LIC Dhan Varsha: 10 ಲಕ್ಷ ರೂ ಹೂಡಿಕೆ ಮಾಡಿ 10 ಪಟ್ಟು ಅಧಿಕ ರಿಟರ್ನ್ ಪಡೆಯಿರಿ!
ಈ ದುಬಾರಿ ಯುಗದಲ್ಲಿ ಆಗಲಿ, ಈ ಹಿಂದೆ ಆಗಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ಅಧಿಕ ರಿಟರ್ನ್ ನಮಗೆ ಲಭ್ಯವಾಗಬೇಕು ಎಂದು ಯಾರು ಅಂದುಕೊಳ್ಳುವುದಿಲ್ಲ, ಅಂದುಕೊಂಡಿಲ್ಲ ಹೇಳಿ. ಎಂದಿಗೂ ನಾವು ಹೂಡಿಕೆ ಮಾಡುವಾಗ ನಮ್ಮ ಹಣ ಎಷ್ಟು ಸುರಕ್ಷಿತ ಎಂದು ನೋಡುವುದು ಮಾತ್ರವಲ್ಲ, ನಾವು ಮಾಡಿದ ಹೂಡಿಕೆಗೆ ಎಷ್ಟು ರಿಟರ್ನ್ ಲಭ್ಯವಾಗುತ್ತದೆ ಎಂದು ಕೂಡ ನೋಡುತ್ತೇವೆ.
ನಾವು ನಮ್ಮ ಹಣದ ಸುರಕ್ಷತೆ ಹಾಗೂ ಅಧಿಕ ರಿಟರ್ನ್ ಬಯಸುವಾಗ ಎಲ್‌ಐಸಿ ಯೋಜನೆ ನಮಗೆ ಉತ್ತಮವಾಗಿದೆ. ಅದರಲ್ಲೂ ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಲವಾರು ಉತ್ತಮ ಯೋಜನೆಗಳನ್ನು ಹೊಂದಿದೆ. ಇತ್ತೀಚೆಗೆ ಸಂಸ್ಥೆಯು ಹೊಸ ಯೋಜನೆಯನ್ನು ಜಾರಿ ಮಾಡಿದೆ. ಅದುವೇ ಎಲ್‌ಐಸಿ ಧನ ವರ್ಷ ಯೋಜನೆ.
ಈ ಯೋಜನೆಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ 10 ಪಟ್ಟು ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ನೀವು ಒಂದೇ ಬಾರಿ ಹೂಡಿಕೆ ಮಾಡಬೇಕಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಧನ ವರ್ಷ ಯೋಜನೆ: ಇಲ್ಲಿದೆ ಮಾಹಿತಿ
ಎಲ್‌ಐಸಿಯ ಧನ ವರ್ಷ ಯೋಜನೆಯು ನಾನ್ ಪಾರ್ಟಿಸಿಪೇಟಿಂಗ್, ವೈಯಕ್ತಿಕ ವಿಮಾ ಯೋಜನೆಯಾಗಿದ್ದು, ಒಂದೇ ಬಾರಿಗೆ ಹೂಡಿಕೆ ಮಾಡಿದರೆ ಸಾಕಾಗುತ್ತದೆ. ಈ ಯೋಜನೆ ಆಫ್‌ಲೈನ್‌ನಲ್ಲಿ ಮಾತ್ರ ಲಭ್ಯವಿದೆ. ಅಂದರೆ ಉಳಿದ ಎಲ್‌ಐಸಿ ಯೋಜನೆಗೆ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದಂತೆ ಇದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಮೆಚ್ಯೂರಿಟಿಗೂ ಮುನ್ನ ಪಾಲಿಸಿದಾರರು ಸಾವನ್ನಪ್ಪಿದರೆ, ಪಾಲಿಸಿದಾರರ ಕುಟುಂಬಸ್ಥರಿಗೆ ಯೋಜನೆಯ ಮೊತ್ತ ಲಭ್ಯವಾಗಲಿದೆ. ಈ ಮೊತ್ತವು ನೀವು ಹೂಡಿಕೆ ಮಾಡಿದ ಮೊತ್ತದ ದುಪ್ಪಟ್ಟಾಗಿರಲಿದೆ. ಈ ಯೋಜನೆಯಲ್ಲಿ ಎರಡು ಆಯ್ಕೆಗಳು ಲಭ್ಯವಿದೆ.

