For Quick Alerts
ALLOW NOTIFICATIONS  
For Daily Alerts

LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!

|

ಸಾಮಾನ್ಯವಾಗಿ ನಾವು ಹೂಡಿಕೆಯ ವಿಚಾರಕ್ಕೆ ಬಂದಾಗ ಸುರಕ್ಷಿತ ಹೂಡಿಕೆ ಮತ್ತು ಅಧಿಕ ರಿಟರ್ನ್ ಅನ್ನು ಪಡೆಯಲು ಎಲ್ಲಿ ಸಾಧ್ಯ ಎಂದು ನೋಡುತ್ತೇವೆ. ಹಾಗೆ ನೋಡುವಾಗ ನಮಗೆ ಉತ್ತಮ ಆಯ್ಕೆ ಭಾರತೀಯ ಜೀವ ವಿಮಾ ಸಂಸ್ಥೆ (ಎಲ್‌ಐಸಿ) ಯೋಜನೆಯಾಗಿದೆ. ಆ ಯೋಜನೆಗಳಲ್ಲಿ ಎಲ್‌ಐಸಿಯ ಜೀವನ್ ಉಮಾಂಗ್ ಯೋಜನೆ ಕೂಡಾ ಒಂದಾಗಿದೆ.

ಈ ಯೋಜನೆಯು ಎರಡು ಪ್ರಯೋಜನಗಳನ್ನು ನಮಗೆ ನೀಡುತ್ತದೆ. ನಮಗೆ ಈ ಯೋಜನೆಯು ಆದಾಯದ ಜೊತೆಗೆ ವಿಮೆಯನ್ನು ಕೂಡಾ ನಮಗೆ ನೀಡುತ್ತದೆ. ಹಾಗೆಯೇ ಈ ಯೋಜನೆಯು ಪಾಲಿಸಿದಾರರಿಗೆ ಮಾತ್ರವಲ್ಲ ಪಾಲಿಸಿದಾರರ ಕುಟುಂಬಕ್ಕೆ ವಿಮೆಯನ್ನು ನೀಡುತ್ತದೆ. ಇದು ತೆರಿಗೆ ಇಲ್ಲದೆಯೇ ಮೆಚ್ಯೂರಿಟಿಯನ್ನು ಪಡೆಯಲು ಸಾಧ್ಯವಾಗುವ ಯೋಜನೆಯಾಗಿದೆ. ಹಾಗೆಯೇ ನಮಗೆ 100 ವರ್ಷವಾಗುವವರೆಗೂ ನಮಗೆ ವಿಮಾ ಸುರಕ್ಷತೆಯನ್ನು ನೀಡುತ್ತದೆ.

LIC Jeevan Anand: 45 ರೂ ಹೂಡಿಕೆ ಮಾಡಿ 25 ಲಕ್ಷ ರೂ ಪಡೆಯಿರಿ!LIC Jeevan Anand: 45 ರೂ ಹೂಡಿಕೆ ಮಾಡಿ 25 ಲಕ್ಷ ರೂ ಪಡೆಯಿರಿ!

ಹಾಗೆಯೇ 30 ನೇ ವಯಸ್ಸಿನಿಂದ ನಾವು ಖಚಿತ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯು ವಾರ್ಷಿಕ ಸರ್ವೈವ್ ಬೆನಿಫಿಟ್ ಅನ್ನು ನೀಡುತ್ತದೆ. ಪ್ರೀಮಿಯಂ ಪಾವತಿಯ ಅವಧಿ ಕೊನೆಯಾಗುವ ಸಮಯದಿಂದ ಮೆಚ್ಯೂರಿಟಿ ಬೆನಿಫಿಟ್‌ವರೆಗೂ ಸರ್ವೈವ್ ಬೆನಿಫಿಟ್ ನೀಡುತ್ತದೆ. ಪಾಲಿಸಿದಾರರು ಸಾವನ್ನಪ್ಪಿದರೆ, ನಾಮಿನಿಗೆ ಡೆತ್ ಬೆನಿಫಿಟ್ ಲಭ್ಯವಾಗಲಿದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ, ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಯೋಜನೆಯ ಅರ್ಹತೆ ಎಷ್ಟಿದೆ?

ಯೋಜನೆಯ ಅರ್ಹತೆ ಎಷ್ಟಿದೆ?

