For Quick Alerts
ALLOW NOTIFICATIONS  
For Daily Alerts

ಎಲ್ಲೆಡೆ ಇನ್‌ಫ್ಲೇಷನ್ ಕಾಟ; ಏನಿದು ಹಣದುಬ್ಬರ? ಇದರ ದುಷ್ಪರಿಣಾಮಗಳೇನು?

|

ಹಣದುಬ್ಬರಕ್ಕೆ ಇಡೀ ವಿಶ್ವವೇ ಕಂಗೆಡುತ್ತಿದೆ, ಆರ್ಥಿಕ ತಜ್ಞರು ಕಳವಳಪಡುತ್ತಿದೆ. ಅಮೆರಿಕದಲ್ಲಿ ಹಣದುಬ್ಬರಕ್ಕೆ ಕಡಿವಾಣ ಹಾಕಲು ಬ್ಯಾಂಕ್ ಬಡ್ಡಿ ದರಗಳನ್ನು ಸಾಲು ಸಾಲಾಗಿ ಏರಿಸತೊಡಗಿದೆ. ಅಮೆರಿಕ ಮಾತ್ರವಲ್ಲ, ಭಾರತ ಸೇರಿ ಹಲವು ದೇಶಗಳು ಹಣದುಬ್ಬರ ಎದುರಿಸಲು ಬಡ್ಡಿ ದರ ಏರಿಕೆಯ ಮಾರ್ಗ ಹಿಡಿದಿವೆ.

ಭಾರತದಲ್ಲಿ ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇ. 7.41ಕ್ಕೆ ಹೋಗಿ ಮುಟ್ಟಿದೆ. ಇದು ಮೊನ್ನೆ ಅಕ್ಟೋಬರ್ 12ರಂದು ಸರಕಾರವೇ ನೀಡಿದ ಮಾಹಿತಿ. ಕಳೆದ 5 ತಿಂಗಳಲ್ಲೇ ಹಣದುಬ್ಬರದ ಗರಿಷ್ಠ ಮಟ್ಟ ಇದು.

ಅಮೆರಿಕ, ಚೀನಾಗೆ ಭಾರತದ ರಫ್ತು ಇಳಿಕೆ; ಕಾರಣ ಏನು?ಅಮೆರಿಕ, ಚೀನಾಗೆ ಭಾರತದ ರಫ್ತು ಇಳಿಕೆ; ಕಾರಣ ಏನು?

ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ಸ್ಥಿತಿ ಬಗ್ಗೆ ಬಹಳ ನಿಗಾ ಇರಿಸುತ್ತಿದೆ. ಹಣದುಬ್ಬರ ಶೇ. 6ಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಬೇಕು ಎಂದು ಸರಕಾರಕ್ಕೆ ಟಾರ್ಗೆಟ್ ಕೊಟ್ಟಿದೆ. ಆದರೆ, ಕಳೆದ 9 ತಿಂಗಳಿಂದಲೂ ಹಣದುಬ್ಬರ ಶೇ. 6ಕ್ಕಿಂತ ಹೆಚ್ಚಿನ ಮಟ್ಟದಲ್ಲೇ ನಿಂತಿದೆ. ಇದು ಆರ್ಥಿಕ ಸಂಕಷ್ಟ ಪರಿಸ್ಥಿತಿಗೆ ಕೈಗನ್ನಡಿ ಎಂದು ತಜ್ಞರು ಬಣ್ಣಿಸುತ್ತಾರೆ.

