For Quick Alerts
ALLOW NOTIFICATIONS  
For Daily Alerts

349 ರೈಲು ಸಂಚಾರ ರದ್ದು: ಟಿಕೆಟ್ ರಿಫಂಡ್ ಹೀಗೆ ಪಡೆಯಿರಿ

|

ನಿರ್ವಹಣೆ ಹಾಗೂ ಬೇರೆ ಅಗತ್ಯ ಕಾರ್ಯಗಳು ಇರುವ ಕಾರಣದಿಂದಾಗಿ ಭಾರತೀಯ ರೈಲ್ವೆಯು ಸೋಮವಾರ ಅಂದರೆ ಡಿಸೆಂಬರ್ 26ರಂದು ಸುಮಾರು 349 ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಇದರಲ್ಲಿ 283 ರೈಲುಗಳ ಸಂಚಾರ ಸಂಪೂರ್ಣವಾಗಿ ರದ್ದು ಮಾಡಲಾಗಿದ್ದರೆ 66 ರೈಲುಗಳು ಭಾಗಶಃ ರದ್ದು ಮಾಡಲಾಗಿದೆ.

ಇನ್ನು ಕಳೆದ ಹಲವಾರು ದಿನಗಳಿಂದ ಚಳಿ ಗಾಳಿ, ಮಂಜು ಹೆಚ್ಚಾಗಿದೆ. ಹಲವಾರು ರಾಜ್ಯಗಳಲ್ಲಿ ಸಂಚಾರದ ಮೇಲೆ ಇದರ ಪರಿಣಾಮ ಉಂಟಾಗಿದೆ. ರೈಲು ಹಾಗೂ ಬಸ್‌ಗಳ ಸಂಚಾರ ದಿಡೀರ್ ಆಗಿ ರದ್ದು ಮಾಡಬೇಕಾದ ಸ್ಥಿತಿ ಉಂಟಾಗಿದೆ. ಕೆಲವೊಮ್ಮೆ ಸಮಯ ಬದಲಾವಣೆ ಮಾಡಲಾಗುತ್ತಿದೆ.

ರಾತ್ರಿ ಹೊತ್ತು ರೈಲು ಪ್ರಯಾಣ: ಐಆರ್‌ಸಿಟಿಸಿ ಹೊಸ ಗೈಡ್‌ಲೈನ್ಸ್ರಾತ್ರಿ ಹೊತ್ತು ರೈಲು ಪ್ರಯಾಣ: ಐಆರ್‌ಸಿಟಿಸಿ ಹೊಸ ಗೈಡ್‌ಲೈನ್ಸ್

ಆದರೆ ಈ ಎಲ್ಲ ಸಂದರ್ಭದಲ್ಲಿ ಬಳಲುವವರು ಜನರು ಆಗಿದ್ದಾರೆ. ಈ ರಜೆಯ ಸಂದರ್ಭದಲ್ಲಿ ಹಲವಾರು ಮಂದಿ ಬೇರೆ ಬೇರೆ ಊರಿಗೆ ಪ್ರವಾಸ ಹೋಗುತ್ತಾರೆ. ಹಾಗಿರುವಾಗ ದಿಡೀರ್ ರೈಲು ಸಂಚಾರ ರದ್ದಾದ್ದರೆ ಏನು ಮಾಡುವುದು. ನಿಮ್ಮ ಹಣ ನಷ್ಟವಾಗುತ್ತದೆಯೇ? ಇಲ್ಲ ನೀವು ರಿಫಂಡ್ ಪಡೆಯಬಹುದು. ಹೇಗೆ ರಿಫಂಡ್ ಪಡೆಯುವುದು ಎಂದು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

 ರದ್ದಾದ ರೈಲುಗಳು ಯಾವುದು?

ರದ್ದಾದ ರೈಲುಗಳು ಯಾವುದು?

