For Quick Alerts
ALLOW NOTIFICATIONS  
For Daily Alerts

ಟಿಡಿಎಸ್ ಹೆಚ್ಚುವರಿ ತಪ್ಪಿಸಲು ಶೀಘ್ರ ಪ್ಯಾನ್-ಇಪಿಎಫ್ ಲಿಂಕ್ ಮಾಡಿ

|

ಇಪಿಎಫ್ ಅಥವಾ ಇಪಿಎಫ್‌ಒ ನಿರ್ವಹಣೆ ಮಾಡುವ ನೌಕರರ ಪಿಂಚಣಿ ನಿಧಿಯು ನಮ್ಮ ನಿವೃತ್ತಿ ಸಂದರ್ಭದಲ್ಲಿ ಹಣಕಾಸಿನ ಅಗತ್ಯವನ್ನು ಪೂರೈಸುವ ಗುರಿಯನ್ನು ಹೊಂದಿರುವ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಉದ್ಯೋಗಿಗಳಿಗೆ ನಿವೃತ್ತಿ ಜೀವನದಲ್ಲಿ ಈ ನೌಕರರ ಪಿಂಚಣಿ ನಿಧಿ ಯೋಜನೆ ಸಹಕಾರಿಯಾಗಿದೆ.

ಉದ್ಯೋಗಿಯ ಶೇಕಡ 12 ರಷ್ಟು ಮೂಲ ವೇತನ ಮತ್ತು ತುಟ್ಟಿ ಭತ್ಯೆಯನ್ನು ತಿಂಗಳ ಆಧಾರದ ಮೇಲೆ ಖಾತೆಗೆ ಜಮೆ ಮಾಡಲಾಗುತ್ತದೆ. ಅದೇ ರೀತಿಯ ಕೊಡುಗೆಯನ್ನು ಉದ್ಯೋಗದಾತರು ಕೂಡಾ ಮಾಡುತ್ತಾರೆ.

ನಿಮ್ಮ ಸಂಸ್ಥೆ ಪಿಎಫ್ ಮೊತ್ತ ಜಮೆ ಮಾಡುತ್ತಿದೆಯೇ, ಹೀಗೆ ಚೆಕ್ ಮಾಡಿನಿಮ್ಮ ಸಂಸ್ಥೆ ಪಿಎಫ್ ಮೊತ್ತ ಜಮೆ ಮಾಡುತ್ತಿದೆಯೇ, ಹೀಗೆ ಚೆಕ್ ಮಾಡಿ

2023 ರ ಆರ್ಥಿಕ ವರ್ಷದ ಆರಂಭದಲ್ಲಿ ಅಂದರೆ ಈ ವರ್ಷದ ಏಪ್ರಿಲ್‌ನಲ್ಲಿ, ಇಪಿಎಫ್‌ಒ ತೆರಿಗೆ ಮತ್ತು ಇಪಿಎಫ್ ಮೇಲಿನ ತೆರಿಗೆ ಕಡಿತದ ಕುರಿತು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. 2.5 ಲಕ್ಷ ರೂಪಾಯಿ ಗಿಂತ ಅಧಿಕ ವೇತನವಿರುವ ಖಾಸಗಿ ವಲಯದ ಉದ್ಯೋಗಿಗಳಿಗೆ, ಪಿಎಫ್ ಆಡಳಿತ ಮಂಡಳಿಯು ಇಪಿಎಫ್ ಕೊಡುಗೆಯ ಮೇಲೆ ಹೊಸ ತೆರಿಗೆ ರಚನೆಯನ್ನು ತಂದಿದೆ.

ಟಿಡಿಎಸ್ ಹೆಚ್ಚುವರಿ ತಪ್ಪಿಸಲು ಶೀಘ್ರ ಪ್ಯಾನ್-ಇಪಿಎಫ್ ಲಿಂಕ್ ಮಾಡಿ

ಇಪಿಎಫ್‌ಒ ಹೊರಡಿಸಿದ ಸುತ್ತೋಲೆಯ ಪ್ರಕಾರ, ಇಪಿಎಫ್ ಖಾತೆಯನ್ನು ಮಾನ್ಯವಾದ ಪ್ಯಾನ್‌ಗೆ ಲಿಂಕ್ ಮಾಡಿದ್ದರೆ ಟಿಡಿಎಸ್ ಅನ್ನು ಶೇಕಡ 10ರಷ್ಟು ಕಡಿತ ಮಾಡಲಾಗುತ್ತದೆ. ಅದು ಟಿಡಿಎಸ್ ದರಕ್ಕೆ ಬದ್ಧವಾಗಿಲ್ಲದಿದ್ದರೆ ಸಾಮಾನ್ಯ ದರಕ್ಕಿಂತ ದ್ವಿಗುಣಗೊಳ್ಳುತ್ತದೆ. ಅಂದರೆ ಶೇಕಡ 20ರಷ್ಟು ಆಗಲಿದೆ.