ಎಲ್‌ಐಸಿ ಜೀವನ್ ಉಮಾಂಗ್ ಯೋಜನೆಯ ಕನಿಷ್ಠ ವಯೋಮಿತಿ 90 ದಿನವಾಗಿದೆ. ಗರಿಷ್ಠ ವಯೋಮಿತಿ 55 ವರ್ಷವಾಗಿದೆ. ಪಾಲಿಸಿ ಅವಧಿ 100 ವರ್ಷವಾಗಿದೆ. ಕನಿಷ್ಠ ಮೊತ್ತ 2,00,000 ರೂಪಾಯಿ ಆಗಿದೆ. ಆದರೆ ಯಾವುದೇ ಗರಿಷ್ಠ ವಯೋಮಿತಿ ಪಾವತಿ ಅವಧಿ 30 ರಿಂದ 70 ವರ್ಷವಾಗಿದೆ. ಎಲ್‌ಐಸಿ ಜೀವನ್ ಉಮಾಂಗ್ ಪಾಲಿಸಿಯಲ್ಲಿ ಡೆತ್‌ ಬೆನಿಫಿಟ್‌ನಿಂದ ಹಿಡಿದು, ಸರ್ವೈವಲ್ ಬೆನಿಫಿಟ್ ಇದೆ. ಮೆಚ್ಯೂರಿಟಿ ಬೆನಿಫಿಟ್ ಮಾತ್ರವಲ್ಲದೆ ಪಾಲಿಸಿಯ ಆಧಾರದಲ್ಲಿ ಸಾಲವನ್ನು ಕೂಡಾ ನೀಡಲಾಗುತ್ತದೆ.

 ಡೆತ್ ಬೆನಿಫಿಟ್ ಎಷ್ಟಿದೆ?

ಡೆತ್ ಬೆನಿಫಿಟ್ ಎಷ್ಟಿದೆ?

ಪ್ರೀಮಿಯಂ ಪಾವತಿ ಅವಧಿಯಲ್ಲೇ ಸಾವನ್ನಪ್ಪಿದರೆ, ಪ್ರೀಮಿಯಂ ಪಾವತಿಯ 7 ಪಟ್ಟು ಡೆತ್ ಬೆನಿಫಿಟ್ ಲಭ್ಯವಾಗಲಿದೆ. ಬೇಸಿಕ್ ಮೊತ್ತ ನೀಡಲಾಗುತ್ತದೆ. ಪ್ರೀಮಿಯಂ ಪಾವತಿ ಮಾಡಿದ 10 ವರ್ಷದ ಬಳಿಕ ಸಾವನ್ನಪ್ಪಿದರೆ 10 ವರ್ಷದ ವಾರ್ಷಿಕ ಸರ್ವೈವಲ್ ಬೆನಿಫಿಟ್ ಮತ್ತು ಡೆತ್‌ ಬೆನಿಫಿಟ್ ಅನ್ನು ಕುಟುಂಬ ಕ್ಲೈಮ್ ಮಾಡಬಹುದು. ಸರ್ವೈವಲ್ ಬೆನಿಫಿಟ್ ಶೇಕಡ 8 ಆಗಿರಲಿದೆ. ಪ್ರತಿ ವರ್ಷವೂ ಕೂಡಾ ಶೇಕಡ 8ರಷ್ಟು ಆಗಿರಲಿದೆ. ಪಾಲಿಸಿದಾರರ ಸಾವಿನವರೆಗೂ ಈ ಮೊತ್ತವನ್ನು ಪಾವತಿ ಮಾಡಲಾಗುತ್ತದೆ ಅಥವಾ ಮೆಚ್ಯೂರಿಟಿಗೂ ಮುನ್ನ ಈ ಮೊತ್ತ ಲಭ್ಯವಾಗಲಿದೆ. ಮೆಚ್ಯೂರಿಟಿ ಬೆನಿಫಿಟ್ ಆಗಿ ನೀವು ಪಾವತಿ ಮಾಡಿದ ಮೊತ್ತ ಮತ್ತು ಬೋನಸ್ ಲಭ್ಯವಾಗಲಿದೆ. ಹಾಗೆಯೇ ಸುಮಾರು 2 ವರ್ಷಗಳ ಕಾಲ ಯಾವುದೇ ಪ್ರೀಮಿಯಂ ಅನ್ನು ತಪ್ಪದೆ ಪಾವತಿ ಮಾಡಿದ ಪಾಲಿಸಿದಾರರು ಈ ಪಾಲಿಸಿಯಡಿಯಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.

