For Quick Alerts
ALLOW NOTIFICATIONS  
For Daily Alerts

ಹೊಸ ಎಲ್‌ಪಿಜಿ ಸಂಪರ್ಕ ದರ ಏರಿಕೆ: ಕನೆಕ್ಷನ್ ಪಡೆಯುವುದು ಹೇಗೆ?

|

ಹಣದುಬ್ಬರ, ರಷ್ಯಾ-ಉಕ್ರೇನ್ ಯುದ್ಧದ ನಡುವೆ ಕಚ್ಚಾ ತೈಲ ಬೆಲೆಯು ಗಗನಕ್ಕೆ ಏರಿದೆ. ಇದರ ಪರಿಣಾಮವಾಗಿ ಭಾರತದಲ್ಲಿಯೂ ಇಂಧನ, ಅಡುಗೆ ಅನಿಲ ಬೆಲೆಗಳು ಹೆಚ್ಚಳ ಕಂಡಿದೆ. ಈ ನಡುವೆ ಈಗ ಹೊಸ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ದರವನ್ನು ಏರಿಕೆ ಮಾಡಲಾಗಿದೆ.

 

ಪ್ರತಿ ತಿಂಗಳ ಮೊದಲ ದಿನ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆಯಾದರೂ ಗೃಹ ಬಳಕೆಯ ಸಿಲಿಂಡರ್ ದರವನ್ನು ಪ್ರತಿ ತಿಂಗಳು ಏರಿಕೆ ಮಾಡಲಾಗಿಲ್ಲ. ಆದರೆ ಈಗಾಗಲೇ ದೇಶದ ಬಹುತೇಕ ಎಲ್ಲ ನಗರಗಳಲ್ಲಿ ಸಿಲಿಂಡರ್ ದರ ಒಂದು ಸಾವಿರ ರೂಪಾಯಿಗೆ ಹೆಚ್ಚಳವಾಗಿದೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಫಲಾನುಭವಿಗಳಿಗೆ ಇನ್ನೂರು ರೂಪಾಯಿ ಸಬ್ಸಿಡಿ ಘೋಷಣೆ ಮಾಡಿದೆ.

ಎಲ್‌ಪಿಜಿ ಸಬ್ಸಿಡಿ ನಿಯಮ ಬದಲಾವಣೆ: ಇನ್ಮುಂದೆ ಯಾರು ಅರ್ಹರು?

ಸಾಮಾನ್ಯವಾಗಿ ಗೃಹಬಳಕೆಯ ಅಡುಗೆ ಅನಿಲ ಎಲ್‌ಪಿಜಿ ದರವನ್ನು ತಿಂಗಳಲ್ಲಿ ಎರಡು ಬಾರಿ ದರ ಏರಿಕೆ ಮಾಡಲಾಗುತ್ತದೆ. ಈ ಹಿಂದಿನ ಬೆಲೆ ಪರಿಷ್ಕರಣೆಯಂತೆ ಪ್ರತಿ ಸಿಲಿಂಡರ್‌ಗೆ 3.50 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಈ ನಡುವೆ ಈಗ ಹೊಸ ಎಲ್‌ಪಿಜಿ ಸಂಪರ್ಕ ದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ. ನೂತನ ದರ ಎಷ್ಟು?, ಹೇಗೆ ಹೊಸ ಸಂಪರ್ಕ ಪಡೆಯುವುದು ಎಂದು ತಿಳಿಯಲು ಮುಂದೆ ಓದಿ...

 ನೂತನ ದರ ಇಲ್ಲಿದೆ

ನೂತನ ದರ ಇಲ್ಲಿದೆ

ಈ ಹಿಂದೆ ಪ್ರತಿ ಹೊಸ ಸಂಪರ್ಕಕ್ಕೆ 1450 ರೂ ಪಾವತಿ ಮಾಡಬೇಕಾಗಿತ್ತು. ಆದರೆ ಪೆಟ್ರೋಲಿಯಂ ಸಂಸ್ಥೆಗಳು ಹೊಸ ಗೃಹ ಬಳಕೆ ಎಲ್‌ಪಿಜಿ ಸಂಪರ್ಕ ಪಡೆಯಲು ಭದ್ರತಾ ಠೇವಣಿಯನ್ನು ರೂಪಾಯಿ 750 ಏರಿಕೆ ಮಾಡಿದೆ. ಆದ್ದರಿಂದಾಗಿ ಇನ್ನು ಮುಂದೆ ಹೊಸದಾಗಿ ಎಲ್‌ಪಿಜಿ ಸಂಪರ್ಕವನ್ನು ಪಡೆಯಬೇಕಾದರೆ ರೂಪಾಯಿ 2,200 ಪಾವತಿ ಮಾಡಬೇಕಾಗುತ್ತದೆ. ಈ ನೂತನ ಪರಿಷ್ಕೃತ ದರವು ಇಂದಿನಿಂದಲೇ (ಜೂನ್ 16) ಜಾರಿಗೆ ಬರಲಿದೆ. ಗ್ರಾಹಕರು ಹೊಸ ಸಂಪರ್ಕವನ್ನು ತೆಗೆದುಕೊಳ್ಳುವಾಗ ಎರಡು ಸಿಲಿಂಡರ್‌ಗಳನ್ನು ತೆಗೆದುಕೊಳ್ಳಲು ಬಯಸಿದರೆ 4,400 ರೂ ಭದ್ರತಾ ಠೇವಣಿ ಪಾವತಿ ಮಾಡಬೇಕಾಗುತ್ತದೆ.