ಅಮೆರಿಕದಲ್ಲಿ ಹಣದುಬ್ಬರ ಭಾರತಕ್ಕಿಂತ ಹೆಚ್ಚು ಇದೆ. ಅಲ್ಲಿ ಇನ್ಫ್ಲೇಷನ್ ಶೇ. 8.5 ಇದೆ. ಕಳೆದ 40 ವರ್ಷದಲ್ಲೇ ಅಲ್ಲಿ ಅತಿ ಹೆಚ್ಚು ಹಣದುಬ್ಬರದ ಸ್ಥಿತಿ ತಲೆದೋರಿದೆ. ಯೂರೋಪ್‌ನ ಹಲವು ಸಿರಿವಂತ ದೇಶಗಳಲ್ಲಿ ಹಣದುಬ್ಬರ ಶೇ. 10ರ ಮಟ್ಟ ದಾಟಿ ಏರಿ ಹೋಗಿವೆ.

ಏನಿದು ಹಣದುಬ್ಬರ?

ಏನಿದು ಹಣದುಬ್ಬರ?

ಹಣದುಬ್ಬರ ಎಂಬುದು ನಾವು ಖರೀದಿಸುವ ಸರಕು ಮತ್ತು ಸೇವೆಗಳ ಬೆಲೆ ಏರಿಕೆಯ ದರ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಒಂದು ವಸ್ತುವಿನ ಬೆಲೆ ಎಷ್ಟು ಇತ್ತು, ಈಗ ಎಷ್ಟಿದೆ ಎಂಬುದರ ಅಂತರವೇ ಹಣದುಬ್ಬರ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಹೆಚ್ಚು ಪರಿಣಾಮ ಬೀರುತ್ತದೆ.

ಒಂದು ಉತ್ಪನ್ನದ ಬೆಲೆ ಏರಿಕೆಗೆ ಎರಡು ಕಾರಣಗಳನ್ನು ಪರಿಗಣಿಸಬಹುದು. ಉತ್ಪಾದನೆಯ ವೆಚ್ಚ ಏರಿದರೆ ಅಥವಾ ಪೂರೈಕೆಗಿಂತ ಬೇಡಿಕೆ ಹೆಚ್ಚಿದರೆ ಉತ್ಪನ್ನದ ಬೆಲೆ ಹೆಚ್ಚುತ್ತದೆ. ಇದು ಹಣದುಬ್ಬರ ಏರಿಕೆಗೂ ಕಾರಣವಾಗುತ್ತದೆ.

ಹಣದುಬ್ಬರ ಅಳತೆ ಹೇಗೆ?

ಹಣದುಬ್ಬರ ಅಳತೆ ಹೇಗೆ?

ಕನ್ಸೂಮರ್ ಫುಡ್ ಪ್ರೈಸ್ ಇಂಡೆಕ್ಸ್ ಅಥವಾ ಗ್ರಾಹಕ ಆಹಾರ ಬೆಲೆ ಸೂಚಿ (ಸಿಪಿಐ) ಆಧಾರದ ಮೇಲೆ ಹಣದುಬ್ಬರವನ್ನು ಗಣಿಸಲಾಗುತ್ತದೆ. ಭಾರತದ ಒಂದು ಸಾಮಾನ್ಯ ಕುಟುಂಬ ಖರೀದಿಸುವ ಆಹಾರ ವಸ್ತುಗಳ ಬೆಲೆಯಲ್ಲಿ ಆಗುವ ವ್ಯತ್ಯಾಸದ ಅಳತೆಯೇ ಸಿಪಿಐ. ನಮ್ಮ ಜೀವನ ವೆಚ್ಚ ಎಷ್ಟು ದುಬಾರಿ ಆಗಿದೆ ಎಂಬುದನ್ನು ಇದು ಸೂಚಿಸುತ್ತದೆ.

ಈಗ ಹಣದುಬ್ಬರ ಶೇ. 7.41ರಷ್ಟು ಹೆಚ್ಚಾಗಿದೆ ಎಂದರೆ, 2021ರ ಸೆಪ್ಟೆಂಬರ್ ತಿಂಗಳಲ್ಲಿ ಇದ್ದ ಎಲ್ಲಾ ಆಹಾರ ವಸ್ತುಗಳ ಸರಾಸರಿ ಬೆಲೆಗಿಂತ ಈಗಿನ ಬೆಲೆ ಶೇ. 7.41ರಷ್ಟು ಏರಿಕೆ ಆಗಿ ಆಗಿದೆ ಎಂದರ್ಥ.

