For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಗ್ರಾಹಕರೇ ಗಮನಿಸಿ: ಈ ಕೆಲಸ ಮಾಡದಿದ್ದರೆ ದಂಡ!, ಇಲ್ಲಿದೆ ವಿವರ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶಾದ್ಯಂತ ತನ್ನ ಲಕ್ಷಾಂತರ ಜನರಿಗೆ ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್‌ ಖಾತೆಯನ್ನು ಹೊಂದಿರುವವರು ಬ್ಯಾಂಕ್‌ನ ಸೂಚನೆಯಂತೆ ಈ ಒಂದು ಕಾರ್ಯವನ್ನು ಮಾಡದಿದ್ದರೆ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಆದ್ದರಿಂದಾಗಿ ಈ ಒಂದು ಕಾರ್ಯವನ್ನು ತಪ್ಪದೇ ಮಾಡಿಬಿಡಿ.

 

ದಂಡವನ್ನು ಪಾವತಿಸುವುದನ್ನು ತಪ್ಪಿಸಲು ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಈ ಹಿಂದೆ
ಮಾರ್ಚ್ 31, 2022 ರ ಮೊದಲು ತಮ್ಮ ಪ್ಯಾನ್ ಅನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವಂತೆ ಎಸ್‌ಬಿಐ ತನ್ನ ಗ್ರಾಹಕರಿಗೆ ಹೇಳಿತ್ತು.

 

ಎಸ್‌ಬಿಐ ಅಲರ್ಟ್: ಈ ಕಾರ್ಯ ಮಾಡದಿದ್ದರೆ ನಿಮ್ಮ ಬ್ಯಾಂಕಿಂಗ್‌ ಸೇವೆ ಸ್ಥಗಿತ!ಎಸ್‌ಬಿಐ ಅಲರ್ಟ್: ಈ ಕಾರ್ಯ ಮಾಡದಿದ್ದರೆ ನಿಮ್ಮ ಬ್ಯಾಂಕಿಂಗ್‌ ಸೇವೆ ಸ್ಥಗಿತ!

ಕೊನೆಯ ದಿನಾಂಕಕ್ಕೂ ಮುನ್ನ ನಿಮ್ಮ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ ಬ್ಯಾಂಕಿಂಗ್ ಸೇವೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿತ್ತು. ಈಗ ದಂಡವನ್ನು ತಪ್ಪಿಸಬೇಕಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಇರುವವರು ಈ ಖಾತೆಗೆ ಪ್ಯಾನ್ ಲಿಂಕ್ ಮಾಡಬೇಕು ಎಂದು ಬ್ಯಾಂಕ್ ಮಾಹಿತಿ ನೀಡಿದೆ. ಹಾಗಾದರೆ ನಿಮ್ಮ ಎಸ್‌ಬಿಐ ಉಳಿತಾಯ ಖಾತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ....

ಎಸ್‌ಬಿಐ ಅಲರ್ಟ್: ಈ ಕೆಲಸ ಮಾಡದಿದ್ದರೆ ದಂಡ!, ಇಲ್ಲಿದೆ ವಿವರ

ಎಸ್‌ಬಿಐ ಉಳಿತಾಯ ಖಾತೆಗೆ ಪ್ಯಾನ್ ಲಿಂಕ್ ಹೀಗೆ ಮಾಡಿ

ನೀವು ಎಸ್‌ಬಿಐನ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ ಮೂಲಕ ಎಸ್‌ಬಿಐ ಉಳಿತಾಯ ಖಾತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು.

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - www.onlinesbi.com
ಹಂತ 2: "My Accounts" ಅಡಿಯಲ್ಲಿ "Profile-PAN Registration" ಗೆ ಹೋಗಿ
ಹಂತ 3: ಖಾತೆ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆಯನ್ನು ಆಯ್ಕೆಮಾಡಿ ಮತ್ತು "Submit" ಕ್ಲಿಕ್ ಮಾಡಿ
ಹಂತ 4: ನಿಮ್ಮ ವಿನಂತಿಯನ್ನು ಈಗ ಪ್ರಕ್ರಿಯೆಗಾಗಿ ಎಸ್‌ಬಿಐ ಶಾಖೆಗೆ ರವಾನಿಸಲಾಗುತ್ತದೆ
ಹಂತ 5: ನಿಮ್ಮ ವಿನಂತಿಯನ್ನು 7 ದಿನಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ
ಹಂತ 6: ಮ್ಯಾಪಿಂಗ್‌ನ ಸ್ಥಿತಿಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ತಿಳಿಸಲಾಗುತ್ತದೆ

ನೀವು ಇಂಟರ್ನೆಟ್ ಬ್ಯಾಂಕಿಂಗ್‌ಗೆ ನೋಂದಾಯಿಸದಿದ್ದರೆ, ಎಟಿಎಂ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಪ್ಯಾನ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಬಹುದು. ನೀವು ಎಸ್‌ಬಿಐ ಶಾಖೆಗೆ ಭೇಟಿ ನೀಡಿ ಕೂಡಾ ಈ ಕಾರ್ಯವನ್ನು ಮಾಡಬಹುದು.

ಹಂತ 1: ನಿಮಗೆ ಹತ್ತಿರವಿರುವ ಎಸ್‌ಬಿಐ ಶಾಖೆಗೆ ಭೇಟಿ ನೀಡಿ
ಹಂತ 2: ನಿಮ್ಮ ಪ್ಯಾನ್ ಕಾರ್ಡ್‌ನ ನಕಲನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ
ಹಂತ 3: 'Letter of Request' ಭರ್ತಿ ಮಾಡಿ
ಹಂತ 4: ಪ್ಯಾನ್ ಕಾರ್ಡ್‌ನ ಜೆರಾಕ್ಸ್ ಪ್ರತಿಯೊಂದಿಗೆ ಪತ್ರವನ್ನು ಸಲ್ಲಿಸಿ
ಹಂತ 5: ಪರಿಶೀಲನೆಯ ನಂತರ, ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ
ಹಂತ 6: ಲಿಂಕ್ ಮಾಡುವ ಸ್ಥಿತಿಯ ಕುರಿತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಬರಲಿದೆ

English summary

Link PAN card to SBI savings account to avoid paying penalty, Here's Guide

Link PAN card to SBI savings account to avoid paying penalty, check step-by-step guide.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X