 10 ಲಕ್ಷ ರೂ ಪಡೆಯುವುದು ಹೇಗೆ?

10 ಲಕ್ಷ ರೂ ಪಡೆಯುವುದು ಹೇಗೆ?

ನಾವು ಎಲ್‌ಐಸಿ ಜೀವನ್ ಉಮಾಂಗ್ ಯೋಜನೆಯಡಿಯಲ್ಲಿ ನೀವು 10 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅದನ್ನು ನಾವು ನಿಮಗೆ ಉದಾಹರಣೆಯೊಂದಿಗೆ ವಿವರಿಸುತ್ತೇವೆ. ನೀವು 30 ವರ್ಷದ ವ್ಯಕ್ತಿ ಅಂದುಕೊಳ್ಳಿ. ನೀವು 10 ಲಕ್ಷ ರೂಪಾಯಿಯನ್ನು ಮೆಚ್ಯೂರಿಟಿ ವೇಳೆ ಪಡೆಯಬೇಕಾದರೆ ನಿಮ್ಮ ಪಾಲಿಸಿ ಅವಧಿ 70 ವರ್ಷವಾಗಿರುತ್ತದೆ. ಅಂದರೆ (100-30=70). ಪ್ರೀಮಿಯಂ ಪಾವತಿ ಮಾಡುವ ಅವಧಿ 20 ವರ್ಷವಾಗಿರುತ್ತದೆ. ವಾರ್ಷಿಕವಾಗಿ ತೆರಿಗೆ ಸೇರಿ 54,036 ರೂಪಾಯಿ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ. ಅಂದರೆ ದಿನಕ್ಕೆ 150 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ವ್ಯಕ್ತಿಯು ಪ್ರೀಮಿಯಂ ಪಾವತಿ ಮಾಡುವ ಅವಧಿಯಲ್ಲಿಯೇ ಸಾವನ್ನಪ್ಪಿದರೆ ಆತನ ಕುಟುಂಬಕ್ಕೆ ಡೆತ್‌ ಬೆನಿಫಿಟ್ ಲಭ್ಯವಾಗಲಿದೆ. ಅಧಿಕವೆಂದರೆ ವಾರ್ಷಿಕ ಪ್ರೀಮಿಯಂನ 7 ಪಟ್ಟು ಮೊತ್ತ ಡೆತ್ ಬೆನಿಫಿಟ್ ಆಗಿ ನೀಡಲಾಗುತ್ತದೆ. ಹಾಗೆಯೇ ಬೇಸಿಕ್ ಮೊತ್ತ ನೀಡಲಾಗುತ್ತದೆ. ಒಂದು ವೇಳೆ ಪ್ರೀಮಿಯಂ ಪಾವತಿ ಮಾಡಿದ 10 ವರ್ಷದ ಬಳಿಕ ಸಾವನ್ನಪ್ಪಿದರೆ 10 ವರ್ಷದ ವಾರ್ಷಿಕ ಸರ್ವೈವಲ್ ಬೆನಿಫಿಟ್ ಮತ್ತು ಡೆತ್‌ ಬೆನಿಫಿಟ್ ಅನ್ನು ಕುಟುಂಬ ಕ್ಲೈಮ್ ಮಾಡಬಹುದು. ಮೆಚ್ಯೂರಿಟಿ ಅವಧಿಯವರೆಗೂ ವ್ಯಕ್ತಿ ಜೀವಂತವಾಗಿದ್ದರೆ ಮೆಚ್ಯೂರಿಟಿ ವೇಳೆ 10 ಲಕ್ಷ ರೂಪಾಯಿ ಲಭ್ಯವಾಗಲಿದೆ.

English summary

LIC Jeevan Umang Policy: Invest Rs 150 Per Day and Get up to Rs. 10,00,000 at maturity

LIC Jeevan Umang Policy: Know LIC Jeevan Umang Plan - Features, Benefits & Eligibility Criteria in Kannada. Know how to get Rs 10,00,000 at maturity by investing Rs 150 per daily.
Story first published: Sunday, February 5, 2023, 10:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X