ಯೋಜನೆಯಲ್ಲಿನ ಮೊದಲ ಆಯ್ಕೆ
ಧನ ವರ್ಷ ಯೋಜನೆಯ ಮೊದಲ ಆಯ್ಕೆಯಲ್ಲಿ ನೀವು ಹೂಡಿಕೆ ಮಾಡಿದರೆ 1.25ರಷ್ಟು ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಒಂದೇ ಬಾರಿಗೆ 10 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದರೆ ಹೂಡಿಕೆದಾರರ ಮರಣದ ಬಳಿಕ ಕುಟುಂಬಕ್ಕೆ 12.5 ಲಕ್ಷ ರೂಪಾಯಿ ರಿಟರ್ನ್ ಲಭ್ಯವಾಗಲಿದೆ.

ಯೋಜನೆಯಲ್ಲಿನ ಎರಡನೇ ಆಯ್ಕೆ
ಇನ್ನೊಂದು ಆಯ್ಕೆಯಲ್ಲಿ ಹೂಡಿಕೆದಾರರು ಮಾಡಿದ ಹೂಡಿಕೆಗೆ 10 ಪಟ್ಟು ರಿಟರ್ನ್ ಲಭ್ಯವಾಗಲಿದೆ. ಆದರೆ ಹೂಡಿಕೆದಾರರು ಮೆಚ್ಯೂರಿಟಿಗೂ ಮುನ್ನ ಸಾವನ್ನಪ್ಪಿದರೆ ಮಾತ್ರ ಹೂಡಿಕೆದಾರರ ಕುಟುಂಬಕ್ಕೆ ಹೂಡಿಕೆ ಮೊತ್ತದ ಹತ್ತು ಪಟ್ಟು ಮೊತ್ತ ಲಭ್ಯವಾಗಲಿದೆ. ಯಾರು 10 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡುತ್ತಾರೋ ಅವರ ಕುಟುಂಬ 1 ಕೋಟಿ ರೂಪಾಯಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ನಿಮಗೆ ಬೇಕಾದ ಆಯ್ಕೆಯನ್ನು ಮಾಡಬಹುದು.

ಧನ ವರ್ಷ ಯೋಜನೆಯ ಬಗ್ಗೆ ಮಾಹಿತಿ
1. ಈ ಯೋಜನೆಯನ್ನು ಆಫ್‌ಲೈನ್ ಮೂಲಕ ಮಾತ್ರ ಖರೀದಿ ಮಾಡಲು ಸಾಧ್ಯವಾಗುತ್ತದೆ.
2. ನೀವು ಈ ಯೋಜನೆಯನ್ನು 10 ವರ್ಷ ಅಥವಾ 15 ವರ್ಷಕ್ಕೆ ಖರೀದಿ ಮಾಡಬಹುದು.
3. ನೀವು 15 ವರ್ಷದ ಯೋಜನೆಯನ್ನು ಖರೀದಿ ಮಾಡುವುದಾದರೆ ನೀವು ಯೋಜನೆಯನ್ನು ಖರೀದಿ ಮಾಡುವ ಕನಿಷ್ಠ ವಯೋಮಿತಿ 3 ವರ್ಷವಾಗಿದೆ. 10 ವರ್ಷದ ವಿಮೆಯನ್ನು ನೀವು ಖರೀದಿ ಮಾಡಬೇಕಾದರೆ ನಿಮಗೆ 8 ವರ್ಷ ಆಗಿರಬೇಕು.
4. ಈ ಯೋಜನೆಯನ್ನು ಖರೀದಿ ಮಾಡಲು ಗರಿಷ್ಠ ವಯೋಮಿತಿ 60 ವರ್ಷ ಆಗಿದೆ. ನೀವು ಹತ್ತು ಪಟ್ಟು ಅಧಿಕ ರಿಟರ್ನ್ ಅನ್ನು ಪಡೆಯಬೇಕಾದರೆ ಗರಿಷ್ಠ ವರ್ಷ 40 ಆಗಿದೆ.
5. ನೀವು ಹತ್ತು ಪಟ್ಟು ರಿಟರ್ನ್ ಪಡೆಯಬೇಕಾದರೆ ನಿಮಗೆ 35 ವರ್ಷ ಆಗಿರುವಾಗಲೇ ಹೂಡಿಕೆಯನ್ನು ಮಾಡಬೇಕಾಗುತ್ತದೆ.
6. ನೀವು ಈ ಯೋಜನೆಯಡಿಯಲ್ಲಿ ಸಾಲ ಹಾಗೂ ವಿಮೆಯನ್ನು ರಿಟರ್ನ್ ನೀಡುವ ಆಯ್ಕೆಯಿದೆ.
7. ನೀವು ಇನ್‌ಸ್ಟಾಲ್‌ಮೆಂಟ್‌ನಲ್ಲಿ ಹಣವನ್ನು ಪಡೆಯುವ ಆಯ್ಕೆಯನ್ನು ಮಾಡಬಹುದು.