ಈಗ ಯಾಕೆ ಏರುತ್ತಿದೆ?
 

ಈಗ ಯಾಕೆ ಏರುತ್ತಿದೆ?

ಸದ್ಯಕ್ಕೆ ಭಾರತದಲ್ಲಿ ಹಣದುಬ್ಬರ ಏರಿಕೆಗೆ ಪ್ರಮುಖವಾಗಿ ಕಾರಣವಾಗಿರುವುದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮತ್ತು ರೂಪಾಯಿ ಮೌಲ್ಯ ಕುಸಿತ.

ಯುದ್ಧ ಉಂಟು ಮಾಡಿರುವ ಪರಿಣಾಮ ಸರಪಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಯುದ್ಧದ ಫಲವಾಗಿ ಕಚ್ಛಾ ತೈಲ ಬೆಲೆಗಳು ಹೆಚ್ಚಿವೆ. ಅದರ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸಲ್, ಸಿಎನ್‌ಜಿ, ಎಲ್‌ಪಿಜಿ ಇತ್ಯಾದಿ ವಸ್ತುಗಳ ಬೆಲೆಯೂ ಹೆಚ್ಚುತ್ತದೆ. ಇದರ ಸರಪಳಿ ಪರಿಣಾಮವೆಂಬಂತೆ ಆಹಾರ ಮತ್ತಿತರ ವಸ್ತುಗಳ ಬೆಲೆಯೂ ವ್ಯತ್ಯಯವಾಗುತ್ತದೆ. ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಆಹಾರ, ಇಂಧನದ ಬೆಲೆಗಳು ಶೇ. 8.6ರಿಂದ ಶೇ. 11.4ಕ್ಕೆ ಏರಿವೆ.

ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿತ ಕಾಣುತ್ತಿರುವುದು ಹಣದುಬ್ಬರ ಏರಿಕೆಗೆ ಇನ್ನೊಂದು ಪ್ರಮುಖ ಕಾರಣ. ಅಮೆರಿಕದಲ್ಲಿ ಸಂಕಷ್ಟದ ಪರಿಸ್ಥಿತಿ ಇರುವುದರಿಂದ ಡಾಲರ್‌ಗೆ ಬೇಡಿಕೆ ಬಂದಿದೆ. ಭಾರತದಲ್ಲಿ ಷೇರು ಮತ್ತು ಬಾಂಡ್ ಮಾರುಕಟ್ಟೆಗಳಲ್ಲಿದ್ದ ವಿದೇಶೀ ಹೂಡಿಕೆಗಳು ಹಿಂತೆಗೆದುಕೊಳ್ಳುತ್ತಿವೆ. ಇದು ರೂಪಾಯಿ ಮೌಲ್ಯ ಕುಸಿತಕ್ಕೆ ಒಂದು ಕಾರಣ. ರೂಪಾಯಿ ದುರ್ಬಲವಾದರೆ ಖರೀದಿ ಶಕ್ತಿಯೂ ದುರ್ಬಲವಾಗುತ್ತದೆ. ಸದ್ಯ ಒಂದು ಡಾಲರ್‌ಗೆ 82.34 ರೂಪಾಯಿ ಆಗಿದೆ. ರೂಪಾಯಿ ದುರ್ಬಲವಾಗಿದ್ದರೆ ಆಮದು ಮಾರುಕಟ್ಟೆಗೆ ಮಾತ್ರ ಖುಷಿಯ ಸುದ್ದಿ.

English summary

Know What Is Inflation, Why Its Rising In India

Inflation issue is affecting the whole world. Lets see what is inflation, how it is rising in India, and which method used to measure inflation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X