For Quick Alerts
ALLOW NOTIFICATIONS  
For Daily Alerts

Layoff in 2022: ಈ ವರ್ಷ 6 ಸ್ಟಾರ್ಟ್‌ಅಪ್‌ಗಳಿಂದ 18,000 ಉದ್ಯೋಗಿಗಳ ವಜಾ!

|

ಈ ಹಿಂದೆ ಭಾರತದ ಸ್ಟಾರ್ಟ್‌ ಅಪ್ ಸಂಸ್ಥೆಗಳು ಯುನಿಕಾರ್ನ್ ಸಂಸ್ಥೆಗಳ ಲೆಕ್ಕಾಚಾರದಲ್ಲಿತ್ತು. ಹಾಗೆಯೇ ಒಟ್ಟು ನಿವ್ವ ಮೌಲ್ಯದ ಲೆಕ್ಕಾಚಾರವನ್ನು ಕೂಡಾ ನಡೆಸಲಾಗುತ್ತಿತ್ತು. ಆದರೆ ಈಗ ಫಂಡಿಂಗ್ ಕಡಿಮೆ ಆಗುತ್ತಿದ್ದಂತೆ ಹಲವಾರು ಸ್ಟಾರ್ಟ್‌ ಅಪ್ ಸಂಸ್ಥೆಗಳು ಉದ್ಯೋಗ ಕಡಿತದ ಹಾದಿಯನ್ನು ಹಿಡಿದಿದೆ.

 

ಹೌದು ಪ್ರಮುಖವಾಗಿ ಆರು ಸ್ಟಾರ್ಟ್‌ ಅಪ್ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಈ ವರ್ಷದಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಅದು ಕೂಡಾ ಪ್ರಮುಖವಾದ, ಹೆಸರುವಾಸಿಯಾದ ಸ್ಟಾರ್ಟ್ ಅಪ್ ಸಂಸ್ಥೆಗಳು ಇದಾಗಿದೆ.

Amazon Layoffs : ಮ್ಯಾನೆಜರ್‌ಗಳು ಸೇರಿ 20,000 ಉದ್ಯೋಗಿಗಳ ವಜಾಗೊಳಿಸಲು ಅಮೆಜಾನ್ ಸಜ್ಜು!Amazon Layoffs : ಮ್ಯಾನೆಜರ್‌ಗಳು ಸೇರಿ 20,000 ಉದ್ಯೋಗಿಗಳ ವಜಾಗೊಳಿಸಲು ಅಮೆಜಾನ್ ಸಜ್ಜು!

ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಈ ಸ್ಟಾರ್ಟ್‌ ಅಪ್ ಸಂಸ್ಥೆಗಳ ಸೇವೆಗೆ ಅಧಿಕವಾದ ಬೇಡಿಕೆಯಿತ್ತು. ಆದರೆ ಎಲ್ಲ ನಿರ್ಬಂಧಗಳು ಸಡಿಲಿಕೆಯಾಗಿ, ಜನರ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ ಈ ಸ್ಟಾರ್ಟ್ ಅಪ್ ಸಂಸ್ಥೆಗಳ ಸೇವೆಗೆ ಬೇಡಿಕೆ ಕಡಿಮೆಯಾಗಿದೆ. ಸಂಸ್ಥೆಗಳು ನಷ್ಟವನ್ನು ಕಂಡಿದೆ. ಹಾಗಾದರೆ ಯಾವೆಲ್ಲ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಯಾವೆಲ್ಲ ಸಂಸ್ಥೆಯಲ್ಲಿ ಉದ್ಯೋಗ ಕಡಿತ

ಯಾವೆಲ್ಲ ಸಂಸ್ಥೆಯಲ್ಲಿ ಉದ್ಯೋಗ ಕಡಿತ

ಪ್ರಮುಖವಾಗಿ ಆರು ಸ್ಟಾರ್ಟ್‌ ಅಪ್ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಬೈಜೂಸ್, ಬ್ಲಿಂಕಿಟ್, ಲಿಡೊ, ಅನ್‌ಅಕಾಡೆಮಿ, ವೆದಾಂತು ಸಂಸ್ಥೆಗಳು ಸುಮಾರು 11 ಸಾವಿರಕ್ಕೂ ಅಧಿಕ ಮಂದಿಯನ್ನು ಉದ್ಯೋಗದಿಂದ ವಜಾ ಮಾಡಿದೆ. ಸರಿಸುಮಾರಿ 18 ಸಾವಿರದಷ್ಟು ಜನರು ಈ ವರ್ಷದಲ್ಲಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಬೇರೆ ಐಕಾನ್ ಸಂಸ್ಥೆಗಳು ಕೂಡಾ ಉದ್ಯೋಗ ಕಡಿತ ಮಾಡಿದೆ. ಟ್ವಿಟ್ಟರ್‌ನಿಂದ ಹಿಡಿದು ಅಮೆಜಾನ್‌, ಎಚ್‌ಪಿವರೆಗೂ ಉದ್ಯೋಗ ಕಡಿತ ಮಾಡಲಾಗಿದೆ, ಹಾಗೆಯೇ ಪ್ರಸ್ತುತವೂ ಪ್ರಕ್ರಿಯೆ ನಡೆಯುತ್ತಿದೆ.

 ಯಾವ ಸಂಸ್ಥೆಯಲ್ಲಿ ಎಷ್ಟು ಉದ್ಯೋಗ ಕಡಿತ?