01513, 01605, 01606, 01607, 01608, 01609, 01610, 01620, 01623, 01625, 01626, 01823, 01824, 02547, 02548, 02549, 02550, 03085, 03086, 03343, 03344, 03359, 03360, 03591, 03592, 04029, 04030, 04041, 04042, 04148, 04149, 04319, 04335, 04336, 04353, 04354, 04356, 04379, 04380, 04383, 04384, 04403, 04404, 04408, 04421, 04424, 04547, 04548, 04549, 04550, 04568, 04577, 04601, 04602, 04647, 04648, 04901, 04902, 04909, 04910, 04912, 04913, 04916, 04919, 04927, 04938, 04941, 04946, 04950, 04953, 04958, 04959, 04961, 04963, 04964, 04974, 04975, 04977, 04978, 04987, 04988, 04999, 05000, 05035, 05036, 05039, 05040, 05091, 05092, 05093, 05094, 05155, 05156, 05209, 05210, 05257, 05258, 05259, 05260, 05261, 05262, 05334, 05453, 05454, 05459, 05460, 05470, 05471, 05517, 05518, 05591, 05592, 05608, 06802, 06803, 06921, 06922, 06923, 06924, 06925, 06926, 06934, 06937, 06958, 06959, 06964, 06967, 06977, 06980, 06991, 06994, 06995, 06996, 07593, 07596, 07765, 07766, 07793, 07794, 07795, 07853, 07854, 07893, 07894, 07906, 07907, 08167, 08168, 08169, 08170, 08407, 08408, 08441, 08442, 08445, 08446, 08861, 08862, 09108, 09109, 09110, 09113, 09369, 09370, 09476, 09481, 09491, 09492, 10101, 10102, 11123, 12171, 12241, 12242, 12358, 12369, 12370, 12397, 12529, 12530, 12537, 12538, 12572, 12595, 12871, 12873, 13309, 13310, 13345, 13346, 13349, 13350, 14005, 14006, 14213, 14214, 14217, 14218, 14230, 14231, 14232, 14235, 14236, 14265, 14266, 14307, 14308, 14505, 14506, 14523, 14617, 14618, 14673, 15026, 15081, 15082, 15083, 15084, 15127, 15129, 15130, 15159, 15203, 15204, 15280, 15620, 15903, 17003, 17004, 17011, 17012, 17035, 17036, 17233, 17234, 18103, 18413, 18414, 18632, 18635, 20948, 20949, 22441, 22442, 22809, 22862, 31411, 31414, 31423, 31432, 31711, 31712, 36011, 36012, 36031, 36032, 36033, 36034, 36035, 36036, 36037, 36038, 36071, 36072, 36085, 36086, 36827, 36840, 37305, 37306, 37307, 37308, 37319, 37327, 37330, 37338, 37343, 37348, 37411, 37412 , 37415, 37416, 52539

 ಯಾವಾಗ ರಿಫಂಡ್ ಪಡೆಯಲು ಸಾಧ್ಯ?

ಯಾವಾಗ ರಿಫಂಡ್ ಪಡೆಯಲು ಸಾಧ್ಯ?

ನೀವು ಪ್ರಯಾಣ ಮಾಡುವ ರೈಲು 3 ಗಂಟೆ ಅಥವಾ ಅದಕ್ಕಿಂತ ಅಧಿಕ ತಡವಾಗಿ ಬರುವುದಾದರೆ ನೀವು ಆ ಟಿಕೆಟ್ ಅನ್ನು ರದ್ದು ಮಾಡಿ ರಿಫಂಡ್ ಪಡೆಯಲು ಸಾಧ್ಯವಾಗಲಿದೆ. ರೈಲ್ವೆ ರೆಗ್ಯೂಲೇಷನ್ ಪ್ರಕಾರ 3 ಗಂಟೆ ಅಥವಾ ಅದಕ್ಕಿಂತ ಅಧಿಕ ವಿಳಂಬವಾದ ಕಾರಣದಿಂದಾಗಿ ರೈಲ್ವೆ ಟಿಕೆಟ್ ಅನ್ನು ಪ್ರಯಾಣಿಕರು ರದ್ದು ಮಾಡಿದರೆ, ಸಂಪೂರ್ಣ ಮೊತ್ತದ ರಿಫಂಡ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಹಾಗೆಯೇ ಯಾವುದೇ ಶುಲ್ಕವನ್ನು ಕೂಡಾ ವಿಧಿಸಲಾಗುವುದಿಲ್ಲ. ನೀವು ರಿಸರ್ವೇಷನ್ ಕೌಂಟರ್‌ಗೆ ಹೋಗಿ ಟಿಕೆಟ್ ಮಾಡಿದ್ದರೆ ಅಲ್ಲಿಯೇ ಹೋಗಿ ರದ್ದು ಮಾಡಿಸಿ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್ ಮಾಡಿದ್ದರೆ ಅಲ್ಲಿಯೇ ಟಿಕೆಟ್ ರದ್ದು ಮಾಡಬಹುದು. ಇನ್ನು ರೈಲು ರದ್ದಾದರೂ ಕೂಡಾ ನೀವು ರಿಫಂಡ್ ಪಡೆಯಲು ಅರ್ಹರಾಗಿರುತ್ತೀರಿ.

