಎಂದು ಕರೆಯಲಾಗುತ್ತದೆ. ಇದನ್ನು ಮನೆ ಮನೆಗೆ ಭೇಟಿ ನೀಡುವ ಅಂಚೆ ಕಚೇರಿ ಸಿಬ್ಬಂದಿಗಳ ಸಹಾಯದ ಮೂಲಕವೂ ಸಲ್ಲಿಕೆ ಮಾಡಬಹುದು.

English summary

How to Submit Life Certificate Via Video Call to Bank of Baroda, SBI

sbi and bank of baroda account holding Pensioners can submit life certificate any time, through Video Call, explained steps Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X