ಯಾವ ಸಂಸ್ಥೆಯಲ್ಲಿ ಎಷ್ಟು ಉದ್ಯೋಗ ಕಡಿತ?

ಬೈಜೂಸ್ ಸುಮಾರು 4 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇನ್ನು ಓಲಾ ಸುಮಾರು 2,100 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಇನ್ನು ಆನ್‌ಲೈನ್ ದಿನಸಿ ಡೆಲಿವರಿ ಮಾಡುವ ಸಂಸ್ಥೆಯಾದ ಬ್ಲಿಂಕಿಟ್ 1,600 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇನ್ನು ಲಿಡೊ, ಅನ್‌ಅಕಾಡೆಮಿ ಹಾಗೂ ವೆದಾಂತು ಕ್ರಮವಾಗಿ 1,200, 1,150 ಮತ್ತು 1,109 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇವೆಲ್ಲವೂ ಕೂಡಾ ಈ ವರ್ಷದಲ್ಲಿ ಸಂಸ್ಥೆಯಲ್ಲಾದ ಉದ್ಯೋಗ ಕಡಿತದ ಲೆಕ್ಕಾಚಾರವಾಗಿದೆ.

 ಉದ್ಯೋಗ ಕಡಿತಕ್ಕೆ ಹೆಸರುವಾಸಿಯಾದ ವರ್ಷ!
 

ಉದ್ಯೋಗ ಕಡಿತಕ್ಕೆ ಹೆಸರುವಾಸಿಯಾದ ವರ್ಷ!

ಜಾಗತಿಕವಾಗಿ ಪ್ರಮುಖ ಸಂಸ್ಥೆಗಳು ಈ ವರ್ಷ ಭಾರೀ ನಷ್ಟವನ್ನು ಕಂಡಿದೆ. ಹಣದುಬ್ಬರ ಏರಿಕೆ, ಹಿಂಜರಿತದ ಆತಂಕದ ನಡುವೆ ತಮ್ಮ ಸಂಸ್ಥೆಯಲ್ಲಿನ ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಸಂಸ್ಥೆಗಳು ಮಾಡುತ್ತಿದೆ. ಅದರಿಂದಾಗಿ 2022ರಲ್ಲಿ ಅತೀ ಹೆಚ್ಚಾಗಿ ಉದ್ಯೋಗ ಕಡಿತ ನಡೆದಿದೆ. ಹಾಗೆಯೇ ಈ ವರ್ಷವು ಉದ್ಯೋಗ ಕಡಿತ ವಿಚಾರದಲ್ಲೇ ಮುಂದಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾದರೆ ವಿಶೇಷವೇನಿಲ್ಲ!. 2022ರಲ್ಲಿ ಜಾಗತಿಕವಾಗಿ ಸರಿಸುಮಾರು 1,20,699 ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

 ಇಷ್ಟೊಂದು ಉದ್ಯೋಗ ನಷ್ಟಕ್ಕೆ ಕಾರಣವೇನು?

ಇಷ್ಟೊಂದು ಉದ್ಯೋಗ ನಷ್ಟಕ್ಕೆ ಕಾರಣವೇನು?

ಬರೀ ಸ್ಟಾರ್ಟ್‌ ಅಪ್‌ಗಳು ಮಾತ್ರವಲ್ಲ ಟೆಕ್ ಸಂಸ್ಥೆಗಳು, ಇತರೆ ಸಂಸ್ಥೆಗಳು ಕೂಡಾ 2022ರಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ. ಹಾಗೆಯೇ ಕೆಲವು ಸಂಸ್ಥೆಗಳು ಮುಣದಿನ ವರ್ಷದಲ್ಲೂ ಉದ್ಯೋಗಿಗಳ ಗುಣಮಟ್ಟವನ್ನು ಆಧಾರಿಸಿ ಕೆಲಸದಿಂದ ವಜಾಗೊಳಿಸಲಾಗುತ್ತದೆ ಎಂದು ಹೇಳಿದೆ. ಇದು ತ್ರೈಮಾಸಿಕ ಆಧಾರದಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ ಪ್ರಮುಖವಾಗಿ ಕೊರೊನಾ ವೈರಸ್ ಸಾಂಕ್ರಾಮಿಕ ಹಾಗೂ ಉಕ್ರೇನ್ ರಷ್ಯಾ ಯುದ್ಧದ ಪರಿಣಾಮವು ಇಂದಿಗೂ ಕಡಿಮೆಯಾಗಿಲ್ಲ. ಸಾಂಕ್ರಾಮಿಕ ಹಾಗೂ ಯುದ್ಧ ಎರಡೂ ಕೂಡಾ ಜಾಗತಿಕವಾಗಿ ಹಣದುಬ್ಬರ ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿ ಸಂಸ್ಥೆಗಳು ನಷ್ಟದಲ್ಲಿದ್ದು, ಆದಾಯ ಸರಿದೂಗಿಸುವ ಪ್ರಯತ್ನವನ್ನು ಮಾಡುತ್ತಿದೆ.

English summary

Layoff Wagon in 2022: Indian startups Sacked a total of more than 11,000 Employees this year

Surprisingly, six startup firms Byju’s, Ola, Blinkit, Lido, Unacademy and Vedantu laid off over 11,000 employees, over 60 percent of the total around 18,000 sacked people.
Story first published: Thursday, December 29, 2022, 13:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X