 ಆನ್‌ಲೈನ್‌ನಲ್ಲಿ ಟಿಡಿಆರ್‌ ಸಬ್‌ಮಿಟ್ ಮಾಡಿ

ಆನ್‌ಲೈನ್‌ನಲ್ಲಿ ಟಿಡಿಆರ್‌ ಸಬ್‌ಮಿಟ್ ಮಾಡಿ

ನೀವು ರೈಲು 3 ಗಂಟೆ ಅಥವಾ ಅದಕ್ಕಿಂತ ಅಧಿಕ ತಡವಾಗಿ ಬರುವ ಕಾರಣದಿಂದಾಗಿ ಟಿಕೆಟ್ ಅನ್ನು ರದ್ದು ಮಾಡಿದರೆ ಅಥವಾ ಭಾರತೀಯ ರೈಲ್ವೆಯೇ ಬೇರೆ ಬೇರೆ ಕಾರಣದಿಂದಾಗಿ ರೈಲು ರದ್ದು ಮಾಡಿದರೆ ನೀವು ರಿಫಂಡ್ ಅನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತೀರಿ. ಆದರೆ ಅದಕ್ಕಾಗಿ ಟಿಡಿಆರ್ ಫೈಲ್ ಮಾಡಬೇಕಾಗುತ್ತದೆ. ನೀವು ಟಿಡಿಆರ್‌ ಅನ್ನು ಸಲ್ಲಿಸಿದ ಬಳಿಕ ಅದನ್ನು ಪರಿಷ್ಕರಿಸಿ ಐಆರ್‌ಸಿಟಿಸಿ ರಿಫಂಡ್ ಮಾಡಲಿದೆ.

 ಟಿಡಿಆರ್ ಫೈಲ್ ಮಾಡಿ ರಿಫಂಡ್ ಪಡೆಯುದು ಹೇಗೆ?

ಟಿಡಿಆರ್ ಫೈಲ್ ಮಾಡಿ ರಿಫಂಡ್ ಪಡೆಯುದು ಹೇಗೆ?

ಹಂತ 1: ಐಆರ್‌ಸಿಟಿಸಿ ಖಾತೆಗೆ ಸೈನ್‌ ಇನ್ ಆಗಬೇಕು
ಹಂತ 2: ಲಾಗಿನ್ ಆದ ಬಳಿಕ MY ACCOUNT ಆಯ್ಕೆ ಮಾಡಿ
ಹಂತ 3: My Transactionಗೆ ಹೋಗಿ, ಟಿಡಿಆರ್‌ ಫೈಲಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ನಿಮ್ಮ ಟಿಕೆಟ್ ಅನ್ನು ಲೀಸ್ಟ್‌ನಲ್ಲಿ ಆಯ್ಕೆ ಮಾಡಿ ಟಿಡಿಆರ್ ಸಲ್ಲಿಸಿ
ಹಂತ 5: ಟಿಡಿಆರ್ ಸಲ್ಲಿಸಿದ 5ರಿಂದ 7 ದಿನದಲ್ಲಿ ರೈಲ್ವೆ ನಿಮ್ಮ ಕ್ಲೈಮ್ ಅನ್ನು ಪರಿಷ್ಕರಿಸಿ ರಿಫಂಡ್ ಮೊತ್ತವನ್ನು ನಿಮ್ಮ ಖಾತೆಗೆ ಜಮೆ ಮಾಡಲಿದೆ.

English summary

Indian Railways Cancels 349 Trains, How to Get Refund of Ticket, Details in Kannada

Owing to maintenance and operational-related works, the Indian Railways on Monday cancelled 349 trains. How to Get Refund of Ticket, Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X