ಆದ್ದರಿಂದ, ಹೆಚ್ಚು ತೆರಿಗೆ ಕಡಿತವನ್ನು ತಪ್ಪಿಸಲು ಟಿಡಿಎಸ್ ನಿಮ್ಮ ಇಪಿಎಫ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಿಕೊಳ್ಳಿ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 206 AA ಪ್ರಕಾರ ತೆರಿಗೆಯ ಆದಾಯವನ್ನು ಪಡೆಯುವ ಪ್ರತಿಯೊಬ್ಬ ತೆರಿಗೆದಾರರು ತಮ್ಮ ಪ್ಯಾನ್ ಅನ್ನು ಲಿಂಕ್ ಮಾಡ ಬೇಕಾಗುತ್ತದೆ. ಸಾವಿನ ಸಂದರ್ಭದಲ್ಲಿ ಇದೇ ಟಿಡಿಎಸ್ ಇರಲಿದೆ. ಹಾಗಾದರೆ ನಮ್ಮ ಇಪಿಎಫ್‌ಗೆ ಪ್ಯಾನ್ ಕಾರ್ಡ್ ಹೇಗೆ ಲಿಂಕ್ ಮಾಡುವುದು ಎಂದು ತಿಳಿಯೋಣ ಮುಂದೆ ಓದಿ ....

ಇಪಿಎಫ್‌ಒ ಪೋರ್ಟಲ್‌ನಲ್ಲಿ ಪಿಂಚಣಿ ಸ್ಟೇಟಸ್ ನೋಡುವುದು ಹೇಗೆ?ಇಪಿಎಫ್‌ಒ ಪೋರ್ಟಲ್‌ನಲ್ಲಿ ಪಿಂಚಣಿ ಸ್ಟೇಟಸ್ ನೋಡುವುದು ಹೇಗೆ?

ಇಪಿಎಫ್‌ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?

ಹಂತ 1: ಮೊದಲು ಇಪಿಎಫ್‌ಒ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ಯುಎಎನ್ ಮತ್ತು ಪಾಸ್‌ವರ್ಡ್ ಹಾಕಿ ಲಾಗಿನ್ ಆಗಿ
ಹಂತ 3: ಲಾಗಿನ್ ಆದ ನಂತರ, ಮ್ಯಾನೇಜ್ ಟ್ಯಾಬ್‌ಗೆ ಹೋಗಿ ಕೆವೈಸಿ ಮೇಲೆ ಕ್ಲಿಕ್ ಮಾಡಿ
ಹಂತ 4: ನಿಮ್ಮ ಪ್ಯಾನ್ ಲಿಂಕ್ ಮಾಡಬಹುದಾದ ಹೊಸ ಪುಟ ತೆರೆಯಲಿದೆ
ಹಂತ 5: ಪ್ಯಾನ್ ಮಾಹಿತಿ ನೀಡಿದ ಬಳಿಕ ಅಲ್ಲಿರುವ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ
ಹಂತ 6: "I hereby consent to provide my Aadhaar Number, Biometric and/or One Time Pin (OTP) data for Aadhaar based authentication for the purpose of establishing my identity" ಮೇಲೆ ಕ್ಲಿಕ್ ಮಾಡಿ
ಹಂತ 7: ನಂತರ save ಮೇಲೆ ಕ್ಲಿಕ್ ಮಾಡಿ
ಹಂತ 8: ದೃಢೀಕರಣಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ

ನೀವು ಪ್ಯಾನ್ ಮತ್ತು ಇಪಿಎಫ್ ಅನ್ನು ಲಿಂಕ್ ಮಾಡಿದ ಬಳಿಕ ಉದ್ಯೋಗದಾತರು ಅದನ್ನು ಅನುಮೋದನೆ ಮಾಡಬೇಕು. ಡಿಜಿಟಲ್ ಸಹಿ ಮಾಡಬೇಕು. 60 ದಿನಗಳಲ್ಲಿ ಉದ್ಯೋಗದಾತರು ಅನುಮೋದನೆ ಮಾಡದಿದ್ದರೆ ಅದು ಅಮಾನ್ಯವಾಗುತ್ತದೆ. ಒಂದು ವೇಳೆ ಪ್ಯಾನ್ ಅನ್ನು ಯಶಸ್ವಿಯಾಗಿ ಲಿಂಕ್ ಮಾಡಿದರೆ ಅದು ಇಪಿಎಫ್‌ಒ ಖಾತೆಯ ಸದಸ್ಯರ ಬ್ಲಾಕ್ ಅಡಿಯಲ್ಲಿ ಪ್ರತಿ ಫಲಿಸುತ್ತದೆ.

English summary

Link EPF And PAN To Avoid Excess TDS, Check Here's Details

New guidelines on EPF taxation and deductions in April 2022. New guidelines on EPF taxation and deductions in April 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X