 

 ಪೈಪ್ ಮತ್ತು ಪಾಸ್‌ಬುಕ್‌ಗೆ ದರ

ಪೈಪ್ ಮತ್ತು ಪಾಸ್‌ಬುಕ್‌ಗೆ ದರ

14.2 ಕೆ.ಜಿ ತೂಕದ ಎರಡು ಸಿಲಿಂಡರ್‌ಗಳನ್ನು ತೆಗೆದುಕೊಂಡರೆ ಗ್ರಾಹಕರು 1500 ರೂಪಾಯಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 5 ಕೆಜಿ ಸಿಲಿಂಡರ್‌ಗೆ 800 ರೂಪಾಯಿ ಬದಲು 1150 ರೂಪಾಯಿ ಪಾವತಿಸಬೇಕಾಗುತ್ತದೆ. ಪ್ರತಿ ಹೊಸ ಸಂಪರ್ಕದೊಂದಿಗೆ ಬರುವ ಪೈಪ್ ಮತ್ತು ಪಾಸ್‌ಬುಕ್‌ಗೆ ಕ್ರಮವಾಗಿ 150 ಮತ್ತು 25 ರೂಪಾಯಿ ಇದೆ. ಇನ್ನು ಎಲ್‌ಪಿಜಿ ಹೊಸ ಸಿಲಿಂಡರ್ ಸಂಪರ್ಕ ದರ ಏರಿಕೆ ಮಾತ್ರವಲ್ಲದೇ ಗ್ಯಾಸ್ ರೆಗ್ಯುಲೇಟರ್‌ಗಳ ಬೆಲೆಯೂ ಏರಿಕೆಯಾಗಿದೆ. ಗ್ರಾಹಕರು ನಿಯಂತ್ರಕವನ್ನು ಪಡೆಯಲು ರೂ 250, ಹಿಂದಿನ 150 ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.

 ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಹೇಗೆ?
 

ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಹೇಗೆ?

ನೀವು ಆನ್‌ಲೈನ್ ಮೂಲಕ ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಮಾಡುವುದಾದರೆ ನೀವು ನಿಮಗೆ ಸಮೀಪದ ಎಲ್‌ಪಿಜಿ ಸಿಲಿಂಡರ್ ವಿತರಕರ ಸಂಪರ್ಕ ಲಭ್ಯವಾಗಲಿದೆ. ನೀವು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಿದ ಬಳಿಕ, ವಿತರಕರು ನಿಮ್ಮ ಮನೆಗೆ ಆಗಮಿಸಿ, ಹೊಸ ಸಂಪರ್ಕವನ್ನು ಮಾಡಲಿದ್ದಾರೆ. ನೀವು ಹೊಸ ಸಂಪರ್ಕ ಪಡೆಯಲು ಆಧಾರ್, ಪಾಸ್‌ಪೋರ್ಟ್‌ನಂತಹ ಗುರುತಿನ ಚೀಟಿ, ಪಡಿತರ ಚೀಟಿ, ವಿದ್ಯುತ್ ಬಿಲ್‌ನಂತಹ ವಿಳಾಸ ಮಾಹಿತಿ ಬೇಕಾಗುತ್ತದೆ.

 ಆಫ್‌ಲೈನ್ ಮೂಲಕ ಸಂಪರ್ಕ ಹೀಗೆ ಪಡೆಯಿರಿ

ಆಫ್‌ಲೈನ್ ಮೂಲಕ ಸಂಪರ್ಕ ಹೀಗೆ ಪಡೆಯಿರಿ

ನೀವು ಆಫ್‌ಲೈನ್ ಮೂಲಕವು ಎಲ್‌ಪಿಜಿ ಸಿಲಿಂಡರ್ ಹೊಸ ಸಂಪರ್ಕವನ್ನು ಪಡೆಯಬಹುದು. ನಿಮ್ಮ ಸಮೀಪದ ಎಲ್‌ಪಿಜಿ ಸಿಲಿಂಡರ್ ವಿತರಕರ ಕಚೇರಿಗೆ ಭೇಟಿ ನೀಡಿ. ಅರ್ಜಿಯನ್ನು ಭರ್ತಿ ಮಾಡಿ. ದಾಖಲೆಯನ್ನು ಸಲ್ಲಿಕೆ ಮಾಡಿ. ನಿಮಗೆ ರಶೀದಿ ಜೊತೆಗೆ ರಿಜಿಸ್ಟ್ರೇಸನ್ ಹಾಗೂ ಬುಕ್ಕಿಂಗ್ ನಂಬರ್ ಲಭ್ಯವಾಗಲಿದೆ. ಹಾಗೆಯೇ ಪಾಸ್‌ಬುಕ್ ಕೂಡಾ ಲಭ್ಯವಾಗಲಿದೆ. ಇನ್ನು ನಿಮ್ಮ ನಗರಗಳ ಎಲ್‌ಪಿಜಿ ದರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

English summary

LPG Connection Price hiked; Know Revised Prices and How to Apply for New LPG connection

LPG Connection Price hiked; Read on to know what are the Revised Prices and How to Apply for New LPG connection in Kannada.
Story first published: Thursday, June 16, 2022, 13:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X